ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ತೇರಿನಬೀದಿ, ಬೆಂಗಳೂರು ಗ್ರಾಮಾಂತರ - 561203, ಬೆಂಗಳೂರು ಗ್ರಾಮಾಂತರ .
Sri Prasanna Venkataramana Swamy Temple Terinabeedi, Bengaluru Rural - 561203, Bengaluru Rural District [TM000229]
×
Temple History
ಸ್ಥಳ ಪುರಾಣ
ಬೆಂಗಳೂರು ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರ ತಾಲ್ಲೂಕು ರೇಷ್ಮೆಬಟ್ಟೆ ತಯಾರಿಕೆಗೆ ಬಹಳ ಪ್ರಸಿದ್ದಿ ಪಡೆದ ತಾಲ್ಲೂಕು ಕೇಂದ್ರ ಈ ಊರಿನಲ್ಲಿ ಹತ್ತಾರು ಪುರಾತನ ದೇವಾಲಯಗಳಿದ್ದು, ಇವುಗಳಲ್ಲಿ ಒಂದಾದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಪಟ್ಟಣದ ಮಧ್ಯಭಾಗದಲ್ಲಿ ಇರುತ್ತದೆ. ಸದರಿ ದೇವಾಲಯವು ಸುಮಾರು 400 ವರ್ಷಗಳ ಇದೇ ಊರಿನವರಾದ ಶ್ರೀ ಅರುಣಾಚಲ ಪಂತ್ ಎಂಬುವರು ಮೈಸೂರಿನ ಅರಮನೆಯಲ್ಲಿ ದಂಡ ನಾಯಕನಾಗಿ ಸೇವೆ ಸಲ್ಲಿಸುತ್ತಿದರು. ಆ ಕಾಲದಲ್ಲಿ ಗೌರಿಬಿದನೂರು ಪಾಳೇಗಾರು ಗುಮ್ಮ ನಾಯಕನ ಪಾಳ್ಯ ಪಾಳೇಗಾರರು ಇನ್ನು ಕೆಲವು ಪಾಳೇಗಾರರು ಮೈಸೂರಿನ ಅರಮನೆಗೆ ತುಂಬಾ ತೊಂದರೆಯನ್ನು ಕೊಡುತ್ತಿದ್ದರು. ಈ ಸಮಸ್ಯೆ ಮೈಸೂರು ಮಹಾರಾಜರಿಗೆ ತುಂಬಾ ಚಿಂತೆಯಾಯಿತು.
ಮಹಾಪರಾಕ್ರಮ ಶಾಲಿಗಳು, ಮೇಧಾವಿಗಳು, ಶೂರರು ಆಗಿದ್ದ ಶ್ರೀ ಅರುಣಾಚಲಾ ಪಂತರು ಶಕ್ತಿ, ಯುಕ್ತಿಯಿಂದ ಎಲ್ಲಾ ಪಾಳೇಗಾರರನ್ನು ಸದೆಬಡಿದು ಮೈಸೂರು...ಬೆಂಗಳೂರು ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರ ತಾಲ್ಲೂಕು ರೇಷ್ಮೆಬಟ್ಟೆ ತಯಾರಿಕೆಗೆ ಬಹಳ ಪ್ರಸಿದ್ದಿ ಪಡೆದ ತಾಲ್ಲೂಕು ಕೇಂದ್ರ ಈ ಊರಿನಲ್ಲಿ ಹತ್ತಾರು ಪುರಾತನ ದೇವಾಲಯಗಳಿದ್ದು, ಇವುಗಳಲ್ಲಿ ಒಂದಾದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಪಟ್ಟಣದ ಮಧ್ಯಭಾಗದಲ್ಲಿ ಇರುತ್ತದೆ. ಸದರಿ ದೇವಾಲಯವು ಸುಮಾರು 400 ವರ್ಷಗಳ ಇದೇ ಊರಿನವರಾದ ಶ್ರೀ ಅರುಣಾಚಲ ಪಂತ್ ಎಂಬುವರು ಮೈಸೂರಿನ ಅರಮನೆಯಲ್ಲಿ ದಂಡ ನಾಯಕನಾಗಿ ಸೇವೆ ಸಲ್ಲಿಸುತ್ತಿದರು. ಆ ಕಾಲದಲ್ಲಿ ಗೌರಿಬಿದನೂರು ಪಾಳೇಗಾರು ಗುಮ್ಮ ನಾಯಕನ ಪಾಳ್ಯ ಪಾಳೇಗಾರರು ಇನ್ನು ಕೆಲವು ಪಾಳೇಗಾರರು ಮೈಸೂರಿನ ಅರಮನೆಗೆ ತುಂಬಾ ತೊಂದರೆಯನ್ನು ಕೊಡುತ್ತಿದ್ದರು. ಈ ಸಮಸ್ಯೆ ಮೈಸೂರು ಮಹಾರಾಜರಿಗೆ ತುಂಬಾ ಚಿಂತೆಯಾಯಿತು.
ಮಹಾಪರಾಕ್ರಮ ಶಾಲಿಗಳು, ಮೇಧಾವಿಗಳು, ಶೂರರು ಆಗಿದ್ದ ಶ್ರೀ ಅರುಣಾಚಲಾ ಪಂತರು ಶಕ್ತಿ, ಯುಕ್ತಿಯಿಂದ ಎಲ್ಲಾ ಪಾಳೇಗಾರರನ್ನು ಸದೆಬಡಿದು ಮೈಸೂರು ಮಹಾರಾಜರ ಸಮಸ್ಯೆಗಳನ್ನು ತಪ್ಪಿಸಿದರು. ಇದರಿಂದ ಮಹಾರಾಜರಿಗೆ ಸಂತೋಷವಾಗಿ ಶ್ರೀ ಅರುಣಾಚಲಾ ಪಂತರಿಗೆ “ಆಧುನಿಕ ಚಾಣಕ್ಯ” ಎಂಬ ಬಿರುದನ್ನು ನೀಡಿದರು. ಈ ಸಂದರ್ಭದಲ್ಲಿ ನಿನಗೆ ಏನು ಬೇಕಾದರೂ ಕೇಳು ಕೊಡುತ್ತೇನೆಂದು ಹೇಳಲಾಗಿ ಆಗ ಅರುಣಾಚಲಾ ಪಂತರು ವಿನಯದಿಂದ ಮಹಾಸ್ವಾಮಿ ನಮ್ಮ ಮನೆದೇವರಾದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವನ್ನು ನಮ್ಮ ಊರಾದ ದೊಡ್ಡಬಳ್ಳಾಪುರದಲ್ಲಿ ಕಟ್ಟಿಸಬೇಕೆಂಬ ನನ್ನ ಇಚ್ಚೆಯನ್ನು ಕರುಣೆ ತೋರಿ ತಾವು ನನಗೆ ಹಣದ ಸಹಾಯ ಮಾಡಬೇಕೆಂದು ಕೇಳಿದರು. ಈ ಮಾತಿಗೆ ಮಹಾರಾಜರು ಸಂತೋಷದಿಂದ ಒಪ್ಪಿಕೊಂಡರು ಹಾಗೂ ದೇವಸ್ಥಾನವನ್ನು ಕಟ್ಟಿಸಿದರು.
ಒಂದು ದಿನ ಅರುಣಾಚಲಾ ಪಂತರಿಗೆ ಸ್ವಪ್ನದಲ್ಲಿ ವೆಂಕಟರಮಣಸ್ವಾಮಿಯು ಬಂದು ನಾನು ಆನೇಕಲ್ಲಿನ ಊರಿನ ಭೂಮಿಯಲ್ಲಿ ಹೂತು ಹೋಗಿದ್ದೇನೆ. ನನ್ನನ್ನು ತೆಗೆದುಕೊಂಡು ಹೋಗಿ ನೀನು ಕಟ್ಟಿಸುತ್ತಿರುವ ದೇವಸ್ಥಾನದಲ್ಲಿ ನನ್ನನ್ನು ಪ್ರತಿಷ್ಠಾಪನೆಯನ್ನು ಮಾಡಿಸು ನಿನಗೆ ಜೀವನ ನಂತರದಲ್ಲಿ ಮುಕ್ತಿಯನ್ನು ಕರುಣಿಸುವೆನೆಂದು ಹೇಳಿ ಅಂತಧ್ರಾನನಾದರು. ಮಾರನೇ ದಿನ ಸ್ವಪ್ನದಲ್ಲಿ ತಾನು ಕಂಡ ವಿಷಯವನ್ನು ಮಹಾರಾಜರಿಗೆ ತಿಳಿಸಿದರು. ಮಹಾರಾಜರು ಸಂತೋಷಗೊಂಡು ಸಿಪಾಯಿಗಳನ್ನು ಆನೇಕಲ್ ಊರಿಗೆ ಕಳಿಸಿ ಸ್ವಾಮಿಯವರು ಹೇಳಿದ ಜಾಗದಲ್ಲಿ ಉತ್ಖನನ (ತೆಗೆಸಿ) ಸುಮಾರು 2 ಅಡಿ ಎತ್ತರದ ಶ್ರೀ ದೇವಿ ಭೂದೇವಿ ಸಮೇತ ವೆಂಕಟರಮಣಸ್ವಾಮಿ ವಿಗ್ರಹವು ಸಿಕ್ಕಿತು.
ಆ ನಂತರ ಒಳ್ಳೆಯ ಶುಭ ಮುಹೂರ್ತದಲ್ಲಿ ಮಹಾರಾಜರು ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪಿಸಿದರು ಎಂಬುದು ಸುಮಾರು 400 ವರ್ಷಗಳ ಹಿಂದಿನ ಪರಿಚಯವಾಗಿರುತ್ತದೆ. ಶ್ರೀದೇವಾಲಯವು 17ನೇ ಶತಮಾನದ ದೇವಾಲಯವಾಗಿದ್ದು ಚೋಳ ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇಲ್ಲಿನ ಸ್ಥಳೀಯರ ಮತ್ತು ಅರ್ಚಕರ ಅನೇಕ ಸ್ಥಳ ಪುರಾಣದ ದೇವಸ್ಥಾನದ ಚಾರಿತ್ರ್ಯೆ/ವ್ಯಾಖ್ಯಾನ ವಾಗಿರುವುದು.
ಶ್ರೀ ದೇವಾಲಯವು ಪ್ರತಿ ದಿನ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12.00 ರವರೆಗೆ ಹಾಗೂ ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ಭಕ್ತಾದಿಗಳಿಗೆ ದರ್ಶಾನದ ವ್ಯವಸ್ಥೆ ಇರುತ್ತದೆ., ಪ್ರತಿ ದಿನದಂತೆ ಶ್ರೀ ಸ್ವಾಮಿಯವರಿಗೆ ಅಭಿಷೇಕ, ಹೂವಿನ ಅಲಂಕಾರ ಮತ್ತು ವಿವಾಹ, ಕಲ್ಯಾಣೋತ್ಸವ ಸೇವೆಗಳು ನಡೆಯುತ್ತವೆ. ದೇವಸ್ಥಾನದ ಕುಬೇರನ ಮೂಲೆಯಲ್ಲಿ ನೀರಿನ ಬಾವಿ ಇದ್ದು, ದೇವಸ್ಥಾನದ ಗರ್ಭಗುಡಿ ಸೇರಿ ಪ್ರಾಕಾರ ಒಳಾಂಗಣ ಮತ್ತು ಹೊರಾಂಗಣದಿಂದ ಕೂಡಿರುತ್ತದೆ. ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆ ಇರುತ್ತದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖ ಪುಸ್ತಕಗಳು ಹಾಗೂ ಹಳೆ ಕಾಲದ ಶಾಸನಗಳು ಯಾವುದೂ ಲಭ್ಯವಿರುವುದಿಲ. ದೇವಾಲಯಕ್ಕೆ ಹೊಂದಿಕೊಂಡಂತೆ ದೊಡ್ಡಬಳ್ಳಾಪುರ ಟೌನ್ ಕಸಬಾ ತಿಗಳೇ ಬಾಗಾಯ್ತು ಗ್ರಾಮದ ಸರ್ವೇ ನಂಬರ್ 69 ರಲ್ಲಿ ಖಾತೆ ಸಂಖ್ಯೆ 138 ರಲ್ಲಿ ಒಂದು ಎಕರೆ ಹತ್ತು ಗುಂಟೆ ಜಮೀನು ದೇವಾಲಯದ ಸ್ಥಿರಾಸ್ತಿಯಾಗಿರುತ್ತದೆ ಹಾಗೂ ಸದರಿ ದೇವಾಲಯದ ಬೆಳ್ಳಿ ಬಂಗಾರದ ಒಡವೆಗಳು ಇದ್ದು, ದೊಡ್ಡಬಳ್ಳಾಪುರ ತಾಲ್ಲೂಕು ಉಪಖಜಾನೆಯ ಭದ್ರತಾ ಕೊಠಡಿಯಲ್ಲಿ ಚರಾಸ್ತಿಗಳಿರುತ್ತವೆ.