ಅಮೃತಾಪುರ ಗ್ರಾಮದ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯವು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ 9 ಕಿ.ಲೋ. ಮೀಟರ್ ದೂರದಲ್ಲಿದೆ, ಇಲ್ಲಿ ಹೊಯ್ಸಳರ ನಾಯಕ 2ನೇ ವೀರ ಬಲ್ಲಾಳ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು, ಇವನ ದಂಡನಾಯಕ ಅಮಿತೈಯ್ಯ ನಾಯಕನ ನೆನಪಿಗೊಸ್ಕರ ದೇವಾಲಯವನ್ನು ನಿರ್ಮಿಸಲಾಯಿತು. ಶಿವಮೊಗ್ಗದಲ್ಲಿ ಗುರ್ಜರು ಎಂಬ ಪಾಳೇಗಾರರು ಇದ್ದರು, ಇಲ್ಲಿ ಇಟ್ಟಿಗೆ ಎಂಬ ಊರಲ್ಲಿ ಹೊಯ್ಸಳರು ರಾಜಧಾನಿಯಲ್ಲಿ ಆಳುತ್ತಿದ್ದರು, ಪಾಳೇಗಾರರು ಹಸುಗಳನ್ನು ಕಟ್ಟಿ ಹಾಕಿದ್ದರಿಂದ ಹೊಯ್ಸಳರಿಗೂ ಗುರ್ಜರಿಗೂ 4 ಬಾರಿ ಯುದ್ದ ಆಯಿತು, ಅವಾಗ ಹೊಯ್ಸಳರು ಜಯಶೀಲರಾದರು, ನಂತರ ದಾರಿಯಲ್ಲಿ ಬರುವಾಗ ದಾರಿ ಮಧ್ಯೆ ಹೊಯ್ಸಳರ ದಂಡನಾಯಕ ಅಮಿತೈಯ್ಯ ನಾಯಕನನ್ನು ಮೋಸದಿಂದ ಸಾಯಿಸಿದರು, ನಿಷ್ಠಾವಂತ ದಂಡನಾಯಕನ ಸಾವಿಗೆ ಮನನೊಂದ ರಾಜನು ಅವನ ಹೆಸರಿಗೆ ಒಂದು ದೇವಾಲಯವನ್ನು ನಿರ್ಮಿಸಿದನು, ದಂಡನಾಯಕ ಶಿವ ಭಕ್ತನಾಗಿದ್ದರಿಂದ ರಾಜನು...