ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯ, ಬಸವನಗುಡಿ, ಬೆಂಗಳೂರು ನಗರ - 560004, ಬೆಂಗಳೂರು .
Sri Karanji Anjaneyaswamy Temple, Basavanagudi, Bengaluru Urban - 560004, Bengaluru Urban District [TM000205]
×
Temple History
ಇತಿಹಾಸ
ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯ ದೇವಸ್ಥಾನವು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಸ್ಥಾನವಿರುವ ಸ್ಥಳವು ಹಿಂದೆ ಕಲ್ಯಾಣನಗರಿ ಎಂದು ಕ್ಯಾತಿಹೊಂದಿತ್ತು. ಅಂತಹ ಈ ಕಲ್ಯಾಣ ನಗರದ ಸುತ್ತ-ಮುತ್ತಲಿನ ಪ್ರದೇಶವನ್ನು ಬೆಂಗಳೂರಿನ ಶಿಲ್ಪಿ ಮೊದಲನೆ ಕೆಂಪೇಗೌಡರು ಬಸವನಗುಡಿ, ಎನ್.ಆರ್. ಕಾಲೋನಿ ಮತ್ತು ಗವೀಪುರ ಬಡಾವಣೆಗಳನ್ನು ಸೇರಿಸಿಕೊಂಡು ಸುಂಕೇನ ಹಳ್ಳಿ ಎಂದು ಕರೆಯುತ್ತಿದ್ದರು. ಈ ಹಳ್ಳಿಯ ಪ್ರದೇಶವು ದಟ್ಟವಾದ ಅರಣ್ಯದಿಂದ ಕೂಡಿತ್ತು.
ಇತಿಹಾಸಕಾರರು ಈ ವಿಗ್ರಹವು ಪಲ್ಲವರ ಅಥವಾ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದಿರಬಹುದೆಂದು ಹೇಳುತ್ತಾರೆ. ಹಾಗೆಯೇ ಈ ದೇವಸ್ಥಾನದ ಸಮೀಪವಿರುವ ಗಣಪತಿ ಹಾಗೂ ಬಸವಣ್ಣನ ವಿಗ್ರಹ ಮತ್ತು ಆಂಜನೇಯ ಸ್ವಾಮಿಯ ವಿಗ್ರಹದ ಪಾದದ ಮೇಲ್ಭಾಗದಲ್ಲಿರುವ ನೂಪುರ ಮತ್ತು ಉಳಿದ ಆಭರಣಗಳ ಶಿಲ್ಪವು ಒಂದೇ ರೀತಿಯಾಗಿರುವುದೆಂದೂ ಆದ ಕಾರಣ ಈ ಮೂರು ವಿಗ್ರಹಗಳು...ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯ ದೇವಸ್ಥಾನವು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಸ್ಥಾನವಿರುವ ಸ್ಥಳವು ಹಿಂದೆ ಕಲ್ಯಾಣನಗರಿ ಎಂದು ಕ್ಯಾತಿಹೊಂದಿತ್ತು. ಅಂತಹ ಈ ಕಲ್ಯಾಣ ನಗರದ ಸುತ್ತ-ಮುತ್ತಲಿನ ಪ್ರದೇಶವನ್ನು ಬೆಂಗಳೂರಿನ ಶಿಲ್ಪಿ ಮೊದಲನೆ ಕೆಂಪೇಗೌಡರು ಬಸವನಗುಡಿ, ಎನ್.ಆರ್. ಕಾಲೋನಿ ಮತ್ತು ಗವೀಪುರ ಬಡಾವಣೆಗಳನ್ನು ಸೇರಿಸಿಕೊಂಡು ಸುಂಕೇನ ಹಳ್ಳಿ ಎಂದು ಕರೆಯುತ್ತಿದ್ದರು. ಈ ಹಳ್ಳಿಯ ಪ್ರದೇಶವು ದಟ್ಟವಾದ ಅರಣ್ಯದಿಂದ ಕೂಡಿತ್ತು.
ಇತಿಹಾಸಕಾರರು ಈ ವಿಗ್ರಹವು ಪಲ್ಲವರ ಅಥವಾ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದಿರಬಹುದೆಂದು ಹೇಳುತ್ತಾರೆ. ಹಾಗೆಯೇ ಈ ದೇವಸ್ಥಾನದ ಸಮೀಪವಿರುವ ಗಣಪತಿ ಹಾಗೂ ಬಸವಣ್ಣನ ವಿಗ್ರಹ ಮತ್ತು ಆಂಜನೇಯ ಸ್ವಾಮಿಯ ವಿಗ್ರಹದ ಪಾದದ ಮೇಲ್ಭಾಗದಲ್ಲಿರುವ ನೂಪುರ ಮತ್ತು ಉಳಿದ ಆಭರಣಗಳ ಶಿಲ್ಪವು ಒಂದೇ ರೀತಿಯಾಗಿರುವುದೆಂದೂ ಆದ ಕಾರಣ ಈ ಮೂರು ವಿಗ್ರಹಗಳು ಒಂದೇ ಕಾಲಕ್ಕೆ ಸೇರಿರಬಹುದೆಂದೂ ಇತಿಹಾಸಕಾರರು ಹೇಳುತ್ತಾರೆ. ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪದಲ್ಲಿರುವ ಬೃಹದಾಕಾರದ ನಂದಿ ವಿಗ್ರಹದ ಪಾದದಡಿಯಿಂದ ನೀರಿನ ಬುಗ್ಗೆಯೊಂದು ಹರಿಯುತ್ತಿದ್ದ ಕಾರಣ ಈ ಸ್ಥಳಕ್ಕೆ ಕಾರಂಜಿ ಎಂಬ ಹೆಸರು ಬಂದಿತೆನ್ನಲಾಗುತ್ತದೆ. ಈ ಬುಗ್ಗೆಯು ಬೆಂಗಳೂರಿನ ವೃಷಭಾವತಿ ನದಿಯಾಗಿ ಹೆಸರುವಾಸಿಯಾಯಿತು. ಈ ನದಿಯ ಮುಂಭಾಗದಲ್ಲಿ ಹಾಗೂ ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ರಾಮಾಯಣದಲ್ಲಿ ಬರುವ ಸೀತಾನ್ವೇಷಣೆಯನ್ನು ನೆನಪಿಸುವಂತಹ, ಶ್ರೀ ಆಂಜನೇಯ ಸ್ವಾಮಿಯು ತನ್ನೆರಡು ಕೈಗಳಲ್ಲಿ ಚೂಡಾಮಣೆಯನ್ನು ಹಿಡಿದುಕೊಂಡಿರುವ ಏಕಶಿಲೆಯ ನಿಂತಿರುವ ಭಂಗಿಯ ಸ್ವಯಂ ವ್ಯಕ್ತವಾಗಿರುವ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ಶ್ರೀ ಆಂಜನೇಯ ಸ್ವಾಮಿಯನ್ನು ಇಲ್ಲಿಯ ವೃಷಭಾವತಿ ನದಿಯ ನೀರಿನ ಬುಗ್ಗೆಯು ಉಂಟಾಗಿರುವ ಕಾರಣ ಕಾರಂಜಿ ಆಂಜನೇಯ ಎಂದು ಕರೆಯಲಾಯಿತು. ಈ ದೇವಾಲಯವು ಕರ್ನಾಟಕ ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟಿದೆ. ವಾರ್ಷಿಕವಾಗಿ ಹನುಮಜ್ಜಯಂತಿ ಹಾಗೂ ಶ್ರೀರಾಮನವಮಿಗಳಂದು ವಿಶೇಷ ಪೂಜೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ
ಸ್ಥಳ ಪುರಾಣ
ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಶ್ರೀ ಆಂಜನೇಯಸ್ವಾಮಿ ಸ್ವಯಂ ಉದ್ಭವ ಮೂರ್ತಿ, ಶ್ರೀ ರಾಮ ದೇವರು ದೇವಾಲಯವನ್ನು ಶ್ರೀ ಮುತ್ತೋಜಿ ರಾವ್ ಸಿಂಧ್ಯಾ ರವರು ನಿರ್ಮಿಸಿದ್ದು, ಮನುಷ್ಯ ಪ್ರತಿಷ್ಠಾಪಿತ ದೇವಾಲಯವಾಗಿರುತ್ತದೆ.
ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರ ಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ. ಕಾರಂಜಿ ಕೆರೆ ಬಸವನಗುಡಿ ಮತ್ತು ಗಾಂಧಿ ಬಜಾರ್ ಮಧ್ಯ ಭಾಗದಲ್ಲಿದ್ದು, ಅದರ ದಡದಲ್ಲಿರುವುದರಿಂದ ಶ್ರೀ ಕಾರಂಜಿ ಆಂಜನೇಯಸ್ವಾಮಿ ಎಂದು ಹೆಸರು ಬಂದಿದೆ.
ಈ ದೇವಾಲಯದ ಮೂಲ ಮೂರ್ತಿಯು ಕೆತ್ತನೆಯ ರೂಪದಲ್ಲಿ ಕಂಡುಬಂದರೂ ಶ್ರೀ ಕಾರಂಜಿ ಆಂಜನೇಯಸ್ವಾಮಿಯು...ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಶ್ರೀ ಆಂಜನೇಯಸ್ವಾಮಿ ಸ್ವಯಂ ಉದ್ಭವ ಮೂರ್ತಿ, ಶ್ರೀ ರಾಮ ದೇವರು ದೇವಾಲಯವನ್ನು ಶ್ರೀ ಮುತ್ತೋಜಿ ರಾವ್ ಸಿಂಧ್ಯಾ ರವರು ನಿರ್ಮಿಸಿದ್ದು, ಮನುಷ್ಯ ಪ್ರತಿಷ್ಠಾಪಿತ ದೇವಾಲಯವಾಗಿರುತ್ತದೆ.
ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರ ಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ. ಕಾರಂಜಿ ಕೆರೆ ಬಸವನಗುಡಿ ಮತ್ತು ಗಾಂಧಿ ಬಜಾರ್ ಮಧ್ಯ ಭಾಗದಲ್ಲಿದ್ದು, ಅದರ ದಡದಲ್ಲಿರುವುದರಿಂದ ಶ್ರೀ ಕಾರಂಜಿ ಆಂಜನೇಯಸ್ವಾಮಿ ಎಂದು ಹೆಸರು ಬಂದಿದೆ.
ಈ ದೇವಾಲಯದ ಮೂಲ ಮೂರ್ತಿಯು ಕೆತ್ತನೆಯ ರೂಪದಲ್ಲಿ ಕಂಡುಬಂದರೂ ಶ್ರೀ ಕಾರಂಜಿ ಆಂಜನೇಯಸ್ವಾಮಿಯು ತನ್ನ ಬಲಗಾಲನ್ನು ಮುಂದಿರಿಸಿ, ಎರಡೂ ಕೈಗಳನ್ನು ಜೋಡಿಸಿದ್ದಾನೆ. ಆ ಜೋಡಿಸಿದ ಕೈಗಳಲ್ಲಿ ಚೂಡಾಮಣಿಯನ್ನು ಹಿಡಿದುಕೊಂಡಿದ್ದಾನೆ. ವಿನೀತಭಾವದಿಂದ ತನ್ನ ಸೊಂಟವನ್ನು ಬಗ್ಗಿಸಿರುತ್ತಾರೆ. ಅತ್ಯಂತ ಪುಳಕಿತನಾಗಿ ತನ್ನ ಪ್ರಭು ಶ್ರೀರಾಮಚಂದ್ರರನ್ನು ವೀಕ್ಷಿಸುತ್ತಿರುವಂತೆ ಭಾಸವಾಗುತ್ತದೆ. ಈ ಮೂರ್ತಿಯನ್ನು ಹಿಂದೆ ಉದ್ಭವಮೂರ್ತಿಯೆಂದು ಹೇಳಲಾಗುವ ಪ್ರತೀತಿ ಇದೆ. ಸದರಿ ದೇವಾಲಯದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಮತ್ತು ಅರ್ಚನೆ ಹಾಗೂ ಶ್ರೀ ಆಂಜನೇಯಸ್ವಾಮಿಗೆ ವಡೆಹಾರ ಬೆಣ್ಣೆ ಅಲಂಕಾರ, ಹೂವಿನ ಅಂಲಕಾರ ಮತ್ತು ಶ್ರೀ ರಾಮದೇವರಿಗೆ ಹೂವಿನ ಅಲಂಕಾರ ಸೇವೆಗಳನ್ನು ಮಾಡಿಸುವುದರಿಂದ ಉತ್ತಮ ಫಲ ದೊರೆಯುತ್ತವೆ ಹಾಗೂ ಕಾರ್ಯಸಿದ್ಧಿ, ವಿವಾಹ ಮತ್ತು ಎಲ್ಲಾ ಕಷ್ಟಗಳ ನಿವಾರಣೆಯಾಗುತ್ತದೆ. ಈ ಸ್ಥಳಪುರಾಣದ ಬಗ್ಗೆ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಹಿಂದಿನ ಅನೇಕ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿರುತ್ತದೆ.
ಹನುಮಜಯಂತಿ, ಬ್ರಹೋತ್ಸವ, ಪ್ರತಿತೋತ್ಸವ ಮತ್ತು ಶ್ರೀರಾಮನವಮಿ ಪ್ರತಿ ವರ್ಷ ನೂರಾರು ಭಕ್ತರು ಬಂದು ದೇವರ ದರ್ಶನ ಮಾಡಿ ಪುನೀತರಾಗುತ್ತಿರುತ್ತಾರೆ.
ಪೌರಾಣಿಕ ಹಿನ್ನೆಲೆ
ಬೆಂಗಳೂರು ನಗರ, ಬಸವನಗುಡಿ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯದ ಸಂಕ್ಷಿಪ್ತ ಟಿಪ್ಪಣಿ
ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಶ್ರೀ ಆಂಜನೇಯಸ್ವಾಮಿ ಸ್ವಯಂ ಉದ್ಭವ ಮೂರ್ತಿ, ಶ್ರೀ ರಾಮ ದೇವರು ದೇವಾಲಯವನ್ನು ಶ್ರೀ ಮುತ್ತೋಜಿ ರಾವ್ ಸಿಂಧ್ಯಾ ರವರು ನಿರ್ಮಿಸಿದ್ದು, ಮನುಷ್ಯ ಪ್ರತಿಷ್ಠಾಪಿತ ದೇವಾಲಯವಾಗಿರುತ್ತದೆ.
ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರ ಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ. ಕಾರಂಜಿ ಕೆರೆ ಬಸವನಗುಡಿ ಮತ್ತು ಗಾಂಧಿ ಬಜಾರ್ ಮಧ್ಯ ಭಾಗದಲ್ಲಿದ್ದು, ಅದರ ದಡದಲ್ಲಿರುವುದರಿಂದ ಶ್ರೀ ಕಾರಂಜಿ ಆಂಜನೇಯಸ್ವಾಮಿ ಎಂದು ಹೆಸರು ಬಂದಿದೆ.
ಈ ದೇವಾಲಯದ...ಬೆಂಗಳೂರು ನಗರ, ಬಸವನಗುಡಿ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯದ ಸಂಕ್ಷಿಪ್ತ ಟಿಪ್ಪಣಿ