ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಹಲಸೂರು, ಬೆಂಗಳೂರು ನಗರ - 560008, ಬೆಂಗಳೂರು .
Sri Anjaneya Swamy Temple, Halasuru, Bengaluru Urban - 560008, Bengaluru Urban District [TM000199]
×
Temple History
ಸಾಹಿತ್ಯದ ಹಿನ್ನೆಲೆ
ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಇತಿಹಾಸ ಪ್ರಸಿದ್ದವಾಗಿರುತ್ತದೆ. ವಿಜಯನಗರ ಸಾಮ್ರಾಜ್ಯದ ವೇದಾಂತ ಪೀಠಾಧಿಪತಿಗಳಾಗಿದ್ದ ವಿಶ್ವಸಾವನೆ ಮಠದ ಕುಲಪತಿಗಳಾಗಿದ್ದ ಹಾಗೂ ಕರ್ನಾಟಕ ರತ್ನ ಸಿಂಹಾಸನಾಧೀಶ್ವರರೆನಿಸಿದ್ದ ಶ್ರೀ ಶ್ರೀ ವ್ಯಾಸರಾಯರು ಪ್ರತಿಸ್ಥಾಪನೆ ಮಾಡಿರುತ್ತಾರೆ. ಈ ದೇವಸ್ಥಾನವು ಸುಮಾರು 400 ವರ್ಷಗಳ ಕಾಲ ಹಳೆಯದಾಗಿರುತ್ತದೆ.
ಶ್ರೀ ಆಂಜನೇಯಸ್ವಾಮಿಯನ್ನು ಹಲಸೂರಿನ ಮುಂಭಾಗದಲ್ಲಿ ಪ್ರತಿಸ್ಥಾಪನೆ ಮಾಡಿಸಿದ್ದಾರೆ. ಆನರಿಗೆ ಯಾವುದೇ ರೋಗ ರುಜಿನಗಳು ಕಷ್ಟ ಕಾರ್ಪಣ್ಯಗಳು ಭಯ - ಭೀತಿ ನಿವಾರಣೆಯಾಗುತ್ತದೆಯೆಂದು ಈ ಸ್ಥಳದಲ್ಲಿಯೇ ಪ್ರತಿಸ್ಥಾಪಿಸಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನಯವರು ಪೂರ್ವಕ್ಕೆ ಮುಖ ಮಾಡಿ ದಕ್ಷಿಣ ದಿಕ್ಕಿಗೆ ದೇವಸ್ಥಾನದ ಬಾಗಿಲು ಇರುವುದರಿಂದ ಸ್ವಾಮಿಯ ದರ್ಶನ ಮಾಡಿದ ಭಕ್ತಾದಿಗಳಿಗೆ ಶಾಂತಿ ಸದ್ಬಕ್ತಿ ಉಂಟಾಗುತ್ತದೆ ಎಂದು ತಿಳಿದು ಬಂದಿರುತ್ತದೆ.
ಇಂದು ಈ...ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಇತಿಹಾಸ ಪ್ರಸಿದ್ದವಾಗಿರುತ್ತದೆ. ವಿಜಯನಗರ ಸಾಮ್ರಾಜ್ಯದ ವೇದಾಂತ ಪೀಠಾಧಿಪತಿಗಳಾಗಿದ್ದ ವಿಶ್ವಸಾವನೆ ಮಠದ ಕುಲಪತಿಗಳಾಗಿದ್ದ ಹಾಗೂ ಕರ್ನಾಟಕ ರತ್ನ ಸಿಂಹಾಸನಾಧೀಶ್ವರರೆನಿಸಿದ್ದ ಶ್ರೀ ಶ್ರೀ ವ್ಯಾಸರಾಯರು ಪ್ರತಿಸ್ಥಾಪನೆ ಮಾಡಿರುತ್ತಾರೆ. ಈ ದೇವಸ್ಥಾನವು ಸುಮಾರು 400 ವರ್ಷಗಳ ಕಾಲ ಹಳೆಯದಾಗಿರುತ್ತದೆ.
ಶ್ರೀ ಆಂಜನೇಯಸ್ವಾಮಿಯನ್ನು ಹಲಸೂರಿನ ಮುಂಭಾಗದಲ್ಲಿ ಪ್ರತಿಸ್ಥಾಪನೆ ಮಾಡಿಸಿದ್ದಾರೆ. ಆನರಿಗೆ ಯಾವುದೇ ರೋಗ ರುಜಿನಗಳು ಕಷ್ಟ ಕಾರ್ಪಣ್ಯಗಳು ಭಯ - ಭೀತಿ ನಿವಾರಣೆಯಾಗುತ್ತದೆಯೆಂದು ಈ ಸ್ಥಳದಲ್ಲಿಯೇ ಪ್ರತಿಸ್ಥಾಪಿಸಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನಯವರು ಪೂರ್ವಕ್ಕೆ ಮುಖ ಮಾಡಿ ದಕ್ಷಿಣ ದಿಕ್ಕಿಗೆ ದೇವಸ್ಥಾನದ ಬಾಗಿಲು ಇರುವುದರಿಂದ ಸ್ವಾಮಿಯ ದರ್ಶನ ಮಾಡಿದ ಭಕ್ತಾದಿಗಳಿಗೆ ಶಾಂತಿ ಸದ್ಬಕ್ತಿ ಉಂಟಾಗುತ್ತದೆ ಎಂದು ತಿಳಿದು ಬಂದಿರುತ್ತದೆ.
ಇಂದು ಈ ವೀರಾಂಜನೇಯ ಸ್ವಾಮಿಯ ಗುರುತುಗಳೆಂದು ಬಾಲದಲ್ಲಿ ಗಂಟೆಯ ಶಿರದಲ್ಲಿ ರಾಮನ ಲಿಖಿತವು ಅಭಯ ಹಸ್ತ, ಸೊಂಟದಲ್ಲಿ ಬಗ್ಗೆ ಹಾಗೂ ರುದ್ರಾಕ್ಷಿಯ ಮಾಲೆಯನ್ನು ಧರಿಸಿರುವ 9 ಅಡಿ ಎತ್ತರವುಳ್ಳ ಹಾಗೂ 6 ಅಡಿ ಅಗಲವುಳ್ಳ ಶ್ರೀ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಇಷ್ಟಾರ್ಥದಂತೆ ಸಕಲ ಕಾರ್ಯಗಳನ್ನು ಈಡೇರಿಸುತ್ತಾ ಹಾಗೂ ಪೂಜಾ ಕೈಂಕರ್ಯಗಳನ್ನು ನಿಷ್ಠೆಯಿಂದ ಮಾಡುವ ಭಕ್ತಾದಿಗಳಿಗೆ ದೈರ್ಯ, ಶಾಂತಿ, ನೆಮ್ಮದಿ ಮತ್ತು ಭಯ ಭೀತಿಗಳನಗನೂ ಹೋಗಲಾಡಿಸುವುದು ಈ ಸ್ವಾಮಿಯ ವೈಸಿಷ್ಟö್ಯವಾಗಿದೆ ಹಾಗೂ ಈ ದೇವಾಲಯವು ಬಹಳ ಪುರಾತನವಾದ ಹಾಗೂ ಐತಿಹಾಸಿಕ ದೇವಾಲಯವೆಂದು ಪ್ರಸಿದ್ಧಿಯಾಗಿದೆ ಹಾಗೂ ಶ್ರೀ ಕೃಷ್ಣದೇವರಾಯರ ಕಾಲಕ ಆಡಳಿತದ ಅಳ್ವಿಕೆ ನಂತರ ರಾಜ ಮಹಾರಾಜರುಗಳ ಕಾಲದಿಂದಲೂ ಭಯ, ಭೀತಿ, ರೋಗ-ರುಜಿನಗಳಿಗೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದಲ್ಲಿ ರೋಗ ನಿವಾರಣೆಯಾಗಿರುತ್ತದೆ ಎಂದು ತಿಳಿದು ಬಂದಿರುತ್ತದೆ.
1. ಪುರಾತನ ಇತಿಹಾಸಕ್ಕೆ ಸಂಬAಧಪಟ್ಟ ಈ ಆಂಜನೇಯಸ್ವಾಮಿದೇವಸ್ಥಾನವು ಪ್ರಸಿದ್ದಿಯನ್ನು ಪಡೆದಿದ್ದು ಅಂದರೇ 1576 ರಲ್ಲಿ ವ್ಯಾಸ ಮಹಾರಾಯರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತದ ವ್ಯಾಪ್ತಿಯ ಅಳ್ವಿಕೆಯಲ್ಲಿ ಪ್ರತಿಸ್ಥಾಪಿಸಲಾಯಿತು. ಮೂಲ ವಿಗ್ರಹದ 9 ಅಡಿ ಎತ್ತರ 8 ಅಡಿ ಅಗಲವಿರುವ ತರಹದಲ್ಲಿ ರಾಮನ ಲಿಖಿತವನ್ನು ಈ ಆಂಜನೇಯಸ್ವಾಮಿ ಅಭಯ ಹಸ್ತದಿಂದ ಕೂಡಿದ್ದು ಭಕ್ತಾಧಿಗಳಿಗೆ ಪ್ರತಿಯೊಂದು ಕಾರ್ಯಗತಿ ಸಾಗಿದ್ದು ಭಕ್ತಾದಿಗಳಿಗೆ ವರವನ್ನು ಕೊಡುವುದಾಗಿರುತ್ತದೆ. ಈ ವೀರಾಂಜನೇಯಸ್ವಾಮಿ.
2. ಹಾಗೂ ಈ ಪುರಾತನ ದೇವಾಲಯದ ಒಳಗಿನ ಗರ್ಭಗುಡಿಯು ನವರಂಗದ ಮೇಲ್ಚಾವಣಿಯಿಂದ ಕೂಡಿದ್ದು ಹಾಗೂ ಹೊರಗಿನ ಮಂಟಪ ಕಂಬಗಳಿಂದ ಕೂಡಿದ್ದು ಸ್ವಲ್ಪ ಚಾಲುಕ್ಯ ಹಾಗೂ ಹೊಯ್ಸಳರ ಶೈಲಿಯ ರೀತಿಯ ಕಲೆಯನ್ನು ಹೋಲುತ್ತದೆ.
3. ವಿಶೇಷವಾಗಿ ದೇವಸ್ಥಾನದ ಪ್ರಕಾರ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪ್ರದಕ್ಷಿಣೆ ಹಾಕುವಂತ ತೊಂದರೆ ಇಲ್ಲದಂತಿದೆ
4. ಸಾಮಾನ್ಯವಾಗಿ ಈ ದೇವಸ್ಥಾನವು 1576 ರಲ್ಲಿ ನಿರ್ಮಾಣಗೊಂಡಿದ್ದು, ಪುರಾತನವಾಗಿದ್ದು ಹಾಗೂ 25 ವರ್ಷಗಳ ಹಳೆಯ ವಿಮಾನ ಗೋಪುರವನ್ನು ತೆಗೆದು ಹೊಸದಾಗಿ ನಿರ್ಮಿಸಲ್ಪಟ್ಟಿದ್ದು. ಈ ಗೋಪುರ ಹಾಗೂ ಮುಂದಿನ ಮೇಲ್ಚಾವಣಿಯ ಭಾಗವನ್ನು ನವೀಕರಿಸಲ್ಪಟ್ಟಿರುತ್ತದೆ.
5. ವಿಶೇಷವಾಗಿ ಇಲ್ಲಿನ ಉತ್ಸವಗಳು ಶ್ರೀ ರಾಮನವಮಿ, ವೈಕುಂಠ ಏಕಾದಶಿ, ಪಲ್ಲಕ್ಕಿ ಉತ್ಸವ ಹಾಗೂ ಬಹಳ ವಿಜೃಂಬಣೆಯಿಂದ ಶ್ರೀ ಹನುಮಂತ ಜಯಂತಿ ಉತ್ಸವಗಳು ನಡೆಯಲ್ಪಡುತ್ತದೆ.
6. ಹಾಗೂ ವಿಶೇಷವಾಗಿ ಪ್ರತಿ ಶನಿವಾರ ಹೂವಿನ ಅಲಂಕಾರ ವಿಶೇಷ ಮಹಾಅಭಿಷೇಕಗಳು ನಡೆಯುತ್ತದೆ ಹಾಗೂ ಶ್ರೀ ಆಂಜನೇಯಸ್ವಾಮಿಗೆ ಶ್ರೀತಿ ಹಾಗೂ ಸಕಲ ಕಾರ್ಯ ನೆರವೇರುವ ವಡಾಹಾರವನ್ನು ಭಕ್ತಾದಿಗಳು ಹಾಕುತ್ತಾರೆ.
7. ಹಾಗೂ ಇಲ್ಲಿ ವಿಶೇಷವಾಗಿ ಅರ್ಚನೆ, ಅಭಿಷೇಕ, ವಡೆ ಅಲಂಕಾರ, ಬೆಣ್ಣೆ ಸೇವೆ ನಡೆಯುತ್ತದೆ.
8. ಇಲ್ಲಿ ಯಾವ ಪರಿಹಾರ ದೇವತೆಗಳು ಇಲ್ಲ. ಪ್ರಥಮವಾಗಿ ಶ್ರೀ ವೀರಾಂಜನೇಯನೇ ಮೂಲವಾಗಿರುತ್ತದೆ.
9. ಮುಖ್ಯವಾಗಿ ಹಲಸೂರಿನ ಒಳಗೆ ಬಂದ ಕ್ಷಣವೇ ಎದುರುಗಡೆಯಿರುವ ಶ್ರೀ ಆಂಜನೇಯ ಸ್ವಾಮಿಯೇ ಮುಖ್ಯವಾಗಿರುತ್ತಾರೆ.