ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿ, ದಕ್ಷಿಣ ಕನ್ನಡ - 574219, ದಕ್ಷಿಣ ಕನ್ನಡ .
Sri Rajarajeshwari Temple, Polali, Dakshina Kannada - 574219, Dakshina Kannada District [TM000040]
×
Temple History
ಇತಿಹಾಸ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು 2000 ವರ್ಷಗಳ ಮಿಗಿಲಾದ ಇತಿಹಾಸವುಳ್ಳ ದೇವಸ್ಥಾನವೆಂದು ಪಂಡಿತ ಪ್ರಾಜ್ಞರ ಅಭಿಪ್ರಾಯ ಈ ದೇವಸ್ಥಾನವು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಬೆಟ್ಟಗುಡ್ಡ, ಹೊಲಗದ್ದೆ, ತೋಟಗಳ ಮಧ್ಯೆದಲ್ಲಿ ಫಲ್ಗುಣಿ ನದಿಯ ಎಡದಂಡೆಯ ಮೇಲಿದೆ.
ಪುರಾಣ ಕಥೆಯ ಪ್ರಕಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಇತಿಹಾಸವು ಹೀಗಿದೆ: ಹಿಂದೆ ಸುರಥ ಮಹಾರಾಜನು ದಕ್ಷಿಣ ಭಾರತದ ಚಕ್ರಾಧಿಪತಿಯಾಗಿದ್ದು, ಈತನ ಏಳಿಗೆಯನ್ನು ಸಹಿಸದ ಮಂತ್ರಿಗಳ ಕುಯುಕ್ತಿಯಿಂದ ಶತ್ರುಗಳ ಆಕ್ರಮಣದಿಂದ ಸೋಲುಂಟಾಗಿ ತನ್ನ ಮಾನ ಪ್ರಾಣ ಉಳಿಸುವ ಸಲುವಾಗಿ ನಾಡನ್ನು ಬಿಟ್ಟು ಕಾಡನ್ನು ಸೇರಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮುಕ್ತಿಯ ಸಾಧನೆಗೆ ದಾರಿ ಹುಡುಕುತ್ತಿರುವಾಗ ಈತನಂತೆ ಹೆಂಡತಿ ಮಕ್ಕಳಿಂದ ತಿರಸ್ಕೃತನಾದ ಸಮಾಧಿ ಎಂಬ ವೈಶ್ಯ ಮುಕ್ತಿಪಥವನ್ನು ಅರಸುತ್ತಾ ಅರಣ್ಯ ಮಾರ್ಗವಾಗಿ ಬರುತ್ತಿರಲು ಸುರಥನ ಸ್ನೇಹವಾಗಿ...ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು 2000 ವರ್ಷಗಳ ಮಿಗಿಲಾದ ಇತಿಹಾಸವುಳ್ಳ ದೇವಸ್ಥಾನವೆಂದು ಪಂಡಿತ ಪ್ರಾಜ್ಞರ ಅಭಿಪ್ರಾಯ ಈ ದೇವಸ್ಥಾನವು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಬೆಟ್ಟಗುಡ್ಡ, ಹೊಲಗದ್ದೆ, ತೋಟಗಳ ಮಧ್ಯೆದಲ್ಲಿ ಫಲ್ಗುಣಿ ನದಿಯ ಎಡದಂಡೆಯ ಮೇಲಿದೆ.
ಪುರಾಣ ಕಥೆಯ ಪ್ರಕಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಇತಿಹಾಸವು ಹೀಗಿದೆ: ಹಿಂದೆ ಸುರಥ ಮಹಾರಾಜನು ದಕ್ಷಿಣ ಭಾರತದ ಚಕ್ರಾಧಿಪತಿಯಾಗಿದ್ದು, ಈತನ ಏಳಿಗೆಯನ್ನು ಸಹಿಸದ ಮಂತ್ರಿಗಳ ಕುಯುಕ್ತಿಯಿಂದ ಶತ್ರುಗಳ ಆಕ್ರಮಣದಿಂದ ಸೋಲುಂಟಾಗಿ ತನ್ನ ಮಾನ ಪ್ರಾಣ ಉಳಿಸುವ ಸಲುವಾಗಿ ನಾಡನ್ನು ಬಿಟ್ಟು ಕಾಡನ್ನು ಸೇರಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮುಕ್ತಿಯ ಸಾಧನೆಗೆ ದಾರಿ ಹುಡುಕುತ್ತಿರುವಾಗ ಈತನಂತೆ ಹೆಂಡತಿ ಮಕ್ಕಳಿಂದ ತಿರಸ್ಕೃತನಾದ ಸಮಾಧಿ ಎಂಬ ವೈಶ್ಯ ಮುಕ್ತಿಪಥವನ್ನು ಅರಸುತ್ತಾ ಅರಣ್ಯ ಮಾರ್ಗವಾಗಿ ಬರುತ್ತಿರಲು ಸುರಥನ ಸ್ನೇಹವಾಗಿ ಇಬ್ಬರ ಮಾರ್ಗವು ಮುಕ್ತಿಯೇ ಎಂದು ಅರಿತರು. ಕಾಡಿನಲ್ಲಿ ಸಂಚರಿಸುತ್ತಿರುವಾಗ ಸುಮೇಧ ಮುನಿಯ ಆಶ್ರಮ ಕಂಡು ಮುನಿಯಲ್ಲಿ ತಮ್ಮ ಅಳಲನ್ನು/ದುಃಖವನ್ನು ತೋಡಿ ತಮಗೆ ಮುಕ್ತಿಯ ಹಾದಿಯನ್ನು ತೋರಿಸಬೇಕೇಂದು ಕೇಳಿಕೊಂಡಾಗ ಋಷಿಯು ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನಿತ್ತು ಸದಾ ದೇವಿಯ ಧ್ಯಾನದಿಂದಿರುವಂತೆ ತಿಳಿಸಲಾಗಿ ಈರ್ವರೂ ಶ್ರೀ ದೇವಿಯ ಧ್ಯಾನಸಕ್ತರಾಗಿರುವಾಗ ಒಂದು ದಿನ ರಾಜನಿಗೆ ಶ್ರೀ ದೇವಿಯು ಸಹಪರಿವಾರದೊಂದಿಗೆ ಆಸೀನಾರೂಢಲಾಗಿರುವುದನ್ನು ಕನಸಲ್ಲಿ ಕಂಡಿರುವುದನ್ನು ಮುನಿಯಲ್ಲಿ ತಿಳಿಸಿದಾಗ ಋಷಿಯು ರಾಜನಿಗೆ ತಾನು ಕಂಡಂತೆ, ಸಹಪರಿವಾರ ಸಹಿತ ಶ್ರೀದೇವಿಯನ್ನು ಮಣ್ಣಿನಲ್ಲಿ ರಚಿಸಿ ಪ್ರತಿಷ್ಠಾಪಿಸಿ, ಪೂಜಿಸಿ ತಾನು ಕಳೆದುಕೊಂಡ ರಾಜ್ಯವನ್ನು ಪಡೆದನೆಂದು, ಸಮಾಧಿ ಎಂಬ ವೈಶ್ಯನು ಇಷ್ಟಾರ್ಥವನ್ನು ಪಡೆದನೆಂದು ಪುರಾಣ ಕಥೆಯಿದೆ. ಈ ಬಗ್ಗೆ ಶ್ರೀ ದೇವಿ ಪಾರಾಯಣದಲ್ಲೂ ಉಲ್ಲೇಖವಿದೆ.
ಸುರಥ ರಾಜನು ಮಾನವನಾದುದರಿಂದ ಶ್ರೀ ರಾಜರಾಜೇಶ್ವರೀ ದೇವಿ ಹಾಗೂ ಪರಿವಾರ ದೇವತೆಗಳು ಮಾನವ ಪ್ರತಿಷ್ಠೆಯೆಂದು ಹೇಳಬಹುದು. ಈ ವಿಗ್ರಹಗಳನ್ನು ಮೃತ್ತಿಕೆ (ಮಣ್ಣು) ಯಿಂದ ತಯಾರಿಸುವಾಗ ಮೂರ್ತಿಗಳ ಬಾಳ್ವಿಕೆಗೆ ಸುಮೇಧ ಮುನಿಯು ರಸಮೂಲಗಳನ್ನು ತೋಡಿಸಿ, ಆ ಜಾಗದಲ್ಲಿ ಶ್ರೀ ದುರ್ಗಾಪರಮೇಶ್ವರೀಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಕಥೆಯಿದೆ. ಶ್ರೀ ಕ್ಷೇತ್ರದಲ್ಲಿ ಮೂಲ ದುರ್ಗೆಯಾಗಿದ್ದು, ದೈನಂದಿನ ದಿನಗಳಲ್ಲಿ ಪೂಜಾದಿಗಳು ಮೊದಲಿಗೆ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ನಡೆದು ಬಳಿಕ ಶ್ರೀ ರಾಜರಾಜೇಶ್ವರೀ ದೇವರ ಹಾಗೂ ಪರಿವಾರ ದೇವತೆಗಳಿಗೆ ನಡೆಯುವುದು. ಸರಕಾರಿ ಪತ್ರಗಳಲ್ಲಿ ಶ್ರೀ ದುರ್ಗಾಪರಮೇಶ್ವರೀ, ಶ್ರೀ ರಾಜರಾಜೇಶ್ವರೀ ದೇವಾಲಯವೆಂದು ನಮೂದಿಸಲ್ಪಟ್ಟಿರುತ್ತದೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯು ಅಭೀಷ್ಠಫಲದಾಯಕಿಯೆಂದು ಪ್ರಸಿದ್ದಳು. ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಗೆ, ಶ್ರೀ ರಾಜರಾಜೇಶ್ವರೀ ಅಮ್ಮನವರಿಗೆ ಯಥಾನುಕೂಲ ಸೇವೆಯನ್ನಿತ್ತು ತಮ್ಮ ವಾಂಛೆಯನ್ನು/ಹರಕೆಯನ್ನು ತೋಡಿಕೊಂಡಾಗ ಶ್ರೀ ದೇವಿಯು ಅನುಗ್ರಹಿಸುವಳು ಎಂಬ ನಂಬಿಕೆಯಿದೆ ಹಾಗೂ ತಮ್ಮ ಇಷ್ಟಗಳನ್ನು ಈಡೇರಿಸಿಕೊಂಡ ಭಕ್ತರ ಅಭಿಪ್ರಾಯವಾಗಿದೆ. ಶ್ರೀ ದೇವಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಎಡಭಾಗದಲ್ಲಿ ದೇವಿಯ ಪ್ರತಿರೂಪ ಕಾಳಿಯ ರೂಪವಿದ್ದು, ಭದ್ರಕಾಳಿ ಎಂಬ ಹೆಸರಿನಿಂದ ಪ್ರಸಿದ್ದವಾಗಿದ್ದು, ವಾರದಲ್ಲಿ ಮೂರು ದಿವಸ ಅಂದರೆ ಭಾನುವಾರ, ಮಂಗಳವಾರ, ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಭದ್ರಕಾಳಿ ಗಾಯತ್ರಿಪೂಜೆ ನಡೆಯುತ್ತಿದ್ದು, ಭದ್ರಕಾಳಿ ಗಾಯತ್ರಿಪೂಜೆಯ ಸೇವೆ ಮಾಡಿಸಿ ಮರುದಿನ ತೀರ್ಥಸ್ನಾನ ಮಾಡಿದ್ದಲ್ಲಿ ಮಾನಸಿಕ ತೊಳಲಾಟದಿಂದ, ಕೃತ್ರಿಮದೋಷಗಳಿಂದ ಮುಕ್ತಿಹೊಂದಿರುವುದಕ್ಕೆ ಎಷ್ಟೋ ಉದಾಹರಣೆಗಳಿವೆ. ಅಂತೆಯೇ ಶ್ರೀ ದೇವಿಯ ಬಲಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯವಿದ್ದು ಶ್ರೀ ದೇವಿಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಜಾತ್ರೋತ್ಸವ ಎಂದು ಪ್ರತೀತಿ ಇದ್ದರೂ ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯ ದೇವರಿಗೆ ನಡೆಯುವುದು ವಿಶೇಷ.
ಶ್ರೀ ಕ್ಷೇತ್ರದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಅಭಿಷೇಕ ನಡೆಯುತ್ತದೆ. ಶ್ರೀ ರಾಜರಾಜೇಶ್ವರೀ ಹಾಗೂ ಪರಿವಾರ ದೇವರುಗಳು ಮೃಣ್ಮಯದಾಗಿದ್ದು (ಮಣ್ಣಿನ ಮೂರ್ತಿ), ಕಂಚಿನ ಪ್ರತಿರೂಪ ಮೂರ್ತಿಗಳಿಗೆ ಅಭಿಷೇಕವೂ, ಮೃಣ್ಮಯ ಮೂರ್ತಿಗಳಿಗೆ ಪ್ರೋಕ್ಷಣೆಯು ನಡೆಯುವುದು. ಇಲ್ಲಿ ಭಕ್ತಾದಿಗಳಿಗೆ ತೀರ್ಥ ಹಾಗೂ ಕುಂಕುಮ ಪ್ರಸಾದವು ಪ್ರಸಾದರೂಪದಲ್ಲಿ ಸಿಗುತ್ತದೆ.
ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಕಾರ್ತಿಕಪೂಜೆ, ಹಣ್ಣುಕಾಯಿ ಸೇವೆ, ಅಂತೆಯೇ ಶ್ರೀ ರಾಜರಾಜೇಶ್ವರೀ ದೇವಿಗೆ ಕುಂಕುಮಾರ್ಚನೆ, ಹೂವಿನಪೂಜೆ, ಭದ್ರಕಾಳಿ ದೇವರಿಗೆ ಗಾಯತ್ರಿಪೂಜೆ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಸುಬ್ರಹ್ಮಣ್ಯ ಸಹಸ್ರನಾಮ, ಶ್ರೀ ಮಹಾಗಣಪತಿ ದೇವರಿಗೆ ಗಣೇಶ ಸಹಸ್ರನಾಮ, ಪಂಚಕಜ್ಜಾಯ ಸೇವೆ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸರ್ವಾಲಂಕಾರಪೂಜೆ, ಖಡ್ಗಮಾಲಾರ್ಚನೆ, ವಿಶೇಷವಾಗಿ ನಡೆಯುತ್ತದೆ. ಇಲ್ಲಿ ಸಣ್ಣರಂಗಪೂಜೆ, ದೊಡ್ಡರಂಗಪೂಜೆ, ದೊಡ್ಡಗಾಯತ್ರಿಪೂಜೆ, ಶ್ರೀಚಕ್ರಪೂಜೆ, ದುರ್ಗಾನಮಸ್ಕಾರ, ಚಂಡಿಕಾಹೋಮ, ತ್ರಿಕಾಲಪೂಜೆ, ಸ್ವಯಂವರ ಪಾರ್ವತಿಪೂಜೆ ವಿಶೇಷಪೂಜೆಗಳು. ಇಲ್ಲಿ ಶ್ರೀ ದೇವರಿಗೆ ಸೀರೆ ಸಮರ್ಪಣೆ ಸೇವೆ ನಡೆಯುತ್ತಿದ್ದು, 18 ಮೊಳದ ಸೀರೆ ಮಾತ್ರ ಶ್ರೀ ರಾಜರಾಜೇಶ್ವರೀ ದೇವಿಗೆ ತೊಡಿಸಲಾಗುತ್ತದೆ. ಧ್ವಜರೋಹಣದ ಮರುದಿನ ಬೆಳಿಗ್ಗೆ ಕಂಚಿಲು ಸೇವೆ, ಪತ್ತನಾಜೆ ದಿವಸ ತುಲಾಭಾರ ಸೇವೆ ಹಾಗೂ ಜಾತ್ರೋತ್ಸವದ ದಿನಗಳಲ್ಲಿ ಪ್ರತಿ ಐದು ದಿವಸಕ್ಕೊಮ್ಮೆ ತುಲಾಭಾರ ಸೇವೆಯು ನಡೆಯುತ್ತದೆ.
ದೇವಾಲಯದ ಈಶಾನ್ಯ ಭಾಗದಲ್ಲಿ ದೊಡ್ಡ ಗದ್ದೆಯಿದ್ದು, ಇದಕ್ಕೆ ಚೆಂಡಿನಗದ್ದೆ ಎಂಬ ಹೆಸರಿದ್ದು, ವಾರ್ಷಿಕ ಜಾತ್ರೆಯ ಕೊನೆಯ 7 ದಿನಗಳಲ್ಲಿ 5 ದಿನ ಚೆಂಡಿನ ಉತ್ಸವ ನಡೆಯುತ್ತಿದೆ. ಶ್ರೀ ದೇವಸ್ಥಾನದ ಪೂರ್ವಭಾಗದಲ್ಲಿ ರೆಂಜಗುಡ್ಡೆ ಎಂಬ ಗುಡ್ಡ ಪ್ರದೇಶವಿದೆ. ಈ ಗುಡ್ಡಕ್ಕೆ ಅಂಟಿಕೊಂಡಂತೆ ಉರಿಪಾದೆ ಎಂಬ ದೊಡ್ಡ ಬಂಡೆ ಇರುತ್ತದೆ.
ಪೊಳಲಿಯ ಕ್ಷೇತ್ರದಲ್ಲಿ ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ ಸಮಗ್ರ ಮಾಹಿತಿಗಳು ತಿಳಿದು ಬಂದಿಲ್ಲ. ಪುರಾತನದಲ್ಲಿ ಈ ದೇವಳವು ಗರ್ಭಗುಡಿಯ ಒಳಗಿನ ಭಾಗದಷ್ಟೇ ಆಗಿದ್ದು, ಕಾಲಾನುಕ್ರಮೇಣ ಚೌಟರಸರು, ಜೈನ ಅರಸರ ಕಾಲದಲ್ಲಿ ಬಸದಿಯ ಹೋಲಿಕೆಯಂತೆ ಕೇರಳ ಮಾದರಿಯಲ್ಲಿ ನಿರ್ಮಾಣಗೊಂಡಿರುತ್ತದೆ. 2019 ರಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆಬಾರದಂತೆ ಸಂಪೂರ್ಣ ಶಿಲಾಮಯಗೊಂಡು ಕ್ಷೇತ್ರದ ಪಾವಿತ್ರ್ಯತೆಗೋಸ್ಕರ ಬ್ರಹ್ಮಕಲಶೋತ್ಸವ ನಡೆದಿರುತ್ತದೆ.
ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಎಲ್ಲಾ ಸೇವೆಗಳು ಎಲ್ಲಾ ದಿನಗಳಲ್ಲಿ ನಡೆಯುತ್ತದೆ. ಪಂಚಮಿ, ಷಷ್ಠಿ ದಿನಗಳು ಸುಬ್ರಹ್ಮಣ್ಯ ದೇವರಿಗೆ, ಚೌತಿಯು ಗಣಪತಿ ದೇವರಿಗೆ, ಭಾನುವಾರ, ಮಂಗಳವಾರ, ಗುರುವಾರ ಭದ್ರಕಾಳಿ ದೇವರಿಗೂ, ಮಂಗಳವಾರ, ಶುಕ್ರವಾರ ಶ್ರೀ ದುರ್ಗಾಪರಮೇಶ್ವರೀ, ಶ್ರೀ ರಾಜರಾಜೇಶ್ವರೀ ದೇವರಿಗೆ ಪ್ರಶಸ್ತವಾಗಿದೆ. ಸೇವೆ ನೀಡುವ ಭಕ್ತನ ತಾರಾನುಕೂಲಕ್ಕೆ ಸರಿಯಾಗಿ ಮದುವೆ ಪ್ರತಿಬಂಧಕ ನಿವಾರಣೆಗೆ ಸ್ವಯಂವರ ಪಾರ್ವತಿಪೂಜೆ ವಿಶೇಷ. ಧನುರ್ಮಾಸದಲ್ಲಿ ನಿಗಧಿಪಡಿಸಿದ ದಿನ ವಾರ್ಷಿಕವಾಗಿ ಶ್ರೀಕ್ಷೇತ್ರದ ವತಿಯಿಂದ ದೊಡ್ಡ ಗಾಯತ್ರಿಪೂಜೆಯನ್ನು ಮಾಡಿಸಲಾಗುತ್ತಿದ್ದು, ಈ ಗಾಯತ್ರಿಪೂಜೆಯನ್ನು ಭಕ್ತಾಧಿಗಳು ನೋಡಿ ಮರುದಿವಸ ತೀರ್ಥಸ್ನಾನ ಮಾಡಿ, ವಿಶೇಷ ತೀರ್ಥವನ್ನು ಮನೆಯಲ್ಲಿರಿಸಿ ಕ್ಷುದ್ರಪೀಡನೆಯಿಂದ ಮುಕ್ತಿಹೊಂದಿದವರ ಉದಾಹರಣೆಗಳಿವೆ. ಈ ದೇವಾಲಯದಲ್ಲಿ ಕಲಶಸ್ನಾನ ವಿಶೇಷತೆಯನ್ನು ಪಡೆದಿದೆ.
ಧನುರ್ಮಾಸದಲ್ಲಿ ನಿಗದಿಪಡಿಸಿದ ದಿನ ವಾರ್ಷಿಕವಾಗಿ ಶ್ರೀಕ್ಷೇತ್ರದ ವತಿಯಿಂದ ದೊಡ್ಡ ಗಾಯತ್ರಿಪೂಜೆಯನ್ನು ಮಾಡಿಸಲಾಗುತ್ತಿದ್ದು, ಈ ಗಾಯತ್ರಿಪೂಜೆಯನ್ನು ಭಕ್ತಾಧಿಗಳು ನೋಡಿ ಮರುದಿವಸ ತೀರ್ಥಸ್ನಾನ ಮಾಡಿ, ವಿಶೇಷ ತೀರ್ಥವನ್ನು ಮನೆಯಲ್ಲಿರಿಸಿ ಕ್ಷುದ್ರಪೀಡನೆಯಿಂದ ಮುಕ್ತಿ ಹೊಂದಿದವರ ಉದಾಹರಣೆಗಳಿವೆ. ಈ ದೇವಾಲಯದಲ್ಲಿ ಕಲಶಸ್ನಾನ ವಿಶೇಷತೆಯನ್ನು ಪಡೆದಿದೆ.
ಪಲ್ಗುಣಿ ನದಿ ಪವಿತ್ರ ನದಿಯಾಗಿದ್ದು, ಗಂಧರ್ವ ಕನ್ಯೆ ಶ್ರೀ ದೇವಿಯ ಶಾಪದಿಂದ ನದಿಯಾಗಿದ್ದು, ಅವಳ ಕೋರಿಕೆ ಮೇರೆಗೆ ಶ್ರೀ ದೇವಿಯು ಪವಿತ್ರ ನದಿಯಾಗಿ ಭಕ್ತರ ಸ್ನಾನದಿಂದ ಭಕ್ತರ ಸಲಹು ಎಂಬ ಮರುಶಾಪದಂತೆ ಈ ನದಿಗೆ ಪಾವಿತ್ರೆಯತೆ ಬಂದಿದೆ. (ಪುರಾಣ ಕಥೆಯ ಆಧಾರದಿಂದ)
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯ ದಾರ ಧಾರಣೆಯಿಂದ ಹಾಗೂ ಶ್ರೀ ದೇವಿಯ ಸಾನಿಧ್ಯದಿಂದ ಸಿಪ್ಪೆ ಸಹಿತವಿರುವ ತೆಂಗಿನಕಾಯಿಯನ್ನು ದೇವಿಯ ಸಾನಿಧ್ಯದಲ್ಲಿಟ್ಟು ಭಕ್ತರು ತಮ್ಮ ಮನೆ ಹಾಗೂ ವ್ಯವಹಾರ ಸ್ಥಳಗಳಲ್ಲಿ ಇರಿಸಿದರೇ ದೃಷ್ಟಿ ಪೀಡನೆಗಳಿಂದ ಮುಕ್ತಿಹೊಂದುವರೆಂಬ ನಂಬಿಕೆಯಿಂದ ಭಕ್ತರು ಶ್ರೀ ಕ್ಷೇತ್ರದಿಂದ ತೆಗೆದುಕೊಂಡು ಹೋಗುತ್ತಾರೆ.