ಶ್ರೀ ದೊಡ್ಡಬಸವಣ್ಣ ದೇವಾಲಯ, ಬಸವನಗುಡಿ, ಬೆಂಗಳೂರು ನಗರ - 560004, ಬೆಂಗಳೂರು .
Sri Doddabasavanna Temple, Basavanagudi, Bengaluru Urban - 560004, Bengaluru Urban District [TM000203]
×
Temple History
ಇತಿಹಾಸ
ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಸವನಗುಡಿಯೂ ಒಂದು. ಈ ಪ್ರದೇಶಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಪುರಾತನ ಬೃಹತ್ ಬಸವನ ದೇವಾಲಯ ಇದು ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿರುವ ಪುರಾತನ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ.
ನಾಡಪ್ರಭು ಕೆಂಪೇಗೌಡರು 1537ರಲ್ಲಿ ಈ ದೇವಾಲಯವನ್ನು ಕಟ್ಟಿಸಿದರು. ದೇವಾಲಯದ ಮುಂದೆ ಸುಂದರವಾದ ಧ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರಥಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂದು ಹೇಳುತ್ತಾರೆ. ಶಿವನ ವಾಹನ ಬಸವ ಇಲ್ಲಿ ಬಂದು ಶಿಲೆಯಾದ ಎಂಬ ಪ್ರತೀತಿ...ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಸವನಗುಡಿಯೂ ಒಂದು. ಈ ಪ್ರದೇಶಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಪುರಾತನ ಬೃಹತ್ ಬಸವನ ದೇವಾಲಯ ಇದು ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿರುವ ಪುರಾತನ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ.
ನಾಡಪ್ರಭು ಕೆಂಪೇಗೌಡರು 1537ರಲ್ಲಿ ಈ ದೇವಾಲಯವನ್ನು ಕಟ್ಟಿಸಿದರು. ದೇವಾಲಯದ ಮುಂದೆ ಸುಂದರವಾದ ಧ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರಥಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂದು ಹೇಳುತ್ತಾರೆ. ಶಿವನ ವಾಹನ ಬಸವ ಇಲ್ಲಿ ಬಂದು ಶಿಲೆಯಾದ ಎಂಬ ಪ್ರತೀತಿ ಇದೆ.
ಐತಿಹ್ಯ: ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.
ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಗುಡ್ಡ ಏರಿ ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದುಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಿಷೆ ಎಂದೇ ಖ್ಯಾತವಾಗಿದೆ.
ಈ ಜಾತ್ರೆಗೆ ಬಸವನ ಭಕ್ತರು ಬಂದು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. ಭಕ್ತರು ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ತಾಳಿ ಆ ಸಿಪ್ಪೆಯನ್ನು ತಿನ್ನುತ್ತಾನೆ ಎಂದು ಇಂದಿಗೂ ಜನ ನಂಬಿದ್ದಾರೆ.
ಪೌರಾಣಿಕ ಹಿನ್ನೆಲೆ
ಬೆಂಗಳೂರು ನಗರ, ಬಸವನಗುಡಿ ಶ್ರೀ ದೊಡ್ಡಬಸವಣ್ಣ ದೇವಾಲಯದ ಸಂಕ್ಷಿಪ್ತ ಟಿಪ್ಪಣಿ
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಶ್ರೀ ದೊಡ್ಡಬಸವಣ್ಣ ದೇವಾಲಯ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದ್ದು ಈ ದೇವಾಲಯವು 16ನೇ ಶತಮಾವನಕ್ಕೆ ಸೇರಿದ್ದು, ಸುಮಾರು 484 ವರ್ಷಗಳಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ.
ಈ ದೇವಾಲಯದಿಂದಲೇ ಈ ಪ್ರದೇಶಕ್ಕೆ ಬಸವನಗುಡಿ ಎಂಬ ಹೆಸರು ಬಂದಿರುವುದು ಇದರ ಪಾರಂಪರಿಕ ಚರಿತ್ರೆಗೆ ಸಾಕ್ಷಿಯಾಗಿದೆ.
ಸುಮಾರು 16ನೇ ಶತಮಾನದಲ್ಲಿ ಈಗಿರುವ ಬಸವನಗುಡಿ ಪ್ರದೇಶ ಸುಂಕೇನಹಳ್ಳಿ ಎಂಬ ಹೆಸರಿನ ದೊಡ್ಡ ಗ್ರಾಮವಾಗಿದ್ದು ಈ ಊರಿನಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತ, ವ್ಯವಸಾಯ ಇವರ ಮೂಲ ಕಸುಬಾಗಿತ್ತು. ಇವರು ಹೊಲಗಳಲ್ಲಿ ಕಡಲೆಕಾಯಿ ಬೆಳೆಯನ್ನು ಯಥೇಚ್ಚವಾಗಿ ಬೆಳೆದು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿರುತ್ತಾರೆ. ಹೀಗಿರುವಾಗ ಆ ಪ್ರದೇಶದ ಹೊಲಗಳಲ್ಲಿ ಪ್ರತಿ ರಾತ್ರಿ ರೈತರೆಲ್ಲ ಮನೆಗಳಿಗೆ ಹೋದ ನಂತರ...ಬೆಂಗಳೂರು ನಗರ, ಬಸವನಗುಡಿ ಶ್ರೀ ದೊಡ್ಡಬಸವಣ್ಣ ದೇವಾಲಯದ ಸಂಕ್ಷಿಪ್ತ ಟಿಪ್ಪಣಿ
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಶ್ರೀ ದೊಡ್ಡಬಸವಣ್ಣ ದೇವಾಲಯ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದ್ದು ಈ ದೇವಾಲಯವು 16ನೇ ಶತಮಾವನಕ್ಕೆ ಸೇರಿದ್ದು, ಸುಮಾರು 484 ವರ್ಷಗಳಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ.
ಈ ದೇವಾಲಯದಿಂದಲೇ ಈ ಪ್ರದೇಶಕ್ಕೆ ಬಸವನಗುಡಿ ಎಂಬ ಹೆಸರು ಬಂದಿರುವುದು ಇದರ ಪಾರಂಪರಿಕ ಚರಿತ್ರೆಗೆ ಸಾಕ್ಷಿಯಾಗಿದೆ.
ಸುಮಾರು 16ನೇ ಶತಮಾನದಲ್ಲಿ ಈಗಿರುವ ಬಸವನಗುಡಿ ಪ್ರದೇಶ ಸುಂಕೇನಹಳ್ಳಿ ಎಂಬ ಹೆಸರಿನ ದೊಡ್ಡ ಗ್ರಾಮವಾಗಿದ್ದು ಈ ಊರಿನಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತ, ವ್ಯವಸಾಯ ಇವರ ಮೂಲ ಕಸುಬಾಗಿತ್ತು. ಇವರು ಹೊಲಗಳಲ್ಲಿ ಕಡಲೆಕಾಯಿ ಬೆಳೆಯನ್ನು ಯಥೇಚ್ಚವಾಗಿ ಬೆಳೆದು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿರುತ್ತಾರೆ. ಹೀಗಿರುವಾಗ ಆ ಪ್ರದೇಶದ ಹೊಲಗಳಲ್ಲಿ ಪ್ರತಿ ರಾತ್ರಿ ರೈತರೆಲ್ಲ ಮನೆಗಳಿಗೆ ಹೋದ ನಂತರ ಒಂದು ಬಸವ (ನಂದಿ) ರೈತರು ಬೆವರು ಹರಿಸಿ ಬೆಳೆದಿದ್ದ ಕಡಲೆಕಾಯಿ ಬೆಳೆಗಳನ್ನು ತಿಂದು ನಾಶ ಮಾಡುತ್ತಿದ್ದು ರೈತರಿಗೆ ಸಹಿಸಲಾಗದ ನೋವು ಮತ್ತು ಕಷ್ಟವಾಗುತ್ತಿತ್ತು. ವ್ಯವಸಾಯದಿಂದಲೇ ಜೀವನ ಸಾಗಿಸುತ್ತಿದ್ದ ರೈತರೆಲ್ಲ ಒಂದಾಗಿ ಬಸವನಿಂದ ನಾಶವಾಗುತ್ತಿದ್ದ ಬೆಳೆಯನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂದು ತೀರ್ಮಾನಿಸಿ ಒಂದು ರಾತ್ರಿ ತಮ್ಮ ತಮ್ಮ ಹೊಲಗಳಲ್ಲಿ ಉಳಿದುಕೊಂಡು ಬೆಳೆ ನಾಶದ ರಹಸ್ಯವನ್ನು ಕಂಡುಹಿಡಿಯಬೇಕೆಂದು ತೀರ್ಮಾನಿಸಿಕೊಂಡು ತಮ್ಮ ತಮ್ಮ ಹೊಲಗಳಲ್ಲಿ ಉಳಿದುಕೊಳ್ಳುತ್ತಾರೆ. ಪ್ರಶ್ಚಿಮದಲ್ಲಿ ಸೂರ್ಯ ಮುಳಿಗಿ ಮೋಡಗಳು ತಂಗಾಳಿ ಸೇವನೆಗಾಗಿ ತಿರುಗಾಡಲು ಹೊರಡುವ ಸಮಯಕ್ಕೆ ಬಸವ ಕಡಲೆಕಾಯಿಯನ್ನು ನೆನಪಿಸಿಕೊಂಡು ಖುಷಿಯಿಂದ ಕುಣಿಯುತ್ತ ಹೊಲದೊಳಗೆ ಬರುತ್ತಿರುವುದನ್ನು ನೋಡಿದ ರೈತರು ಇದು ಬಸವನ ಕೆಲಸ ಎಂದು ಅರಿತು ಒಟ್ಟಾಗಿ ಸೇರಿ ಬಸವನಿಗೆ ಕೈಮುಗಿದು ಕಣ್ಣೀರು ಹಾಕುತ್ತಾ ದಯವಿಟ್ಟು ನಮ್ಮ ಬೆಳೆಗಳನ್ನು ತಿಂದು ನಾಶ ಮಾಡಬೇಡ. ಇದರಿಂದಲೇ ನಮ್ಮ ಬದುಕು ನಡೆಯುತ್ತಿರುವುದು. ಇನ್ನು ಮುಂದೆ ನಾನು ಬೆಲೆಯುವ ಕಡಲೆಕಾಯಿಯ ಮೊದಲ ಫಸಲನ್ನು ನಿನಗೆ ಅರ್ಪಿಸಿ ನಿನಗಾಗಿ ದೇವಸ್ಥಾನವನ್ನು ಕಟ್ಟಿ ನಿತ್ಯ ಪೂಜೆ ಸಲ್ಲಿಸಿ ಕಾರ್ತಿಕ ಮಾಸದ ಕೊನೆಯ ಸೋಮವಾರವನ್ನು ನಿನಗಾಗಿ ಮೀಸಲಿಡುತ್ತೇವೆ. ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾರೆ. ರೈತರ ಕಣ್ಣೀರಿಗೆ ಕರಗಿದ ಬಸವ ಅಂದಿನಿಂದ ಕಡಲೆಕಾಯಿ ತಿಂದು ಬೆಳೆಗಳನ್ನು ಹಾಳುಮಾಡುವುದನ್ನು ನಿಲ್ಲಿಸಿ ಬಡ ರೈತರ ಪಾಲಿಗೆ ಬಂಧುವಾಗುತ್ತಾನೆ. ಊರಿನ ರೈತರು ನಡೆದ ಈ ಎಲ್ಲಾ ಸಂಗತಿಯನ್ನು ಆಗ ಬೆಂಗಳೂರಿನ ಸಂಸ್ಥಾಪಕರಾದ ಮಾಗಡಿ ಕೆಂಪೇಗೌಡರಿಗೆ ತಿಳಿಸುತ್ತಾರೆ. ಎಲ್ಲವನ್ನೂ ಕೇಳಿ ಕೆಂಪೇಗೌಡರು ಈ ಸ್ಥಳದ ಮಹಿಮೆಗೆ ಅನುಸಾರವಾಗಿ ಈ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿ, ಅದಕ್ಕೆ ದೇವಾಲಯವನ್ನು 1537ನೇ ಇಸವಿಯಲ್ಲಿ ಸುಂಕೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಭಕ್ತಿ ಭಾವನೆಗಳ ಮೇಲಿನ ಗೌರವಕ್ಕಾಗಿ ನಿರ್ಮಿಸಿಕೊಡುತ್ತಾರೆ. ಅಂದಿನಿಂದ ರೈತರಲ್ಲದೆ ಭಕ್ತಾಧಿಗಳು, ಸಾಮಾನ್ಯ ಜನರು, ಕಾರ್ತಿಕ ಮಾಸದ ಕಡೇ ಸೋಮವಾರದಂದು ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಿ ಪೂಜೆ ಸಲ್ಲಿಸುವ ಭಕ್ತಿ ಭಾವನೆಗಳ ಸಂಗಮ ನದಿಯಾಗಿ ಹರಿಯುತ್ತಿದೆ.
ಅಂದಿನ ಪೂಜೆ ಪುನಸ್ಕಾರಗಳ ಆಚರಣೆ ಕಾಲ ಸರಿದಂತೆ ಒಂದು ಪಾರಂಪರಿಕ ಜಾತ್ರೆಯಾಗಿ ಪರಿವರ್ತನೆಗೊಂಡು ಪ್ರತಿ ವರ್ಷದ ಕಾರ್ತಿಕ ಸೋಮವಾರ, ಮಂಗಳವಾರಗಳಂದು ಬಸವನಗುಡಿ ಕಡಲೆಕಾಯಿ ಪರಿಷೆ ಜಾತ್ರೆಯು ವಿಜೃಂಭಣೆಯಿಂದ ನಡೆಯುತ್ತಿದೆ. ಇದೊಂದು ಪ್ರಸಿದ್ಧಿಗೊಂಡಿದೆ. ಸಾವಿರಾರು ಭಕ್ತಾಧಿಗಳು ಕುಟುಂಬ ಪರಿವಾರ ಸಮೇತರಾಗಿ ಕಡಲೆಕಾಯಿ ಪರಿಷೆ ಜಾತ್ರೆಗೆ ಆಗಮಿಸಿ ಶ್ರೀ ಸವಾಮಿಯ ದರ್ಶನ ಪಡೆದು ಪುನೀತರಾಗುತ್ತಿರುತ್ತಾರೆ.
ಬೇಲೂರು ಹಳೇಬೀಡು ಕಲ್ಲಿನ ಶಿಲ್ಪಕಲೆಗಳಿಗೆ ತವರೂರಾದರೆ, ಈ ಕಡಲೆಕಾಯಿ ಪರಿಷೆ ನಮ್ಮ ಮೂಲ ಸಂಸ್ಕøತಿಯ ಪ್ರತಿಬಿಂಬವಾಗಿ ಸನಾತನ ಧರ್ಮದ ನೆಲೆಯಾಗಿ ನೆರಳಾಗಿ ಬೆಂಗಳೂರಿನ ಪ್ರಮುಖ ಆಕರ್ಷಣೀಯ ಗ್ರಾಮೀಣ ಸೊಗಡಿನ ಪಾರಂಪರಿಕ ಹಬ್ಬವಾಗಿದೆ.
ಈ ನಂದಿಯ ವಿಗ್ರಹ ಸುಮಾರು 12 ಅಡಿ ಎತ್ತರ 21 ಅಡಿ ಉದ್ದ 8 ಅಡಿ ಅಗಲವಿದ್ದು ದಕ್ಷಿಣ ಭಾರತದಲ್ಲಿ ನಾಲ್ಕು ಏಕಶಿಲಾ ನಂದಿ ವಿಗ್ರಹಗಳಲ್ಲಿ ಈ ನಂದಿಯು 2ನೇ ಎತ್ತರದ ನಂದಿ ವಿಗ್ರಹವಾಗಿದೆ.
ಈ ಬಸವಣ್ಣ ಮೂರ್ತಿಯ ಕುರಿತು ಇರುವ ಇನ್ನೊಂದು ಪ್ರತೀತಿ, ನಂದಿಯ ವಿಗ್ರಹವು ದಿನೇ ದಿನೇ ದಿನೇ ಬೆಳೆಯುತ್ತಿತ್ತು, ಎತ್ತರ ಬೆಳೆದಷ್ಟು ಪೂಜಾ ಕೈಂಕರ್ಯ ಗರ್ಭಗುಡಿಗೆ ತೊಂದರೆಯಾಗುವುದೆಂದು ಶಿವನಲ್ಲಿ ಪ್ರಾರ್ಥಿಸಿ ನಂದಿಯ ತಲೆಯ ಮೇಲೆ ತ್ರಿಶೂಲ ಇಟ್ಟಿರುವುದನ್ನು ಭಕ್ತರು ದೇವರ ವಿಗ್ರಹದ ಮೇಲೆ ಕಾಣಬಹುದಾಗಿದೆ.
ಈ ಜಾತ್ರೆಯ ಒಂದು ವಾರದ ಮೊದಲು ದಕ್ಷಿಣ ಭಾರತದ ವಿವಿಧ ಸ್ಥಳಗಳಿಂದ ವ್ಯಾಪಾರಸ್ಥರು ಆಗಮಿಸಿ ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಈ ಸುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಜಾತ್ರೆ ನಡೆಯುವ ದಿನಗಳು ಸುಮಾರು 1 ರಿಂದ 2 ಲಕ್ಷ ಭಕ್ತಾಧಿಗಳು ಬಸವಣ್ಣನ ದರ್ಶನವನ್ನು ಪಡೆದು ಪುನೀತರಾಗಿ, ಇದರ ವಿಶೇಷತೆಯನ್ನು ಇಂದಿನ ತಲೆಮಾರಿನವರಿಗೆ ತಿಳಿಸಿ ಅರ್ಥಮಾಡಿಸುವುದು ಈ ಜಾತ್ರೆಯ ವಿಶೇಷವಾಗಿದೆ.
ವೃಷಭಾವತಿ ನದಿ ಕುರಿತು.
ಈ ನಂದಿಯ ಮತ್ತೊಂದು ವಿಶೇಷವೇನೆಂದರೆ ನಂದಿಯ ಬಲಗಾಲಿನ ಪಾದವು ವೀಣೆಯ ಮೇಲಿದ್ದು, ವೀಣೆಯ ಕೆಳಗೆ ಕಮಲದ ಹೂ ಇರುತ್ತದೆ. ಕಮಲದ ಹೂ ಕೆಳಗೆ “ವೃಷಭಾವತಿ” ನದಿ ಉಗಮವಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ನಂದಿಯ ಮುಂಭಾಗದಲ್ಲಿರುವ ಶಿಲಾಶಾಸನದಲ್ಲಿ ಈ ನದಿಯ ಉಗಮ ಸ್ಥಾನದ ಉಲ್ಲೇಖವಿರುವುದನ್ನು ಕಾಣಬಹುದಾಗಿರುತ್ತದೆ.