ಶ್ರೀ ಅಮೃತೇಶ್ವರಸ್ವಾಮಿ ದೇವಸ್ಥಾನ ಅಮೃತಾಪುರ, ಚಿಕ್ಕಮಗಳೂರು, ಚಿಕ್ಕಮಗಳೂರು .
Sri Amruteshwara Swamy Temple Amrutapura, Chikkamagaluru, Chikkamagaluru District [TM000235]
×
Temple History
ಇತಿಹಾಸ
ಅಮೃತಾಪುರ ಗ್ರಾಮದ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯವು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ 9 ಕಿ.ಲೋ. ಮೀಟರ್ ದೂರದಲ್ಲಿದೆ, ಇಲ್ಲಿ ಹೊಯ್ಸಳರ ನಾಯಕ 2ನೇ ವೀರ ಬಲ್ಲಾಳ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು, ಇವನ ದಂಡನಾಯಕ ಅಮಿತೈಯ್ಯ ನಾಯಕನ ನೆನಪಿಗೊಸ್ಕರ ದೇವಾಲಯವನ್ನು ನಿರ್ಮಿಸಲಾಯಿತು.
ಶಿವಮೊಗ್ಗದಲ್ಲಿ ಗುರ್ಜರು ಎಂಬ ಪಾಳೇಗಾರರು ಇದ್ದರು, ಇಲ್ಲಿ ಇಟ್ಟಿಗೆ ಎಂಬ ಊರಲ್ಲಿ ಹೊಯ್ಸಳರು ರಾಜಧಾನಿಯಲ್ಲಿ ಆಳುತ್ತಿದ್ದರು, ಪಾಳೇಗಾರರು ಹಸುಗಳನ್ನು ಕಟ್ಟಿ ಹಾಕಿದ್ದರಿಂದ ಹೊಯ್ಸಳರಿಗೂ ಗುರ್ಜರಿಗೂ 4 ಬಾರಿ ಯುದ್ದ ಆಯಿತು, ಅವಾಗ ಹೊಯ್ಸಳರು ಜಯಶೀಲರಾದರು, ನಂತರ ದಾರಿಯಲ್ಲಿ ಬರುವಾಗ ದಾರಿ ಮಧ್ಯೆ ಹೊಯ್ಸಳರ ದಂಡನಾಯಕ ಅಮಿತೈಯ್ಯ ನಾಯಕನನ್ನು ಮೋಸದಿಂದ ಸಾಯಿಸಿದರು, ನಿಷ್ಠಾವಂತ ದಂಡನಾಯಕನ ಸಾವಿಗೆ ಮನನೊಂದ ರಾಜನು ಅವನ ಹೆಸರಿಗೆ ಒಂದು ದೇವಾಲಯವನ್ನು ನಿರ್ಮಿಸಿದನು, ದಂಡನಾಯಕ ಶಿವ ಭಕ್ತನಾಗಿದ್ದರಿಂದ ರಾಜನು...ಅಮೃತಾಪುರ ಗ್ರಾಮದ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯವು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ 9 ಕಿ.ಲೋ. ಮೀಟರ್ ದೂರದಲ್ಲಿದೆ, ಇಲ್ಲಿ ಹೊಯ್ಸಳರ ನಾಯಕ 2ನೇ ವೀರ ಬಲ್ಲಾಳ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು, ಇವನ ದಂಡನಾಯಕ ಅಮಿತೈಯ್ಯ ನಾಯಕನ ನೆನಪಿಗೊಸ್ಕರ ದೇವಾಲಯವನ್ನು ನಿರ್ಮಿಸಲಾಯಿತು.
ಶಿವಮೊಗ್ಗದಲ್ಲಿ ಗುರ್ಜರು ಎಂಬ ಪಾಳೇಗಾರರು ಇದ್ದರು, ಇಲ್ಲಿ ಇಟ್ಟಿಗೆ ಎಂಬ ಊರಲ್ಲಿ ಹೊಯ್ಸಳರು ರಾಜಧಾನಿಯಲ್ಲಿ ಆಳುತ್ತಿದ್ದರು, ಪಾಳೇಗಾರರು ಹಸುಗಳನ್ನು ಕಟ್ಟಿ ಹಾಕಿದ್ದರಿಂದ ಹೊಯ್ಸಳರಿಗೂ ಗುರ್ಜರಿಗೂ 4 ಬಾರಿ ಯುದ್ದ ಆಯಿತು, ಅವಾಗ ಹೊಯ್ಸಳರು ಜಯಶೀಲರಾದರು, ನಂತರ ದಾರಿಯಲ್ಲಿ ಬರುವಾಗ ದಾರಿ ಮಧ್ಯೆ ಹೊಯ್ಸಳರ ದಂಡನಾಯಕ ಅಮಿತೈಯ್ಯ ನಾಯಕನನ್ನು ಮೋಸದಿಂದ ಸಾಯಿಸಿದರು, ನಿಷ್ಠಾವಂತ ದಂಡನಾಯಕನ ಸಾವಿಗೆ ಮನನೊಂದ ರಾಜನು ಅವನ ಹೆಸರಿಗೆ ಒಂದು ದೇವಾಲಯವನ್ನು ನಿರ್ಮಿಸಿದನು, ದಂಡನಾಯಕ ಶಿವ ಭಕ್ತನಾಗಿದ್ದರಿಂದ ರಾಜನು ನೇಪಾಳದ ಗಂಡಕ್ಕೆ ನದಿಗೆ ಹೋಗಿ ಅಲ್ಲಿಂದ ಸಾಲಿಗ್ರಾಮ ಲಿಂಗವನ್ನು ತಂದು ಸ್ಥಾಪಿಸಿ ಲಿಂಗಕ್ಕೆ ಅಮಿಥೈಯ್ಯ ನಾಯಕನ (ದಂಡನಾಯಕನ) ಹೆಸರನ್ನು ತರ್ಜುಮೆ (ಬದಲಾಯಿಸಿ) ಲಿಂಗಕ್ಕೆ ಅಮೃತೇಶ್ವರ ಎಂಬ ನಾಮಕರಣ ಮಾಡಿ ಊರಿಗೆ ಅಮೃತಾಪುರ ಎಂಬ ಹೆಸರನ್ನು ಇಟ್ಟರು, ಹೊಯ್ಸಳರು ಜೈನ ಧರ್ಮದವರು ಹಾಗೂ ವಿದ್ಯಾ-ಕಲೆಯಲ್ಲಿ ಆಸಕ್ತಿವುಳ್ಳವರು ಆಗಿದ್ದರಿಂದ ಪಕ್ಕದಲ್ಲಿ ಶ್ರೀ.ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿದರು,
ಶ್ರೀ ಅಮೃತೇಶ್ವರ ಸ್ವಾಮಿಗೆ ಪ್ರತಿ ದಿನ ಬೆಳಗ್ಗೆ 52 ಗಿಡಮೂಲಿಕೆಗಳಿಂದ ರುದ್ರಾಭಿಷೇಕ ನೆಡೆಯುತ್ತದೆ, ಶ್ರೀ ಶಾರಾದ ದೇವಿಗೂ ಅಭಿಷೇಕ ನೆಡೆಯುತ್ತಿದೆ, ಭಕ್ತಾಧಿಗಳು ತಮ್ಮ ತಮ್ಮ ಬೇಡಿಕೆಗಳನ್ನು ಕೇಳಿಕೊಳ್ಳುತ್ತಾರೆ, ತಾಯಿಯಲ್ಲಿ ಅಕ್ಷರ ಅಭ್ಯಾಸ, ಹರಕೆ ಸೀರೆ, ಮಡಲಕ್ಕಿ ತುಂಬುವ ಪದ್ದತಿ ಇದೆ, ಭಕ್ತಾಧಿಗಳು ತಮ್ಮ ಬೇಡಿಕೆಗಳು ಈಡೇರಿದ ನಂತರ ಶಿವನಿಗೆ ಅಭಿಷೇಕ ತಾಯಿಗೆ ಸೀರೆ, ಮಡಲಕ್ಕಿಗಳನ್ನು ಅರ್ಪಿಸುತ್ತಾರೆ, ಚಿಕ್ಕ ಮಕ್ಕಳಿಗೆ ವಿಧ್ಯೆಗೆ ಅಕ್ಷರ ಅಭ್ಯಾಸ ಮತ್ತು ದೊಡ್ಡವರಿಗೆ ವಿದ್ಯೆ, ಜ್ಞಾಪಕ ಶಕ್ತಿಗೆ ಓಂಕಾರ ಅಭ್ಯಾಸವನ್ನು ಮಾಡಿಕೊಡಲಾಗುತ್ತಿದೆ, ಭಕ್ತಾಧಿಗಳು ತಮ್ಮ ಬೇಡಿಕೆಗಳು ಈಡೇರಿದ ನಂತರ ಅವರು ಮಾಡಿಕೊಂಡ ಹರಕೆ ಒಡವೆಗಳನ್ನು ಅರ್ಪಿಸುತ್ತಾರೆ.
200 ರಕ್ಕೂ ಹೆಚ್ಚು ವರ್ಷಗಳಿಂದ ಊರಿನ ಗ್ರಾಮಸ್ಥರು ಹಚ್ಚಿದ ನಂದಾ ದೀಪವಿದೆ, ನಾಲ್ವಡಿ ಕೃಷ್ಣರಾಜ ಓಡೆಯರು ಅರ್ಶೀವದಿಸಿದಂತೆ ದೀಪವಿದೆ. 52 ಕಂಬಗಳಿವೆ, ಇದಕ್ಕೆ ಪಂಚಲೋಹ ಸ್ಥಂಭ ಎಂದು ಕೆರಯಲಾಗುತ್ತಿದೆ, 52 ರೀತಿಯಲ್ಲಿ ಇದೆ. 46 ಗೋಪುರ ಭುವನೇಶ್ವರಿಗಳಿವೆ, 46 ರೀತಿಯಲ್ಲಿದೆ, ಶಿವತಾಂಡವ ನೃತ್ಯ ಹಾಡುವ ಭಂಗಿ ತುಂಬಾ ಸುಂದರವಾಗಿ ಕೆತ್ತಲಾಗಿದೆ. ನವರಂಗದಲ್ಲಿ ಸಪ್ತ ಮಾತೃಕೆಯರು, ಗಣಪತಿ, ಬಾಗಿಲಲ್ಲಿ ರತಿ ಮನ್ಮಥರು, ವೀರಭದ್ರ, ಸುಬ್ರಮಣ್ಯ, ವಿಷ್ಣು, ಕಾಲಭೈರವ, ನಾಗಕನ್ನಿಕೆಯರು ಹಾಗೂ 2 ವೀರಗಲ್ಲುಗಳಿವೆ. ಹೊರಗಡೆ 252 ಚಿಕ್ಕ ಚಿಕ್ಕ ಗೊಪುರಗಳಿವೆ ಕಡ್ಲೆಕಾಳು ಬಸವಣ್ಣವಿದೆ, ದೇವಾಲಯದ ಎಡಭಾಗದಲ್ಲಿ ಭಾಗವತ ಮುಂದೆ ಮಹಾಭಾರತ, ಬಲಭಾಗದಲ್ಲಿ ರಾಮಾಯಣ ಕಥೆಗಳು ತುಂಬಾ ಸುಂದರವಾಗಿ ಕೆತ್ತಲಾಗಿದೆ, ದೇವಾಲಯದ ಸುತ್ತ ಕೋಟೆಯನ್ನು ನಿರ್ಮಿಸಲಾಗಿದೆ, ಅದರಲ್ಲಿ ಶಿಲಾ ಬಾಲೆ ಹಾಗೂ ವಿಗ್ರಹಗಳನ್ನು ಕೆತ್ತಲಾಗಿದೆ, ದೇವಾಲಯಕ್ಕೆ 825 ವರ್ಷಗಳಾಗಿದೆ, ಪ್ರತಿ ಸಂಕ್ರಾತಿಯಲ್ಲಿ ಅಮೃತೋತ್ಸವವನ್ನು ನಡೆಸಲಾಗುತ್ತದೆ, ಶಿವರಾತ್ರಿಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಅನ್ನ ಸಂತರ್ಪಣೆ ನೆಡೆಸಲಾಗುತ್ತಿದೆ, ಪ್ರತಿದಿನ ನಿತ್ಯ ದಾಸೋಹವನ್ನು ನೆಡೆಸಲಾಗುತ್ತಿದೆ, ಶ್ರಾವಣ, ದಸರಾ ಹಾಗೂ ಧರ್ನುಮಾಸದಲ್ಲಿ ವಿಶೇಷ ಅಭಿಷೇಕ ಪೂಜೆಯನ್ನು ನೆಡೆಸಲಾಗುತ್ತಿದೆ, ಪ್ರತಿ ದಿನ ಬೆಳಗ್ಗೆ 6-00 ಗಂಟೆಗೆ ಬಾಗಿಲನ್ನು ತೆಗೆಯಲಾಗುತ್ತದೆ, ಪ್ರತಿ ದಿನ ಬೆಳಗ್ಗೆ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಶಾರಾದ ಮಾತೆಗೆ ಕುಂಕುಮಾರ್ಚನೆ ಅಕ್ಷರ ಅಭ್ಯಾಸ, ಓಂಕಾರ ಅಭ್ಯಾಸ, ಹರಕೆ ಸೀರೆಗಳ ಮಂಗಳಾರತಿ ಪೂಜೆಗಳು ನೆಡೆಯುತ್ತಿದೆ, ಸಂಜೆ 6-00 ಗಂಟೆಗೆ ದೇವಾಲಯಕ್ಕೆ ಬಾಗಿಲು ಹಾಕಲಾಗುತ್ತದೆ, ಬೆಳಗ್ಗೆ 6-00 ಗಂಟೆ ಯಿಂದ ಸಂಜೆ 6-00 ಗಂಟೆ ಯವರಿಗೆ ದೇವಾಲಯ ತೆರೆದಿರುತ್ತದೆ.