ಶ್ರೀ ರಂಗನಾಥಸ್ವಾಮಿ ದೇವಾಲಯ ಬಳ್ಳಾಪುರಪೇಟೆ, ಬೆಂಗಳೂರು ನಗರ - 560002, ಬೆಂಗಳೂರು .
Sri Ranganatha Swamy Temple Ballapurapete, Bengaluru Urban - 560002, Bengaluru Urban District [TM000214]
×
Temple History
ಇತಿಹಾಸ
ಚೋಳರಾಜರ ಆಳ್ವಿಕೆಯ ಕಾಲದಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಕ್ರಿ.ಶ.1628 ನೇ ಇಸವಿಯಲ್ಲಿ ಪ್ರತಿಷ್ಠಪನೆ ಮಾಡಿರುತ್ತಾರೆ. ನಂತರ ಶ್ರೀ 2ನೇ ಕೆಂಪೇಗೌಡರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಈ ದೇವಾಲಯದ ದ್ವಾರದಿಂದ ಎತ್ತುಗಳನ್ನು ಬಿಟ್ಟು ಬೆಂಗಳೂರು ನಿರ್ಮಾಣಕ್ಕೆ ನಾಂದಿ ಹಾಡಿದರು. ಅದೇ ಈಗಿನ ಚಿಕ್ಕಪೇಟೆ ವೃತ್ತ, ನಂತರ ಕೆಲವು ದೇವಾಂಗ ವರ್ತಕರು, ಚಿನ್ನಾಭರಣ ವರ್ತಕರು, ಮುತ್ತು ರತ್ನದ ವರ್ತಕರು ಸೇರಿ ಈ ದೇವಸ್ಥಾನವನ್ನು ಪುನರ್ ಜೀರ್ಣೋದ್ಧಾರ ಮಾಡಿರುವ ಬಗ್ಗೆ ಶಿಲಾ ಶಾಸನವಿರುತ್ತದೆ. ಅಂದಿನ ಕಾಲದಲ್ಲಿ ಈ ದೇವಸ್ಥಾನದ ಬೀದಿಯಲ್ಲಿ ರೇಷ್ಮೆ ವ್ಯಾಪರ ಮತ್ತು ಮುತ್ತು ರತ್ನದ ವ್ಯಾಪಾರ ನಡೆಸುತ್ತಿದ್ದುದರಿಂದ ಈ ಪೇಟೆಗೆ ಬಳ್ಳಾಪುರಪೇಟೆ ಎಂದು ಹೆಸರು ಬಂದಿರುತ್ತದೆ. ಇಲ್ಲಿ ವಿಶೇಷವಾಗಿ ಚಿತ್ರಪೌರ್ಣಮಿ ದಿನದಂದು ಬ್ರಹ್ಮ ರಥೋತ್ಸವು ಶ್ರಾವಣ ಮಾಸದಲ್ಲಿ ನಿತ್ಯೋತ್ಸವ ಹಾಗೂ ಧನುರ್ ಮಾಸದಲ್ಲಿ...ಚೋಳರಾಜರ ಆಳ್ವಿಕೆಯ ಕಾಲದಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಕ್ರಿ.ಶ.1628 ನೇ ಇಸವಿಯಲ್ಲಿ ಪ್ರತಿಷ್ಠಪನೆ ಮಾಡಿರುತ್ತಾರೆ. ನಂತರ ಶ್ರೀ 2ನೇ ಕೆಂಪೇಗೌಡರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಈ ದೇವಾಲಯದ ದ್ವಾರದಿಂದ ಎತ್ತುಗಳನ್ನು ಬಿಟ್ಟು ಬೆಂಗಳೂರು ನಿರ್ಮಾಣಕ್ಕೆ ನಾಂದಿ ಹಾಡಿದರು. ಅದೇ ಈಗಿನ ಚಿಕ್ಕಪೇಟೆ ವೃತ್ತ, ನಂತರ ಕೆಲವು ದೇವಾಂಗ ವರ್ತಕರು, ಚಿನ್ನಾಭರಣ ವರ್ತಕರು, ಮುತ್ತು ರತ್ನದ ವರ್ತಕರು ಸೇರಿ ಈ ದೇವಸ್ಥಾನವನ್ನು ಪುನರ್ ಜೀರ್ಣೋದ್ಧಾರ ಮಾಡಿರುವ ಬಗ್ಗೆ ಶಿಲಾ ಶಾಸನವಿರುತ್ತದೆ. ಅಂದಿನ ಕಾಲದಲ್ಲಿ ಈ ದೇವಸ್ಥಾನದ ಬೀದಿಯಲ್ಲಿ ರೇಷ್ಮೆ ವ್ಯಾಪರ ಮತ್ತು ಮುತ್ತು ರತ್ನದ ವ್ಯಾಪಾರ ನಡೆಸುತ್ತಿದ್ದುದರಿಂದ ಈ ಪೇಟೆಗೆ ಬಳ್ಳಾಪುರಪೇಟೆ ಎಂದು ಹೆಸರು ಬಂದಿರುತ್ತದೆ. ಇಲ್ಲಿ ವಿಶೇಷವಾಗಿ ಚಿತ್ರಪೌರ್ಣಮಿ ದಿನದಂದು ಬ್ರಹ್ಮ ರಥೋತ್ಸವು ಶ್ರಾವಣ ಮಾಸದಲ್ಲಿ ನಿತ್ಯೋತ್ಸವ ಹಾಗೂ ಧನುರ್ ಮಾಸದಲ್ಲಿ ಬರುವ ವೈಕುಂಠ ಏಕದಶಿಯ ದಿನದಂದೂ ರಂಗನಾಥಸ್ವಾಮಿಯ ಗರ್ಭಗುಡಿಯ ವೈಕುಂಠ ಪ್ರಾಕಾರ ಪ್ರವೇಶವನ್ನು ಪಡೆಯಲು ಲಕ್ಷಾಂತರ ಮಂದಿ ಭಕ್ತಾದಿಗಳು ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡುವುದೇ ಒಂದು ವಿಶೇಷ ಉದ್ಭವ ಮೂರ್ತಿಯಾದ ಶ್ರೀ ರಂಗನಾಥಸ್ವಾಮಿ ದೇವರು ದರ್ಶನದಿಂದ ಜನ್ಮ ಪಾವನವಾಗುವುದು ಎಂಬ ಪ್ರತೀತಿ ಇರುತ್ತದೆ.