|ಶ್ರೀ ಬಿಳಿಕಲ್ಲು ಲಕ್ಷ್ಮೀರಂಗನಾಥಸ್ವಾಮಿ ಪ್ರಸನ್ನ|| ಭಂಡಾರ ವಾಡದುರ್ಗದೊಳು ಪೆಸರ ವೆತ್ತ ಹಲಕೂರು ಪ್ರಭುಗಳ ಕೀರ್ತಿ ಎಂತಂದೊಡೆ ಕೆತ್ತಿಸಿದರೆ ದೇಗುಲಂಗಳಂ ಕಟ್ಟಿಸಿದರ್ ಕೆರೆಗಳಂಗಳಂ. ಹಲ ಎಂದರೆ ನೇಗಿಲು, ಹಲಕ ಎಂದರೆ ನೇಗಿಲಿನ ಕುಳ, ಕುಳದಿಂದ ಕೂಡಿದ ನೇಗಿಲಿನಿಂದ ಮಾಡುವುದು ವ್ಯವಸಾಯ, ವ್ಯವಸಾತದಲ್ಲಿ ಸಂಪದ್ಭರಿತವಾದ ರಾಜ್ಯವಾದ್ದರಿಂದ ಈ ಗ್ರಾಮಕ್ಕೆ ಹಲಕೂರು ಎಂದು ಹೆಸರು ಬಂದಿತು. ಹಾಸನ ಜಿಲ್ಲೆ,ಅರಸೀಕೆರೆ ತಾಲ್ಲೂಕು ಶ್ರೀ ಬಿಳಿಕಲ್ಲು ರಂಗನಾಥಸ್ವಾಮಿ ದೇವಾಯಲದ ಇತಿಹಾಸ ಹಲಕೂರು ಒಂದು ರಾಜ್ಯವಾಗಿದ್ದು ಇದನ್ನು ಹೊಯ್ಸಳರ ಮಾಂಡಲೀಕರು 11 ನೇ ಶತಮಾನದಿಂದ ಆಳುತ್ತಿದ್ದರು. ನಂತರ ತರೀಕೆರೆಯ ಪಾಳೇಗಾರರು 16 ನೇ ಶತಮಾನದಲ್ಲಿ ಆಳುತ್ತಿದ್ದರು. ಇವರ ವಂಶದ ಮೂಲು ಪುರುಷರು ಸರ್ಜಾ ಹನುಮಪ್ಪ ನಾಯಕರು ಇವರ ತಮ್ಮಂದಿರು ಶ್ರೀ ಕೆಂಗಪ್ಪನಾಯಕರು ಈ ಪ್ರಾಂತ್ಯವನ್ನು ಆಳುತ್ತಿದ್ದರು. ಇವರ ನಂತರ ಇವರ ಮಕ್ಕಳಾದ...