II ಶ್ರೀ ಸುಬ್ರಹ್ಮಣ್ಯಾಯ ನಮಃ II ಭಕ್ತಾಭಿಮಾನಿಗಳೇ, ಕುಂದಾಪುರ ತಾಲೂಕು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಕ್ಷೇತ್ರವು ಕರಾವಳಿಯ ಹೆಸರಾಂತ ನಾಗಕ್ಷೇತ್ರ. ರಾಷ್ಟ್ರೀಯ ಹೆದ್ಧಾರಿ 66 ರ ಕೋಟೇಶ್ವರ ದಿಂದ ಹಾಲಾಡಿಗೆ ಹೋಗುವ ರಸ್ತೆಯಲ್ಲಿ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಮಹಾ ಕಾರಣಿಕ ಕ್ಷೇತ್ರ. ಎರಡನೇ ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಈ ಕ್ಷೇತ್ರದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಅಷ್ಟೇ ಫಲದಾಯಕವೂ ಹೌದು ಎಂಬುದು ಪ್ರಾಜ್ಞರ ಅಭಿಮತ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ, ಶ್ರೀ ಕಾಳಾವರ ಕ್ಷೇತ್ರಕ್ಕೂ ಬಹಳ ಹೋಲಿಕೆ ಇದೆ. ಅಲ್ಲಿ ಹೊಳೆಯ ಮಧ್ಯ ಕಾಡಿನಲ್ಲಿ ( ಒಂದು ಕಾಲದಲ್ಲಿ...