ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ. ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯದೇವ. ಸ್ವಯಂಭುವಿನಲ್ಲಿ ಬಹಳ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತು ಈ ಕ್ಷೇತ್ರ ರಮಣೀಯ. ಈ ದೇವಳವು ಯಾವ ಶತಮಾನಕ್ಕೆ ಸೇರಿದ್ದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿರುವುದಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಅಸ್ತಿತ್ವದಲ್ಲಿ ಇದ್ದಿತ್ತು ಎನ್ನುವುದು ನಿಸ್ಸಂದೇಹ. ದೇವಳದ ಗರ್ಭಗುಡಿ ಅರ್ಥಾತ್ ದೇವರು...
| 08:25 AM IST - 08:45 AM IST | |
| 11:30 AM IST - 11:50 AM IST | |
| 01:00 PM IST - 03:00 PM IST | |
| 07:00 PM IST - 06:00 AM IST | |
| ಶ್ರೀ ದೇವರ ಮೂಲ ಬಿಂಬವು ಸ್ವಯಂಭು ಹಾಗೂ ಜಲಾಧಿವಾಸ ವಾದ ಕಾರಣ ಮೂಲ ವಿಗ್ರಹ ದರ್ಶನ ಮಾಡಲು ಬೆಳಿಗ್ಗೆ 8.30 ರಿಂದ 8.45 ರ ಒಳಗೆ ಹಾಗೂ 11.30 ರಿಂದ 11.45ರ ಒಳಗೆ ಬರಬೇಕಾಗುತ್ತದೆ. ಬೇರೆ ಸಮಯದಲ್ಲಿ ಮೂಲ ಬಿಂಬವು ನೀರಿನಲ್ಲಿ ಮುಳುಗಿರುತ್ತದೆ | |