ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬನ್ನಂಜಿ, ಉಡುಪಿ - 576101, ಉಡುಪಿ .
Bannanje Sri Mahalingeshwara Swamy Temple, Udupi - 576101, Udupi District [TM000208]
×
Temple History
ಇತಿಹಾಸ
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಉಡುಪಿಯ ಪುರಾತನ ದೇವಳದಲ್ಲಿ ಒಂದಾಗಿದ್ದು, ಇದ್ದು ೯ ನೇ ಶತಮಾನಕ್ಕೆ ಸೇರಿರುತ್ತದೆ. ಶ್ರೀ ಮಹಾಲಿಂಗೇಶ್ವರ ದೇವರನ್ನು ಇಲ್ಲಿನ ಎಂಟು ಮಹಾಗಣೆಯ ಜನರು ಆರಾದಿಸುತ್ತಾರೆ.
ಇತಿಹಾಸದ ಪ್ರಕಾರ ಶ್ರೀ ಮದ್ವಾಚಾರ್ಯರು ಶ್ರೀ ಕೃಷ್ಣ ದೇವರ ವಿಗ್ರಹವನ್ನು ಕಡಲ ತೀರದಿಂದ ಉಡುಪಿಗೆ ಕೊಂಡು ಹೊಗುವ ಸಮಯದಲ್ಲಿ ಶ್ರೀ ಕೃಷ್ಣ ದೇವರ ವಿಗ್ರಹವನ್ನು ಶ್ರೀ ಬನ್ನಂಜೆ ಮಹಾಲಿಂಗೇಶ್ವರ ದೇವಳದಲ್ಲಿ ಇರಿಸಿ ಪೂಜೆ ಸಲ್ಲಿಸಿರುತ್ತಾರೆ. ಇದಕ್ಕೆ ಸಾಕ್ಶಿಯಾಗಿ ಪ್ರತಿ ಪರಯಾಯದ ಮುನ್ನ ಉಡುಪಿ ಮಠದ ಸ್ವಾಮಿಗಳು ಶ್ರೀ ದೇವಳಕ್ಕೆ ಆಗಮಿಸಿ ಶ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಉಡುಪಿಯ ಪುರಾತನ ದೇವಳದಲ್ಲಿ ಒಂದಾಗಿದ್ದು, ಇದ್ದು ೯ ನೇ ಶತಮಾನಕ್ಕೆ ಸೇರಿರುತ್ತದೆ. ಶ್ರೀ ಮಹಾಲಿಂಗೇಶ್ವರ ದೇವರನ್ನು ಇಲ್ಲಿನ ಎಂಟು ಮಹಾಗಣೆಯ ಜನರು ಆರಾದಿಸುತ್ತಾರೆ.
ಇತಿಹಾಸದ ಪ್ರಕಾರ ಶ್ರೀ ಮದ್ವಾಚಾರ್ಯರು ಶ್ರೀ ಕೃಷ್ಣ ದೇವರ ವಿಗ್ರಹವನ್ನು ಕಡಲ ತೀರದಿಂದ ಉಡುಪಿಗೆ ಕೊಂಡು ಹೊಗುವ ಸಮಯದಲ್ಲಿ ಶ್ರೀ ಕೃಷ್ಣ ದೇವರ ವಿಗ್ರಹವನ್ನು ಶ್ರೀ ಬನ್ನಂಜೆ ಮಹಾಲಿಂಗೇಶ್ವರ ದೇವಳದಲ್ಲಿ ಇರಿಸಿ ಪೂಜೆ ಸಲ್ಲಿಸಿರುತ್ತಾರೆ. ಇದಕ್ಕೆ ಸಾಕ್ಶಿಯಾಗಿ ಪ್ರತಿ ಪರಯಾಯದ ಮುನ್ನ ಉಡುಪಿ ಮಠದ ಸ್ವಾಮಿಗಳು ಶ್ರೀ ದೇವಳಕ್ಕೆ ಆಗಮಿಸಿ ಶ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಸ್ಥಳ ಪುರಾಣ
ದೇವಾಲಯಗಳ ನಗರ ಉಡುಪಿಯಲ್ಲಿ ಪುರಾಣ, ಇತಿಹಾಸ ಹಾಗೂ ಜಾನಪದ ಹಿನ್ನೆಲೆಗಳೊಂದಿಗೆ ಪ್ರಾಚೀನತೆಯ ಭವ್ಯತೆಯನ್ನು ಹೊಂದಿ ಎಂಟು ಮಾಗಣೆಯ ಭಕ್ತರ ಆರಾಧ್ಯ ದೇವರೆನಿಸಿರುವ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವರು.
ಸುಮಾರು ೮-೯ನೇ ಶತಮಾನಕ್ಕೆ ಅನ್ವಯಿಸುವ ಈ ದೇವಸ್ಥಾನ ಪ್ರಾಕ್ತನವಾದರೂ ಶಿಲಾಮಯವಾಗಿ ತನ್ನ ನೈಜ ರಚನಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
ದೇವಸ್ಥಾನದ ಮೂಲಗಳು ತಿಳಿಸುವಂತೆ ಅಂಬಲಪಾಡಿ (ಮೂಡುಪಾಲು) ಅಂಬಲಪಾಡಿ (ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಟಿ, ನಿಡಂಬೂರು, ಕುತ್ಪಾಡಿ ಗ್ರಾಮಗಳು ಎಂಟು ಮಾಗಣೆಗಳು. ಇವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ‘ಕೂಡುಕಟ್ಟು’ ಹೊಂದಿದ್ದವು.
ಹಿನ್ನೆಲೆ:
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಐತಿಹಾಸಿಕ ದಾಖಲೆಗಳ ಪ್ರಕಾರ ಹಿರಿಯ ತಲೆಮಾರಿನ ಭಕ್ತರು ‘ತಾಳೆಕುಡೆ’...ದೇವಾಲಯಗಳ ನಗರ ಉಡುಪಿಯಲ್ಲಿ ಪುರಾಣ, ಇತಿಹಾಸ ಹಾಗೂ ಜಾನಪದ ಹಿನ್ನೆಲೆಗಳೊಂದಿಗೆ ಪ್ರಾಚೀನತೆಯ ಭವ್ಯತೆಯನ್ನು ಹೊಂದಿ ಎಂಟು ಮಾಗಣೆಯ ಭಕ್ತರ ಆರಾಧ್ಯ ದೇವರೆನಿಸಿರುವ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವರು.
ಸುಮಾರು ೮-೯ನೇ ಶತಮಾನಕ್ಕೆ ಅನ್ವಯಿಸುವ ಈ ದೇವಸ್ಥಾನ ಪ್ರಾಕ್ತನವಾದರೂ ಶಿಲಾಮಯವಾಗಿ ತನ್ನ ನೈಜ ರಚನಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
ದೇವಸ್ಥಾನದ ಮೂಲಗಳು ತಿಳಿಸುವಂತೆ ಅಂಬಲಪಾಡಿ (ಮೂಡುಪಾಲು) ಅಂಬಲಪಾಡಿ (ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಟಿ, ನಿಡಂಬೂರು, ಕುತ್ಪಾಡಿ ಗ್ರಾಮಗಳು ಎಂಟು ಮಾಗಣೆಗಳು. ಇವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ‘ಕೂಡುಕಟ್ಟು’ ಹೊಂದಿದ್ದವು.
ಹಿನ್ನೆಲೆ:
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಐತಿಹಾಸಿಕ ದಾಖಲೆಗಳ ಪ್ರಕಾರ ಹಿರಿಯ ತಲೆಮಾರಿನ ಭಕ್ತರು ‘ತಾಳೆಕುಡೆ’ ದೇವಸ್ಥಾನವೆಂದೇ ಗುರುತಿಸುವುದು ಕಂಡುಬರುತ್ತದೆ.
ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿರುವ ಖರ ಮತ್ತು ರಟ್ಟರೆಂಬ ಪರಮ ಶಿವಭಕ್ತರು ತಮ್ಮ ಆರಾಧನೆಗಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರನ್ನು ಸ್ಥಾಪಿಸಿ ಪೂಜಿಸುತ್ತಿದ್ದರೆಂಬ ಪೌರಾಣಿಕ ಹಿನ್ನೆಲೆ ಈ ದೇವಾಲಯಕ್ಕೆ ಇದೆ.
ಹದಿಮೂರನೇ ಶತಮಾನದಲ್ಲಿ ಸನ್ಯಾಸ ಸ್ವೀಕಾರಕ್ಕೆ ಮೊದಲು ಹಾಗೂ ಬಳಿಕ ಆಚಾರ್ಯ ಮಧ್ವರು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿರುವ ಕುರಿತು ‘ಮಧ್ವವಿಜಯ’ (ಸರ್ಗ-೩ ಶ್ಲೋ-೪) ವಿವರ ನೀಡುತ್ತದೆ. ಕಡಲತೀರದಿಂದ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಉಡುಪಿಗೆ ತರುವ ವೇಳೆ ಬನ್ನಂಜೆ ದೇವಳದಲ್ಲೊಮ್ಮೆ ಇರಿಸಿ ಪೂಜಿಸಿದರೆಂಬ ಮಹತ್ವದ ಮಾಹಿತಿಯೂ ದೊರೆಯುತ್ತದೆ. ಈ ಮಾಹಿತಿಯನ್ನು ಪುಷ್ಟೀಕರಿಸಲು ಇಂದಿಗೂ ಅಷ್ಟಮಠದ ಯತಿಗಳು ಪರ್ಯಾಯ ಪೀಠವನ್ನೇರುವ ಪೂರ್ವದಲ್ಲಿ ಬನ್ನಂಜೆ ದೇವಳಕ್ಕೆ ಆಗಮಿಸಿ ಪ್ರಾರ್ಥಿಸುವ ಸಂಪ್ರದಾಯವಿದೆ.
ದೇವಳದಲ್ಲಿರುವ ಶಾಸನವೊಂದರಲ್ಲಿ ಆಳುಪ ಅರಸನೋರ್ವ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶ ಮಾಡಿಸಿದ ಉಲ್ಲೇಖವಿದೆ. ಇವಿಷ್ಟು ಬನ್ನಂಜೆ ದೇವಳಕ್ಕಿರುವ ಪೌರಾಣಿಕ, ಐತಿಹಾಸಿಕ ಹಿನ್ನೆಲೆ.
ಅಪೂರ್ವ ಗರ್ಭಗುಡಿ, ತೀರ್ಥಮಂಟಪ:
ವಾಸ್ತು, ಆಗಮಶಾಸ್ತçಜ್ಞ ಶ್ರೀ ಸುಬ್ರಹ್ಮಣ್ಯ ಭಟ್ ಅವರ ಅಭಿಪ್ರಾಯದಂತೆ ಗರ್ಭಗುಡಿಯ ರಚನೆ, ತೀರ್ಥಮಂಟಪದ ವಿನ್ಯಾಸ ಅದ್ಭುತ, ಆಕರ್ಷಕ. ಇದು ಕ್ಷೇತ್ರಕ್ಕೆ ಮಹತ್ವಪೂರ್ಣ ಐತಿಹಾಸಿಕ ಹಿನ್ನೆಲೆಯೆಂದೂ ಶಿಲ್ಪಶಾಸ್ತçದ ಪ್ರತ್ಯಕ್ಷ ಉದಾಹರಣೆಯೆಂದೂ ಸ್ವೀಕರಿಸಬಹುದಾದ ಅಂಶ. ಚತುರಸ್ರ ಆಕಾರದ ಷಡ್ವರ್ಗದ ದೇವಾಲಯವಿದು.
ಕ್ಷೇತ್ರಪಾಲ, ರಕ್ತೇಶ್ವರಿ, ನಂದಿಗೋಣ, ಬೊಬ್ಬರ್ಯ ಮುಂತಾದ ಜಾನಪದ ಶಕ್ತಿ ವಿಶೇಷಗಳು ಹೊರ ಅಂಗಣದಲ್ಲಿ ಸ್ಥಾನ ಪಡೆದಿದ್ದು ಪರಿವಾರ ಸನ್ನಿಧಿಗಳಾಗಿವೆ. ಈ ಪರಿವಾರ ಶಕ್ತಿಗಳು ಸನ್ನಿಹಿತರಾಗಿರುವ ವಿಧಾನವು ಜಾನಪದ ಹಿನ್ನೆಲೆಯಾಗಿ ಪರಿಗ್ರಹಿಸುವಂತಿದೆ.
ಆನೆಕಲ್ಲು, ಗರ್ಭಗುಡಿ, ತೀರ್ಥಮಂಟಪದ ಶೈಲಿ, ಪ್ರಧಾನ ಬಲಿಪೀಠ ಮುಂತಾದ ಅಪೂರ್ವ ಶಿಲ್ಪಶೈಲಿಗಳು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿವೆ.
ಸಾಹಿತ್ಯದ ಹಿನ್ನೆಲೆ
ದೇವಾಲಯಗಳ ನಗರ ಉಡುಪಿಯಲ್ಲಿ ಪುರಾಣ, ಇತಿಹಾಸ ಹಾಗೂ ಜಾನಪದ ಹಿನ್ನೆಲೆಗಳೊಂದಿಗೆ ಪ್ರಾಚೀನತೆಯ ಭವ್ಯತೆಯನ್ನು ಹೊಂದಿ ಎಂಟು ಮಾಗಣೆಯ ಭಕ್ತರ ಆರಾಧ್ಯ ದೇವರೆನಿಸಿರುವ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವರು.
ಸುಮಾರು 8-9ನೇ ಶತಮಾನಕ್ಕೆ ಅನ್ವಯಿಸುವ ಈ ದೇವಸ್ಥಾನ ಪ್ರಾಚೀನವಾದರೂ ಶಿಲಾಮಯವಾಗಿ ತನ್ನ ನೈಜ ರಚನಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
ದೇವಸ್ಥಾನದ ಮೂಲಗಳು ತಿಳಿಸುವಂತೆ ಅಂಬಲಪಾಡಿ (ಮೂಡುಪಾಲು) ಅಂಬಲಪಾಡಿ (ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಟಿ, ನಿಡಂಬೂರು, ಕುತ್ಪಾಡಿ ಗ್ರಾಮಗಳು ಎಂಟು ಮಾಗಣೆಗಳು. ಇವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ‘ಕೂಡುಕಟ್ಟು’ ಹೊಂದಿದ್ದವು.
ಹಿನ್ನೆಲೆ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಐತಿಹಾಸಿಕ ದಾಖಲೆಗಳ ಪ್ರಕಾರ ಹಿರಿಯ ತಲೆಮಾರಿನ ಭಕ್ತರು ‘ತಾಳೆಕುಡೆ’ ದೇವಸ್ಥಾನವೆಂದೇ ಗುರುತಿಸುವುದು ಕಂಡುಬರುತ್ತದೆ.
ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿರುವ ಖರ ಮತ್ತು ರಟ್ಟರೆಂಬ ಪರಮ ಶಿವಭಕ್ತರು ತಮ್ಮ...ದೇವಾಲಯಗಳ ನಗರ ಉಡುಪಿಯಲ್ಲಿ ಪುರಾಣ, ಇತಿಹಾಸ ಹಾಗೂ ಜಾನಪದ ಹಿನ್ನೆಲೆಗಳೊಂದಿಗೆ ಪ್ರಾಚೀನತೆಯ ಭವ್ಯತೆಯನ್ನು ಹೊಂದಿ ಎಂಟು ಮಾಗಣೆಯ ಭಕ್ತರ ಆರಾಧ್ಯ ದೇವರೆನಿಸಿರುವ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವರು.
ಸುಮಾರು 8-9ನೇ ಶತಮಾನಕ್ಕೆ ಅನ್ವಯಿಸುವ ಈ ದೇವಸ್ಥಾನ ಪ್ರಾಚೀನವಾದರೂ ಶಿಲಾಮಯವಾಗಿ ತನ್ನ ನೈಜ ರಚನಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
ದೇವಸ್ಥಾನದ ಮೂಲಗಳು ತಿಳಿಸುವಂತೆ ಅಂಬಲಪಾಡಿ (ಮೂಡುಪಾಲು) ಅಂಬಲಪಾಡಿ (ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಟಿ, ನಿಡಂಬೂರು, ಕುತ್ಪಾಡಿ ಗ್ರಾಮಗಳು ಎಂಟು ಮಾಗಣೆಗಳು. ಇವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ‘ಕೂಡುಕಟ್ಟು’ ಹೊಂದಿದ್ದವು.
ಹಿನ್ನೆಲೆ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಐತಿಹಾಸಿಕ ದಾಖಲೆಗಳ ಪ್ರಕಾರ ಹಿರಿಯ ತಲೆಮಾರಿನ ಭಕ್ತರು ‘ತಾಳೆಕುಡೆ’ ದೇವಸ್ಥಾನವೆಂದೇ ಗುರುತಿಸುವುದು ಕಂಡುಬರುತ್ತದೆ.
ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿರುವ ಖರ ಮತ್ತು ರಟ್ಟರೆಂಬ ಪರಮ ಶಿವಭಕ್ತರು ತಮ್ಮ ಆರಾಧನೆಗಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರನ್ನು ಸ್ಥಾಪಿಸಿ ಪೂಜಿಸುತ್ತಿದ್ದರೆಂಬ ಪೌರಾಣಿಕ ಹಿನ್ನೆಲೆ ಈ ದೇವಾಲಯಕ್ಕೆ ಇದೆ.
ಹದಿಮೂರನೇ ಶತಮಾನದಲ್ಲಿ ಸನ್ಯಾಸ ಸ್ವೀಕಾರಕ್ಕೆ ಮೊದಲು ಹಾಗೂ ಬಳಿಕ ಆಚಾರ್ಯ ಮಧ್ವರು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿರುವ ಕುರಿತು ‘ಮಧ್ವವಿಜಯ’ (ಸರ್ಗ-3 ಶ್ಲೋ-4) ವಿವರ ನೀಡುತ್ತದೆ. ಕಡಲತೀರದಿಂದ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಉಡುಪಿಗೆ ತರುವ ವೇಳೆ ಬನ್ನಂಜೆ ದೇವಳದಲ್ಲೊಮ್ಮೆ ಇರಿಸಿ ಪೂಜಿಸಿದರೆಂಬ ಮಹತ್ವದ ಮಾಹಿತಿಯೂ ದೊರೆಯುತ್ತದೆ. ಈ ಮಾಹಿತಿಯನ್ನು ಪುಷ್ಟೀಕರಿಸಲು ಇಂದಿಗೂ ಅಷ್ಟಮಠದ ಯತಿಗಳು ಪರ್ಯಾಯ ಪೀಠವನ್ನೇರುವ ಪೂರ್ವದಲ್ಲಿ ಬನ್ನಂಜೆ ದೇವಳಕ್ಕೆ ಆಗಮಿಸಿ ಪ್ರಾರ್ಥಿಸುವ ಸಂಪ್ರದಾಯವಿದೆ.