Screen Reader Access                 A-  A  A+ 
ಶ್ರೀ ಸಂಪಂಗಿರಾಮ ದೇವಾಲಯ, ವಸಂತನಗರ, ಬೆಂಗಳೂರು ನಗರ - 560052, ಬೆಂಗಳೂರು .
Sri Sampangirama Temple, Vasanthanagar, Bengaluru Urban - 560052, Bengaluru Urban District [TM000201]
×
Temple History

ಸಾಹಿತ್ಯದ ಹಿನ್ನೆಲೆ

ಶ್ರೀ ಸಂಪಂಗಿರಾಮ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆ, ವಸಂತನಗರದಲ್ಲಿದೆ. ಈ ದೇವಾಲಯಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ದೇವರು ಬಂಡೆಯಲ್ಲಿ ಆವಿರ್ಭವಿಸಿದೆ ಎಂಬ ಪ್ರತೀತಿ ಇದೆ. ದೇವಾಲಯದ ಪ್ರಮುಖ ದೇವರು ಶ್ರೀ ರಾಮ ದೇವರು. ಗರ್ಭಗುಡಿಯಲ್ಲಿರುವ ಬಂಡೆಯಲ್ಲಿ, ಸೀತಾ ಸಮೇತ ಶ್ರೀ ರಾಮನು ಪೀಠದ ಮೇಲೆ ಆಸೀನಭಂಗಿಯಲ್ಲಿದ್ದು, ಶ್ರೀ ಸೀತಾರಾಮ ಚಂದ್ರರಿಗೆ ಬಲಪಾರ್ಶ್ವದಲ್ಲಿ ಶ್ರೀ ಲಕ್ಷ್ಮಣ ಸ್ವಾಮಿಯು ಅಂಜಲೀಮುದ್ರೆಯಿಂದ ನಿಂತಿರುವ ಮೂರ್ತಿಯಾಗಿದೆ. ವಿಶೇಷವಾಗಿ ಶ್ರೀ ರಾಮಚಂದ್ರದೇವರು ಸರ್ವದಾ ಶ್ರೀ ರಾಮ ತಾರಕ ಮಂತ್ರವನ್ನು ಜಪಿಸುವ ಹನುಮಂತನಿಗೆ ತನ್ನ ಕೃಪಾದೃಷ್ಟಿಯನ್ನು ಬೀರುತ್ತಾ, ಬಲ ಹಸ್ತದಲ್ಲಿ ಪೂರ್ಣ ಅಭಯ ಅನುಗ್ರಹ ನೀಡುತ್ತಿರುವ ದರ್ಶನವನ್ನು ಕಾಣಬಹುದು. ದೇವಾಲಯದ ಆವರಣದಲ್ಲಿ ಪರಿವಾರ ದೇವತೆಗಳಾದ ಶಿವ, ಪಾರ್ವತಿದೇವಿ, ಗಣೇಶ, ನವಗ್ರಹಗಳ ಗುಡಿಯನ್ನು ಕಾಣಬಹುದು ಹಾಗು...