ಶ್ರೀ ಶಕುನ ರಂಗನಾಥ ಸ್ವಾಮಿ ದೇವಾಲಯ ಸಖರಾಯಪಟ್ಟಣ, ಚಿಕ್ಕಮಗಳೂರು - 577135, ಚಿಕ್ಕಮಗಳೂರು .
Sri Shakuna Ranganatha Swamy Temple Sakharayapattana, Chikkamagaluru - 577135, Chikkamagaluru District [TM000234]
×
Temple History
ಇತಿಹಾಸ
ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯವು ಚಿಕ್ಕಮಗಳೂರು ತಾಲ್ಲೂಕು, ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದ ಮಧ್ಯ ಭಾಗದಲ್ಲಿ ಇರುತ್ತದೆ. ಈ ದೇವಾಲಯವು 11ನೇ ಶತಮಾನದಾಗಿದ್ದು, ಹೊಯ್ಸಳ ಆರಸ 2ನೇ ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದ್ದು, ನಂತರ 16ನೇ ಶತಮಾನದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿಯನ್ನು ಶಕುನಗಿರಿಯಿಂದ ತಂದು ಸ್ಥಾಪಿಸಲಾಯಿತು ಎಂಬ ದಂತಕಥೆ ಪ್ರಚಲಿತದಲ್ಲಿದೆ.
ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದ ಎದುರಲ್ಲಿ ಕೋಟೆಯಿರುತ್ತದೆ. ಈ ಕೋಟೆಯ ಮೇಲೆ ರಾಜ್ಯದ 3ನೇ ದೊಡ್ಡ ಫಿರಂಗಿ ಇರುತ್ತದೆ. ಅನೇಕ ಪಾಳೇಗಾರರು ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ್ದಾರೆ. ಶ್ರೀ ಚನ್ನಕೇಶವ ದೇವರ ಕಂಬದ ಮೇಲೆ ಮತ್ತು ಗರುಡಗಂಬದಲ್ಲಿ ಶಾಸನ ಇರುತ್ತದೆ. ದೇವಾಲಯದಲ್ಲಿ ಸುಂದರವಾದ ಕಲ್ಲಿನ ಕಂಬಗಳಿರುತ್ತವೆ.
ಈ ದೇವಾಲಯದಲ್ಲಿ ಅಭಿಷೇಕ, ಅರ್ಚನೆ, ಉತ್ಸವ, ವಿಶೇಷವಾಗಿ ಹಣ್ಣು ತುಪ್ಪ ಸೇವೆಗಳು ಪ್ರಸಿದ್ಧಿಯಗಿರುತ್ತದೆ. ಶ್ರೀ ಶ್ರೀ ಶಕುನ...ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯವು ಚಿಕ್ಕಮಗಳೂರು ತಾಲ್ಲೂಕು, ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದ ಮಧ್ಯ ಭಾಗದಲ್ಲಿ ಇರುತ್ತದೆ. ಈ ದೇವಾಲಯವು 11ನೇ ಶತಮಾನದಾಗಿದ್ದು, ಹೊಯ್ಸಳ ಆರಸ 2ನೇ ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದ್ದು, ನಂತರ 16ನೇ ಶತಮಾನದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿಯನ್ನು ಶಕುನಗಿರಿಯಿಂದ ತಂದು ಸ್ಥಾಪಿಸಲಾಯಿತು ಎಂಬ ದಂತಕಥೆ ಪ್ರಚಲಿತದಲ್ಲಿದೆ.
ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದ ಎದುರಲ್ಲಿ ಕೋಟೆಯಿರುತ್ತದೆ. ಈ ಕೋಟೆಯ ಮೇಲೆ ರಾಜ್ಯದ 3ನೇ ದೊಡ್ಡ ಫಿರಂಗಿ ಇರುತ್ತದೆ. ಅನೇಕ ಪಾಳೇಗಾರರು ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ್ದಾರೆ. ಶ್ರೀ ಚನ್ನಕೇಶವ ದೇವರ ಕಂಬದ ಮೇಲೆ ಮತ್ತು ಗರುಡಗಂಬದಲ್ಲಿ ಶಾಸನ ಇರುತ್ತದೆ. ದೇವಾಲಯದಲ್ಲಿ ಸುಂದರವಾದ ಕಲ್ಲಿನ ಕಂಬಗಳಿರುತ್ತವೆ.
ಈ ದೇವಾಲಯದಲ್ಲಿ ಅಭಿಷೇಕ, ಅರ್ಚನೆ, ಉತ್ಸವ, ವಿಶೇಷವಾಗಿ ಹಣ್ಣು ತುಪ್ಪ ಸೇವೆಗಳು ಪ್ರಸಿದ್ಧಿಯಗಿರುತ್ತದೆ. ಶ್ರೀ ಶ್ರೀ ಶಕುನ ರಂಗನಾಥಸ್ವಾಮಿಯನ್ನು ಹರಕೆ ಮಾಡಿಕೊಳ್ಳುವುದರಿಂದ ಸಂತಾನ ಫಲ ಮತ್ತು ಸಕಲ ಕಾರ್ಯ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುತ್ತದೆ.
ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೆಯು ಪ್ರತಿ ವರ್ಷ ಜನವರಿ ಮಾಹೆಯಲ್ಲಿ ಮಕರ ಸಂಕ್ರಾಂತಿಯಂದು ಮೊಲ ಬಿಡುವ ಸೇವೆ, ಕಲ್ಯಾಣೋತ್ಸವ, ಬಿಡದಿ ಮನೆ, ರಥೋತ್ಸವ ಮತ್ತು ಹಣ್ಣು ತುಪ್ಪ ಸೇವೆ ಇನ್ನೂ ಮುಂತಾದ ವಿಶೇಷ ಸೇವೆಗಳು ವಿಜೃಂಭಣೆಯಿಂದ ನಡೆಯುತ್ತದೆ. ದೇವಾಲಯದಲ್ಲಿ ಮಡಿ ನೀರು ಹಾಕುವ ಮತ್ತು ಮುಡಿ ತೆಗೆಸುವ ಹರಕೆಗಳಿರುತ್ತವೆ ಈ ಹರಕೆಯಿಂದ ದೃಷ್ಟಿ ಪರಿಹಾರ ಮತ್ತು ಬಾಲಗ್ರಹ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಸಕಲ ಕಾರ್ಯ ಸಿದ್ಧಿ ಯಂತ್ರ ಮತ್ತು ತಾಯಿತ ಕೊಡುವುದು ವಾಡಿಕೆಯಲ್ಲಿರುತ್ತದೆ.