Screen Reader Access                 A-  A  A+ 
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೆಳಗಿನ ಪೇಟೆ, ಪಡುಬಿದ್ರಿ - 574111, ಉಡುಪಿ .
Sri Mahalingeshwara Mahaganapathi Temple, Kelagina Pete, Padubidri - 574111, Udupi District [TM000029]
×
Temple History

ಇತಿಹಾಸ

ನಾಡ ದೇಗುಲಗಳು ಸಂಸಾರ ಸಾಗರದಲ್ಲಿ ತೇಲುತ್ತಿರುವ ಬಾಳನೌಕೆಗಳಿಗೆ ಸನ್ಮಾರ್ಗದರ್ಶನ ದೀಪಸ್ತಂಭಗಳೆಂದು ಹೇಳುತ್ತಾರೆ. ಸಂಸಾರ ಸಾಗರದ ಬಿರಿಗಾಳಿಗಳಿಂದ ರಕ್ಷಣೆಯನ್ನು ಹೊಂದಿ ಈ ನೌಕೆಗಳನ್ನು ನಿಶ್ಚಿಂತೆಯ ದಡ ಸೇರಿಸುವಲ್ಲಿ ದೇವಳಗಳ ಪಾತ್ರ ಮಹತ್ತರವಾದುದು. ಉಡುಪಿ ಜಿಲ್ಲೆಯ ನಡ್ಸಾಲು ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯವು ತನ್ನದೇ ಆದ ಹಿರಿಮೆ ಗರಿಮೆಗಳಿಂದ ಸ್ಥಾನಿಕ ಮೌಲ್ಯಗಳಿಂದ ಊರ ಪರವೂರ ಭಕ್ತ ಮಹಾಶಯರ ಮನಸ್ಸಿನಂಗಳದಲ್ಲಿ ನೆಲೆಯೂರಿದೆ. 17ನೇ ರಾಷ್ಟೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ 35 ಕೀ.ಮೀ. ಹಾಗೂ ಉಡುಪಿಯಿಂದ 25 ಕಿ.ಮೀ ದೂರದಲ್ಲಿ ಹೆದ್ದಾರಿಯ ಪಶ್ಚಿಮ ಭಾಗದಲ್ಲಿರುವ ಈ ದೇವಾಲಯವು ಒಂದು ಸುಂದರ ತಾಣ. ಈ ದೇವಾಲಯಕ್ಕೆ ಪೌರಾಣಿಕ ಹಿನ್ನಲೆ ಇದೆ. ಇಲ್ಲಿಯ ಶ್ರೀ ಮಹಾಲಿಂಗೇಶ್ವರ ಲಿಂಗವು ಸಾಕ್ಷಾತ್ ಭೃಗು ಮಹರ್ಷಿಗಳಿಂದಲೇ ಸ್ಥಾಪಿತವಾದ ಬಗ್ಗೆ ಐತಿಹ್ಯವಿದೆ. ಕ್ಷತ್ರಿಯ ಸಂಹಾರದಿಂದ ಉಂಟಾದ ಮಲಿನತೆಯ ನಿವಾರಣೆಗಾಗಿ...

ಪೌರಾಣಿಕ ಹಿನ್ನೆಲೆ

ಈ ದೇವಳಕ್ಕೆ ಪೌರಾಣಿಕ ಹಿನ್ನಲೆ ಇದೆ . ಇಲ್ಲಿನ ಶ್ರೀ ಮಹಾಲಿಂಗೇಶ್ವರ ಲಿಂಗವು ಸಾಕ್ಷಾತ್ ಭೃಗು ಮಹರ್ಷಿ ಗಳಿಂದಲೇ ಸ್ಥಾಪಿತವಾದ ಬಗ್ಗೆ ಐತಿಹ್ಯವಿದೆ. ಕ್ಷತ್ರಿಯ ಸಂಹಾರದಿಂದ ಉಂಟಾದ ಮಲಿನತೆಯ ನಿವರಣೆಗಾಗಿ ಭಾರ್ಗವ ರಾಮನು (ಪರಶುರಾಮ) ಪಶ್ಚಿಮ ಕಡಲತೀರಕ್ಕೆ ಬಂದು ಇಲ್ಲಿನ ಪರಶಿವನನ್ನು ಭಜಿಸಿ ಅತೀ ಅಪೂರ್ವವೆನಿಸಿಸುವ ರುದ್ರಾಕ್ಷಿ ಶಿಲೆಯಲ್ಲಿ ನಿರ್ಮಿತವಾದ ವಿಘ್ನೇಶ್ವರ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಟಾಪಿಸಿದ ಬಗ್ಗೆ ಪ್ರತೀತಿ ಇದೆ.