ಶ್ರೀ ಬಿಳಿಕಲ್ ರಂಗನಾಥಸ್ವಾಮಿ ದೇವಸ್ಥಾನ ಚಿಕ್ಕಹಲ್ಕೂರು, ಹಾಸನ - 573126, ಹಾಸನ .
Sri Bilikal Ranganatha Swamy temple Chikkahalkur, Hassan - 573126, Hassan District [TM000248]
×
Temple History
ಇತಿಹಾಸ
|ಶ್ರೀ ಬಿಳಿಕಲ್ಲು ಲಕ್ಷ್ಮೀರಂಗನಾಥಸ್ವಾಮಿ ಪ್ರಸನ್ನ||
ಭಂಡಾರ ವಾಡದುರ್ಗದೊಳು ಪೆಸರ ವೆತ್ತ ಹಲಕೂರು ಪ್ರಭುಗಳ ಕೀರ್ತಿ ಎಂತಂದೊಡೆ ಕೆತ್ತಿಸಿದರೆ ದೇಗುಲಂಗಳಂ ಕಟ್ಟಿಸಿದರ್ ಕೆರೆಗಳಂಗಳಂ. ಹಲ ಎಂದರೆ ನೇಗಿಲು, ಹಲಕ ಎಂದರೆ ನೇಗಿಲಿನ ಕುಳ, ಕುಳದಿಂದ ಕೂಡಿದ ನೇಗಿಲಿನಿಂದ ಮಾಡುವುದು ವ್ಯವಸಾಯ, ವ್ಯವಸಾತದಲ್ಲಿ ಸಂಪದ್ಭರಿತವಾದ ರಾಜ್ಯವಾದ್ದರಿಂದ ಈ ಗ್ರಾಮಕ್ಕೆ ಹಲಕೂರು ಎಂದು ಹೆಸರು ಬಂದಿತು.
ಹಾಸನ ಜಿಲ್ಲೆ,ಅರಸೀಕೆರೆ ತಾಲ್ಲೂಕು ಶ್ರೀ ಬಿಳಿಕಲ್ಲು ರಂಗನಾಥಸ್ವಾಮಿ ದೇವಾಯಲದ ಇತಿಹಾಸ
ಹಲಕೂರು ಒಂದು ರಾಜ್ಯವಾಗಿದ್ದು ಇದನ್ನು ಹೊಯ್ಸಳರ ಮಾಂಡಲೀಕರು 11 ನೇ ಶತಮಾನದಿಂದ ಆಳುತ್ತಿದ್ದರು. ನಂತರ ತರೀಕೆರೆಯ ಪಾಳೇಗಾರರು 16 ನೇ ಶತಮಾನದಲ್ಲಿ ಆಳುತ್ತಿದ್ದರು. ಇವರ ವಂಶದ ಮೂಲು ಪುರುಷರು ಸರ್ಜಾ ಹನುಮಪ್ಪ ನಾಯಕರು ಇವರ ತಮ್ಮಂದಿರು ಶ್ರೀ ಕೆಂಗಪ್ಪನಾಯಕರು ಈ ಪ್ರಾಂತ್ಯವನ್ನು ಆಳುತ್ತಿದ್ದರು. ಇವರ ನಂತರ ಇವರ ಮಕ್ಕಳಾದ...|ಶ್ರೀ ಬಿಳಿಕಲ್ಲು ಲಕ್ಷ್ಮೀರಂಗನಾಥಸ್ವಾಮಿ ಪ್ರಸನ್ನ||
ಭಂಡಾರ ವಾಡದುರ್ಗದೊಳು ಪೆಸರ ವೆತ್ತ ಹಲಕೂರು ಪ್ರಭುಗಳ ಕೀರ್ತಿ ಎಂತಂದೊಡೆ ಕೆತ್ತಿಸಿದರೆ ದೇಗುಲಂಗಳಂ ಕಟ್ಟಿಸಿದರ್ ಕೆರೆಗಳಂಗಳಂ. ಹಲ ಎಂದರೆ ನೇಗಿಲು, ಹಲಕ ಎಂದರೆ ನೇಗಿಲಿನ ಕುಳ, ಕುಳದಿಂದ ಕೂಡಿದ ನೇಗಿಲಿನಿಂದ ಮಾಡುವುದು ವ್ಯವಸಾಯ, ವ್ಯವಸಾತದಲ್ಲಿ ಸಂಪದ್ಭರಿತವಾದ ರಾಜ್ಯವಾದ್ದರಿಂದ ಈ ಗ್ರಾಮಕ್ಕೆ ಹಲಕೂರು ಎಂದು ಹೆಸರು ಬಂದಿತು.
ಹಾಸನ ಜಿಲ್ಲೆ,ಅರಸೀಕೆರೆ ತಾಲ್ಲೂಕು ಶ್ರೀ ಬಿಳಿಕಲ್ಲು ರಂಗನಾಥಸ್ವಾಮಿ ದೇವಾಯಲದ ಇತಿಹಾಸ
ಹಲಕೂರು ಒಂದು ರಾಜ್ಯವಾಗಿದ್ದು ಇದನ್ನು ಹೊಯ್ಸಳರ ಮಾಂಡಲೀಕರು 11 ನೇ ಶತಮಾನದಿಂದ ಆಳುತ್ತಿದ್ದರು. ನಂತರ ತರೀಕೆರೆಯ ಪಾಳೇಗಾರರು 16 ನೇ ಶತಮಾನದಲ್ಲಿ ಆಳುತ್ತಿದ್ದರು. ಇವರ ವಂಶದ ಮೂಲು ಪುರುಷರು ಸರ್ಜಾ ಹನುಮಪ್ಪ ನಾಯಕರು ಇವರ ತಮ್ಮಂದಿರು ಶ್ರೀ ಕೆಂಗಪ್ಪನಾಯಕರು ಈ ಪ್ರಾಂತ್ಯವನ್ನು ಆಳುತ್ತಿದ್ದರು. ಇವರ ನಂತರ ಇವರ ಮಕ್ಕಳಾದ ಶ್ರೀ ರಂಗಪ್ಪನಾಯಕರು ಆಳುತ್ತಿದ್ದ ಕಾಲದಲ್ಲಿ ಒಂದು ದಿನ ಬೇಟೆಗೆಂದು ತಮ್ಮ ಪರಿವಾರದೊಡನೆ ಕಾಡಿಗೆ ಹೋದಾಗ ಒಂದು ಕಡೆ ಅವರ ಕುದುರೆ ನಿಂತು ಬಿಟ್ಟಿತು. ಏನು ಮಾಡಿದಲು ಸಹ ತಿಳಿಯದೆ ಭಗವಂತನನ್ನು ಧ್ಯಾನಿಸುತ್ತಾ ಕುಳಿತರು ಅವರ ಎದುರಿಗೆ ದಿವ್ಯ ಪ್ರಕಾಶಮಾನವಾದ ಬೆಳಕು ಕಾಣಿಸಿತು. ಆಶ್ಚರ್ಯದಿಂದ ಅದನ್ನು ನೋಡಲು ಅವರ ಎದುರಿಗೆ ತೇಜೋಮಯರೂ, ತಪ್ಪಸ್ಸಿಗಳು ಆದ ಶ್ರೀ ಸಿದ್ದೇಶ್ವರರು ನಿಂತಿದ್ದರು. ಅವರನ್ನು ಕಂಡ ಶ್ರೀರಂಗಪ್ಪನಾಯಕರು ಅವರಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಈ ಕುದುರೆ ಮುಂದೆ ಹೋಗದೆ ನಿಂತಿರುವ ಕಾರಣ ತಿಳಿಸಿ ತೊಂದರೆಯನ್ನು ಪರಿಹರಿಸಿ ಕೊಡಬೇಕೆಂದು ಪ್ರಾರ್ಥಿಸಲು ದಯಾಮಯರಾದ ಶ್ರೀ ಸಿದ್ದೇಶ್ವರರು ಎಲೈ ರಾಜನೇ ಕೇಳು ನಿನ್ನ ಕುದುರೆ ನಿಂತಿರುವ ಜಾಗದಲ್ಲಿ ಬಿಳಿಕಲ್ಲಿನಲ್ಲಿ ಶಂಖು,ಚಕ್ರ, ನಾಮದ ಆಕಾರದಲ್ಲಿ ಶ್ರೀ ರಂಗನಾಥಸ್ವಾಮಿ ನೆಲೆಸಿದ್ದಾನೆ. ಈ ಜಾಗವನ್ನು ಅಗೆಸಿ ಅವನ ದರ್ಶನ ಪಡೆದು ಈ ಜಾಗದಲ್ಲಿ ದೇವಾಲಯವನ್ನು ಕಟ್ಟಿಸಿ ನಿತ್ಯ ಪೂಜೆಗಳನ್ನು ನೆಡೆಯುವಂತೆ ಏರ್ಪಾಡು ಮಾಡು ಎಂದು ಹೇಳಿ ರಾಜನನ್ನು ಆಶೀರ್ವದಿಸಿ ಅಂತರ್ಧಾನರಾದರು. ಅದರಂತೆ ರಾಜನು ಪರಮಾತ್ಮನನ್ನು ಪ್ರಾರ್ಥಿಸುತ್ತಾ ನನ್ನ ತಂದರೆಯನ್ನು ಪರಿಹರಿಸು,ಯತಿಗಳು ಹೇಳಿದಂತೆ ನಿನ್ನ ದರ್ಶನ ಪಡೆದು ನಿನಗೆ ದೇವಾಲಯವನ್ನು ಕಟ್ಟಿಸುತ್ತೇನೆ ಎಂದು ಪ್ರಾರ್ಥಿಸಲು ಮಾರಮಾತ್ಮನ ಮಹಿಮೆಯಿಂದ ಕುದುರೆಯು ನಿಂತ ಜಾಗದಿಂದ ಮುಂದೆ ಹೋಯಿತು. ರಾಜನು ಸಂತೋಷಪಟ್ಟು ಆಳುಗಳನ್ನು ಕರೆದು ಆ ಜಾಗವನ್ನು ಅಗೆಸಿ ನೋಡಲಾಗಿ (ಹಲಕೂರು ರಾಜ್ಯಕ್ಕೆ ಸೇರಿದ ಚಿಕ್ಕ ಹಲಕೂರು ಗ್ರಾಮದ ಸರ್ಕಾರಿ ಸರ್ವೆ ನಂ. 61 ರಲ್ಲಿ) ಯತಿಗಳು ಹೇಳಿದಂತೆ ಆ ಜಾಗದಲ್ಲಿ ಬಿಳೀಕಲ್ಲಿನಲ್ಲಿ ಶಂಖು, ಚಕ್ರ, ನಾಮದ ಆಕಾರದಲ್ಲಿ ಪರಮಾತ್ಮನು ಅರ್ಶನ ಕೊಡಲು ಆದರಿಂದ ಸಂತೋಷಗೊಂಡ ರಾಜನು ಆ ಜಾಗದಲ್ಲಿ ತಿಪುರ ಬೋಯಿ ಎಂಬ ಶಿಲ್ಪಿಯು ಮುಂದಾಳತ್ವದಲ್ಲಿ ದೇವಾಲಯವನ್ನು ಕಟ್ಟಿಸಿ ಶಿಲ್ಪಿಗಳಿಂದ ಕೆತ್ತಿಸಿದ ( ಗರ್ಭಗುಡಿಯಲ್ಲಿ ಕಾಣುವ ವಿಗ್ರಹ) ಶ್ರೀ ರಂಗನಾಥಸ್ವಾಮಿಯ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪಿಸಿದ್ದಲ್ಲದೆ, ಶ್ರೀ ಆಂಜನೇಯಸ್ವಾಮಿ ಮತ್ತು ಆಳ್ವಾರರು ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪಿಸಿ ಪಂಚಲೋಹದ ಸಣ್ಣ, ಸಣ್ಣದಾದ ಉತ್ಸವ ಮೂರ್ತಿಗಳನ್ನು ಸಹ ಮಾಡಿಸಿ ದೇವಾಲಯದ ಮುಂಭಾಗದ ಪಕ್ಕದ ಜಾಗದಲ್ಲಿ ಉದ್ಭವವಾಗಿದ್ದ ಶ್ರೀ ಕೆಂಚರಾಯಸ್ವಾಮಿಗೆ ಮಂಟಪವನ್ನು ಕಟ್ಟಿಸಿ ದೇವಾಲಯದ ಪ್ರಕಾರ ಹೊರಗೆ ಈಶಾನ್ಯ ದಿಕ್ಕಿನಲ್ಲಿ ದೊಡ್ಡ