ದೇವಾಲಯಗಳ ನಗರ ಉಡುಪಿಯಲ್ಲಿ ಪುರಾಣ, ಇತಿಹಾಸ ಹಾಗೂ ಜಾನಪದ ಹಿನ್ನೆಲೆಗಳೊಂದಿಗೆ ಪ್ರಾಚೀನತೆಯ ಭವ್ಯತೆಯನ್ನು ಹೊಂದಿ ಎಂಟು ಮಾಗಣೆಯ ಭಕ್ತರ ಆರಾಧ್ಯ ದೇವರೆನಿಸಿರುವ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವರು. ಸುಮಾರು 8-9ನೇ ಶತಮಾನಕ್ಕೆ ಅನ್ವಯಿಸುವ ಈ ದೇವಸ್ಥಾನ ಪ್ರಾಚೀನವಾದರೂ ಶಿಲಾಮಯವಾಗಿ ತನ್ನ ನೈಜ ರಚನಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ದೇವಸ್ಥಾನದ ಮೂಲಗಳು ತಿಳಿಸುವಂತೆ ಅಂಬಲಪಾಡಿ (ಮೂಡುಪಾಲು) ಅಂಬಲಪಾಡಿ (ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಟಿ, ನಿಡಂಬೂರು, ಕುತ್ಪಾಡಿ ಗ್ರಾಮಗಳು ಎಂಟು ಮಾಗಣೆಗಳು. ಇವು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ‘ಕೂಡುಕಟ್ಟು’ ಹೊಂದಿದ್ದವು. ಹಿನ್ನೆಲೆ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಐತಿಹಾಸಿಕ ದಾಖಲೆಗಳ ಪ್ರಕಾರ ಹಿರಿಯ ತಲೆಮಾರಿನ ಭಕ್ತರು ‘ತಾಳೆಕುಡೆ’ ದೇವಸ್ಥಾನವೆಂದೇ ಗುರುತಿಸುವುದು ಕಂಡುಬರುತ್ತದೆ. ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿರುವ ಖರ ಮತ್ತು ರಟ್ಟರೆಂಬ ಪರಮ ಶಿವಭಕ್ತರು ತಮ್ಮ...