ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ, ಬೆಳ್ತಂಗಡಿ, ದಕ್ಷಿಣ ಕನ್ನಡ, ದಕ್ಷಿಣ ಕನ್ನಡ .
Sri Vaidyanatheswara Temple Kokkada, Beltangadi, Dakshina Kannada, Dakshina Kannada District [TM000219]
×
Temple History
ಇತಿಹಾಸ
ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಕ್ಷಿಣದ ಅಂಚಿನಲ್ಲಿರುವ ಕೊಕ್ಕಡ ಗ್ರಾಮ ಮನಮೋಹಕ ಪರಿಸರವನ್ನು ಹೊಂದಿದೆ. ಸುತ್ತಲೂ ಹರಡಿರುವ ಕಾನನ/ಅರಣ್ಯಗಳು ಇದಕ್ಕೆ ಕಳಶಪ್ರಾಯವಾಗಿದೆ ಈ ದೇವಾಲಯು ಸುಮಾರು ಹತ್ತನೇ ಶತಮಾನದಲ್ಲಿ ನಿರ್ಮಾಣಗೊಂಡಿರುತ್ತದೆ.
ಈ ದೇವಾಲಯವು ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಈ ಊರು ಪ್ರಾಚೀನ ಕಾಲದಲ್ಲಿ ಕುಕ್ಕುಟಪುರ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ಇದು ಕೊಕ್ಕಡವೆಂದು ಕರೆಯಲ್ಪಟ್ಟಿತು. ದೇವಾಲಯಗಳಿಗೆ ಪ್ರಸಿದ್ಧವಾದ ಈ ಊರಿನಲ್ಲಿ ಬಹುಸುಂದರವಾದ ಶ್ರೀ ವೈದ್ಯನಾಥೇಶ್ವರ ಬ್ರಹನ್ಮ೦ದಿರವೂ ಬಳಿಯಲ್ಲಿಯೇ ಶ್ರೀ ವಿಷ್ಣುಮೂರ್ತಿ ಗುಡಿಯು ಇದ್ದು ಸನಿಹದಲ್ಲಿ ಕೆರೆಯ ಮಧ್ಯದಲ್ಲಿ ನೀಲಕಂಠನ ಗುಡಿಯಿದೆ. ಹರಿ-ಹರರು ಒಂದಾಗಿರುವ ಈ ಕ್ಷೇತ್ರ ವೈಷ್ಣವ ಹಾಗು ಶೈವ ಮತಾನುಯಾಯಿಗಳ...ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಕ್ಷಿಣದ ಅಂಚಿನಲ್ಲಿರುವ ಕೊಕ್ಕಡ ಗ್ರಾಮ ಮನಮೋಹಕ ಪರಿಸರವನ್ನು ಹೊಂದಿದೆ. ಸುತ್ತಲೂ ಹರಡಿರುವ ಕಾನನ/ಅರಣ್ಯಗಳು ಇದಕ್ಕೆ ಕಳಶಪ್ರಾಯವಾಗಿದೆ ಈ ದೇವಾಲಯು ಸುಮಾರು ಹತ್ತನೇ ಶತಮಾನದಲ್ಲಿ ನಿರ್ಮಾಣಗೊಂಡಿರುತ್ತದೆ.
ಈ ದೇವಾಲಯವು ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಈ ಊರು ಪ್ರಾಚೀನ ಕಾಲದಲ್ಲಿ ಕುಕ್ಕುಟಪುರ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ಇದು ಕೊಕ್ಕಡವೆಂದು ಕರೆಯಲ್ಪಟ್ಟಿತು. ದೇವಾಲಯಗಳಿಗೆ ಪ್ರಸಿದ್ಧವಾದ ಈ ಊರಿನಲ್ಲಿ ಬಹುಸುಂದರವಾದ ಶ್ರೀ ವೈದ್ಯನಾಥೇಶ್ವರ ಬ್ರಹನ್ಮ೦ದಿರವೂ ಬಳಿಯಲ್ಲಿಯೇ ಶ್ರೀ ವಿಷ್ಣುಮೂರ್ತಿ ಗುಡಿಯು ಇದ್ದು ಸನಿಹದಲ್ಲಿ ಕೆರೆಯ ಮಧ್ಯದಲ್ಲಿ ನೀಲಕಂಠನ ಗುಡಿಯಿದೆ. ಹರಿ-ಹರರು ಒಂದಾಗಿರುವ ಈ ಕ್ಷೇತ್ರ ವೈಷ್ಣವ ಹಾಗು ಶೈವ ಮತಾನುಯಾಯಿಗಳ ಸಂಗಮ ಕ್ಷೇತ್ರವೆನಿಸಿದೆ. ಶ್ರೀ ವೈದ್ಯನಾಥೇಶ್ವರನು ಲಿಂಗರೂಪದಲ್ಲಿ ಆರಾಧಿಸಲ್ಪಟ್ಟರೂ ಇದರ ಬಳಿಯಲ್ಲಿರುವ ಅಭಯ ಹಸ್ತ ಮುದ್ರೆಯನ್ನೊಳಗೊಂಡ ಶಿವನ ಉತ್ಸವ ಮೂರ್ತಿ ಎಂಥಹ ನಾಸ್ತಿಕರನ್ನೂ ಆಕರ್ಷಿಸುವಂತಿದೆ. ದೇವಾಲಯದ ಹೊರ ಪ್ರಾಕಾರದಲ್ಲಿರುವ ವಿಷ್ಣುಮೂರ್ತಿ ವಿಗ್ರಹ ಭಜಕರನ್ನು ಭಕ್ತಿ ಭಾವಕ್ಕೆ ಸೆಳೆದೊಯ್ಯುತ್ತದೆ. ಮಕರಕುಂಡಲ ಮುಕುಟಧಾರಿಯಾಗಿ ಎರಡೂ ಕೈಗಳಲ್ಲಿ ಶಂಖ ಚಕ್ರಗಳಿಂದ ಶೋಭಿಸುವ ಹಾಗೂ ಕೆಳಗಿನ ಎಡಗೈ ಗದೆಯಿಂದಲೂ, ಎತ್ತಿರುವ ಬಲಗೈ ಪದ್ಮದಿಂದಲೂ ಸಾಲಂಕೃತಗೊಂಡಿದ್ದು ಪ್ರಸನ್ನ ಮುಖಮುದ್ರೆಯಿಂದ ಮೋಹಕವಾಗಿ ಕಂಗೊಳಿಸುತ್ತಿದೆ.
ಈ ಕ್ಷೇತ್ರದ ಇನ್ನೊಂದು ಆಕರ್ಷಣೆ ಇಲ್ಲಿನ “ಪುಷ್ಕರಣಿ” ಮರುನಿರ್ಮಾಣಗೊಳ್ಳಬೇಕಾದ ಈ ವಿಶಾಲ ಕೆರೆ ಬತ್ತಿದ ನೆನಪು ಯಾರಿಗೂ ಇರುವುದಿಲ್ಲ. ಈ ಪುಷ್ಕರಣಿಯ ಮಧ್ಯದಲ್ಲಿ ಸ್ವಯಂಭೂಲಿಂಗದ ಲಕ್ಷಣದಿಂದ ಕೂಡಿರುವ ನೀಲಕಂಠನ ಗುಡಿಯಿದೆ. ಈ ಕ್ಷೇತ್ರದಲ್ಲಿ ಶಿವನ ಪರಿವಾರ ದೇವತೆಗಳಾದ ದುರ್ಗೆ , ಗಣಪತಿ, ಗುಡಿಗಳು ಇಲ್ಲಿವೆ. ಕೆರೆಯ ಅತಿ ಸನಿಹದಲ್ಲಿ ನಾಗಬನವಿದ್ದು ನಾಗಾರಾಧನೆಯು ನಡೆಯುತ್ತಿದೆ. ದೇವತಾರಾಧನೆಯ ಜೊತೆಯಲ್ಲಿ ದೈವಾರಾಧನೆಯು ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು ಅಣ್ಣಪ್ಪ, ಗುಳಿಗ, ಪಂಜುರ್ಲಿ , ಉಳ್ಳಾಕುಲು, ಉಳ್ಳಾಲ್ತಿ, ಕೊರತಿ ಹಾಗು ರಕ್ತೇಶ್ವರಿ ದೈವಗಳು ನಂಬಿದವರ ಸಲಹುತ್ತಿವೆ. ಸುತ್ತಲಿನ ಹಲವು ಗ್ರಾಮಗಳಿಗೆ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡಿರುವ ಈ ದೇವಾಲಯ “ಸೀಮೆ ದೇವಾಲಯ”ವೆಂದೇ ಪ್ರಸಿದ್ಧವಾಗಿದ್ದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಕ್ಷೇತ್ರದ ಪೂರ್ವಕ್ಕಿರುವ ಶಿಶಿಲ ಗ್ರಾಮವಾಸಿಗಳು ಗೆಡ್ಡೆಗಳನ್ನು ಆರಿಸುವ ಸಂದರ್ಭದಲ್ಲಿ ಶಿವಲಿಂಗಕ್ಕಾದ ಕತ್ತಿಯ ಗಾಯದಿಂದ ರಕ್ತ ಒಸರಲಾರಂಭಿಸಿತು. ತನಗಾದ ಗಾಯದ ವಾಸಿಗಾಗಿ ಔಷಧವನ್ನು ತರಲೆಂದು ಶಿಶಿಲೇಶ್ವರನು ಆತನ ಗಣಗಳಲ್ಲೊಬ್ಬನನ್ನು ವೈದ್ಯನಾಥನ ಸನ್ನಿಧಿಗೆ ಕಳುಹಿಸಿದನು. ಶಿಶಿಲ ಹಾಗೂ ಕೊಕ್ಕಡ ಮಾತ್ರವಲ್ಲದೆ ಪಕ್ಕದ ರಾಮಕುಂಜ ಕ್ಷೇತ್ರಕ್ಕೂ ಪರಸ್ಪರ ಸಂಬಂಧವಿದ್ದು ಮೂರೂ ಸ್ಥಳಗಳಲ್ಲೂ ಉದ್ಬವ ಲಿಂಗವಿದೆ. ವಿಶೇಷವೆಂಬಂತೆ ಈ ಮೂರು ದೇವಾಲಯಗಳಿಗೆ ಉದ್ಭವ ನಂದಿ ಒಂದೇ ಆಗಿದ್ದು ತಲೆಭಾಗ ರಾಮಕುಂಜದಲ್ಲಿ, ನಡುಭಾಗ ಕೊಕ್ಕಡದಲ್ಲಿ, ಪೃಷ್ಠಭಾಗ ಶಿಶಿಲದಲ್ಲಿ ಇರುವುದಾಗಿ ಹೇಳಲಾಗಿದೆ. ದೇವಳದ ಪ್ರಾಚೀನತೆಯನ್ನು ತಿಳಿಸಿಕೊಡುವ ಶಿಲಾಶಾಸನವೊಂದು ದೇವಳದ ಧ್ವಜಸ್ತ೦ಭದಲ್ಲಿದೆ. ಸ್ಥಳೀಯನಾದ ದೇಸಿಂಗನ ಮಗ ದೇವು ಎಂಬವನು ಶಾಲಿವಾಹನ ಶಕ ೧೫೪೯ ರಲ್ಲಿ ಇದನ್ನು ನಿರ್ಮಿ ಸಿರುವ ಉಲ್ಲೇಖವಿದೆ. ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಲೋಕ ಕಲ್ಯಾಣಾರ್ಥ ಸಂಚಾರ ಕೈಗೊಂಡಾಗ ಈ ಪ್ರದೇಶಕ್ಕೂ ಆಗಮಿಸಿದ್ದರು. ಗ್ರೀಷ್ಮ ಋತುವಿನಲ್ಲಿ ನಿರ್ಜ ಲವಾಗಿದ್ದಇಲ್ಲಿನ ಕೆರೆ ಮಹಾತ್ಮರ ಪಾದಸ್ಪರ್ಶ ಮಾತ್ರದಿಂದ ಕಾರ್ಮುಗಿಲ ಮಳೆಯಾಗಿ ತುಂಬಿ ಹರಿಯಿತೆಂದು ಹೇಳಲಾಗಿದೆ. ಕಾಲಾಂತರದಲ್ಲಿ ಇದು ಸರ್ವ ಋತುವಿನಲ್ಲೂ ತುಂಬಿರುವುದು ವಿಶೇಷವಾಗಿದೆ. ಇಲ್ಲಿನ ಜನರ ಶ್ರದ್ದೆ ಹಾಗೂ ಪರಿಸರದಿಂದ ಆಕರ್ಷಿತರಾದ ಶ್ರೀ ಮಧ್ವಾಚಾರ್ಯರು ಈ ಕ್ಷೇತ್ರದಲ್ಲಿ “ಶ್ರೀ ಕೃಷ್ಣಾಮೃತ ಮಹಾರ್ಣವ “ಎಂಬ ಗ್ರಂಥ ರಚಿಸಿದರು. ಇದಕ್ಕೂ ಮುನ್ನ ದಿವಾಕರನೆಂಬ ಮುನಿ ಇಲ್ಲಿನ ನಾಗಸನ್ನಿಧಿಯ ಸಮೀಪದಲ್ಲಿ ತಪಸ್ಸನ್ನಾಚರಿಸಿದ ಬಗ್ಗೆಯೂ ಉಲ್ಲೇಖವಿದೆ. ಪೂರ್ವಾಶ್ರಮದಲ್ಲಿ ವಿಷಯಲಂಪಟನಾಗಿದ್ದ ವ್ಯಕ್ತಿ ಈ ದೇವ ಸಾನಿಧ್ಯದ ಪ್ರಭಾವದಿಂದ ದೈವೀ ಪ್ರಜ್ಞೆಯನ್ನು ಬೆಳೆಸಿಕೊಂಡು ಲೀಲಾಶುಕನೆಂಬ ನಾಮದಿಂದ ಪ್ರಖ್ಯಾತನಾಗಿರುವುದು ಇತಿಹಾಸದಿಂದ ತಿಳಿಯುತ್ತದೆ.
ಈ ಕ್ಷೇತ್ರದಲ್ಲಿ ನಾಗರ ಹಾವಿನ ಜೊತೆಗೆ “ಬಡ್ಡಹಾವು” ಎಂದು ಕರೆಯಲ್ಪಡುವ ಹಾವು ದೇವರ ಹಾವೆಂದೇ ಪ್ರಸಿದ್ಧವಾಗಿದೆ, ಕೊಳಕು ಮಂಡಲ ಜಾತಿಗೆ ಸೇರಿದ ಈ ಹಾವಿನ ಕಡಿತಕ್ಕೆ ಶ್ರೀ ದೇವರ ಗಂಧ ಪ್ರಸಾದವೇ ಇಲ್ಲಿ ಔಷಧವಾಗಿ ಪ್ರಚಲಿತದಲ್ಲಿದೆ. ಶ್ರೀ ದೇವಳದ ವಿಶೇಷ : ಕೋರಿ ಜಾತ್ರೆ ಧನುರ್ಮಾಸದ ಮೊದಲ ದಿನ ಈ ಜಾತ್ರೆಯು ನಡೆಯುತ್ತದೆ. ಆದರೆ ಸೋಮವಾರ ಎತ್ತುಗಳನ್ನು ಉಳುವ ಸಂಪ್ರದಾಯ ಇಲ್ಲದೇ ಇರುವುದರಿಂದ ಈ ದಿನ ಸೋಮವಾರವಾಗಿದ್ದಲ್ಲಿ ಜಾತ್ರೆಯು ಮರುದಿನ ನಡೆಯುವುದು ವಾಡಿಕೆ. ದೇವಳದ ಉತ್ತರಕ್ಕಿರುವ ವಿಶಾಲವಾದ ದೇವರ ಗದ್ದೆಯನ್ನು ಉಳುಮೆ ಮಾಡಿಕೊಂಡಿರುವುದು ಈ ಜಾತ್ರೆಯ ವಿಶೇಷ. ಈ ಗದ್ದೆಯು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು ಕೋರಿ ಜಾತ್ರೆಯ ದಿನ ಈ ಗದ್ದೆಗೆ ಸೊಪ್ಪು ಹಾಕುವ ಹರಕೆ ನಡೆಯುತ್ತದೆ ಇದರಿಂದ ಭಕ್ತರ ಆರೋಗ್ಯ ಸಮಸ್ಯೆ ಪರಿಹಾರವಾಗಿ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ. ಗದ್ದೆಯ ಪಕ್ಕದಲ್ಲಿ ನಾಗಬನ ಹಾಗೂ ಮೇಲಿನ “ ಭಂಡಾರಿ ಮಜಲಿ”ನಲ್ಲಿ ದೇವರಕಟ್ಟೆಯು ಇದೆ. ಸಂಜೆ ಹೊತ್ತಲ್ಲಿ ದೇವರ ಸವಾರಿ ಇರುತ್ತದೆ ದೇವರು ಈ ಮಜಲನ್ನು ಪ್ರವೇಶಿಸುವಾಗ ಮಡಿವಾಳರಿಂದ ಶುಭ್ರವಾದ ಮಡಿಬಟ್ಟೆಗಳನ್ನು ಹಾಸಿ ಸ್ವಾಗತಿಸುವುದು ಈ ಜಾತ್ರೆಯ ವಿಶೇಷ. ಈ ವಾಡಿಕೆಯೊಂದಿಗೆ ಬಹಳ ಕೌತುಕವಾದ ಕಥೆಯು ಪ್ರಚಲಿತದಲ್ಲಿದೆ. ಹಿಂದಿನ ದಿನಗಳಲ್ಲಿ ದೇವಳದ ಪಕ್ಕದ ಚಿಕ್ಕ ಗದ್ದೆಯಲ್ಲಿ ಈ ಜಾತ್ರೆ ನಡೆಯುತಿತ್ತು. ಮೂರ್ತೆ ಮಾಡುತಿದ್ದ ದೇವಳದ ಆಸ್ತಿಕನೊಬ್ಬ ದೇವರು ಬರುವುದಾದರೆ ನನ್ನ ವಿಶಾಲವಾದ ಗದ್ದೆಯಲ್ಲೇ ಈ ಜಾತ್ರೆ ನಡೆಸಬಹುದಾಗಿ ಆಶಿಸಿದನಂತೆ. ಆತನ ಮನದ ಬೇಡಿಕೆ ಈಡೇರಿಸಲೋ ಎಂಬಂತೆ ಆತ ತನ್ನ ಮನೆ ಕಡೆ ತೆರಳುವ ಸಮಯ ಈಗಿನ ಗದ್ದೆಯ ಸ್ಥಳಕ್ಕೆ ಆಗಮಿಸುತ್ತಲೇ ಹಿಂದಿನಿಂದ ದೇವರ ಆಗಮನವಾಗುತ್ತದೆ. ಸಂತಸಗೊಂಡ ಭಕ್ತ ಅವಸರದಲ್ಲಿ ಓಡುವಾಗ ಕೈಯಲ್ಲಿದ್ದ ಕಳ್ಳು (ಶೇಂದಿ) ಚೆಲ್ಲುತ್ತಲೇ ಎಚ್ಚರಗೊಂಡು ದೇವರು ಬರುವ ದಾರಿಗೆ ಶುಭ್ರ ಬಟ್ಟೆ ಹಾಸಿ ಸ್ವಾಗತಿಸಿದನು. ಈ ವಾಡಿಕೆ ಇಂದಿಗೂ ಮುಂದುವರೆಯುತ್ತಿದೆ.
ಸಂಪ್ರದಾಯದಂತೆ ನಾಗತಂಬಿಲ ಪೂಕರೆ ಜೋಡಣೆ ಹಾಗೂ ದೇವರ ಕಟ್ಟೆ ಪೂಜೆಯ ನಂತರ ದೇವಳದಲ್ಲಿ ಉತ್ಸವಾದಿಗಳೊಂದಿಗೆ ಜಾತ್ರೆಯು ಸಂಪನ್ನಗೊಳ್ಳುತ್ತದೆ. ದೇವಳದಲ್ಲಿ ನಡೆಯುವ ವಾರ್ಷಿಕ ಉತ್ಸವಗಳು : ಶ್ರೀ ದೇವಳದಲ್ಲಿ ಕ್ಷೇತ್ರದ ತಂತ್ರಿಗಳ ಹಿರಿತನದೊಂದಿಗೆ ಪೂರ್ವ ಶಿಷ್ಟ ಸಂಪ್ರದಾಯದ ಪ್ರಕಾರ ಉತ್ಸವಾದಿಗಳು ನಡೆಯುತ್ತದೆ. ಅದರ ವಿವರಗಳು ಈ ಕೆಳಗಿನಂತಿದೆ.
1. ಮೇಷ ಮಾಸ 1 ರಂದು ಸೌರಯುಗಾದಿ (ವಿಷು)
2. ಮೇಷ ಮಾಸದ ಅಮಾವಾಸ್ಯೆ ದಿನ ಪಾರ್ಪಿ ಕಲ್ಲು ಹೊಳೆಯಿಂದ ತೀ ರ್ಥ ತಂದು ಶ್ರೀ ದೇವರಿಗೆ ಅಭಿಷೇಕ.
3. ಮೇಷ ಮಾಸದ 18 ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳುವ ವಾರ್ಷಿಕ ಜಾತ್ರೆ ೨೫ರಂದು ಸಂಪ್ರೋಕ್ಷಣೆ , ರಂಗಪೂಜೆ ಹಾಗೂ ದೈವಗಳ ಗಗ್ಗರ ಸೇವೆಯೊಂದಿಗೆ ಕೊನೆಗೊಳ್ಳುತ್ತದೆ. ಮೇಷ ಮಾಸ 23 ರಂದು ದೇವರ ದರ್ಶನ ಬಲಿ ಹಾಗೂ ರಾತ್ರಿ ರಥೋತ್ಸವ ನಡೆಯುತ್ತದೆ. ದರ್ಶನಬಲಿ ರಥೋತ್ಸವದ ದಿನ ಏಕಾದಶಿ ತಿಥಿ ಬಂದಲ್ಲಿ ಏಳು ದಿನದ ಜಾತ್ರೆಯ ಬದಲು ಒಂಬತ್ತು ದಿನಗಳ ಉತ್ಸವ ನಡೆಯುತ್ತದೆ.
4. ಮಿಥುನ ಸಂಕ್ರಮಣದಂದು ಶ್ರೀ ದೇವರ ನಿತ್ಯಬಲಿ ಒಳಗಾಗುವುದು.
5. ಕರ್ಕಾಟಕ ಮಾಸದ ಅಮಾವಾಸ್ಯೆ (ಆಟಿ ಅಮಾವಾಸ್ಯೆ )
6. ನಾಗರ ಪಂಚಮಿ - ನಾಗ ತಂಬಿಲ.
7. ಸಿಂಹ ಮಾಸ ಶುಕ್ಲಪಕ್ಷದ ಹಸ್ತಾನಕ್ಷತ್ರದಂದು ಕದಿರು ಕಟ್ಟುವುದು ಹೊಸ್ತಾರೋ ಗಣೆ.
8. ಭಾದ್ರಪದ ಶುಕ್ಲಪಕ್ಷದ ಚೌತಿ - ಗಣೇಶ ಚತುರ್ಥಿ.
9. ದೀಪಾವಳಿ ಅಮಾವಾಸ್ಯೆ - ದೇವರ ನಿತ್ಯಬಲಿ ಆರಂಭ.
10. ಧನುರ್ಮಾಸದ 1ರಂದು ಕೋರಿ ಜಾತ್ರೆ ಹಾಗೂ ಧನು ಪೂಜೆ ಆರಂಭ. (ಸೋಮವಾರವಾಗಿದ್ದಲ್ಲಿ ಮರುದಿನ ಕೋರಿ ಜಾತ್ರೆ ನಡೆಯುವುದು)
11. ಮಕರ ಸಂಕ್ರಮಣ.
12. ಮಹಾಶಿವರಾತ್ರಿ - ಏಕಾದಶ ರುದ್ರ ಹಾಗೂ ಉತ್ಸವ.
13. ಮೀನ ಮಾಸ 12ರಂದು ಪ್ರತಿಷ್ಠಾ ವಾರ್ಷಿಕೋತ್ಸವ. ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನವು ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಕಂಗೊಳಿಸುವ ಶ್ರದ್ಧಾ ಕೇಂದ್ರವಾಗಿದೆ.