Screen Reader Access                 A-  A  A+ 
ಶ್ರೀ ರಾಘವೇಂದ್ರ ಆಂಜನೇಯಸ್ವಾಮಿ ದೇವಾಲಯ, ಪೂರ್ವ ಉದ್ಯಾನ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Raghavendra Anjaneya Temple, East Park Road, Malleshwaram - 560003, Bengaluru Urban District [TM000023]
×
Temple History

ಇತಿಹಾಸ

ಶ್ರೀ ಆಂಜನೇಯಸ್ವಾಮಿ ದೇವಸ್ಥಾನವನ್ನು 1909 ರಲ್ಲಿ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು 1945ರಲ್ಲಿ ಪ್ರತಿಷ್ಠಪಿಸಲಾಗಿರುತ್ತದೆ.ಆದರೆ ಈ ದೇವಸ್ಥಾನ ಶ್ರೀ ರಾಘವೇಂದ್ರ ಆಂಜನೇಯಸ್ವಾಮಿ ಎಂಬ ಹೆಸರಿನೊಂದಿಗೆ ಪ್ರಸಿದ್ಧಿಯಾಗಿರುತ್ತದೆ. .ಪ್ರತಿ ವರ್ಷ ಶ್ರಾವಣ ಮಾಸ ಶುಕ್ಲ ಪಕ್ಷ ಪಾಡ್ಯ ತದಿಗೆಯೆಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ವಿಜೃಂಬಣೆಯೊಂದಿಗೆ ಆಚರಿಸಲಾಗುತ್ತದೆ.ಮತ್ತು ಚೈತ್ರ ಮಾಸ ಶುಕ್ಲ ಪಕ್ಷ ಪೌರ್ಣಮಿ ತಿಥಿಯಲ್ಲಿ ಹನುಮ ಜಯಂತಿಯನ್ನು ನಡೆಸಲಾಗುತ್ತದೆ.

ಸ್ಥಳ ಪುರಾಣ

ಶ್ರೀ ಆಂಜನೇಯಸ್ವಾಮಿ ಸ್ವಾಮಿ ದೇವಾಲಯವು 1909ರಲ್ಲಿ ಪುತ್ತಿಗೆ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಗಳು ಪ್ರತಿಷ್ಠಾಪಿಸಿರುತ್ತಾರೆ. ಶ್ರೀ ಆಂಜನೇಯಸ್ವಾಮಿಗೆ (ಏಕಾದಶಿ ಹೊರತುಪಡಿಸಿ) ದಿನನಿತ್ಯವು ಪಂಚಾಮೃತ ಅಭಿಷೇಕ ನಡೆಯುತ್ತದೆ. ಶ್ರೀ ಆಂಜನೇಯಸ್ವಾಮಿಗೆ ವಿಶೇಷವಾಗಿ ಮಧು ಅಭಿಷೇಕ (ಜೇನುತುಪ್ಪದ ಅಭಿಷೇಕ) ವಿಶೇಷವಾಗಿರುತ್ತದೆ. 48 ದಿನಗಳು ತಪ್ಪದೆ ಜೇನುತುಪ್ಪದ ಅಭಿಷೇಕ ಮಾಡಿಸಿದರೆ ಭಕ್ತಾಧಿಗಳ ಇಷ್ಟಕಾರ್ಯ ಸಿದ್ದಿಯಾಗುತ್ತದೆಂಬ ಪ್ರತೀತಿ ಹೊಂದಿದೆ. ಭಕ್ತರಾದ ಶ್ರೀ ಸುಬ್ಬರಾಯರ ಕೈ ಊನವಾಗಿದ್ದು ಪೂರ್ಣ ಗುಣವಾದರೆ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆ ಮಾಡುತ್ತೇನೆಂದು ಹರಕೆ ಮಾಡಿಕೊಂಡು ಸ್ವತಃ ಅವರು ಕಲ್ಲಿನ ಶಿಲಾ ವಿಗ್ರಹ ಕೆತ್ತಿ ಸಂಕಲ್ಪ ಮಾಡಿದಂತೆ ಅಣ್ಣಾಜಿರಾವ್ ಅವರ ಕಾಲದಲ್ಲಿ ಶ್ರೀಆಂಜನೇಯಸ್ವಾಮಿ ಆವರಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆಯನ್ನು 1945ರಲ್ಲಿ ಮಾಡಿದರು ನಂತರದಲ್ಲಿ...