Sri Malai Mahadeshwaraswamy Temple, Mm Hills, Hanur - 571490, Chamarajanagara District [TM000292]
×
Temple History
ಇತಿಹಾಸ
ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮಹದೇಶ್ವರಬೆಟ್ಟ ಪರಮ ಪವಿತ್ರವಾದ ಧಾಮಿ೯ಕ ಕ್ಷೇತ್ರವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿ ಪಡೆದಿರುತ್ತದೆ. ನಿರಂಜನವಂಶರತ್ನಾಕರದ ಪ್ರಕಾರ ನಿಮಾ೯ಯ ಗಣೇಶ್ವರರೇ ಶ್ರೀ ಮಲೆ ಮಹದೇಶ್ವರರು
ಜನಪದ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಶ್ರೀ ಚಂದ್ರಶೇಖರಮೂತಿ೯ ಮತ್ತು ಉತ್ತರಾಜಮ್ಮರವರ ದಂಪತಿಗಳ ಪುತ್ರರಾದ ಶ್ರೀ ಮಲೆ ಮಹದೇಶ್ವರರು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಮೊದಲಿಗೆ ಶ್ರೀ ಶೈಲದ ಮಲ್ಲಿಕಾಜು೯ನ ಲಿಂಗದ ಬಳಿ ಕಾಣಿಸಿಕೊಂಡರೆಂದು ಸುಮಾರು 600 ವಷ೯ಗಳ ಹಿಂದೆ ಈ ಬೆಟ್ಟಕ್ಕೆ ಶ್ರೀ ಮಹದೇಶ್ವರರು ಶ್ರೀ ಶೈಲ ಕ್ಷೇತ್ರದ ಕಡೆಯಿಂದ ಸುತ್ತೂರು, ಕುಂತೂರು, ನಂತರ ಏಳು ಮಲೆಯ ನಡು ಮಲೆಗೆ ಬಂದರೆಂದೂ, ಈ ಪ್ರದೇಶವು ತಮ್ಮ ತಪಸ್ಸಿಗೆ ಬಹಳ ಯೋಗ್ಯವಾದುದೆಂಬುದನ್ನು ಕಂಡು ಈಗ ಹಾಲಿ ಇರುವ ದೇವಾಲಯದ ಪ್ರದೇಶವನ್ನು ತಮ್ಮ ತಪೋ ಭೂಮಿಯಾಗಿ ಆರಿಸಿದರೆಂದೂ,...ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮಹದೇಶ್ವರಬೆಟ್ಟ ಪರಮ ಪವಿತ್ರವಾದ ಧಾಮಿ೯ಕ ಕ್ಷೇತ್ರವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿ ಪಡೆದಿರುತ್ತದೆ. ನಿರಂಜನವಂಶರತ್ನಾಕರದ ಪ್ರಕಾರ ನಿಮಾ೯ಯ ಗಣೇಶ್ವರರೇ ಶ್ರೀ ಮಲೆ ಮಹದೇಶ್ವರರು
ಜನಪದ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಶ್ರೀ ಚಂದ್ರಶೇಖರಮೂತಿ೯ ಮತ್ತು ಉತ್ತರಾಜಮ್ಮರವರ ದಂಪತಿಗಳ ಪುತ್ರರಾದ ಶ್ರೀ ಮಲೆ ಮಹದೇಶ್ವರರು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಮೊದಲಿಗೆ ಶ್ರೀ ಶೈಲದ ಮಲ್ಲಿಕಾಜು೯ನ ಲಿಂಗದ ಬಳಿ ಕಾಣಿಸಿಕೊಂಡರೆಂದು ಸುಮಾರು 600 ವಷ೯ಗಳ ಹಿಂದೆ ಈ ಬೆಟ್ಟಕ್ಕೆ ಶ್ರೀ ಮಹದೇಶ್ವರರು ಶ್ರೀ ಶೈಲ ಕ್ಷೇತ್ರದ ಕಡೆಯಿಂದ ಸುತ್ತೂರು, ಕುಂತೂರು, ನಂತರ ಏಳು ಮಲೆಯ ನಡು ಮಲೆಗೆ ಬಂದರೆಂದೂ, ಈ ಪ್ರದೇಶವು ತಮ್ಮ ತಪಸ್ಸಿಗೆ ಬಹಳ ಯೋಗ್ಯವಾದುದೆಂಬುದನ್ನು ಕಂಡು ಈಗ ಹಾಲಿ ಇರುವ ದೇವಾಲಯದ ಪ್ರದೇಶವನ್ನು ತಮ್ಮ ತಪೋ ಭೂಮಿಯಾಗಿ ಆರಿಸಿದರೆಂದೂ, ಇವರು ಬಾಲಯೋಗಿಯೂ, ಈಶ್ವರನ ಅವತಾರವೆಂತಲೂ, ಮಹದೇಶ್ವರರು ಹುಲಿಯನ್ನು ತಮ್ಮ ವಾಹನವಾಗಿಟ್ಟುಕೊಂಡು ಬೆಟ್ಟಗುಡ್ಡಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶದಲೆಲ್ಲಾ ಸಂಚರಿಸಿ, ತಮ್ಮ ಬಾಲ್ಯ, ಯೌವನ, ಮುಪ್ಪಿನ ಕಾಲವನ್ನು ನಡುಮಲೆಯಲ್ಲೇ ಕಳೆಯುತ್ತಾ ಅವರು ತಮ್ಮ ಯೋಗಿಕ ಶಕ್ತಿಯಿಂದ ಅನೇಕ ಮಹಿಮೆಗಳನ್ನು ಪ್ರದಶಿ೯ಸುತ್ತಾ ಅನೇಕ ಪವಾಡಗಳನ್ನು ನಡೆಸಿರುತ್ತಾರೆ.
ಶ್ರೀ ಮಹದೇಶ್ವರರು ಈ ಬೆಟ್ಟದ ಸುತ್ತ ವಾಸವಾಗಿದ್ದ ಬೇಡ ಮತ್ತು ಸೋಲಿಗರ ಜನಾಂಗದವರ ಬದುಕಿನಲ್ಲಿ ಮಹತ್ತರ ಪರಿವತ೯ನೆಯನ್ನು ತಂದು ಶಿವಯೋಗಿ ಸಿದ್ದಿಯ ಮೂಲಕ ಜನತೆಯ ಕಷ್ಟಕಾಪ೯ಣ್ಯಗಳನ್ನು ಪರಿಹರಿಸಿ ಬೇಡರು ಮತ್ತು ಗುಡ್ಡಗಾಡು ಜನರಿಗೆ ಲಿಂಗಧಾರಣೆ ಮಾಡಿ ಇವರನ್ನು ವೀರಶೈವ ಧಮ೯ಕ್ಕೆ ಮಾಪ೯ಡಿಸಿ, ಈ ಬೇಡಗಂಪಣ ಜನಾಂಗದವರಿಂದಲೇ ದೇವಾಲಯದಲ್ಲಿ ಪೂಜಾ ಕೈಂಕಯ೯ಗಳನ್ನು ಕೈಗೊಳ್ಳುವಂತೆ ಅನುಗ್ರಹಿಸಿದರೆಂದು, ಮಾನವ ನೆಲೆಯಿಂದ ದೈವತ್ವದ ನೆಲೆಗೇರಿ ಭಕ್ತರ ಹೃದಯ ಮಂದಿರದಲ್ಲಿ ಮಹಾತ್ಮರು ನೆಲೆಗೊಂಡು ಆರಾಧ್ಯ ಮೂತಿ೯ಯಾಗಿ ನಡುಮಲೆಯಲ್ಲಿ ಲಿಂಗರೂಪಿಯಾಗಿ ಪೂಜೆಗೊಳ್ಳುತ್ತಿವವರೇ ಶ್ರೀ ಮಲೆಯ ಮಹದೇಶ್ವರರು.