ಶ್ರೀ ಲಕ್ಷ್ಮೀ ದೇವಿ ದೇವಾಲಯವು ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, ತಿಪ್ಪಸಂದ್ರ ಹೋಬಳಿ, ಕೆಂಚನಹಳ್ಳಿ ಗ್ರಾಮದಲ್ಲಿದೆ. ಈ ದೇವಾಲಯವು ಸುಮಾರು 15ನೇ ಶತಮಾನದಲ್ಲಿನ ದೇವಾಲಯವಾಗಿರುತ್ತದೆ, ಈ ದೇವಾಲಯದಲ್ಲಿ ಎರಡು ದೇವರ ಮೂರ್ತಿಗಳಿದ್ದು, ಮಾರಮ್ಮ ಮತ್ತು ಲಕ್ಷ್ಮೀದೇವಿ ಎಂದು ಪೂಜಿಸುತ್ತಾರೆ. ಈ ಕ್ಷೇತ್ರದಲ್ಲಿ ಮಾರಮ್ಮ ದೇವಿಯು ಮೂಲ ದೇವರಾಗಿದ್ದು, ಸುಮಾರು 15ನೇ ಶತಮಾನದ ಸಮಯದಲ್ಲಿ ಮೊದಲು ಶ್ರೀ ಮಾರಮ್ಮ ದೇವಿಯ ನೆಲೆಯಾಗಿದ್ದು, ಶ್ರೀ ಲಕ್ಷ್ಮೀದೇವಿಯು ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಸಂಚರಿಸುವ ವೇಳೆ ಈ ಕ್ಷೇತ್ರವು ನೆಲೆ ನಿಲ್ಲಲು ಪ್ರಾಶ್ಯಸ್ತ ಸ್ಥಳವಾಗಿದೆ ಎಂದು ಇಲ್ಲೇ ನೆಲೆ ನಿಲ್ಲುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀ ದೇವಿಯು ಉತ್ತರಾಭಿಮುಖವಾಗಿ ಪಂಚಾಸನದಲ್ಲಿ ಕುಳಿತಿದ್ದು, ವಿಗ್ರಹದ ಕೈಗಳಲ್ಲಿ ತ್ರಿಶೂಲ, ಡಮರುಗ, ಖಡ್ಗ ಹಾಗೂ ಅಕ್ಷಯ ಪಾತ್ರೆ ಇರುವುದು ವಿಶೇಷವಾಗಿರುತ್ತದೆ. ದೇವಾಲಯವು...