ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಖಂಡೋಬಾ ದೇವಸ್ಥಾನ, ಖಾನಾಪುರ, ಬೀದರ್ - 585327, ಬೀದರ್ .
Sri Kshetra Mailar Mallanna Khandoba Temple, Khanapur, Bidar - 585327, Bidar District [TM000031]
×
Temple History
ಇತಿಹಾಸ
| ಶಿವಾ ಮಲ್ಹಾರಿ ಏಳುಕೋಟಿ – ಏಳುಕೋಟಿ ಉಘೇ ||
ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೋಬಾ) ದೇವಸ್ಥಾನವು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದಲ್ಲಿದ್ದು, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಈ ಪುಣ್ಯ ಕ್ಷೇತ್ರದಲ್ಲಿ ಸಾಕ್ಷಾತ್ ಶಿವನೇ ಮಾರ್ಥಂಡ ಭೈರವನ ರೂಪದಲ್ಲಿ ನೆಲೆಸಿದ್ದಾನೆ. ಪ್ರೇಮಪೂರ ಎಂಬ ಹೆಸರಿನಿಂದ ಪವಿತ್ರತೆಯನ್ನು ಪಡೆದುಕೊಂಡಿರುವ ಈ ಪುಣ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟತೆ, ಪರಂಪರೆ, ಇತಿಹಾಸ, ಪೌರಾಣಿಕ ಕಥೆಯನ್ನು ಹೊಂದಿದೆ. ಒoದಾನೊoದು ಕಾಲದಲ್ಲಿ ಭೂಲೋಕದ ಮೇಲೆ ಮಲ್ಲಾಸುರ-ಮಣಿಕಾಸುರ ಎಂಬ ದೈತ್ಯ ಸಹೋದರರು ಸುಪ್ತಋಷಿಗಳಿಗೆ, ಅಮಾಯಕ ಜನರಿಗೆ, ಶಿಶು-ಪಕ್ಷಿ ಪ್ರಾಣಿಗಳಿಗೆ ಕಾಟವನ್ನು ಕೊಡುತ್ತಿರುವಾಗ ಸಾಕ್ಷಾತ್ ಪರಮಾತ್ಮನೇ ಮಾರ್ಥಂಡ ಭೈರವನ ರೂಪದಲ್ಲಿ, ಅಶ್ವರೂಢನಾಗಿ ಖಡ್ಗವನ್ನು ಹಿಡಿದುಕೊಂಡು, ಮಹಾಮಾರಿ ಘೃತಮಾರಿ ಮತ್ತು ಸಪ್ತಕೋಟಿ ದೇವ ಗಣಗಳ ಜೊತೆ ಮೈಲಾರಕ್ಕೆ ಬಂದು, ದುಷ್ಟ...| ಶಿವಾ ಮಲ್ಹಾರಿ ಏಳುಕೋಟಿ – ಏಳುಕೋಟಿ ಉಘೇ ||
ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೋಬಾ) ದೇವಸ್ಥಾನವು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದಲ್ಲಿದ್ದು, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಈ ಪುಣ್ಯ ಕ್ಷೇತ್ರದಲ್ಲಿ ಸಾಕ್ಷಾತ್ ಶಿವನೇ ಮಾರ್ಥಂಡ ಭೈರವನ ರೂಪದಲ್ಲಿ ನೆಲೆಸಿದ್ದಾನೆ. ಪ್ರೇಮಪೂರ ಎಂಬ ಹೆಸರಿನಿಂದ ಪವಿತ್ರತೆಯನ್ನು ಪಡೆದುಕೊಂಡಿರುವ ಈ ಪುಣ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟತೆ, ಪರಂಪರೆ, ಇತಿಹಾಸ, ಪೌರಾಣಿಕ ಕಥೆಯನ್ನು ಹೊಂದಿದೆ. ಒoದಾನೊoದು ಕಾಲದಲ್ಲಿ ಭೂಲೋಕದ ಮೇಲೆ ಮಲ್ಲಾಸುರ-ಮಣಿಕಾಸುರ ಎಂಬ ದೈತ್ಯ ಸಹೋದರರು ಸುಪ್ತಋಷಿಗಳಿಗೆ, ಅಮಾಯಕ ಜನರಿಗೆ, ಶಿಶು-ಪಕ್ಷಿ ಪ್ರಾಣಿಗಳಿಗೆ ಕಾಟವನ್ನು ಕೊಡುತ್ತಿರುವಾಗ ಸಾಕ್ಷಾತ್ ಪರಮಾತ್ಮನೇ ಮಾರ್ಥಂಡ ಭೈರವನ ರೂಪದಲ್ಲಿ, ಅಶ್ವರೂಢನಾಗಿ ಖಡ್ಗವನ್ನು ಹಿಡಿದುಕೊಂಡು, ಮಹಾಮಾರಿ ಘೃತಮಾರಿ ಮತ್ತು ಸಪ್ತಕೋಟಿ ದೇವ ಗಣಗಳ ಜೊತೆ ಮೈಲಾರಕ್ಕೆ ಬಂದು, ದುಷ್ಟ ದೈತ್ಯರನ್ನು “ಮಾರ್ಗಶಿರ ಮಾಸ” ಚಂಪಾಷಷ್ಠಿ” ದಿನದಂದು ಶಿಕ್ಷೆ ಕೊಡುತ್ತಾನೆ. ದುಷ್ಟ ದೈತ್ಯರ ಅಹಂಕಾರ ಮುರಿದು ಭೂಲೋಕದ ಮೇಲೆ ಮತ್ತೆ ಶಾಂತಿಯನ್ನು ಸ್ಥಾಪಿಸುತ್ತಾನೆ.
ಪ್ರತಿ ವರ್ಷ “ಚಟ್ಟಿ ಅಮವಾಸ್ಯೆಯಿಂದ, ಎಳ್ಳು ಅಮವಾಸ್ಯೆ ವರೆಗೆ, ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ, ಜಾತ್ರಾ ಸಮಯದಲ್ಲಿ ಐದು ಬಾರಿ ದೇವರ ಪಲ್ಲಕ್ಕಿ ಉತ್ಸವ, ಸೋಮವತಿ ಅಮವಾಸ್ಯೆ ಮತ್ತು “ವಿಜಯ ದಶಮಿ” ರಂದು ದೇವರ ಮೆರವಣಿಗೆ ತೆಗೆಯಲಾಗುತ್ತದೆ.“ಖೊಬ್ಬರಿ-ಭಂಡಾರ” ಮಿಶ್ರಣ ಮಾಡಿ ಹಾರಿಸುವುದು, ಮತ್ತು “ವಗ್ಗಯ್ಯರ ಕೋಟಂಬಿ ತುಂಬಿ” ಅವರಿಗೆ ಊಟ ಮಾಡಿಸುವುದು ಇಲ್ಲಿನ ವಿಶೇಷತೆ.