ಶ್ರೀ ವಿನಾಯಕ ದೇವಾಲಯ ಗುಡ್ಡಟ್ಟು, ಕುಂದಾಪುರ, ಉಡುಪಿ - 576222, ಉಡುಪಿ .
Sri Vinayaka Temple Guddattu, Kundapura, Udupi - 576222, Udupi District [TM000202]
×
Temple History
ಇತಿಹಾಸ
ಇಲ್ಲಿನ ಸ್ಥಳ ಪುರಾಣದ ಬಗ್ಗೆ ಲಿಖಿತವಾಗಿ ಈ ವರಗೆ ಏನೂ ದೊರೆತಿಲ್ಲವಾದರೂ ಇದೊ0ದು ಪುರಾಣ ಪ್ರಸಿದ್ಧವಾದ ಕ್ಷೇತ್ರ ಎ0ಬುದು ನಿಸ್ಸ0ದೇಹ. ಇಲ್ಲಿ ಪ್ರಸಿದ್ಧಿಯಲ್ಲಿರುವ ಸ್ಥಳ ಪುರಾಣ ಈ ರೀತಿ ಇದೆ. ತ್ರಿಪುರಾಸುರನ ಸ0ಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಆದರೆ ಜಯ ಲಭಿಸದೇ ಪರದಾಡುತ್ತಾನೆ. ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತ ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ ಯಾವ ಅಸ್ತ್ರವೂ ಗಣಪತಿಯನ್ನು ಏನೂಮಾಡಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡೆಯುತ್ತದೆ. ಮಧು ಅರ್ಥಾತ್ ಜೇನು ತುಪ್ಪ, ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ...ಇಲ್ಲಿನ ಸ್ಥಳ ಪುರಾಣದ ಬಗ್ಗೆ ಲಿಖಿತವಾಗಿ ಈ ವರಗೆ ಏನೂ ದೊರೆತಿಲ್ಲವಾದರೂ ಇದೊ0ದು ಪುರಾಣ ಪ್ರಸಿದ್ಧವಾದ ಕ್ಷೇತ್ರ ಎ0ಬುದು ನಿಸ್ಸ0ದೇಹ. ಇಲ್ಲಿ ಪ್ರಸಿದ್ಧಿಯಲ್ಲಿರುವ ಸ್ಥಳ ಪುರಾಣ ಈ ರೀತಿ ಇದೆ. ತ್ರಿಪುರಾಸುರನ ಸ0ಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಆದರೆ ಜಯ ಲಭಿಸದೇ ಪರದಾಡುತ್ತಾನೆ. ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತ ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ ಯಾವ ಅಸ್ತ್ರವೂ ಗಣಪತಿಯನ್ನು ಏನೂಮಾಡಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡೆಯುತ್ತದೆ. ಮಧು ಅರ್ಥಾತ್ ಜೇನು ತುಪ್ಪ, ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಛ ಮಧುಪಾನ ಮಾಡಿದ ಗಣಪತಿಯು ತೃಪ್ತನಾಗಿ ತನ್ನನ್ನು ಇಲ್ಲಿ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರದಾನ ಮಾಡುತ್ತಾನೆ. ತತ್ ಪರಿಣಾಮ ತ್ರಿಪುರಾಸುರ ಸಂಹಾರವಾಗಿ ಶಿವನಿಗೆ ಜಯಲಭಿಸುತ್ತದೆ. ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭವಾಗುವುದು ಸ್ವಾಭಾವಿಕ. ಇದೇ ಪರಿಸ್ಥಿತಿ ಗಣಪತಿಗೆ ಪ್ರಾಪ್ತಿಯಾಗಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿಶಮನಕ್ಕಾಗಿ ನರಸಿಂಹ ತೀರ್ಥದ ಪಕ್ಕದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸಿರುತ್ತಾನೆ ಎನ್ನುವುದು ಪ್ರತೀತಿ. ಅಂತೆಯೇ ಇಲ್ಲಿ ಹರಿಯುವ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬೃಹತ್ ಬಂಡೆಯ ಮಡುವಿನಲ್ಲಿ ಜಲಾಧಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಿದ್ದಾನೆ ಎನ್ನುವುದು ನಂಬಿಕೆ.