ಬಂಟ್ವಾಳ ನಗರದ ಹೃದಯ ಭಾಗದಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನವಾದ ದೇವಾಲಯ ವಾಗಿದೆ. ಆದರೆ ಶಾಸನಗಳು ಇರುವುದಿಲ್ಲ. ಊರ ಪರವೂರ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಸೇವೆ ಸಲ್ಲಿಸುತ್ತಿರುವ ದೇವಾಲಯವಿದು. ದೈವಿಕ ಶಕ್ತಿಗೆ ಪ್ರಸಿದ್ದಿಹೊಂದಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯು ಈ ಪರಿಸರದ ಖ್ಯಾತ ಶಿವ ದೇವಸ್ಥಾನವಾಗಿದೆ. ಈ ಹಿಂದೆ ಖರಸುರ ಪ್ರತಿಷ್ಟಾಪಿತವೆಂದು ಹೇಳಲಾದ ಈ ದೇವಸ್ಥಾನವು ಬಹಳ ಪುರಾತನವಾಗಿದ್ದು ಹಾಗೂ ನೇತ್ರಾವತಿ ನದಿಯ ದಂಡೆಯಲ್ಲಿರುವ ಪ್ರಸಿದ್ದ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ ಶತಮಾನದ ಆದಿಯಿಂದ ಬಂಟ್ವಾಳ ತಾಲೂಕು ಪರಿಸರದ ಕೂಟ ಸಮಾಜ ಬಾಂಧವರಿAದ ಮತ್ತು ಭಕ್ತಾದಿಗಳಿಂದ ಜೀರ್ಣೋದ್ದಾರಗೊಂಡು ಅಮೃತ ಪಡಿ, ನೈವೇದ್ಯ,...