Screen Reader Access     A-AA+
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಚ್ಚಿಲ, ಉಡುಪಿ - 574117, ಉಡುಪಿ .
Sri Mahalingeshwara Mahaganapathi Temple Uchila, Udupi - 574117, Udupi District [TM000246]
×
Temple History

ಇತಿಹಾಸ

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಉಚ್ಚಿಲ ಪಡ್ಡಾಯಿ ಮುಕುಡ್ದು ಕಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿಧಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ. ಇದು ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಳಗಳಲ್ಲಿ ಒಂದು. ಸ್ಥಳನಾಮ: ಉಚ್ಚಿಲ ಎಂಬುದು ಗ್ರಾಮದ ಹೆಸರಲ್ಲ, ಅದು ಒಂದು ನಿರ್ದಿಷ್ಟವಾದ ಸ್ಥಳನಾಮ ಎತ್ತರದ ಭೂಪ್ರದೇಶ, ಉನ್ನತ, ಶ್ರೇಷ್ಠ, ಗಂಭೀರವಾದ ‘ಇಲ’ ಎಂದರೆ ಸ್ಥಳವಾಗಿದ್ದು ಉಚ್ಚಿಲವಾಯಿತು. ಉಚ್ಛಶಿಲೆಯೇ ಉಚ್ಚಿಲವಾಯಿತು, ಉಚ್ಚ, ಊರ್ಧ್ವ ಎಂಬ ಸಂಸ್ಕೃತ ಶಬ್ಧಗಳ ಮಿಳಿತದಿಂದ ಉಚ್ಚಿಲ ಎಂಬುದು ಪೂರಕವಾದ ನಿರೂಪಣೆ, ಉಚ್ಚೆಯೊ (ಉತ್ಸವ) ನಡೆಯುವ ಸ್ಥಳವಾಗಿ ಉಚ್ಚಿಲ ಎಂಬುದು ಇನ್ನೊಂದು ಆಯಾಮದ ಚಿಂತನೆ...

ಸ್ಥಳ ಪುರಾಣ

ಪಡ್ಡಾಯಿ ಮುಕುಡ್ದು ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಯಿಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ, ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು, ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿದಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ.