ಶ್ರೀ ವೀರಭದ್ರೇಶ್ವರ ದೇವಸ್ಥಾನ, ಚಾಂಗಲೇರ, ಬೀದರ್ - 585227, ಬೀದರ್ .
Sri Veerabhadreshwar temple, Changler, Bidar - 585227, Bidar District [TM000030]
×
Temple History
ಇತಿಹಾಸ
400 ವರ್ಷದ ಹಿಂದೆ ಶ್ರೀ ಗುರುಲಿಂಗ ಮುನಿ ಪುಂಗರವರ ಶೇವಕನಾದ ಸಂಗ್ರಾಮನಿಗೆ ದಿಕ್ಷೆ ಮಾಡಿ ಮಂತ್ರೊಪದೇಶವನ್ನು ಹಾಗು ಶಕ್ತಿ ಮಂತ್ರವನ್ನು ಉಪದೇಶ ಮಾಡಿದರು. ನಂತರ ಅವನು ದೇವಗಿರಿ ದೇವಿಯ ವಾಸವಾದ ಸ್ಥಾನಕ್ಕೆ ಕಳುಹಿಸಿ ಅಲ್ಲಿ ತಪೋನುಷ್ಠಾನ ಮಾಡಲು ಹೆಳಿ ಕಳುಹಿಸಿದರು, ಅಲ್ಲಿ ಸಂಗ್ರಾಮನು ತಪೋನುಷ್ಠಾನವನ್ನು ಮಾಡಿ ಅದರ ಪ್ರಭಾದಿಂದ ಹೈದ್ರಬಾದ ನಿಜಾಮನು 103 ಹಳ್ಳಿ ಉಂಬಳ್ಳಿ ಬರೆದು ಕೋಟ್ಟರು. ಅಲ್ಲಿಯೆ ರಾಜನಾಗಿ 103 ಹಳ್ಳಿಗಳನ್ನು ಆಳತೋಡಗಿದನು, ಮುಂದೆ ಅವನ ಸ್ವಪ್ನದಲ್ಲಿ ದೇವಿಯು ಬಂದು ಅಲ್ಲಿಂದ ನಾಲ್ಕು ಕೂಗಳಲೆಯ ಮೆಲೆ ನನ್ನದೊಂದು ಮಂದಿರವಿದೆ ನನ್ನ ಪತಿದೇವನು ನನ್ನ ಸನಿಹದಲ್ಲಿ ಇರಬಯಿಸಿದ್ದಾನೆ, ಕಾರಣ ನನ್ನ ಮಂದಿರದಲ್ಲಿಯ ಮೂರ್ತಿಯನ್ನು ತೆಗೆದು ನನ್ನ ಪತಿಯ ಮೂರ್ತಿಯನ್ನು ವಿಧಿಯತ್ತಾಗಿ ಸ್ಥಾಪಿಸು ಎಂದು ಮರೆಯಾದ. ಆಗ ಸಂಗ್ರಾಮನು ತನಗೆ ಬೆಕಾದವರ ಮುಂದೆ...400 ವರ್ಷದ ಹಿಂದೆ ಶ್ರೀ ಗುರುಲಿಂಗ ಮುನಿ ಪುಂಗರವರ ಶೇವಕನಾದ ಸಂಗ್ರಾಮನಿಗೆ ದಿಕ್ಷೆ ಮಾಡಿ ಮಂತ್ರೊಪದೇಶವನ್ನು ಹಾಗು ಶಕ್ತಿ ಮಂತ್ರವನ್ನು ಉಪದೇಶ ಮಾಡಿದರು. ನಂತರ ಅವನು ದೇವಗಿರಿ ದೇವಿಯ ವಾಸವಾದ ಸ್ಥಾನಕ್ಕೆ ಕಳುಹಿಸಿ ಅಲ್ಲಿ ತಪೋನುಷ್ಠಾನ ಮಾಡಲು ಹೆಳಿ ಕಳುಹಿಸಿದರು, ಅಲ್ಲಿ ಸಂಗ್ರಾಮನು ತಪೋನುಷ್ಠಾನವನ್ನು ಮಾಡಿ ಅದರ ಪ್ರಭಾದಿಂದ ಹೈದ್ರಬಾದ ನಿಜಾಮನು 103 ಹಳ್ಳಿ ಉಂಬಳ್ಳಿ ಬರೆದು ಕೋಟ್ಟರು. ಅಲ್ಲಿಯೆ ರಾಜನಾಗಿ 103 ಹಳ್ಳಿಗಳನ್ನು ಆಳತೋಡಗಿದನು, ಮುಂದೆ ಅವನ ಸ್ವಪ್ನದಲ್ಲಿ ದೇವಿಯು ಬಂದು ಅಲ್ಲಿಂದ ನಾಲ್ಕು ಕೂಗಳಲೆಯ ಮೆಲೆ ನನ್ನದೊಂದು ಮಂದಿರವಿದೆ ನನ್ನ ಪತಿದೇವನು ನನ್ನ ಸನಿಹದಲ್ಲಿ ಇರಬಯಿಸಿದ್ದಾನೆ, ಕಾರಣ ನನ್ನ ಮಂದಿರದಲ್ಲಿಯ ಮೂರ್ತಿಯನ್ನು ತೆಗೆದು ನನ್ನ ಪತಿಯ ಮೂರ್ತಿಯನ್ನು ವಿಧಿಯತ್ತಾಗಿ ಸ್ಥಾಪಿಸು ಎಂದು ಮರೆಯಾದ. ಆಗ ಸಂಗ್ರಾಮನು ತನಗೆ ಬೆಕಾದವರ ಮುಂದೆ ಸ್ವಪ್ನದ ಸುದ್ದಯನ್ನು ಹೆಳಿದನು, ಆದರೆ ಆ ಸ್ವಾಮಿ ಎಲ್ಲಿದ್ದಾನೆ ಎಂದು ಚಿಂತಿತನಾದ ಆಗ ವೀರಭದ್ರ ಸ್ವಾಮಿಯು ಸ್ವಪ್ನದಲ್ಲಿ ಬಂದು ನಾನು ಒಂದು ಹೋಲದಲ್ಲಿ ಇದ್ದೆನೆ, ನನ್ನನ್ನು ಒಕ್ಕಲಿಗನೊಬ್ಬ ನೇಗಿಲಕ್ಕೆ ಕಟ್ಟಿ ಉಳೂಮೆ ಮಾಡುತಲಿದ್ದಾನೆ, ದಿನವು ಸಂಜೆಯ ತನಕ ಹೋಲ ಹೋಡೆದು ಅಲ್ಲಿಯೆ ವಗೆಯುತ್ತಾನೆ ನಾನು ಮೋದಲಿನ ಸ್ಥಾನದಲ್ಲಿಯೆ ಇರುತ್ತಿದ್ದೆ ಮತ್ತೆ ಮರುದಿವಸ ಎತ್ತಿ ತಂದು ನೆಗಿಲಕ್ಕೆ ಕಟ್ಟಿ ಹೋಡೆಯುತ್ತಿದ್ದ ಹಿಗೆ ನಡೆಯುತ್ತಲಿದ್ದು ಇದನ್ನು ಪರಿಕ್ಷಿಸಿ ನನ್ನನ್ನು ದೇವಿ ಮಂದಿರದಲ್ಲಿನ ನನ್ನ ಮೂರ್ತಿಯನ್ನು ತೆಗೆದು ನಿನ್ನ ಗುರುಗಳ ಹಸ್ತದಿಂದ ಶಾಸ್ತೋತ್ಸವಾಗಿ ಸ್ಥಾಪಿಸಿ ಎಂದು ಹೆಳಿ ಮರೆಯಾದ. ಆಗ ಪರಿಕ್ಷಿಸಿ ಆ ಯಾವ ಶೀಲಮೂರ್ತಿಯನ್ನು ತಂದು ಮರೆಯಾದ. ೧೭೪೧ ಇದನ್ನು ಸ್ಥಾಪಿಸಲಾಗಿದೆ ಎಂದು ಹಸ್ಥ ಪ್ರತಿಯಲ್ಲಿ ಬರೆಯಲಾಗಿದೆ, ಮತ್ತು ಆ ಗುರುಗಳ ಪರಂಪರೆಯವರೆ ಈಗ ನಾವಿದ್ದು ನಮ್ಮಲ್ಲಿಯ ಆಧಾರದ ಮೆಲೆ ಕಳುಹಿಸಿ ಕೋಟ್ಟಿದ್ದೆವೆ.
ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಿಠಾಧಿಕಾರಿಗಳು ಶ್ರೀ ಷಬ್ರ ಗುರುಲಿಂಗ ಶೀವಾಚಾರ್ಯಾ ಹಿರೇಮಠ ಚಾಂಗಲೇರ ಚಿಟಗುಪ್ಪಾ.