ಬೆಂಗಳೂರು ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರ ತಾಲ್ಲೂಕು ರೇಷ್ಮೆಬಟ್ಟೆ ತಯಾರಿಕೆಗೆ ಬಹಳ ಪ್ರಸಿದ್ದಿ ಪಡೆದ ತಾಲ್ಲೂಕು ಕೇಂದ್ರ ಈ ಊರಿನಲ್ಲಿ ಹತ್ತಾರು ಪುರಾತನ ದೇವಾಲಯಗಳಿದ್ದು, ಇವುಗಳಲ್ಲಿ ಒಂದಾದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಪಟ್ಟಣದ ಮಧ್ಯಭಾಗದಲ್ಲಿ ಇರುತ್ತದೆ. ಸದರಿ ದೇವಾಲಯವು ಸುಮಾರು 400 ವರ್ಷಗಳ ಇದೇ ಊರಿನವರಾದ ಶ್ರೀ ಅರುಣಾಚಲ ಪಂತ್ ಎಂಬುವರು ಮೈಸೂರಿನ ಅರಮನೆಯಲ್ಲಿ ದಂಡ ನಾಯಕನಾಗಿ ಸೇವೆ ಸಲ್ಲಿಸುತ್ತಿದರು. ಆ ಕಾಲದಲ್ಲಿ ಗೌರಿಬಿದನೂರು ಪಾಳೇಗಾರು ಗುಮ್ಮ ನಾಯಕನ ಪಾಳ್ಯ ಪಾಳೇಗಾರರು ಇನ್ನು ಕೆಲವು ಪಾಳೇಗಾರರು ಮೈಸೂರಿನ ಅರಮನೆಗೆ ತುಂಬಾ ತೊಂದರೆಯನ್ನು ಕೊಡುತ್ತಿದ್ದರು. ಈ ಸಮಸ್ಯೆ ಮೈಸೂರು ಮಹಾರಾಜರಿಗೆ ತುಂಬಾ ಚಿಂತೆಯಾಯಿತು. ಮಹಾಪರಾಕ್ರಮ ಶಾಲಿಗಳು, ಮೇಧಾವಿಗಳು, ಶೂರರು ಆಗಿದ್ದ ಶ್ರೀ ಅರುಣಾಚಲಾ ಪಂತರು ಶಕ್ತಿ, ಯುಕ್ತಿಯಿಂದ ಎಲ್ಲಾ ಪಾಳೇಗಾರರನ್ನು ಸದೆಬಡಿದು ಮೈಸೂರು...