ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಿಟ್ಟೆ, ಉಡುಪಿ - 574110, ಉಡುಪಿ .
Kemmannu Sri Durgaparameshwari Temple Nitte, Udupi - 574110, Udupi District [TM000288]
×
Temple History
ಸ್ಥಳ ಪುರಾಣ
ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ದ ಪರಿಚಯ
ಹಿಂದಿನಿಂದಲೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಇತಿಹಾಸಕ್ಕೆ ಆಕರವಾಗಿದೆ. ಇದು ಪ್ರಾಚಿನ ಕಲೆ , ಸಂಸ್ಕ್ಋತಿಗಳಿಗೆ ಆಙಶ್ರಯ ನೀಡಿ ಪೋಷಿಸಿಕೊಂಡು ಬಂದ ನಲೆ ಇಲ್ಲಿರುವ ಹಲವು ದೇವಾಲಯಗಳು ಶಿಲ್ಪಕಲೆಯ ಬೀಡಾಗಿ ಇತಿಹಾಸಕಾರರಿಗೆ ವಿಪುಲವಾದ ...ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ದ ಪರಿಚಯ
ಹಿಂದಿನಿಂದಲೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಇತಿಹಾಸಕ್ಕೆ ಆಕರವಾಗಿದೆ. ಇದು ಪ್ರಾಚಿನ ಕಲೆ , ಸಂಸ್ಕ್ಋತಿಗಳಿಗೆ ಆಙಶ್ರಯ ನೀಡಿ ಪೋಷಿಸಿಕೊಂಡು ಬಂದ ನಲೆ ಇಲ್ಲಿರುವ ಹಲವು ದೇವಾಲಯಗಳು ಶಿಲ್ಪಕಲೆಯ ಬೀಡಾಗಿ ಇತಿಹಾಸಕಾರರಿಗೆ ವಿಪುಲವಾದ ಸಾಮಾಗ್ರಿಯನ್ನು ಒದಗಿಸುತ್ತಿದೆ. ಇಲ್ಲಿ ನಿರಂತರ ನಾಗಾರಾಧನೆ , ದೈವಾರಾಧನೆಯ ಸಹಿತ ಗಣಪತಿ , ಶಿವ , ವಿಷ್ಣು , ದುರ್ಗೆ , ಸುಬ್ರಮಣ್ಯ ಸಹಿತ ದೇವರನ್ನು ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ಇದರಿಂದ ಇಲ್ಲಿನ ಜನರ ಆರಾಧನಾ ವ್ಯಾಪ್ತಿ ಹಾಗೂ ಪರಸ್ಪರ ಸಹಕಾರ ಮನೋಭಾವನೆಗಳು ವ್ಯೆಕ್ತವಾಗುತ್ತದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾ ಪರಮೆಶ್ವರಿ ದೇವಸ್ಥಾನವು ಕಾರ್ಕಳದಿಂದ ಸುಮಾರು 8 ಮೈಲಿ ದೂರದಲ್ಲಿ ಇರುವ ಪ್ರಸಿದ್ಧ ಕ್ಷೇತ್ರ . ಹಸಿರೇ ಉಸಿರಾಗಿ ಕಂಗೊಳಿಸುವ ಪ್ರಕೃತಿಯ ಮದ್ಯೆ ಇರುವ ದೇವಸ್ಥಾನ . ಸುಂದರವಾಗಿ ಕಂಗೊಳಿಸಿಸುತ್ತಿದೆ. ಈ ದೇವಳದಲ್ಲಿ ಅನಾದಿ ಕಾಲದಿಂದ ಪರಂಪರವಾಗಿ ಪೂಜಾದಿ ವಿನಿಯೋಗಗಳು ನಡೆದುಕೊಂಡು ಬರುತ್ತಿವೆ . ಆದರೆ ಶ್ರೀ ದೇವಳದ ಸ್ಥಾಪನೆ , ಅದರ ಪ್ರಾಚೀನತೆಯನ್ನು ದಾಖಲಿಸುವ ಯಾವುದೇ ಉಲ್ಲೇಖಗಳು ಸಂಶೋಧಕರಿಗೆ ಲಭ್ಯ ವಾಗಿರುವುದಿಲ್ಲ .
ಈ ದೇವಳದಲ್ಲಿ ಪೂಜಿಸಲ್ಪಡುವ ದೇವಿಯ ವಿಗ್ರಹವು ನಯನ ಮನೋಹರವಾಗಿದೆ. ದೇವಿಯನ್ನು ಪರಿಸರದ ಜನರು ಉಳ್ಳಾಲ್ತಿ ಎಂದು ಕರೆಯುತ್ತಾ ಬಂದಿದ್ದಾರೆ. ತುಳು ಭಾಷೆಯ ಈ ಶಬ್ದಕ್ಕೆ ಒಡತಿ ಅಂದರೆ ಜಗಜ್ಜನನಿ ಎಂಬ ವಿಶ್ವಾರ್ಥವಿದೆ ದೇವಿಯ ತನ್ನ ಭಕ್ತರನ್ನು ಮಕ್ಕಳಂತೆ ವಾತ್ಸಲ್ಯದಿಂದ ಕಾಪಾಡುತ್ತಾಳೆ ಎಂಬ ದ್ವನಿ ಇದರೆ ಹಿನ್ನಲೆಯಾಗಿದೆ. ತುಂಬಾ ಹಿಂದೆ ಈ ಪ್ರದೇಶದಲ್ಲಿ ದೇವಾಲಯಗಳೇ ಇರಲಿಲ್ಲ ಆಸ್ತಿಕ ಜನರು ದೇವರ ದರಶನಕ್ಕಾಗಿ ನಾಲ್ಕೈದು ಮೈಲು ದೂರ ಹೋಗುತ್ತಿದ್ದರು. ಪೂರ್ವದಲ್ಲಿ ಸಾಣೂರು, ಪಶ್ಚಿಮದಲ್ಲಿ ನಂದಳಿಕೆ, ದಕ್ಷಿಣದಲ್ಲಿ ನಕ್ರೆ ಎಂಬಲ್ಲಿನ ಶಿವಾಲಯಗಳು ಖ್ಯಾತಿಗಳಿಸಿದ್ದವು. ಆ ಕಾಲದಲ್ಲಿ ನೆಲೆಸಿದ್ದ ಜನ್ನಿ ಎಂಬ ಬ್ರಾಹ್ಮಣ ಕುಟುಂಬದ ಜನರು ವಾಸವಾಗಿದ್ದರು. ಜನ್ನಿಯರು ಈ ಮನೆತನದವರು ದೇವಿಯ ಭಕ್ತರೂ ಉಪಾಸಕರೂ ಆಗಿದ್ದರು. ದೇವಾಲಯವಿಲ್ಲದ ಕಾರಣ ಅವರು ದೂರದ ಕುಕ್ಕುಂದೂರು ಎಂಬಲಿ ದೇವಾಲಯಕ್ಕೆ ತೆರಳಿ ಶ್ರದ್ದಾಭಕ್ತಿಗಳಿಂದ ಉಪಾಸನೆಯನ್ನು ನಡೆಸುತ್ತಿದ್ದರು ತಮ್ಮ ಹಾಗೂ ಅನುಯಾಯಿಗಳಿಂದ ಕಾಣಿಕೆ ಮೊದಲಾದವನ್ನು ನಮರ್ಪಿಸುತ್ತಿದ್ದರು. ಈ ಮೂಲಕ ಗೌರವಸ್ಥರಾಗಿ ಹೆಸರು ಗಳಿಸದ್ದರು.
ಒಮ್ಮೆ ಅಲ್ಲಿ ಮಹೋತ್ಸವದ ಸಂಧರ್ಭದಲ್ಲಿ ಜಮ್ಮಿಯವರು ಹೊರೆಕಾಣಿಕೆ ಇತ್ಯಾದಿಗಳೊಂದಿಗೆ ದೇವಾಲಯಕ್ಕೆ ಹೊರಾಟಗ ಅವರನ್ನು ತಿರಸ್ಕರಿಸಿ ಉತ್ಸವವನ್ನು ಅವರು ತಲುಪುವ ಮೊದಲೇ ಆರಂಬಿಸಲಾಗಿತ್ತು. ಜನ್ನಿಯವರು ದೇವಾಲಯ ತಲುಪಿದ ಮೇಲೂ ಅವರನ್ನು ನಿರ್ಲಕ್ಷಿಸಲಾಗಿತ್ತು. ಭಕ್ತರಾದ ಜನ್ನಿಯವರಿಗೆ ಇದರಿಂದ ಅತೀವ ದುಃಖ, ಪಶ್ಚಾತ್ತಾಪವಾಗಿ ಕಣ್ಣಿರು ಧಾರಾಕಾರವಾಗಿ ಸುರಿಯಿತು. ದೇವಿಯ ಮುಂದೆ ಸ್ಥಂಭೀಭೂತರಾಗಿ ನಿಂತು ದೇವಿಯನ್ನು ಸ್ಮರಿಸಿ ದುಃಖಪಟ್ಟರು. ಪರಿವಾರದೊಂದಿಗೆ ತಾನು ತಂದಿದ್ದ ಹೊರೆಕಾಣಿಕೆಗಳನ್ನು ದೇವಿಯ ಸಾನಿಧ್ಯಕ್ಕರ್ಪಿಸಿ ತಾನಿರುವ ಕೆಮ್ಮಣ್ಣಿನಲ್ಲೇ ದೇವಿಯ ಸಾನ್ನಿಧಯವನ್ನಿ ಕಲ್ಪಸಿಕೊಂಡು ಧಾನಾತಿರೇಕದಲ್ಲಿ ಮುಳಗಿದರು. ಆ ಕಾಲದಲ್ಲಿ ಮೂಕಾಂಬಿಕಾ ಕೃಆಲೋಕಾ ದಾಕ್ಯಾಂಕಿತ ಫಲಪ್ರದಾ ಎಂಬಂತೆ ಲೋಕವೊಖ್ಯಾತಳೂ ಭಕ್ತರ ಇಷ್ಟಾರ್ಥ ಪ್ರದಾಯಿನಿಯೂ ಆದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದರು. ವೃತನಿಯಮಗಳಿಂದ ದೇವಿಯನ್ನು ಧ್ಯಾನ ಮಾಡಿದರು. ಲೋಕಪಾವನ ಎಂಬ ಬಿರುದನ್ನು ಪಡೆದ ಹೇ ತಾಯಿ ಬಾರಮ್ಮ ಶರಣರನ್ನು ಕಾಪಾಡುವ ತಾಯಿಯಾಗಿ ಬಾರಮ್ಮ ಎಂದು ವಿಧವಿಧವಾಗಿ ಜಪ ಪೂಜೆ, ಪೂನಶ್ಚರಣಾದಿಗಳಿಂದ ದೇವಿಯನ್ನು ಪ್ರಾರ್ಥೀಸಿದರು.
48 ದಿನಗಳ ನಿರಂತರ ಉಪಾಸನೆಯಿಂದ ಸೇವೆ ಮಾಡಿದರು. ಒಂದು ದಿ ರಾತ್ರಿ ಶರಣರ ರಕ್ಯಿಪಲಾದ ದೇವಿ ಮೂಕಾಂಬಿಕೆ ಜನ್ನಿಯವರಿಗೆ ಸ್ವಪ್ನದಲ್ಲಿ ಕಾಣಿಕಸಿಕೊಂಡು ಭಕ್ತನೆ ನಿನ್ನ ದೇಹ ದಂಡನೆಯನ್ನು ನಿಲ್ಲಿಸು. ಈ ವೃತೋಪವಾಸಗಳಿಂದ ನಿನಗೆ ಏನಾಗಬೇಕು? ಎಂದು ಕೇಳಿದಳು ಅದಕ್ಕೆ ಜನ್ನಿಯವರು ತಾಯಿ, ನಾನು ನಿನ್ನ ಸನ್ನಿದಿಗೆ ಬಂದು ಅನಿರ್ವಚನೀಯ ಆನಂದಾನುಭಾವವನ್ನು ಪಡೆದೆ.
ಉತ್ತರ ಭಾಗದಲ್ಲಿ ಭೂಮಿ ಒಡೆದು ಸಾಕ್ಷಾರ್ ಜಗನ್ಮಾತೆ ಅವಿರ್ಭಾವಿಸಿದಳು. ಸೇರಿದ ಜನಸ್ತೋಮ ಭಕ್ತಿಭಾವಗಳಿಂದ ಜಯಘೋಷ ಹಾಕಿದರು. ಜನ್ನಿಯವರು ಶ್ರೀ ದೇವಿಯ ದಯೆಯಿಂದ ನಮ್ಮ ಊರು ಪಾವನಾವಾಯಿತು. ನಮ್ಮ ಜನ್ಮ ಸಾರ್ಥಕವಾಯಿತು. ನಾವು ಧನ್ಯಾರಾದೆವು ಎಂದು ಆನಂದಾಶ್ರು ಸುರಿಸಿದರು. ಬ್ರಹ್ಮ ಕಲಶಾದಿ ಅನೇಕ ವಿಧ್ಯಕ್ತ ಪ್ರತಿಷ್ಟಾಪನಾ ಕಾರ್ಯಗಳು ಅತ್ಯಂತ ವೈಭವದಿಂದ ಸಾಂಗವಾಗಿ ನೆರವೇರಿದವು.