ಪಡ್ಡಾಯಿ ಮುಕುಡ್ದು ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಯಿಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ, ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು, ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿದಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ.