ಶ್ರೀ ಮಹಾಗಣಪತಿ ದೇವಾಲಯ, ಪೂರ್ವ ಉದ್ಯಾನ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Mahaganapathi Temple, East Park Road, Malleshwaram - 560003, Bengaluru Urban District [TM000022]
×
Temple History
ಇತಿಹಾಸ
ಬೆಂಗಳೂರು ನಗರ,ಮಲ್ಲೇಶ್ವರಂ, ಶ್ರೀ ಮಹಾಗಣಪತಿ ವಿಗ್ರಹವು ಶ್ರೀ ಮಾನ್ ಗಿರಿಯಪ್ಪಗೌಡರಿಗೆ ನೆಲಮಂಗಲದ ಹತ್ತಿರದ ಕೆರೆಯಲ್ಲಿ ದೊರಕಿದ್ದು ಅಂದಿನ ಭಕ್ತ ಮಹಾ ಜನಗಳು ಗುಡ್ಡದ ಮೇಲೆ ಚಿಕ್ಕದಾಗಿ ಗರ್ಭಗುಡಿಯನ್ನು ನಿರ್ಮಿಸಿ ದೇವಸ್ಥಾನವನ್ನು 1930ನೇ ಇಸುವಿಯಲ್ಲಿ ವರಮಹಾಲಕ್ಷೀ ಹಬ್ಬದಂದು ಸ್ಥಾಪಿಸಲಾಯಿತು.ಈ ದೇವಾಲಯಕ್ಕೆ ಗುಡ್ಡದ ಗಣಪತಿ, ಸ್ವಯಂಬು ಗಣಪತಿ, ಶ್ರೀ ಮಹಾಗಣಪತಿ ಹಾಗೂ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಆಗಿನ ಶ್ರೀ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳಾದಂತಹ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಈ ದೇವಾಲಯಕ್ಕೆ ಗೋಪುರವಿಲ್ಲದಿದ್ದುದನ್ನು ಕಂಡು 1964ರಲ್ಲಿ ಜಗದ್ಗರುಗಳು ಗೋಪುರ ನಿರ್ಮಾಣ ಮಾಡಿಸಿ ಕುಂಭಾಭಿಷೇಕವನ್ನು ನೆರವೇರಿಸಿದರು. ಶ್ರೀ ಮಹಾಗಣಪತಿ ವಿಶೇಷಗಳು:- ಈ ದೇವಾಲಯದ ...ಬೆಂಗಳೂರು ನಗರ,ಮಲ್ಲೇಶ್ವರಂ, ಶ್ರೀ ಮಹಾಗಣಪತಿ ವಿಗ್ರಹವು ಶ್ರೀ ಮಾನ್ ಗಿರಿಯಪ್ಪಗೌಡರಿಗೆ ನೆಲಮಂಗಲದ ಹತ್ತಿರದ ಕೆರೆಯಲ್ಲಿ ದೊರಕಿದ್ದು ಅಂದಿನ ಭಕ್ತ ಮಹಾ ಜನಗಳು ಗುಡ್ಡದ ಮೇಲೆ ಚಿಕ್ಕದಾಗಿ ಗರ್ಭಗುಡಿಯನ್ನು ನಿರ್ಮಿಸಿ ದೇವಸ್ಥಾನವನ್ನು 1930ನೇ ಇಸುವಿಯಲ್ಲಿ ವರಮಹಾಲಕ್ಷೀ ಹಬ್ಬದಂದು ಸ್ಥಾಪಿಸಲಾಯಿತು.ಈ ದೇವಾಲಯಕ್ಕೆ ಗುಡ್ಡದ ಗಣಪತಿ, ಸ್ವಯಂಬು ಗಣಪತಿ, ಶ್ರೀ ಮಹಾಗಣಪತಿ ಹಾಗೂ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಆಗಿನ ಶ್ರೀ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳಾದಂತಹ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಈ ದೇವಾಲಯಕ್ಕೆ ಗೋಪುರವಿಲ್ಲದಿದ್ದುದನ್ನು ಕಂಡು 1964ರಲ್ಲಿ ಜಗದ್ಗರುಗಳು ಗೋಪುರ ನಿರ್ಮಾಣ ಮಾಡಿಸಿ ಕುಂಭಾಭಿಷೇಕವನ್ನು ನೆರವೇರಿಸಿದರು. ಶ್ರೀ ಮಹಾಗಣಪತಿ ವಿಶೇಷಗಳು:- ಈ ದೇವಾಲಯದ ಆವರಣದಲ್ಲಿ ಸುಮಾರು 90-100 ವರ್ಷಗಳ ಪುರಾತನವಾದ ಅಶ್ವಥ ವೃಕ್ಷ ಹಾಗೂ ಶಮಿ ವೃಕ್ಷಗಳು ಇರುತ್ತದೆ.ಲೋಕ ಕಲ್ಯಾಣಾರ್ಥವಾಗಿ ಎಲ್ಲಾ ಭಕ್ತಾರ ಇಷ್ಟಾರ್ಥಗಳನ್ನು ನೇರವೆರಿಸಲು ಎಲ್ಲಾ ಭಕ್ತಾದಿಗಳೊಂದಿಗೆ ಸುಮಾರು 50ವರ್ಷಗಳಿಂದಲೂ ಸಂಕಷ್ಟಹರ ಚರ್ತುಥಿಯ ಪೂಜೆಯನ್ನು ಶ್ರೀ ಸೂತ್ರಂ ಸುಬ್ರಮಹ್ಮಣ್ಯ ಶಾಸ್ತಿçಗಳು ಪ್ರಾರಂಭ ಮಾಡಿ ಅಂದಿನಿಂದಲೂ ಸೇವೆಯನ್ನು ಸಲ್ಲಿಸುತ್ತಾ ಬರಲಾಗುತ್ತಿದೆ. ಹಾಗೂ ಇಷ್ಟಾರ್ಥಗಳನ್ನು ನೇರವೆಸಿಕೊಳ್ಳಲು ಎರಡು ತೆಂಗಿನಕಾಯಿಗಳನ್ನು ತಂದು ಶ್ರೀ ಮಹಾಗಣಪತಿಯಲ್ಲಿ ಪ್ರಾರ್ಥಿಸಿಕೊಂಡು ಸಮರ್ಪಣೆ ಮಾಡಿ ಇಷ್ಟಾರ್ಥಗಳು ನೇರವೇರಿದ ನಂತರದಲ್ಲಿ 21,54,108,1008, ಹೀಗೆ ಅವರವರ ಶಕ್ತಿಯನುಸಾರ ಈಡುಗಾಯಿಯನ್ನು ಒಡೆಯುವುದು ಇಲ್ಲಿನ ವಿಶೇಷ. ಈ ವಿಶೇಷತೆಯಿಂದ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಮತ್ತು ವಿವಾಹ ಮಂಗಳ ಕಾರ್ಯಗಳು ಶ್ರೀಘ್ರದಲ್ಲಿ ನೇರವೆರಿಸಲು 108 ಕಡಬಿನ ಹಾರದ ಸೇವೆ ವಿಶೇಷ, ಭಾದ್ರಪದ ಶುದ್ಧ ಚೌತಿಯಿಂದ ಶ್ರೀ ಆನಂತ ಪದ್ಮ ಸ್ವಾಮಿ ಹಬ್ಬದ ತನಕ ಗಣಪತಿ ಹಬ್ಬದ ವಿಶೇಷ ಪೂಜೆ ಅಲಂಕಾರ ಹಾಗೂ ಉತ್ಸವವನ್ನು ನಡೆಸಲಾಗುವುದು.
ಈ ದೇವಾಲಯದ ಆವರಣದಲ್ಲಿ ಒಟ್ಟು 6 ಸನ್ನಿಧಿಗಳು ಇರುತ್ತವೆ. ಇದರಲ್ಲಿ ಶ್ರೀ ಬನಶಂಕರಿ ಅಮ್ಮನವರಿಗೆ ಪ್ರತಿ ವರ್ಷ ಬನದ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗಿದೆ.ಕೊನೆಯ ದಿನ ದೇವರ ಅಭಿಷೇಕದ ನೀರನ್ನು ದೋಷ ನಿವಾರಣೆಗಾಗಿ ಸಂಪ್ರೋಕ್ಷಣೆ ಮಾಡಿಕೊಳ್ಳುವ ಪದ್ಧತಿ ಇದೆ.