ಬೆಂಗಳೂರು ನಗರ,ಮಲ್ಲೇಶ್ವರಂ, ಶ್ರೀ ಮಹಾಗಣಪತಿ ವಿಗ್ರಹವು ಶ್ರೀ ಮಾನ್ ಗಿರಿಯಪ್ಪಗೌಡರಿಗೆ ನೆಲಮಂಗಲದ ಹತ್ತಿರದ ಕೆರೆಯಲ್ಲಿ ದೊರಕಿದ್ದು ಅಂದಿನ ಭಕ್ತ ಮಹಾ ಜನಗಳು ಗುಡ್ಡದ ಮೇಲೆ ಚಿಕ್ಕದಾಗಿ ಗರ್ಭಗುಡಿಯನ್ನು ನಿರ್ಮಿಸಿ ದೇವಸ್ಥಾನವನ್ನು 1930ನೇ ಇಸುವಿಯಲ್ಲಿ ವರಮಹಾಲಕ್ಷೀ ಹಬ್ಬದಂದು ಸ್ಥಾಪಿಸಲಾಯಿತು.ಈ ದೇವಾಲಯಕ್ಕೆ ಗುಡ್ಡದ ಗಣಪತಿ, ಸ್ವಯಂಬು ಗಣಪತಿ, ಶ್ರೀ ಮಹಾಗಣಪತಿ ಹಾಗೂ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಆಗಿನ ಶ್ರೀ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳಾದಂತಹ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಈ ದೇವಾಲಯಕ್ಕೆ ಗೋಪುರವಿಲ್ಲದಿದ್ದುದನ್ನು ಕಂಡು 1964ರಲ್ಲಿ ಜಗದ್ಗರುಗಳು ಗೋಪುರ ನಿರ್ಮಾಣ ಮಾಡಿಸಿ ಕುಂಭಾಭಿಷೇಕವನ್ನು ನೆರವೇರಿಸಿದರು. ಶ್ರೀ ಮಹಾಗಣಪತಿ ವಿಶೇಷಗಳು:- ಈ ದೇವಾಲಯದ ಆವರಣದಲ್ಲಿ ಸುಮಾರು 90-100 ವರ್ಷಗಳ ಪುರಾತನವಾದ ಅಶ್ವಥ ವೃಕ್ಷ ಹಾಗೂ ಶಮಿ ವೃಕ್ಷಗಳು ಇರುತ್ತದೆ.ಲೋಕ ಕಲ್ಯಾಣಾರ್ಥವಾಗಿ ಎಲ್ಲಾ ಭಕ್ತಾರ...