ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ, ಉಡುಪಿ - 576222, ಉಡುಪಿ .
Sri Mahalingeshwara and Kalingeshwara Temple, Udupi - 576222, Udupi District [TM000290]
×
Temple History
ಇತಿಹಾಸ
II ಶ್ರೀ ಸುಬ್ರಹ್ಮಣ್ಯಾಯ ನಮಃ II
ಭಕ್ತಾಭಿಮಾನಿಗಳೇ,
ಕುಂದಾಪುರ ತಾಲೂಕು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಕ್ಷೇತ್ರವು ಕರಾವಳಿಯ ಹೆಸರಾಂತ ನಾಗಕ್ಷೇತ್ರವಾಗಿದ್ದು ಸಮಾರು 800 ವರ್ಷಗಳ ಇತಿಹಾಸವಿರುತ್ತದೆ. ರಾಷ್ಟ್ರೀಯ ಹೆದ್ಧಾರಿ 66 ರ ಕೋಟೇಶ್ವರ ದಿಂದ ಹಾಲಾಡಿಗೆ ಹೋಗುವ ರಸ್ತೆಯಲ್ಲಿ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಮಹಾ ಕಾರಣಿಕ ಕ್ಷೇತ್ರ. ಎರಡನೇ ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಈ ಕ್ಷೇತ್ರದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಅಷ್ಟೇ ಫಲದಾಯಕವೂ ಹೌದು ಎಂಬುದು ಪ್ರಾಜ್ಞರ ಅಭಿಮತ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ, ಶ್ರೀ ಕಾಳಾವರ ಕ್ಷೇತ್ರಕ್ಕೂ ಬಹಳ ಹೋಲಿಕೆ ಇದೆ. ಅಲ್ಲಿ ಹೊಳೆಯ ಮಧ್ಯ...II ಶ್ರೀ ಸುಬ್ರಹ್ಮಣ್ಯಾಯ ನಮಃ II
ಭಕ್ತಾಭಿಮಾನಿಗಳೇ,
ಕುಂದಾಪುರ ತಾಲೂಕು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಕ್ಷೇತ್ರವು ಕರಾವಳಿಯ ಹೆಸರಾಂತ ನಾಗಕ್ಷೇತ್ರವಾಗಿದ್ದು ಸಮಾರು 800 ವರ್ಷಗಳ ಇತಿಹಾಸವಿರುತ್ತದೆ. ರಾಷ್ಟ್ರೀಯ ಹೆದ್ಧಾರಿ 66 ರ ಕೋಟೇಶ್ವರ ದಿಂದ ಹಾಲಾಡಿಗೆ ಹೋಗುವ ರಸ್ತೆಯಲ್ಲಿ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಮಹಾ ಕಾರಣಿಕ ಕ್ಷೇತ್ರ. ಎರಡನೇ ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಈ ಕ್ಷೇತ್ರದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಅಷ್ಟೇ ಫಲದಾಯಕವೂ ಹೌದು ಎಂಬುದು ಪ್ರಾಜ್ಞರ ಅಭಿಮತ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ, ಶ್ರೀ ಕಾಳಾವರ ಕ್ಷೇತ್ರಕ್ಕೂ ಬಹಳ ಹೋಲಿಕೆ ಇದೆ. ಅಲ್ಲಿ ಹೊಳೆಯ ಮಧ್ಯ ಕಾಡಿನಲ್ಲಿ ( ಒಂದು ಕಾಲದಲ್ಲಿ ) ಶ್ರೀ ಕ್ಷೇತ್ರವಿದ್ದರೆ, ಇಲ್ಲಿ ಬಯಲು ಪ್ರದೇಶದಿಂದ ಆವರಿಸಿದ ಕಾಡಿನಲ್ಲಿ ಶ್ರೀ ಕ್ಷೇತ್ರವಿದೆ. ಅಲ್ಲಿ ಮೂಲಹುತ್ತಕ್ಕೆ ಪೂಜೆ, ಸೇವಾ ಕಾರ್ಯಗಳು ನಡೆದರೆ ಇಲ್ಲಿ ಸಹಾ ಹುತ್ತಕ್ಕೆ (ಬಾವಿ ಒಳಗಿಂದ ಮೇಲೆದ್ದು ಬಂದ - ಐತಿಹ್ಯ) ಎಲ್ಲಾ ಸೇವೆಗಳು ನಡೆಯುತ್ತದೆ. ಅದರಲ್ಲೂ ಕಾಳಿಂಗ ಎಂಬ ನಾಮಧೇಯದಲ್ಲಿರುವ ದೇವಾಲಯ ಶ್ರೀ ಕಾಳಾವರ ಕ್ಷೇತ್ರ ಮಾತ್ರ. ಆದ್ದರಿಂದಲೇ ಈ ಊರಿಗೆ ಕಾಳಾವರ ಎಂಬ ಹೆಸರು ಬಂದಿರಬಹುದು. ಅಲ್ಲದೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶಕ್ತಿಯ ಒಂದು ಭಾಗವೇ ಇಲ್ಲಿಗೆ ಹರಿದು ಬಂದು ನೆಲೆಸಿ ಹುತ್ತದ ರೂಪದಲ್ಲಿ ಪೂಜಿಸಲ್ಪಡುತ್ತಾ ಭಕ್ತರ ಅಭೀಷ್ಠಗಳು ನೆರವೇರುತ್ತವೆ. ಬಂದ ದಾರಿ ಸದಾ ಕಾಲ ನೀರಿನ ಒರತೆ ಇರುವ ಚಿಕ್ಕ ತೊರೆಯ ರೂಪದಲ್ಲಿ ಕಾಣಿಸುತ್ತದೆ. (ಐತಿಹ್ಯ).
ಇಲ್ಲಿ ಕಾಣುವ ದೇವರ ಕಲ್ಲಿನ ಮೂರ್ತಿಗಳು ಬೇರೆಲ್ಲೂ ನೋಡಲು ಸಿಗಲಾರವು. “ಚಿತ್ರಕೂಟ” ವೆಂಬ ಶಕ್ತಿ ಕೇಂದ್ರ ಮೂರ್ತಿಗಳ ಪಕ್ಕದಲ್ಲಿದೆ. ನೆಲದ ಮೇಲೆ ಕಲ್ಲಿನ ಮೂರ್ತಿಗಳನ್ನು ನೆಟ್ಟಿರುವುದು ಇಲ್ಲಿನ ವಿಶೇಷ. ಹುತ್ತದಲ್ಲಿ ಹುಟ್ಟಿ ಬೆಳೆದ ಮರಗಳ ತಲೆಭಾಗ ಯಾವಾಗಲೂ ಲಿಂಗ ಪೀಠದ ರೂಪದಲ್ಲಿದೆ.