ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ವಾಳ, ದಕ್ಷಿಣ ಕನ್ನಡ - 574211, ದಕ್ಷಿಣ ಕನ್ನಡ .
Sri Mahalingeshwara Temple, Bantwal, Dakshina Kannada - 574211, Dakshina Kannada District [TM000041]
×
Temple History
ಇತಿಹಾಸ
ಬಂಟ್ವಾಳ ನಗರದ ಹೃದಯ ಭಾಗದಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನವಾದ ದೇವಾಲಯ ವಾಗಿದೆ. ಆದರೆ ಶಾಸನಗಳು ಇರುವುದಿಲ್ಲ. ಊರ ಪರವೂರ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಸೇವೆ ಸಲ್ಲಿಸುತ್ತಿರುವ ದೇವಾಲಯವಿದು. ದೈವಿಕ ಶಕ್ತಿಗೆ ಪ್ರಸಿದ್ದಿಹೊಂದಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯು ಈ ಪರಿಸರದ ಖ್ಯಾತ ಶಿವ ದೇವಸ್ಥಾನವಾಗಿದೆ. ಈ ಹಿಂದೆ ಖರಸುರ ಪ್ರತಿಷ್ಟಾಪಿತವೆಂದು ಹೇಳಲಾದ ಈ ದೇವಸ್ಥಾನವು ಬಹಳ ಪುರಾತನವಾಗಿದ್ದು ಹಾಗೂ ನೇತ್ರಾವತಿ ನದಿಯ ದಂಡೆಯಲ್ಲಿರುವ ಪ್ರಸಿದ್ದ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ ಶತಮಾನದ ಆದಿಯಿಂದ ಬಂಟ್ವಾಳ ತಾಲೂಕು ಪರಿಸರದ ಕೂಟ ಸಮಾಜ ಬಾಂಧವರಿAದ ಮತ್ತು ಭಕ್ತಾದಿಗಳಿಂದ ಜೀರ್ಣೋದ್ದಾರಗೊಂಡು ಅಮೃತ ಪಡಿ, ನೈವೇದ್ಯ, ದೀಪಾರಾಧನೆ, ನಿತ್ಯವಿನಿಯೋಗಾದಿಗಳು...ಬಂಟ್ವಾಳ ನಗರದ ಹೃದಯ ಭಾಗದಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನವಾದ ದೇವಾಲಯ ವಾಗಿದೆ. ಆದರೆ ಶಾಸನಗಳು ಇರುವುದಿಲ್ಲ. ಊರ ಪರವೂರ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಸೇವೆ ಸಲ್ಲಿಸುತ್ತಿರುವ ದೇವಾಲಯವಿದು. ದೈವಿಕ ಶಕ್ತಿಗೆ ಪ್ರಸಿದ್ದಿಹೊಂದಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯು ಈ ಪರಿಸರದ ಖ್ಯಾತ ಶಿವ ದೇವಸ್ಥಾನವಾಗಿದೆ. ಈ ಹಿಂದೆ ಖರಸುರ ಪ್ರತಿಷ್ಟಾಪಿತವೆಂದು ಹೇಳಲಾದ ಈ ದೇವಸ್ಥಾನವು ಬಹಳ ಪುರಾತನವಾಗಿದ್ದು ಹಾಗೂ ನೇತ್ರಾವತಿ ನದಿಯ ದಂಡೆಯಲ್ಲಿರುವ ಪ್ರಸಿದ್ದ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ ಶತಮಾನದ ಆದಿಯಿಂದ ಬಂಟ್ವಾಳ ತಾಲೂಕು ಪರಿಸರದ ಕೂಟ ಸಮಾಜ ಬಾಂಧವರಿAದ ಮತ್ತು ಭಕ್ತಾದಿಗಳಿಂದ ಜೀರ್ಣೋದ್ದಾರಗೊಂಡು ಅಮೃತ ಪಡಿ, ನೈವೇದ್ಯ, ದೀಪಾರಾಧನೆ, ನಿತ್ಯವಿನಿಯೋಗಾದಿಗಳು ನಡೆಯುತ್ತದೆ.
ಈ ದೇವಾಲಯದ ಪೂರ್ವ ಬದಿಯಲ್ಲಿ ನೇತ್ರಾವತಿ ನದಿಯು ಹರಿಯುತ್ತಿದ್ದಾಳೆ. ಹಾಗೆ ಪೂರ್ವ ದಿಕ್ಕಿನ ನದಿಯ ತಟದಲ್ಲಿ ಇರುವ ಆಶ್ವಥ ಕಟ್ಟೆ ಹಾಗೂ ನಾಗನ ಕಟ್ಟೆಗಳು, ಈಶಾನ್ಯದಲ್ಲಿರುವ ತೆಂಗಿನತೋಟ ದೇವಾಲಯದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.
ಪಂಥ ಪಂಗಡಗಳ ಬೇಧವಿಲ್ಲದೆ ವಿವಿಧ ಭಕ್ತರು ಆರಾದಿಸುತ್ತಾ ಬಂದಿರುವ ಈ ದೇವಾಲಯದ ಒಳಗಡೆ ಶ್ರೀ ದೇವರ ಬಿಂಬವು ಪೂರ್ವಾಭಿಮುಖವಾಗಿ ಹಾಗೂ ಭಕ್ತರ ವಿಘ್ನನಿವಾಕರನಾಗಿ ಶ್ರೀ ಮಹಾಗಣಪತಿಯ ದಿವ್ಯ ಮೂರ್ತಿಯು ಪಶ್ಚಿಮಾಭಿಮುಖವಾಗಿ ಕಂಗೊಳಿಸುತ್ತಿದೆ. ಈ ಮೂರ್ತಿಯು ಕ್ರಿ.ಶ ೧೮೯೮ ರಲ್ಲಿ ಶ್ರೀ ಪಣಂಬೂರು ಸುಬ್ಬರಾಯದಿಂದ ಪ್ರತಿಷ್ಠಾಪಿಸಲ್ಪಟಿದೆ.
ಪ್ರತಿ ದಿನ ಹಾಗೂ ವಿಶೇಷವಾಗಿ ಸೋಮವಾರದಂದು ನಡೆಯುವ ರುದ್ರಾಭಿ಼ಷೇಕ, ನೀರಾಭಿಷೇಕ ಹಾಗೂ ಧಾರಾಪಾತ್ರಾಭಿಷೇಕ ಮುಂತಾದ ಸೇವೆಗಳಿಗಾಗಿ ದೇವಾಲಯವು ಸದಾ ಸೇವಾಕಾಂಕ್ಷಿಗಳಿAದ ತುಂಬಿರುತ್ತದೆ. ಇಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ಶತರುದ್ರಾಭಿಷೇಕ ವಿಶೇಷ ಸೇವೆಗಳಾಗಿದ್ದು ಭಕ್ತರ ಇಷ್ಟಾರ್ಥ ನೆರವೇರುತ್ತದೆ.
೨೦೦೬ ರಲ್ಲಿ ಗರ್ಭಗುಡಿ, ತೀರ್ಥಮಂಟಪ ಮತ್ತು ೨೦೧೫ ರಲ್ಲಿ ಸುತ್ತುಪೌಳಿಯನ್ನು ಶಿಲಾಮಯ ಕೆತ್ತನೆಗಳಿಂದ ರಚಿಸಲಾಗಿದೆ.
ವರ್ಷಂಪ್ರತೀ ಐದು ದಿನಗಳ ಜಾತ್ರಾ ಮಹೋತ್ಸವವು ಮೇಷ ಸಂಕ್ರಮಣದAದು ದ್ವಜಾರೋಹಣದಿಂದ ಪ್ರಾರಂಭವಾಗಿ ಎರಡನೇ ದಿನ-ಬಯನಬಲಿ ಉತ್ಸವ, ಮೂರನೇ ದಿನ- ನಡುಬಲಿ ಉತ್ಸವ, ನಾಲ್ಕನೇಯ ದಿನ – ರಥೋತ್ಸವ ಹಾಗೂ ಐದನೇ ದಿನ – ಅವಭೃತ ಸ್ನಾನಾದಿಗಳು ವಿಜ್ರಂಬಣೆಯಿಂದ ನಡೆದು ದ್ವಜಾವರೋಹಣದೊಂದಿಗೆ ಮುಕ್ತಾಯಗೊಳ್ಳುತ್ತದೆ. ವಾರ್ಷಿಕ ದೀಪೋತ್ಸವವು ಕಾರ್ತಿಕ ಮಾಸದ ಅಮವಾಸ್ಯೆಯಂದು ಶ್ರೀ ದೇವರ ಬಲಿ ಉತ್ಸವದೊಂದಿಗೆ ಲಕ್ಷದೀಪೋತ್ಸವವು ವೈಭವದಿಂದ ನಡೆಯುತ್ತದೆ. ಶಿವರಾತ್ರಿಯ ದಿನ ಶ್ರೀ ದೇವರಿಗೆ ನೇತ್ರಾವತಿ ನದಿಯ ಶುದ್ದ ಜಲವನ್ನು ಬಾಹ್ಮಣ ಭಕ್ತ ಸಮೂಹವು ಭಕ್ತಿ ಶ್ರದ್ದೆಗಳಿಂದ ತಂದು ಶ್ರೀ ದೇವರಿಗೆ ನೀರಾಭೀಷೇಕ ಮಾಡುವುದು ಇಲ್ಲಿನ ವಿಶೇಷ.
ಸ್ಥಳ ಪುರಾಣ
ಬಂಟ್ವಾಳ ನಗರದ ಹೃದಯ ಭಾಗದಲ್ಲಿ, ನೇತ್ರಾವತಿ ನದಿ ತೀರದಲ್ಲಿ ಕಂಗೋಲಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪ್ರಾಚೀನವಾದ ದೇವಾಲಯವಾಗಿದೆ. ಊರ ಪರವೂರ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಸೇವೆಸಲ್ಲಿಸುತ್ತಿರುವ ದೇವಾಲಯವಿದು. ದೈವಿಕ ಶಕ್ತಿಗೆ ಪ್ರಸಿದ್ದಿ ಹೊಂದಿರುವ ಬಂಟ್ವಾಳ ಮಹಾಲಿಂಗೇಶ್ವರ ದೇವರ ಸನ್ನಿಧಿಯು ಈ ಪರಿಸರ ಖ್ಯಾತ ಶಿವ ದೇವಸ್ಥಾನವಾಗಿದೆ. ಈ ಹಿಂದೆ ಖಾರಸುರ ಪ್ರತಿಷ್ಠಿತವೆಂದು ಹೇಳಲಾದ ಈ ದೇವಸ್ಥಾನವು ಬಹಳ ಪುರಾತನವಾಗಿದು ಹಾಗೂ ನೇತ್ರಾವತಿ ನದಿಯ ಬಲ ದಂಡೆಯಲ್ಲಿರುವ ಪ್ರಸಿದ್ದ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ ಶತಮಾನ ಆದಿಯಿಂದ ಬಂಟ್ವಾಳ ತಾಲೂಕು ಪರಿಸರದ ಕೂಟ ಸಮಾಜ ಬಾಂಧವರಿAದ ಮತ್ತು ಭಕ್ತಾದಿಗಳಿಂದ ಜೀರ್ಣೋದ್ದಾರಗೊಂಡು ದಾನ ದತ್ತಿಗಳ ಸ್ವೀಕರಣೆಯಿಂದ ಅಮೃತ ಪಡಿ ನೈವೇದ್ಯ, ದೀಪಾರಾಧನೆ, ನಿತ್ಯ ವಿನಿಯೋಗಗಳಿಂದ ನಡೆಸಲ್ಪಡುತ್ತಿದ್ದವುಬಂಟ್ವಾಳ ನಗರದ ಹೃದಯ ಭಾಗದಲ್ಲಿ, ನೇತ್ರಾವತಿ ನದಿ ತೀರದಲ್ಲಿ ಕಂಗೋಲಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪ್ರಾಚೀನವಾದ ದೇವಾಲಯವಾಗಿದೆ. ಊರ ಪರವೂರ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಸೇವೆಸಲ್ಲಿಸುತ್ತಿರುವ ದೇವಾಲಯವಿದು. ದೈವಿಕ ಶಕ್ತಿಗೆ ಪ್ರಸಿದ್ದಿ ಹೊಂದಿರುವ ಬಂಟ್ವಾಳ ಮಹಾಲಿಂಗೇಶ್ವರ ದೇವರ ಸನ್ನಿಧಿಯು ಈ ಪರಿಸರ ಖ್ಯಾತ ಶಿವ ದೇವಸ್ಥಾನವಾಗಿದೆ. ಈ ಹಿಂದೆ ಖಾರಸುರ ಪ್ರತಿಷ್ಠಿತವೆಂದು ಹೇಳಲಾದ ಈ ದೇವಸ್ಥಾನವು ಬಹಳ ಪುರಾತನವಾಗಿದು ಹಾಗೂ ನೇತ್ರಾವತಿ ನದಿಯ ಬಲ ದಂಡೆಯಲ್ಲಿರುವ ಪ್ರಸಿದ್ದ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ ಶತಮಾನ ಆದಿಯಿಂದ ಬಂಟ್ವಾಳ ತಾಲೂಕು ಪರಿಸರದ ಕೂಟ ಸಮಾಜ ಬಾಂಧವರಿAದ ಮತ್ತು ಭಕ್ತಾದಿಗಳಿಂದ ಜೀರ್ಣೋದ್ದಾರಗೊಂಡು ದಾನ ದತ್ತಿಗಳ ಸ್ವೀಕರಣೆಯಿಂದ ಅಮೃತ ಪಡಿ ನೈವೇದ್ಯ, ದೀಪಾರಾಧನೆ, ನಿತ್ಯ ವಿನಿಯೋಗಗಳಿಂದ ನಡೆಸಲ್ಪಡುತ್ತಿದ್ದವು