ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಮಾರೇಹಳ್ಳಿ, ಮಂಡ್ಯ, ಮಂಡ್ಯ .
Sri Lakshmi Narashimha Swamy temple Marehalli, Mandya, Mandya District [TM000278]
×
Temple History
ಇತಿಹಾಸ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಿಂದ ಎರಡು ಕಿ.ಮಿ.ದೂರದಲ್ಲಿ ಮಾರೇಹಳ್ಳಿ ಎಂಬ ಸ್ಥಳವಿದೆ. ಇಲ್ಲಿ ಪುರಾಣ ಪ್ರಸಿದ್ದವಾಗಿರುವ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಸ್ಥಾನ ಇರುತ್ತದೆ. ಪುರಾಣ ಕಾಲದಲ್ಲಿ ಸುಯಜ್ಷೆ ಹಾಗೂ ಲಂಬಕರ್ಣ ಮುಂತಾದ ಋಷಿಗಳು ತಪಸ್ಸು ಮಾಡಿ ಶ್ರೀ ಲಕ್ಷೀನರಸಿಂಹ ಸ್ವಾಮಿಯನ್ನು ಪ್ರತ್ಯೇಕ ಮಾಡಿಕೊಂಡು ಈ ಋಷಿಗಳ ಪ್ರಾರ್ಥನೆಯಂತೆ ಸ್ವಾಮಿಯು ಈ ಸ್ಥಳದಲ್ಲಿ ಸುಮಾರ 10ನೇ ಶತಮಾನದಲ್ಲಿ ನೆಲೆಗೊಂಡಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.
ಈ ದೇವಾಲಯವನ್ನು ಮೊದಲನೇ ರಾಜರಾಜ ಚೋಳ ಜೀರ್ಣೋದ್ದಾರ ಮಾಡಿದನೆಂದು ಪ್ರತೀತಿ ಇದೆ. ಈ ದೇವಾಲಯದ ಸುತ್ತ ಅಗ್ರಹಾರವಿತ್ತೆಂದು ಹಾಗೂ ಮುನಿಯ ಶಾಪದಿಂದ ಅಗ್ರಹಾರ ನಾಶವಾಯಿತೆಂದು ದಂತ ಕಥೆಯಿದೆ. ಮಾರೇಹಳ್ಳಿ ಶ್ರೀ ಲಕ್ಷೀನರಸಿಂಹ ಸ್ವಾಮಿ ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡುತ್ತಾರೆ.
ಈ...ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಿಂದ ಎರಡು ಕಿ.ಮಿ.ದೂರದಲ್ಲಿ ಮಾರೇಹಳ್ಳಿ ಎಂಬ ಸ್ಥಳವಿದೆ. ಇಲ್ಲಿ ಪುರಾಣ ಪ್ರಸಿದ್ದವಾಗಿರುವ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಸ್ಥಾನ ಇರುತ್ತದೆ. ಪುರಾಣ ಕಾಲದಲ್ಲಿ ಸುಯಜ್ಷೆ ಹಾಗೂ ಲಂಬಕರ್ಣ ಮುಂತಾದ ಋಷಿಗಳು ತಪಸ್ಸು ಮಾಡಿ ಶ್ರೀ ಲಕ್ಷೀನರಸಿಂಹ ಸ್ವಾಮಿಯನ್ನು ಪ್ರತ್ಯೇಕ ಮಾಡಿಕೊಂಡು ಈ ಋಷಿಗಳ ಪ್ರಾರ್ಥನೆಯಂತೆ ಸ್ವಾಮಿಯು ಈ ಸ್ಥಳದಲ್ಲಿ ಸುಮಾರ 10ನೇ ಶತಮಾನದಲ್ಲಿ ನೆಲೆಗೊಂಡಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.
ಈ ದೇವಾಲಯವನ್ನು ಮೊದಲನೇ ರಾಜರಾಜ ಚೋಳ ಜೀರ್ಣೋದ್ದಾರ ಮಾಡಿದನೆಂದು ಪ್ರತೀತಿ ಇದೆ. ಈ ದೇವಾಲಯದ ಸುತ್ತ ಅಗ್ರಹಾರವಿತ್ತೆಂದು ಹಾಗೂ ಮುನಿಯ ಶಾಪದಿಂದ ಅಗ್ರಹಾರ ನಾಶವಾಯಿತೆಂದು ದಂತ ಕಥೆಯಿದೆ. ಮಾರೇಹಳ್ಳಿ ಶ್ರೀ ಲಕ್ಷೀನರಸಿಂಹ ಸ್ವಾಮಿ ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡುತ್ತಾರೆ.
ಈ ದೇವಾಲಯವು 108 ಅಂಕಣಗಳಿಂದಲೂ ಹಾಗೂ 108 ಕಂಭಗಳಿಂದಲೂ ನಿರ್ಮಾಣವಾಗಿದೆ ದೇವಾಲಯದ ಮುಂದೆ ಸುಮಾರು 40 ಅಡಿ ಎತ್ತರದ ಗರುಡ ಗಂಬವಿದೆ. ದೇವಾಲಯಕ್ಕೆ ಹೋಗುತ್ತಾ ಎಡಭಾಗದಲ್ಲಿ ಹಾಗೂ ಬಲಭಾಗದಲ್ಲಿ ಮಂಟಪಗಳಿವೆ ಅಲ್ಲಿಂದ ಮುಂದೆ ಬೃಂದಾವನವಿದೆ. ನಂತರ ಮುಖದ್ವಾರದ ಮುಖಾಂತರ ದೇವಾಲಯವನ್ನು ಪ್ರವೇಶಿಸಿ ಮುಂದೆ ನಡೆದರ ಗರ್ಭಗುಡಿಯಲ್ಲಿ ಶ್ರೀ ಲಕ್ಷೀನರಸಿಂಹಸ್ವಾಮಿಯವರ ದಿವ್ಯ ದರ್ಶನವಾಗುತ್ತದೆ. ಶ್ರೀ ಲಕ್ಷೀಯವರನ್ನು ನರಸಿಂಹಸ್ವಾಮಿಯು ಎಡ ತೊಡೆಯ ಮೇಲೆ ಕೂರಿಸಿಕೊಂಡು ದಿವ್ಯ ಅಲಂಕಾರದೊಂದಿಗೆ ಭಕ್ತರಿಗೆ ಅಭಯ ಹಸ್ತ ನೀಡುತ್ತಿರುವ ದೃಶ್ಯ ನಿಜಕ್ಕೂ ಆನಂದವನ್ನು ಉಂಟುಮಾಡುತ್ತದೆ. ಸ್ವಾಮಿಯವರ ಹಿಂಬದಿಯ ಎರಡು ಕಡೆಗಳಲ್ಲಿ ಭೂದೇವಿ ಮತ್ತು ನೀಳಾದೇವಿಯವರ ಸನ್ನಿಧಾನವಿದೆ ಹಾಗೂ ಈ ಪ್ರಕಾರದಲ್ಲಿಯೇ ಶ್ರೀ ಗಣಪತಿಯ ವಿಗ್ರಹವು ಇದೆ.
ಇಲ್ಲಿ ಭಕ್ತಾಧಿಗಳಿಗೆ ಪಂಕ್ತಿ ಭೋಜನವು ನಡೆಯುವುದು ಯಾವುದೇ ಜಾತಿ ಮತ ಭೇಧಗಳು ಇಲ್ಲಿ ಇರುವುದಿಲ್ಲ ಒಂದು ರೀತಿಯಲ್ಲಿ ಭಾವ್ಯಕ್ಯ ಮೂಡಿಸುವ ದೇವಾಲಯವಾಗಿದೆ.
ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಮಾರೇಹಳ್ಳಿ ಗ್ರಾಮದ ಲಕ್ಷೀನರಸಿಂಹಸ್ವಾಮಿ ದೇವಸ್ಥಾನದ ಉದ್ಬವದ ಹಿನ್ನಲೆ ಎಂದರೇ ಸುಯಜ್ಷೆ ಹಾಗೂ ಲಂಬಕರ್ಣ ಮುಂತಾದ ಋಷಿಗಳು ತಪಸ್ಸು ಮಾಡಿ ಶ್ರೀ ಲಕ್ಷೀ ನರಸಿಂಹಸ್ವಾಮಿಯ ಪ್ರತ್ಯೇಕ ಮಾಡಿಕೊಂಡು ಈ ಋಷಿಗಳು ಪ್ರಾರ್ಥನೆಯಂತೆ ಸ್ವಾಮಿಯು ಸುಮಾರು 10ನೇ ಶತಮಾನದಲ್ಲಿ ನೆಲೆಗೊಂಡಿದೆ.
ಮಾರೇಹಳ್ಳಿ ಶ್ರೀ ಲಕ್ಷೀನರಸಿಂಹಸ್ವಾಮಿಯವರ ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡುತ್ತಾರೆ.ಈ ದೇವಾಲಯದ ಜಾತ್ರೆಯು ಮೇ ಅಥವಾ ಜೂನ್ ನಲ್ಲಿ ನಡೆಯುತ್ತದೆ. ಜಾತ್ರೆ 15 ದಿನಗಳು ನಡೆದು ದಿವ್ಯ ರಥೋತ್ಸವದ ನಂತರ ಜಾತ್ರೆ ಮುಕ್ತಾಯವಾಗುತ್ತದೆ. ಈ ಜಾತ್ರೆಗೆ ದೇಶ ವಿದೇಶಗಳಿಂದ ಭಕ್ತಾಧಿಗಳು ಆಗಮಿಸಿ ಸೇವೆಯಲ್ಲಿ ಪಾಲ್ಗೊಳುತ್ತಾರೆ. ಈ 15 ದಿನಗಳಲ್ಲಿ ಈ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ಊಟ ಉಪಚಾರಗಳೂ ನಡೆಯುತ್ತದೆ.