ಶ್ರೀ ಲಕ್ಷ್ಮೀ ದೇವಸ್ಥಾನ ಕೆಂಚನಹಳ್ಳಿ, ರಾಮನಗರ - 562131, ರಾಮನಗರ .
Sri Laxmi Temple Kenchanahalli, Ramanagara - 562131, Ramanagara District [TM000223]
×
Temple History
ಸ್ಥಳ ಪುರಾಣ
ಶ್ರೀ ಲಕ್ಷ್ಮೀದೇವಿ ದೇವಸ್ಥಾನವು ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಕೆಂಚನಹಳ್ಳಿಯಲ್ಲಿ ನೆಲೆಸಿರುವ ಸುಮಾರು 500 ವರ್ಷಗಳಲ್ಲಿ 15 ನೇ ಶತಮಾನದಲ್ಲಿ ನಿರ್ಮಿತವಾಗಿರುವ ದೇವಾಲಯವಾಗಿದೆ.ಶ್ರೀ ದೇವಸ್ಥಾನವು ಕುಣಿಗಲ್ ಮಾರ್ಗವಾಗಿ ಹೋಗುವ ಕೆಂಚನಹಳ್ಳಿ ಎಂಬಲ್ಲಿ ನೆಲೆಯಾಗಿದೆ.ಶ್ರೀ ದೇವಾಲಯದ ಮೂಲ ದೇವತೆ ಶ್ರೀ ಮಾರಮ್ಮ ಅಮ್ಮನವ್ರು ,ಈ ದೇಗುಲದಲ್ಲಿ ಮಾರಮ್ಮ ,ಲಕ್ಷ್ಮೀದೇವಿ ಅಮ್ಮನವರನ್ನೂ ಪೂಜಿಸುತ್ತರೆ 15 ನೀ ಶತಮಾನದಲ್ಲಿ ಮೊದಲು ಮಾರಮ್ಮ ದೇವಿ ಇಲ್ಲಿ ನೆಲೆ ನಿಂತಿದ್ದು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಸಂಚಾರಿಸುವಾಗ ಈ ಸ್ಥಳವು ನೆಲೆ ನಿಲ್ಲಲು ಪ್ರಶ್ಯಸ್ತವಾಗಿದೆ ಎಂದು ಲಕ್ಷ್ಮೀದೇವಿ ಅಮ್ಮನವರು ಇಲ್ಲಿ ನೆಲೆ ನಿಂತಿರುತ್ತಾರೇ.ಶ್ರೀ ಲಕ್ಷ್ಮೀ ದ್ವಿ ಅಮ್ಮನವರು ಕೈಯಲ್ಲಿ ಖಡ್ಗ,ತ್ರಿಶೂಲ,ಡಮರುಘ,ಅಕ್ಷಯ ಪಾತ್ರೆಯೊಂದಿಗೆ ಪಂಚಾಸನದಲ್ಲಿ ಕುಳಿತಿದ್ದಾರೆ
ಶ್ರೀ ಲಕ್ಷ್ಮೀದೇವಯ್ಯ ದೇಗುಲವು ಪಂಚರಾತ್ರ ಆಗಮಕ್ಕೆ ಸಂಪದ ಪಟ್ಟ ದೇಗುಲವಾಗಿದ್ದರು ಶೈವ ಆಗಮ ಪದ್ಧತಿಯಂತೆ ಪ್ರತಿ...ಶ್ರೀ ಲಕ್ಷ್ಮೀದೇವಿ ದೇವಸ್ಥಾನವು ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಕೆಂಚನಹಳ್ಳಿಯಲ್ಲಿ ನೆಲೆಸಿರುವ ಸುಮಾರು 500 ವರ್ಷಗಳಲ್ಲಿ 15 ನೇ ಶತಮಾನದಲ್ಲಿ ನಿರ್ಮಿತವಾಗಿರುವ ದೇವಾಲಯವಾಗಿದೆ.ಶ್ರೀ ದೇವಸ್ಥಾನವು ಕುಣಿಗಲ್ ಮಾರ್ಗವಾಗಿ ಹೋಗುವ ಕೆಂಚನಹಳ್ಳಿ ಎಂಬಲ್ಲಿ ನೆಲೆಯಾಗಿದೆ.ಶ್ರೀ ದೇವಾಲಯದ ಮೂಲ ದೇವತೆ ಶ್ರೀ ಮಾರಮ್ಮ ಅಮ್ಮನವ್ರು ,ಈ ದೇಗುಲದಲ್ಲಿ ಮಾರಮ್ಮ ,ಲಕ್ಷ್ಮೀದೇವಿ ಅಮ್ಮನವರನ್ನೂ ಪೂಜಿಸುತ್ತರೆ 15 ನೀ ಶತಮಾನದಲ್ಲಿ ಮೊದಲು ಮಾರಮ್ಮ ದೇವಿ ಇಲ್ಲಿ ನೆಲೆ ನಿಂತಿದ್ದು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಸಂಚಾರಿಸುವಾಗ ಈ ಸ್ಥಳವು ನೆಲೆ ನಿಲ್ಲಲು ಪ್ರಶ್ಯಸ್ತವಾಗಿದೆ ಎಂದು ಲಕ್ಷ್ಮೀದೇವಿ ಅಮ್ಮನವರು ಇಲ್ಲಿ ನೆಲೆ ನಿಂತಿರುತ್ತಾರೇ.ಶ್ರೀ ಲಕ್ಷ್ಮೀ ದ್ವಿ ಅಮ್ಮನವರು ಕೈಯಲ್ಲಿ ಖಡ್ಗ,ತ್ರಿಶೂಲ,ಡಮರುಘ,ಅಕ್ಷಯ ಪಾತ್ರೆಯೊಂದಿಗೆ ಪಂಚಾಸನದಲ್ಲಿ ಕುಳಿತಿದ್ದಾರೆ
ಶ್ರೀ ಲಕ್ಷ್ಮೀದೇವಯ್ಯ ದೇಗುಲವು ಪಂಚರಾತ್ರ ಆಗಮಕ್ಕೆ ಸಂಪದ ಪಟ್ಟ ದೇಗುಲವಾಗಿದ್ದರು ಶೈವ ಆಗಮ ಪದ್ಧತಿಯಂತೆ ಪ್ರತಿ ನಿತ್ಯ ತಾಯಿಗೆ ಪೂಜಾ ವಿಧಿ-ವಿಧಾನಗಳು ನೀಡುತ್ತವೆ.ಅಮ್ಮನವರು ಉತ್ತರ ಅಭಿಮುಖವಾಗಿ ಕುಳಿತಿದ್ದು ದೇಗುಲಕ್ಕೆ ಬರುವ ಭಕ್ತರು ಷೋಡೋಪಚಾರ ಪೂಜೆಯಿಂದ ಪೂಜಿಸಿದರೆ ಭಕ್ತರ ಇಷ್ಟಾರ್ಥವೆಲ್ಲವನ್ನೂ ಇದೇರಿಸುತ್ತಲೆ ಎಂದು ಭ್ಕತ್ರಾಲ್ಲಿ ಅಪರವಾದ ನಂಬಿಕೆ.ಲಕ್ಷ್ಮೀದೇವಿ ಅಮ್ಮನವರನ್ನೂ ದೂರದ ತಮ್ಮ ಸ್ವಂತ ಊರಿಗೆ ಕರೆದುಕೊಂಡು ಹೋಗಿ ಹೊಂಬಾಳೆ ಹೂವಿನಿಂದ ಅಲಂಕಾರ ಮಾಡಿ ಹೂ ಪ್ರಸಾದ ಕೇಳುವ ಪದ್ಧತಿ ಜಾರಿಯಲ್ಲಿದೆ.ಶ್ರೀ ದೇವಾಸತನದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮ ಅರ್ಚನೆ, ಹೂವಿನ ಅಲಂಕಾರ,ಮರೆ ಹಾಕುವುದು, ಸಹಸ್ರನಾಮ,ಪಲ್ಲಕಿ ಉತ್ಸವ, ಕಟ್ಲೆ ಸೇವೆ, ಇನ್ನಿತರ ಸೇವೆಗಳು ವಿಶೇಷವಾಗಿ ದೇವಾಲಯದಲ್ಲಿ ನಡೆಯುತ್ತವೆ.ಪ್ರತಿ ವರ್ಷ ಫೆಬ್ರುವರಿ ,ಮಾರ್ಚ್ ತಿಂಗಳಳ್ಳಿ ಅಮ್ಮನವರ ಅಗ್ನಿಕೊಂಡ ,ರಥೋತ್ಸವ ಸುಮಾರು 8 ದಿನಗಳ ಕಾಲ ಜಾತ್ರೆ ನಡೆಯುತ್ತೆ ಜಾತ್ರೆಯಲ್ಲಿ ಸುಮರು 5000-10000 ಸಾರ್ವಜನಿಕ ಭಕ್ತರು ಪಾಳ್ಗೊಳ್ಳುತ್ತಾರೆ.ಶ್ರೀ ಅಮ್ಮನವರಿಗೆ ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ಪಟ್ಟಕ್ಕೆ ಕುರಿಸಿ ಅಲಂಕಾರ ಮಾಡಿ ಪೂಜಿಸುವ ಪದ್ದತಿ ಜರಯಲ್ಲಿದೆ,ವಿಜಯದಶಮಿ ಹಬ್ಬದ ಸಮಯದಲ್ಲಿ ಶ್ರೀ ಲಕ್ಷ್ಮೀದೇವಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನೆರೆವೇರಿಸಲಾಗುತ್ತದೆ.
ಸಾಹಿತ್ಯದ ಹಿನ್ನೆಲೆ
ಶ್ರೀ ಲಕ್ಷ್ಮೀ ದೇವಿ ದೇವಾಲಯವು ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, ತಿಪ್ಪಸಂದ್ರ ಹೋಬಳಿ, ಕೆಂಚನಹಳ್ಳಿ ಗ್ರಾಮದಲ್ಲಿದೆ. ಈ ದೇವಾಲಯವು ಸುಮಾರು 15ನೇ ಶತಮಾನದಲ್ಲಿನ ದೇವಾಲಯವಾಗಿರುತ್ತದೆ, ಈ ದೇವಾಲಯದಲ್ಲಿ ಎರಡು ದೇವರ ಮೂರ್ತಿಗಳಿದ್ದು, ಮಾರಮ್ಮ ಮತ್ತು ಲಕ್ಷ್ಮೀದೇವಿ ಎಂದು ಪೂಜಿಸುತ್ತಾರೆ.
ಈ ಕ್ಷೇತ್ರದಲ್ಲಿ ಮಾರಮ್ಮ ದೇವಿಯು ಮೂಲ ದೇವರಾಗಿದ್ದು, ಸುಮಾರು 15ನೇ ಶತಮಾನದ ಸಮಯದಲ್ಲಿ ಮೊದಲು ಶ್ರೀ ಮಾರಮ್ಮ ದೇವಿಯ ನೆಲೆಯಾಗಿದ್ದು, ಶ್ರೀ ಲಕ್ಷ್ಮೀದೇವಿಯು ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಸಂಚರಿಸುವ ವೇಳೆ ಈ ಕ್ಷೇತ್ರವು ನೆಲೆ ನಿಲ್ಲಲು ಪ್ರಾಶ್ಯಸ್ತ ಸ್ಥಳವಾಗಿದೆ ಎಂದು ಇಲ್ಲೇ ನೆಲೆ ನಿಲ್ಲುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀ ದೇವಿಯು ಉತ್ತರಾಭಿಮುಖವಾಗಿ ಪಂಚಾಸನದಲ್ಲಿ ಕುಳಿತಿದ್ದು, ವಿಗ್ರಹದ ಕೈಗಳಲ್ಲಿ ತ್ರಿಶೂಲ, ಡಮರುಗ, ಖಡ್ಗ ಹಾಗೂ ಅಕ್ಷಯ ಪಾತ್ರೆ ಇರುವುದು ವಿಶೇಷವಾಗಿರುತ್ತದೆ.
ದೇವಾಲಯವು...ಶ್ರೀ ಲಕ್ಷ್ಮೀ ದೇವಿ ದೇವಾಲಯವು ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, ತಿಪ್ಪಸಂದ್ರ ಹೋಬಳಿ, ಕೆಂಚನಹಳ್ಳಿ ಗ್ರಾಮದಲ್ಲಿದೆ. ಈ ದೇವಾಲಯವು ಸುಮಾರು 15ನೇ ಶತಮಾನದಲ್ಲಿನ ದೇವಾಲಯವಾಗಿರುತ್ತದೆ, ಈ ದೇವಾಲಯದಲ್ಲಿ ಎರಡು ದೇವರ ಮೂರ್ತಿಗಳಿದ್ದು, ಮಾರಮ್ಮ ಮತ್ತು ಲಕ್ಷ್ಮೀದೇವಿ ಎಂದು ಪೂಜಿಸುತ್ತಾರೆ.
ಈ ಕ್ಷೇತ್ರದಲ್ಲಿ ಮಾರಮ್ಮ ದೇವಿಯು ಮೂಲ ದೇವರಾಗಿದ್ದು, ಸುಮಾರು 15ನೇ ಶತಮಾನದ ಸಮಯದಲ್ಲಿ ಮೊದಲು ಶ್ರೀ ಮಾರಮ್ಮ ದೇವಿಯ ನೆಲೆಯಾಗಿದ್ದು, ಶ್ರೀ ಲಕ್ಷ್ಮೀದೇವಿಯು ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಸಂಚರಿಸುವ ವೇಳೆ ಈ ಕ್ಷೇತ್ರವು ನೆಲೆ ನಿಲ್ಲಲು ಪ್ರಾಶ್ಯಸ್ತ ಸ್ಥಳವಾಗಿದೆ ಎಂದು ಇಲ್ಲೇ ನೆಲೆ ನಿಲ್ಲುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀ ದೇವಿಯು ಉತ್ತರಾಭಿಮುಖವಾಗಿ ಪಂಚಾಸನದಲ್ಲಿ ಕುಳಿತಿದ್ದು, ವಿಗ್ರಹದ ಕೈಗಳಲ್ಲಿ ತ್ರಿಶೂಲ, ಡಮರುಗ, ಖಡ್ಗ ಹಾಗೂ ಅಕ್ಷಯ ಪಾತ್ರೆ ಇರುವುದು ವಿಶೇಷವಾಗಿರುತ್ತದೆ.
ದೇವಾಲಯವು ಪಾಂಚರಾತ್ರಾಗಮ ಶೈಲಿಯ ದೇವಾಲಯವಾಗಿದ್ದು, ದೇವಾಲಯದಲ್ಲಿ ಪೂಜಾ ವಿಧಾನಗಳು ಶೈವಾಗಮ ಶೈಲಿಯಲ್ಲಿ ಇರುತ್ತದೆ. ಶ್ರೀ ದೇವಾಲಯದಲ್ಲಿ ಅಮ್ಮನವರಿಗೆ ಫಲಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಅರ್ಚನೆ, ಸಹಸ್ರನಾಮ ಕೂ ಕುಂಕುಮ, ವೀಳ್ಯದೆಲೆ ಅಲಂಕಾರ, ಹೂವಿನ ಅಲಂಕಾರ, ವಜ್ರಾಂಗಿ ಅಲಂಕಾರ, ಮರೆ ಹಾಕುವುದು, ಕಯ್ಯಡ್ಡೆ ಉತ್ಸವ ಹಾಗೂ ವಿಶೇಷ ದಿನಗಳಂದು ಪಲ್ಲಕ್ಕಿ ಉತ್ಸವಗಳು ಇಲ್ಲಿನ ಪ್ರತಿ ನಿತ್ಯದ ಸೇವೆಗಳಾಗಿರುತ್ತವೆ.
ಶ್ರೀ ದೇವಾಲಯದಲ್ಲಿ ಭಕ್ತರು ತಮ್ಮ ಕಷ್ಟಗಳನ್ನು ಈಡೇರಿಸುವಂತೆ ಕೋರಿ ಶ್ರೀ ಅಮ್ಮನವರನ್ನು ಹೂ ಪ್ರಸಾದ ಕೇಳುವ ಪದ್ಧತಿ ಇದ್ದು, ದೇವಿಯು ಪ್ರಸಾದ ನೀಡಿದ್ದಲ್ಲಿ ಆ ಭಕ್ತರ ಕಷ್ಟಗಳು ಪರಿಹಾರವಾಗುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಈ ದೇವಾಲಯಕ್ಕೆ ಪ್ರತಿ ದಿನ 200 ರಿಂದ 300 ಜನ ಭಕ್ತಾಧಿಗಳು ಅಮ್ಮನವರ ಪೂಜೆಗೆ ಅಗಮಿಸುತ್ತಾರೆ. ವಿಶೇಷ ದಿನಗಳಲ್ಲಿ 1000 ರಿಂದ 2000 ಜನ ಭಕ್ತಾಧಿಗಳು ಅಮ್ಮನವರ ಪೂಜೆಗೆ ಅಗಮಿಸುತ್ತಾರೆ. ಫೆಬ್ರವರಿ ಅಥವಾ ಮಾರ್ಚ್ ಮಾಹೆಯಲ್ಲಿ ನಡೆಯುವ ಅಮ್ಮನವರ ಅಗ್ನಿಕೊಂಡ ಹಾಗೂ ರಥೋತ್ಸವವು ವಿಜೃಂಭಣೆಯಿಂದ 8 ದಿನಗಳ ನಡೆಯುತ್ತದೆ. ಈ ಜಾತ್ರೆಗೆ ಸುಮಾರು 5000 ರಿಂದ 10000 ಜನ ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ಇಲ್ಲಿನ ದೇವಾಲಯದ ವಿಶೇಷವಾಗಿರುತ್ತದೆ.