ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಅಂಚೆ - 574238, ದಕ್ಷಿಣ ಕನ್ನಡ .
Kukke Shree Subrahmanya Temple, Subrahamanya Post - 574238, Dakshina Kannada District [TM000021]
×
Temple History
ಪೌರಾಣಿಕ ಹಿನ್ನೆಲೆ
ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ದದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಪ್ರಾಣಿಗ್ರಹಣ ಮಾಡಿದನು. ಅದೇವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನು ದೇವಸೇನಾ ಸಮೇತವಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.
ಪರಶುರಾಮನ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ದಿಯಾಗಿದ್ದು, ವಾಸುಕಿ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು...ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ದದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಪ್ರಾಣಿಗ್ರಹಣ ಮಾಡಿದನು. ಅದೇವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನು ದೇವಸೇನಾ ಸಮೇತವಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.
ಪರಶುರಾಮನ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ದಿಯಾಗಿದ್ದು, ವಾಸುಕಿ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು ಕರೆಯುತ್ತಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪುರಾತನ ದೇವಸ್ಥಾನವಾಗಿದ್ದು ಯಾವ ಶತಮಾನಕ್ಕೆ ಸೇರಿದೆ ಎಂಬುವುದರ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿರುವುದಿಲ್ಲ, ಆದರೆ ಸ್ಕಂದಪುರಾಣ ಮತ್ತು ಶ್ರೀಮದ್ ಶಂಕರಾಚಾರ್ಯರು ಈ ಕ್ಷೇತ್ರದ ಬಗ್ಗೆ 9-10 ನೇ ಶತಮಾನದಲ್ಲಿ “ಶಂಕರ ವಿಜಯಂ” ಎಂಬ ಗ್ರಂಥದಲ್ಲಿ “ಭಜೇ ಕುಕ್ಕೆಲಿಂಗಂ” ಎಂಬುದಾಗಿ ಕುಕ್ಕೆ ಪುಣ್ಯಾಧೀಶನನ್ನು ಭಜಿಸಿದ ಬಗ್ಗೆ ಉಲ್ಲೇಖವಿರುವುದು, ಅಲ್ಲದೆ 9ನೇ ಶತಮಾನದ ಬಂಟ್ರ ಶಾಸನದಲ್ಲಿ ಕುಕ್ಕೆ ಸ್ಥಳನಾಮದ ಪ್ರಾಚೀನ ಉಲ್ಲೇಖ ವಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯನ ಇರುವಿಕೆಯ ಅಂದಾಜು ಸುಮಾರು 5000 ವರ್ಷಗಳ ಇತಿಹಾಸ ಹೊಂದಿದೆ.
ಶ್ರೀ ಸುಬ್ರಹ್ಮಣ್ಯ ದೇವರು ಕುಕ್ಕೆ ಕ್ಷೇತ್ರದಲ್ಲಿ ನಾಗರೂಪಿಯಾಗಿ ನೆಲೆಸಿದ್ದಾರೆಂಬ ನಂಬಿಕೆಯ ಕಾರಣಕ್ಕೆ ದೇವಾಲಯ ನಿರ್ಮಾಣ ಆಗಿದೆ ಎನ್ನಲಾಗಿದೆ. ಆದರೆ ಇಲ್ಲಿ ಉದ್ಬವ ಸ್ವಯಂ ಮೂರ್ತಿ ಅಥವ ಋಷಿಗಳಿಂದ ಪ್ರತಿಷ್ಠಾಪಿತ ಮೂರ್ತಿಗಳು ಇರುವುದು ಸುಬ್ರಹ್ಮಣ್ಯನ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಪ್ರಮುಖವಾಗಿ ಸಂತಾನ ಪ್ರಾಪ್ತಿ, ಮಾಂಗಲ್ಯ ಭಾಗ್ಯ, ಚರ್ಮವ್ಯಾದಿಗಳು ಹಾಗೂ ನಾಗದೋಷ ನಿವಾರಣೆಯ ಫಲ ಲಭಿಸುತ್ತದೆ ಎಂಬ ನಂಬಿಕೆ ಇದೆ. ಮೂಲ ಪ್ರಸಾದವಾಗಿ ಕೊಡುವ ಹುತ್ತದ ಮಣ್ಣು ಇಲ್ಲಿಯ ವಿಶೇಷವಾಗಿರುತ್ತದೆ. ನಾಗದೋಷಕ್ಕೆ ಸಂಬಂಧಿಸಿದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಷೆ ಸೇವೆಗಳು ಇಲ್ಲಿನ ವಿಶೇಷ ಪೂಜೆಗಳು.
ಪಶ್ಚಿಮಘಟ್ಟದ ಕುಮಾರ ಪರ್ವತದ ತಪ್ಪಲಿನ ನದಿ ತಟಾಕದಲ್ಲಿ ದೇವಾಲಯವಿರುತ್ತದೆ. ದೇವಾಲಯದ ಪೂರ್ವದಿಕ್ಕಿನಲ್ಲಿ ಹಾಗೂ ಸುತ್ತಲೂ ಕುಮಾರ ಪರ್ವತ, ದರ್ಪಣ ತೀರ್ಥ ನದಿ ಮತ್ತು ಕುಮಾರಧಾರ ನದಿಗಳಿಂದ ಸುತ್ತುವರಿದಿರುತ್ತದೆ. ದೇವಳದ ಗರ್ಭಗುಡಿಯು ಶಿಥಿಲವಾಗಿದ್ದರಿಂದ ದೇವಳದ ಆಡಳಿತ ವತಿಯಿಂದ 2005ರಲ್ಲಿ ಗರ್ಭಗುಡಿ ಜೀರ್ಣೋದ್ದಾರಗೊಳಿಸಲಾಗಿದೆ.
ಚಂಪಾಷಷ್ಠಿ ಮಹೋತ್ಸವದ ಕೊಪ್ಪರಿಗೆ ಏರುವ ಹಿಂದಿನ ಏಕಾದಶಿಯದಿನ ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರು ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲ ಮೃತಿಕೆ (ಹುತ್ತದ ಮಣ್ಣು) ಪ್ರಸಾದವನ್ನು ಭಕ್ತರಿಗೆ ವಿತರಿಸುವುದು ವಿಶೇಷವಾಗಿದೆ. ಅಲ್ಲದೆ ಶ್ರೀ ಗಂಧ ಮತ್ತು ನಾಗನಿಗೆ ವಿಶೇಷವಾಗಿ ಅರಿಶಿನ ಹಚ್ಚುವುದು, ಅರಳು ಬೆಲ್ಲ ಬಾಳೆಹಣ್ಣು ಸಮರ್ಪಣೆ, ಎಳನೀರು-ಕ್ಷೀರ ಅಭಿಷೇಕ, ಕಲಶಸ್ನಾನ ಇತ್ಯಾದಿ ಸಾಂಪ್ರದಾಯಿಕ ಪದ್ದತಿಗಳು ಮುಂದುವರಿಯುತ್ತಿದೆ. ಕುಮಾರಧಾರ ನದಿಯು ಇಲ್ಲಿನ ಪವಿತ್ರ ನದಿಯಾಗಿದ್ದು ಇಲ್ಲಿ ಸ್ನಾನ ಮಾಡಿದಲ್ಲಿ ಚರ್ಮ ರೋಗ ಪರಿಹಾರವಾಗುತ್ತದೆ ಎಂಬ ವಿಶೇಷ ನಂಬಿಕೆ ಇದೆ. ಶ್ರೀ ದೇವರ ಗರ್ಭಗುಡಿ ಮುಂಭಾಗದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ನಂತರದಲ್ಲಿ ಭಕ್ತಾದಿಗಳು ತಮ್ಮ ತಮ್ಮ ಇಷ್ಠಾರ್ಥ ಸಿದ್ದಿಗೋಸ್ಕರ ನಡೆಸುವ ಪ್ರಾರ್ಥನೆ ಸೇವೆಗೆ ಸಂಬಂಧಿಸಿ ಪೂಜಾ ಅರ್ಚಕರು ನೀಡುವ ಮೂಲ ಪ್ರಸಾದವನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾಧಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ.