ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು 2000 ವರ್ಷಗಳ ಮಿಗಿಲಾದ ಇತಿಹಾಸವುಳ್ಳ ದೇವಸ್ಥಾನವೆಂದು ಪಂಡಿತ ಪ್ರಾಜ್ಞರ ಅಭಿಪ್ರಾಯ ಈ ದೇವಸ್ಥಾನವು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಬೆಟ್ಟಗುಡ್ಡ, ಹೊಲಗದ್ದೆ, ತೋಟಗಳ ಮಧ್ಯೆದಲ್ಲಿ ಫಲ್ಗುಣಿ ನದಿಯ ಎಡದಂಡೆಯ ಮೇಲಿದೆ. ಪುರಾಣ ಕಥೆಯ ಪ್ರಕಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಇತಿಹಾಸವು ಹೀಗಿದೆ: ಹಿಂದೆ ಸುರಥ ಮಹಾರಾಜನು ದಕ್ಷಿಣ ಭಾರತದ ಚಕ್ರಾಧಿಪತಿಯಾಗಿದ್ದು, ಈತನ ಏಳಿಗೆಯನ್ನು ಸಹಿಸದ ಮಂತ್ರಿಗಳ ಕುಯುಕ್ತಿಯಿಂದ ಶತ್ರುಗಳ ಆಕ್ರಮಣದಿಂದ ಸೋಲುಂಟಾಗಿ ತನ್ನ ಮಾನ ಪ್ರಾಣ ಉಳಿಸುವ ಸಲುವಾಗಿ ನಾಡನ್ನು ಬಿಟ್ಟು ಕಾಡನ್ನು ಸೇರಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮುಕ್ತಿಯ ಸಾಧನೆಗೆ ದಾರಿ ಹುಡುಕುತ್ತಿರುವಾಗ ಈತನಂತೆ ಹೆಂಡತಿ ಮಕ್ಕಳಿಂದ ತಿರಸ್ಕೃತನಾದ ಸಮಾಧಿ ಎಂಬ ವೈಶ್ಯ ಮುಕ್ತಿಪಥವನ್ನು ಅರಸುತ್ತಾ ಅರಣ್ಯ ಮಾರ್ಗವಾಗಿ ಬರುತ್ತಿರಲು ಸುರಥನ ಸ್ನೇಹವಾಗಿ...