ಶ್ರೀ ಕಾಳೇಶ್ವರ ದೇವಸ್ಥಾನ ಯತ್ತಂಬಾಡಿ, ಮಂಡ್ಯ - 571430, ಮಂಡ್ಯ .
Sri Kaleshwara temple Yattambadi, Mandya - 571430, Mandya District [TM000279]
×
Temple History
ಇತಿಹಾಸ
ಯೇತಂಬಾಡಿ ಕಾಳೇಶ್ವರ ದೇವಸ್ಥಾನವು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಮಳವಳ್ಳಿ ತಾಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ದಂತಕಥೆಯ ಪ್ರಕಾರ ಒಮ್ಮೆ ಕಾಳಪ್ಪ ಎಂಬ ವ್ಯಕ್ತಿ ಜೀವನೋಪಾಯಕ್ಕಾಗಿ ಯೇತಂಬಾಡಿ ಗ್ರಾಮಕ್ಕೆ ಬಂದನು, ಗ್ರಾಮದ ಜಮೀನುದಾರ ಕೆಂಪೇಗೌಡ ತನ್ನ ದನಗಳನ್ನು ನೋಡಿಕೊಳ್ಳಲು ಅವನನ್ನು ನೇಮಿಸಿಕೊಂಡನು. ಕಾಲಾನಂತರದಲ್ಲಿ, ಅವನು ಪಕ್ಕದ ನಿಟ್ಟೂರಿನ ಹಳ್ಳಿಯ ಹೊನ್ನಮ್ಮನನ್ನು ಪ್ರೀತಿಸುತ್ತಾನೆಯೇತಂಬಾಡಿ ಕಾಳೇಶ್ವರ ದೇವಸ್ಥಾನವು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಮಳವಳ್ಳಿ ತಾಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ದಂತಕಥೆಯ ಪ್ರಕಾರ ಒಮ್ಮೆ ಕಾಳಪ್ಪ ಎಂಬ ವ್ಯಕ್ತಿ ಜೀವನೋಪಾಯಕ್ಕಾಗಿ ಯೇತಂಬಾಡಿ ಗ್ರಾಮಕ್ಕೆ ಬಂದನು, ಗ್ರಾಮದ ಜಮೀನುದಾರ ಕೆಂಪೇಗೌಡ ತನ್ನ ದನಗಳನ್ನು ನೋಡಿಕೊಳ್ಳಲು ಅವನನ್ನು ನೇಮಿಸಿಕೊಂಡನು. ಕಾಲಾನಂತರದಲ್ಲಿ, ಅವನು ಪಕ್ಕದ ನಿಟ್ಟೂರಿನ ಹಳ್ಳಿಯ ಹೊನ್ನಮ್ಮನನ್ನು ಪ್ರೀತಿಸುತ್ತಾನೆ
ಸ್ಥಳ ಪುರಾಣ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಯತ್ತಾಂಬಾಡಿ ಗ್ರಾಮದಲ್ಲಿರುವ ಶ್ರೀ ಕಾಳೇಶ್ವರ ದೇವಸ್ಥಾನದ ಸ್ಥಳ ಪುರಾಣವೇನೆಂದರೆ ಕಾಳಪ್ಪ ಎಂಬುವನು ದಕ್ಷಿಣ ದಿಕ್ಕಿನಿಂದ ಕೆಲಸ ಹುಡುಕಿಕೊಂಡು ಯತ್ತಂಬಾಡಿ ಗ್ರಾಮಕ್ಕೆ ಬರುತ್ತಾನೆ. ಯತ್ತಂಬಾಡಿ ಗ್ರಾಮದ ಕೆಂಪೇಗೌಡ ಎಂಬುವರ ಮನೆಯಲ್ಲಿ ಮನೆಯಲ್ಲಿ ದನಗಳನ್ನು ಮೇಯಿಸಿಕೊಂಡು ಕಾಲ ಕಳೆಯುತ್ತಿರುತ್ತಾನೆ. ಈತನು ದನ ಮೇಯಿಸಲು ಹೋಗುತ್ತಿದ್ದಾಗ ನಿಟ್ಟೂರು ಗ್ರಾಮದ ಗಂಗಾಮತ ಜಾತಿಯ ಹೊನ್ನಮ್ಮ ಎಂಬುವಳ ಪರಿಚಯವಾಗಿರುತ್ತದೆ. ಈ ಪರಿಚಯ ಕಾಲ ಕಳೆದಂತೆ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಒಂದು ದಿವಸ ದನಗಳನ್ನು ಮೇಯಿಸಲು ಭೀಮನಕಿಂಡಿ ಬೆಟ್ಟಕ್ಕೆ ಹೋಗಿರುವಾಗ ಕಾಳಪ್ಪ ದನಗಳನ್ನು ಬಿಟ್ಟು ಕಾಡಿನ ಮರದ ಕೆಳೆಗೆ ಗಾಢವಾದ ನಿದ್ರೆಯಲ್ಲಿರುತ್ತಾನೆ ಸಾಯಂಕಾಲದ ನಂತರ ದನಗಳು ಊರಿಗೆ ಹಿಂದಿರುಗುತ್ತವೆ. ಮಾರ್ಗ ಮಧ್ಯದಲ್ಲಿ ನಿಟ್ಟೂರು ಗ್ರಾಮದ ಗೌಡರ ಹೊಲಕ್ಕೆ ದನಗಳು ನುಗ್ಗಿ...ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಯತ್ತಾಂಬಾಡಿ ಗ್ರಾಮದಲ್ಲಿರುವ ಶ್ರೀ ಕಾಳೇಶ್ವರ ದೇವಸ್ಥಾನದ ಸ್ಥಳ ಪುರಾಣವೇನೆಂದರೆ ಕಾಳಪ್ಪ ಎಂಬುವನು ದಕ್ಷಿಣ ದಿಕ್ಕಿನಿಂದ ಕೆಲಸ ಹುಡುಕಿಕೊಂಡು ಯತ್ತಂಬಾಡಿ ಗ್ರಾಮಕ್ಕೆ ಬರುತ್ತಾನೆ. ಯತ್ತಂಬಾಡಿ ಗ್ರಾಮದ ಕೆಂಪೇಗೌಡ ಎಂಬುವರ ಮನೆಯಲ್ಲಿ ಮನೆಯಲ್ಲಿ ದನಗಳನ್ನು ಮೇಯಿಸಿಕೊಂಡು ಕಾಲ ಕಳೆಯುತ್ತಿರುತ್ತಾನೆ. ಈತನು ದನ ಮೇಯಿಸಲು ಹೋಗುತ್ತಿದ್ದಾಗ ನಿಟ್ಟೂರು ಗ್ರಾಮದ ಗಂಗಾಮತ ಜಾತಿಯ ಹೊನ್ನಮ್ಮ ಎಂಬುವಳ ಪರಿಚಯವಾಗಿರುತ್ತದೆ. ಈ ಪರಿಚಯ ಕಾಲ ಕಳೆದಂತೆ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಒಂದು ದಿವಸ ದನಗಳನ್ನು ಮೇಯಿಸಲು ಭೀಮನಕಿಂಡಿ ಬೆಟ್ಟಕ್ಕೆ ಹೋಗಿರುವಾಗ ಕಾಳಪ್ಪ ದನಗಳನ್ನು ಬಿಟ್ಟು ಕಾಡಿನ ಮರದ ಕೆಳೆಗೆ ಗಾಢವಾದ ನಿದ್ರೆಯಲ್ಲಿರುತ್ತಾನೆ ಸಾಯಂಕಾಲದ ನಂತರ ದನಗಳು ಊರಿಗೆ ಹಿಂದಿರುಗುತ್ತವೆ. ಮಾರ್ಗ ಮಧ್ಯದಲ್ಲಿ ನಿಟ್ಟೂರು ಗ್ರಾಮದ ಗೌಡರ ಹೊಲಕ್ಕೆ ದನಗಳು ನುಗ್ಗಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಇದನ್ನು ಕಂಡ ನಿಟ್ಟೂರು ಗ್ರಾಮದ ಗೌಡನು ಈ ದನಗಳು ಯಾರದು ಎಂಬುದನ್ನು ತಿಳಿಯಲು ಹೊಲದಲ್ಲಿಯೇ ಬಂದೂಕು ಹಿಡಿದುಕೊಂಡು ಕಾದು ಕುಳಿತಿರುತ್ತಾನೆ ನಂತರ ಕಾಳಪ್ಪನಿಗೆ ಎಚ್ಚರವಾಗುತ್ತದೆ. ಆತುರದಿಂದ ಊರಿನ ಕಡೆಗೆ ದನಗಳು ಬರುವಾಗ ದನಗಳು ನಿಟ್ಟೂರಿನ ಗೌಡರ ಹೊಲದಲ್ಲಿ ಮೇಯುತ್ತಿರುವುದನ್ನು ಕಂಡು ದನಗಳನ್ನು ಹೊಡೆದು ಕೊಂಡು ಹೋಗಲು ಹೊಲಕ್ಕೆ ತೆರಳುತ್ತಾನೆ. ಇದನ್ನು ಕಂಡ ಗೌಡ ಕೋಪಗೊಂಡು ಬಂದೂಕಿನಿಂದ ಆತನ ಸೊಂಟಕ್ಕೆ ಗುರಿಯಿಟ್ಟು ಹೊಡೆಯುತ್ತಾನೆ, ಕಾಳಪ್ಪನು ತನ್ನ ತುಂಡು ಉಡುಗೆಯಿಂದ ರಕ್ತ ಹೊರಹೋಗದಂತೆ ಕಟ್ಟಿಕೊಂಡು ಯತ್ತಂಬಾಡಿ ಗ್ರಾಮಕ್ಕೆ ಬರುವಷ್ಟರಲ್ಲಿ ಆತನ ಪ್ರಾಣ ಹೋಗಿರುತ್ತದೆ. ಇದನ್ನು ಕಂಡ ಕೆಂಪೇಗೌಡನು ಕಟ್ಟಿಗೆಗಳನ್ನು ತಂದು ಕಾಳಪ್ಪನನ್ನು ಸುಡುತ್ತಿರುವ ವಿಷಯ ತಿಳಿದು ಆತನ ಹೆಂಡತಿ ಹೊನ್ನಮ್ಮನು ಸಹ ಬೆಂಕಿಗೆ ಹಾರಿ ಪ್ರಾಣ ಬಿಡುತ್ತಾಳೆ. ಈ ಚಿತೆಯಿದ್ದ ಜಾಗದಲ್ಲಿಯೆ ಆರು ತಿಂಗಳ ನಂತರ ಎರಡು ಲಿಂಗ ಐಕ್ಯವಾಗಿ ಇದರ ಸುತ್ತ ಹುತ್ತ ಬೆಳದಿರುತ್ತದೆ. ಈ ಹುತ್ತಕ್ಕೆ ಕೆಂಪೇಗೌಡರ ಹಸು ಪ್ರತಿ ದಿನ ಹಾಲು ಕರೆಯುತ್ತಿರುತ್ತದೆ. ಈ ಹಸುವಿನ ಕರುವಿಗೆ ಹಾಲು ಇಲ್ಲದೆ ಬಡಕಲಾಗಿರುವುದನ್ನು ಕಂಡು ಕೆಂಪೇಗೌಡ ಒಂದು ದಿನ ಆ ಹಸುವನ್ನು ಹಿಂಬಾಲಿಸಿಕೊಂಡು ಹೋಗುತ್ತಾನೆ. ನಂತರ ರಾತ್ರಿ ಕೆಂಪೇಗೌಡನ ಕನಸಿನಲ್ಲಿ ಕಾಳಪ್ಪ ಮತ್ತು ಹೊನ್ನಮ್ಮ ಕಾಣಿಸಿಕೊಂಡು ಆ ಜಾಗದಲ್ಲಿ ಐಕ್ಯವಾಗಿ ಎರಡು ಲಿಂಗ ಮೂಡಿರುತ್ತವೆಂದು ತಿಳಿಸಿ ನಮಗೆ ದೇವಸ್ಥಾನವನ್ನು ಕಟ್ಟುವಂತೆ ಆಜ್ಞೆ ಮಾಡಿದ ಕಾರಣದಿಂದ ಆ ಜಾಗದಲ್ಲಿ ದೇವಸ್ಥಾನವನ್ನು ಕೆಂಪೇಗೌಡನು ಕಟ್ಟಿಸುತ್ತಾನೆ. ಆ ದೇವಸ್ಥಾನಕ್ಕೆ ಕಾಳೇಶ್ವರ ಎಂದು ಹೆಸರಿಡುತ್ತಾರೆ. ಶ್ರೀ ಕಾಳೇಶ್ವರ ದೇವಸ್ಥಾನಕ್ಕೆ ಗುರುವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.