ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ, ದಕ್ಷಿಣ ಕನ್ನಡ - 575005, ದಕ್ಷಿಣ ಕನ್ನಡ .
Sri Sooryanarayana Devastana Maroli, Dakshina Kannada - 575005, Dakshina Kannada District [TM000228]
×
Temple History
ಇತಿಹಾಸ
ಈ ದೇವಾಲಯವು ಸುಮಾರು 1200 ವರ್ಷಗಳ ಭವ್ಯ ಇತಿಹಾಸವಿರುವ ದೇವಸ್ಥಾನವಾಗಿದ್ದು ಇತಿಹಾಸ ಪ್ರಸಿದ್ಧವಾಗಿರುತ್ತದೆ. ಇಡೀ ದೇಶದಲ್ಲಿ ಕೆಲವೇ ದೇವಸ್ಥಾನಗಳಲ್ಲಿ ಒಂದಾಗಿರುತ್ತದೆ. ಕಾಡು ಪ್ರದೇಶದಲ್ಲಿ ತಪಸ್ವಿಗಳು ಪರಬ್ರಹ್ಮನನ್ನು ಬೆಳಕಿನ ಗೋಲದ ರೂಪದಲ್ಲಿ ದರ್ಶನ ಪಡೆದು, ನಿರಾಕಾರ ರೂಪದಲ್ಲಿ ಆರಾಧಿಸುತ್ತ ಬಂದಿದ್ದು ಈ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಕಾಲಾಂತರದಲ್ಲಿ ಈ ದೇವಾಲಯವು ಶಿಥಿಲಗೊಂಡಿತು. ನಂತರ ಬಜಾಲ ಬೂಡಿನ ಜೈನ ವಂಶದ ಪಾಳೆಗಾರ್ತಿ ಶಿಥಿಲಗೊಂಡಿದ್ದ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ದೈನಂದಿನ ಪೂಜಾ ವಿನಿಯೋಗಾಧಿಗಳಿಗೆ ವ್ಯವಸ್ಥೆ ಮಾಡಿರುವುದು ಐತಿಹ್ಯ. ಈ ದೇವಾಲಯವು ಬಜಾಲ ಬೂಡು, ಜಪ್ಪುಗುಡ್ಡೆಗುತ್ತು, ಬಡ್ಲಗುತ್ತು ಎಂಬ ಮೂರು ರಕ್ಷಕ ಮನೆತನ ಹಾಗೂ ಸುತ್ತಲಿನ ಏಳು ಗ್ರಾಮಗಳಾದ ಮರೋಳಿ, ಕಂಕನಾಡಿ, ಬಜಾಲ್, ಅಳಪೆ, ಕಣ್ಣೂರು, ಪದವು, ಜಪ್ಪು ಗ್ರಾಮಗಳ ಗ್ರಾಮದೇವರಾಗಿರುತ್ತದೆ.
ಶ್ರೀ ಸೂರ್ಯನಾರಾಯಣ ದೇವಾಲಯವು ಮೂರು ಕಡೆಯಲ್ಲಿ...ಈ ದೇವಾಲಯವು ಸುಮಾರು 1200 ವರ್ಷಗಳ ಭವ್ಯ ಇತಿಹಾಸವಿರುವ ದೇವಸ್ಥಾನವಾಗಿದ್ದು ಇತಿಹಾಸ ಪ್ರಸಿದ್ಧವಾಗಿರುತ್ತದೆ. ಇಡೀ ದೇಶದಲ್ಲಿ ಕೆಲವೇ ದೇವಸ್ಥಾನಗಳಲ್ಲಿ ಒಂದಾಗಿರುತ್ತದೆ. ಕಾಡು ಪ್ರದೇಶದಲ್ಲಿ ತಪಸ್ವಿಗಳು ಪರಬ್ರಹ್ಮನನ್ನು ಬೆಳಕಿನ ಗೋಲದ ರೂಪದಲ್ಲಿ ದರ್ಶನ ಪಡೆದು, ನಿರಾಕಾರ ರೂಪದಲ್ಲಿ ಆರಾಧಿಸುತ್ತ ಬಂದಿದ್ದು ಈ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಕಾಲಾಂತರದಲ್ಲಿ ಈ ದೇವಾಲಯವು ಶಿಥಿಲಗೊಂಡಿತು. ನಂತರ ಬಜಾಲ ಬೂಡಿನ ಜೈನ ವಂಶದ ಪಾಳೆಗಾರ್ತಿ ಶಿಥಿಲಗೊಂಡಿದ್ದ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ದೈನಂದಿನ ಪೂಜಾ ವಿನಿಯೋಗಾಧಿಗಳಿಗೆ ವ್ಯವಸ್ಥೆ ಮಾಡಿರುವುದು ಐತಿಹ್ಯ. ಈ ದೇವಾಲಯವು ಬಜಾಲ ಬೂಡು, ಜಪ್ಪುಗುಡ್ಡೆಗುತ್ತು, ಬಡ್ಲಗುತ್ತು ಎಂಬ ಮೂರು ರಕ್ಷಕ ಮನೆತನ ಹಾಗೂ ಸುತ್ತಲಿನ ಏಳು ಗ್ರಾಮಗಳಾದ ಮರೋಳಿ, ಕಂಕನಾಡಿ, ಬಜಾಲ್, ಅಳಪೆ, ಕಣ್ಣೂರು, ಪದವು, ಜಪ್ಪು ಗ್ರಾಮಗಳ ಗ್ರಾಮದೇವರಾಗಿರುತ್ತದೆ.
ಶ್ರೀ ಸೂರ್ಯನಾರಾಯಣ ದೇವಾಲಯವು ಮೂರು ಕಡೆಯಲ್ಲಿ ಎತ್ತರದ ಗುಡ್ಡಗಳಿಂದ ಸುತ್ತುವರಿದಿದ್ದು, ಆ ಮೂರು ಕಡೆಯ ಗುಡ್ಡಗಳಲ್ಲಿ ನಿರಂತರವಾಗಿ ಹರಿದು ಬರುವ ನೀರಿನ ಮೂಲಗಳಿವೆ. ಹಾಗಾಗಿಯೇ ದೇವಸ್ಥಾನದ ಪರಿಸರವು ತಂಪಿನ ನೆಲವಾಗಿದ್ದು, ವಿಪುಲ ನೀರಿರುವ ಪ್ರದೇಶವಾಗಿದೆ. ಈ ಕ್ಷೇತ್ರವನ್ನು ಸಮಸ್ತ ಭಕ್ತರು ಸೇರಿ ಸಂಪೂರ್ಣ ನವೀಕರಣಗೊಳಿಸಿ ದಿನಾಂಕ 17.04.2016 ರಿಂದ 26.04.2016ರ ತನಕ ಶ್ರೀ ಸೂರ್ಯನಾರಾಯಣ ದೇವರ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ, ಅಷ್ಟಬಂಧ ಬಹ್ಮಕಲಶೋತ್ಸವ ಪುಣ್ಯಕಾರ್ಯಗಳು ನಡೆದಿರುತ್ತದೆ. ಶ್ರೀಕ್ಷೇತ್ರ ನಡಾವಳಿಯಂತೆ ಶ್ರೀ ಕ್ಷೇತ್ರದಲ್ಲಿ ದಿನನಿತ್ಯ ಪೂಜಾ ವಿನಿಯೋಗಾಧಿಗಳು ನಡೆಯುತ್ತದೆ.
ಜಪ್ಪಿನಮೊಗರು ಕಂರ್ಬಿಸ್ಥಾನದಲ್ಲಿರುವ ಶ್ರೀ ವೈದ್ಯನಾಥ ದೈವವು ಈ ದೇವರ ಪ್ರಧಾನ ಬಂಟನಾಗಿದ್ದು ಬಹ್ಮಕಲಶೋತ್ಸವ ಸಂದರ್ಭದಲ್ಲಿ ಇಲ್ಲಿಂದ ಭಂಡಾರ ಆಗಮಿಸಿ ನೇಮೋತ್ಸವವು ಜರಗಿರುತ್ತದೆ
ಶ್ರೀ ಕ್ಷೇತ್ರದ ಗರ್ಭಗುಡಿ, ತೀರ್ಥಮಂಟಪ ಸಂಪೂರ್ಣ ಶಿಲಾಮಯವಾಗಿದ್ದು ಮರದ ಹಾಗೂ ತಾಮ್ರದ ಛಾವಣಿಯನ್ನು ಹೊಂದಿದೆ. ಸುತ್ತುಪೌಳಿಯ/ಪ್ರಾಕಾರವು ಅಧಿಷ್ಠಾನವು ಶಿಲಾಮಯವಾಗಿದ್ದು, ಕೆಂಪುಕಲ್ಲಿನ ಆಕರ್ಷಕ ಗೋಡೆ, ಮರದ ಹಾಗೂ ಮಂಗಳೂರು ಹಂಚಿನ ಛಾವಣಿಯನ್ನು ಹೊಂದಿದ್ದು ಶಿಲೆಯು ಹಾಗೂ ಮರದ ಕುಸುರಿ ಕೆತ್ತನೆಗಳಿಂದ ಅಲಂಕೃತವಾಗಿರುತ್ತದೆ. ಶ್ರೀಕ್ಷೇತ್ರದಲ್ಲಿ ಶ್ರೀ ಸೂರ್ಯನಾರಾಯಣ ದೇವರಿಗೆ ಸಂಬಂಧಿಸಿದಂತೆ, ನವಗ್ರಹಗಳನ್ನು, ಆಧಿದೇವತೆ, ಪ್ರತ್ಯಾಧಿ ದೇವತೆಗಳು, ನವಗ್ರಹಗಳು, ನಕ್ಷತ್ರಗಳ ಸ್ವರೂಪ, ವಾರಗಳು, ಋತುಗಳು, ಮನ್ವಂತರಗಳು, ಧ್ವಾದಶಾಧಿತ್ಯರ ರೂಪಗಳನ್ನು ಶಿಲಾಮಯ ಕಂಬಗಳಲ್ಲಿ ಮತ್ತು ಮರದ ಕುಸುರಿ ಕೆತ್ತನೆಗಳಿಂದ ರಚಿಸಲಾಗಿದೆ. ಶ್ರೀಕ್ಷೇತ್ರದ ಸಮೀಪ ಶ್ರೀ ದೇವರ ಜಳಕದ/ಸ್ನಾನದ ಕೆರೆ ಇರುತ್ತದೆ.
ಆರೋಗ್ಯ, ಸಂತಾನ, ಕೋರ್ಟು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತೊಂದರೆಗೊಳಗಾದಾಗ ಶ್ರೀ ಸೂರ್ಯನಾರಾಯಣ ದೇವರನ್ನು ಪ್ರಾರ್ಥಿಸಿದರೆ ಹರಕೆ/ಕೋರಿಕೆ ಫಲಿಸುತ್ತದೆ. ಮಳೆಯ ಕೊರತೆಯಿರುವ ಸಂಧರ್ಭದಲ್ಲಿ ಶ್ರೀ ಸೂರ್ಯನಾರಾಯಣ ದೇವರಿಗೆ ಸೀಯಾಳಾಭಿಷೇಕ ಮಾಡಿಸಿದರೆ ಮಳೆ ಬಂದೇ ಬರುತ್ತದೆ. ಎನ್ನುತ್ತಾರೆ ಅನುಭವಿಗಳು.
ಸೂರ್ಯದೇವರಿಗೆ ಸೂರ್ಯನಮಸ್ಕಾರ ಪ್ರಿಯವಾದ ಸೇವೆ . ತಲೆನೋವು, ಚರ್ಮಸಂಬಂಧಿ ರೋಗ, ಹೊಟ್ಟೆನೋವು ವ್ಯಾಧಿಗಳಿಂದ ಬಳಲುತ್ತಿರುವ ಹಲವಾರು ಭಕ್ತರು ಗುಣಮುಖರಾಗಿರುವ ದೃಷ್ಟಾಂತಗಳಿವೆ. ಕಂಕಣಭಾಗ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೂಡಾ ಶ್ರೀ ಸೂರ್ಯನಾರಾಯಣ ದೇವರ ಕೃಪೆ ಭಕ್ತ ಜನರ ಮೇಲಿರುತ್ತದೆ. ಈ ದೇವಾಲಯವು ಸೀಯಾಳ ಅಭಿಷೇಕ ವಿಶೇಷತೆಯಿಂದ ಪ್ರಸಿದ್ದಿಯಾಗಿದೆ. ಶ್ರೀ ಕ್ಷೇತ್ರದಲ್ಲಿ ರಂಗಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ಕಾರ್ತಿಕ ಪೂಜೆ, ರುದ್ರಾಭಿಷೇಕ, ಸೂರ್ಯನಮಸ್ಕಾರ ಪೂಜೆ, ಸೂರ್ಯಸಹಸ್ರನಾಮ ಇತ್ಯಾದಿ ಸೇವೆಗಳು ದಿನನಿತ್ಯ ನಡೆಯುತ್ತದೆ.
ಶ್ರೀಕ್ಷೇತ್ರದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದ್ದಲ್ಲಿ ಸಕಲ ಇಷ್ಟಾರ್ಥಗಳು ನೆರವೇರುವುದೆಂದು ಭಕ್ತರ ನಂಬಿಕೆಯಾಗಿದೆ.