ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ಬೋಳಾರ, ದಕ್ಷಿಣ ಕನ್ನಡ - 575001, ದಕ್ಷಿಣ ಕನ್ನಡ .
Sri Mariyamma Mahishamardini Temple, Bolara, Dakshina Kannada - 575001, Dakshina Kannada District [TM000044]
×
Temple History
ಇತಿಹಾಸ
ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನವು ಸಾಧಾರಣ 1400 ವರ್ಷದಷ್ಟು ಪುರಾತನವಾಗಿದ್ದು ಮಹಿಷಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿ ತುಂಬಾ ವಿರಳ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರಥಮವಾಗಿದೆ. ಶ್ರೀ ದೇವಾಲಯವು ನೇತ್ರಾವತಿ ನದಿಯ ತೀರದಲ್ಲಿದೆ.
ಇತಿಹಾಸದಲ್ಲಿ ಮಹಿಷಮರ್ದಿನಿ ಎಂಬ ಶಕ್ತಿಯನ್ನು ಬ್ರಾಹ್ಮಣರ ಮನೆಯಲ್ಲಿ ಪೂಜೆ ಮಾಡುತ್ತಾರೆ. ಕಾಲಘಟ್ಟದಲ್ಲಿ ಅವರಿಗೆ ಪೂಜೆ ಮಾಡಲು ಆಗದಿದ್ದಕ್ಕೆ ಈಗ ಇರುವ ಕ್ಷೇತ್ರದ ಉತ್ತರ ಭಾಗದಲ್ಲಿ ಭಾಂಡಾರ ಮನೆ ಇದೆ. ಆ ಮನೆಯಲ್ಲಿ ಮಹಿಷಮರ್ದಿನಿಯನ್ನು ಪೂಜೆ ಮಾಡುತ್ತಿದ್ದರು. ಕಾಲಕ್ರಮೇಣ ಆ ಮಹಿಷಮರ್ದಿನಿ ದೇವತೆಯನ್ನು ತಂದು ಈಗ ಇರುವ ಸಾನಿಧ್ಯದಲ್ಲಿ ಇಡಲಾಯಿತು. ಕಾಲಕ್ರಮೇಣ ಮಾರಿಯಮ್ಮ ಎಂಬ ಶಕ್ತಿಯು ಗರ್ಭಗುಡಿಯಲ್ಲಿ ಐಕ್ಯವಾಯಿತು.
ಆದುದರಿಂದ ಗರ್ಭಗುಡಿಯಲ್ಲಿ ಎರಡು ಶಕ್ತಿಗಳನ್ನು ಪೂಜಿಸಲ್ಪಟ್ಟಿತು. ಆದರೆ ಮಹಿಷಮರ್ದಿನಿಗೆ ಪಾಣಿಪೀಠ ಇತ್ತು. ಮಾರಿಯಮ್ಮನಿಗೆ ಯಾವುದೇ ಪಾಣಿಪೀಠ...ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನವು ಸಾಧಾರಣ 1400 ವರ್ಷದಷ್ಟು ಪುರಾತನವಾಗಿದ್ದು ಮಹಿಷಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿ ತುಂಬಾ ವಿರಳ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರಥಮವಾಗಿದೆ. ಶ್ರೀ ದೇವಾಲಯವು ನೇತ್ರಾವತಿ ನದಿಯ ತೀರದಲ್ಲಿದೆ.
ಇತಿಹಾಸದಲ್ಲಿ ಮಹಿಷಮರ್ದಿನಿ ಎಂಬ ಶಕ್ತಿಯನ್ನು ಬ್ರಾಹ್ಮಣರ ಮನೆಯಲ್ಲಿ ಪೂಜೆ ಮಾಡುತ್ತಾರೆ. ಕಾಲಘಟ್ಟದಲ್ಲಿ ಅವರಿಗೆ ಪೂಜೆ ಮಾಡಲು ಆಗದಿದ್ದಕ್ಕೆ ಈಗ ಇರುವ ಕ್ಷೇತ್ರದ ಉತ್ತರ ಭಾಗದಲ್ಲಿ ಭಾಂಡಾರ ಮನೆ ಇದೆ. ಆ ಮನೆಯಲ್ಲಿ ಮಹಿಷಮರ್ದಿನಿಯನ್ನು ಪೂಜೆ ಮಾಡುತ್ತಿದ್ದರು. ಕಾಲಕ್ರಮೇಣ ಆ ಮಹಿಷಮರ್ದಿನಿ ದೇವತೆಯನ್ನು ತಂದು ಈಗ ಇರುವ ಸಾನಿಧ್ಯದಲ್ಲಿ ಇಡಲಾಯಿತು. ಕಾಲಕ್ರಮೇಣ ಮಾರಿಯಮ್ಮ ಎಂಬ ಶಕ್ತಿಯು ಗರ್ಭಗುಡಿಯಲ್ಲಿ ಐಕ್ಯವಾಯಿತು.
ಆದುದರಿಂದ ಗರ್ಭಗುಡಿಯಲ್ಲಿ ಎರಡು ಶಕ್ತಿಗಳನ್ನು ಪೂಜಿಸಲ್ಪಟ್ಟಿತು. ಆದರೆ ಮಹಿಷಮರ್ದಿನಿಗೆ ಪಾಣಿಪೀಠ ಇತ್ತು. ಮಾರಿಯಮ್ಮನಿಗೆ ಯಾವುದೇ ಪಾಣಿಪೀಠ ಇರಲಿಲ್ಲ. ಆ ಶಿಲೆ ಮಹಿಷಮರ್ದಿನಿಗೆ ಒರಗಿ ಕೊಂಡಿತ್ತು. ಮಾರಿಯಮ್ಮನ ನೇರದೃಷ್ಟಿಗೆ ರಾಶಿಕಟ್ಟೆ ಇದೆ. ಅದಕ್ಕೂ ನೇರವಾಗಿ ರಣಕಂಬ ಇದೆ. ಅದಕ್ಕೂ ನೇರವಾಗಿ ಮಹಾತಂಗಿ ಕಟ್ಟೆಯಿದೆ. ಇವುಗಳ ಮಧ್ಯದಲ್ಲಿ ಎರಡು ಪಾದುಕೆಯ ಚಿಹ್ನೆ ಇದೆ, ಶಿಷ್ಯರು ಮಾರಿ ದೇವರನ್ನು ಉಂಟು ಮಾಡಿ ಅವರ ಪಾರಿಚಾರಿಕೆ ಕೆಲಸಕ್ಕಾಗಿ ಮಹಾತಂಗಿ, ಮಾಯರಾಣ ಮತ್ತು ಧೂತ ಎಂಬ ಈ ಮೂರು ಶಕ್ತಿಗಳನ್ನು ಹೊರಗಿನಿಂದ ಕ್ಷೇತ್ರ ರಕ್ಷಣೆಗೆ ಇಟ್ಟುಕೊಂಡಿದ್ದರು. ಹಾಗೆಯೇ ಕ್ಷೇತ್ರದ ಹೊರ ಆವರಣ 6ನೇ ದಿಕ್ಕಿನಲ್ಲಿ ದೇವರ ಕ್ಷೇತ್ರ ಪಾಲಕನಾಗಿ ರಾಜ ಗುಳಿಗನ ವಾಸ ಸ್ಥಳ ಇದೆ. ಹಾಗೆಯೇ ಕ್ಷೇತ್ರದ ನೈರುತ್ಯ ದಿಕ್ಕಿನಲ್ಲಿ ಅಶ್ವತ್ತ ಕಟ್ಟೆಯಿದೆ. ಆ ಕಟ್ಟೆಯಲ್ಲಿ ಯಕ್ಷಣಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತದನಂತರ ಭಾಂಡಾರ ಮನೆಯಲ್ಲಿ ಇರುವ ಮಹಿಷಮರ್ದಿನಿಯನ್ನು ಕ್ಷೇತ್ರಕ್ಕೆ ತಂದರು.
(ಹಿಂದಿನ ಕಾಲ ಘಟ್ಟದಲ್ಲಿ ಸಾಂಕ್ರಾಮಿಕ ರೋಗಗಳು ನೂರಾರು ಮಂದಿಯನ್ನು ಬಲಿ ತೆಗೆದುಕೊಂಡ ಸಂಧರ್ಭದಲ್ಲಿ ಮಾರಿಯಮ್ಮ ದೇವರಿಗೆ ಪೂಜೆ, ಉತ್ಸವ, ಜಾತ್ರೆ ಬಲಿ ನಡೆಸುವ ಹರಕೆ ಹೇಳಿ ಶ್ರೀ ಮರಿಯಮ್ಮ ದೇವರ ಆರಾಧನಾ ಪದ್ಧತಿ ಬಂದಿದೆ ಎಂಬ ಪ್ರತೀತಿ ಇದೆ ) ಹಾಗೂ ಮಾರಿಯಮ್ಮ ದೇವರ ಮೂರ್ತಿಯು ಮನುಷ್ಯ ಪ್ರತಿಷ್ಠೆಯಾಗಿರುತ್ತದೆ.
ರಣಕಂಭ:
ರಣಕಂಭವು ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿದ ಸ್ಥಳ ಸುಮಾರು 40 ವರ್ಷಗಳ ಹಿಂದೆ ಕೋಣಬಲಿ ಕೊಡುವ ಪದ್ಧತಿ ನಿಂತು ಹೋಯಿತು. ಆದರೆ ಯಾವ ಕೋಣ ಬಲಿ ಬರಬೇಕೆಂಬುದು ದೇವತೆಗೆ ಇತ್ತೋ ಆ ಕೋಣ ಹಟ್ಟಿಯಿಂದ ಹಗ್ಗವನ್ನು ಕಡಿದು ಆ ರಣ ಕಂಬಕ್ಕೆ ಬಂದು ತಲೆ ಕೊಟ್ಟದ್ದು ಪ್ರತೀತಿ ಇದೆ. ಇಲ್ಲಿಗೆ ಬಂದ ಕೋಣ ಮಡಕೇರಿಗೆ ಸೇರಿರುತ್ತದೆ. ಅದರ ಇತಿಹಾಸದ ಭದ್ರತೆಗಾಗಿ 2 ಕೋಣಗಳನ್ನು ಕಟ್ಟುವ ಶಿಲಾ ಕಂಬಗಳು ಕ್ಷೇತ್ರದಲ್ಲಿ ಇವೆ.
ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನದ ಭಂಡಾರ ಮನೆಯಲ್ಲಿ ಎಲ್ಲಮ್ಮ ದೇವಿ ಹಾಗೂ ಅಣ್ಣಪ್ಪ ಪಂಜುರ್ಲಿಯ ಸಾನಿಧ್ಯ, ನಾಗ ದೇವರು, ರಕ್ತೇಶ್ವರಿ, ಹಾಗೂ ಗುಳಿಗ ದೈವದ ಕಟ್ಟೆ ಇದೆ.
ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಭಿಸುವ ಫಲಗಳು:-
ಶ್ರೀ ಕ್ಷೇತ್ರದ ವೈಶಿಷ್ಠ್ಯವೇನೆಂದರೆ ತ್ರಿಗುಣಾತ್ಮಿಕ ಗುಣವುಳ್ಳ ಮಾರಿಯಮ್ಮ ಮಹಿಷಮರ್ದಿನಿ ಸಾನಿಧ್ಯದಲ್ಲಿ ವಾಸಿಯಾಗದ ರೋಗಗಳಿಗೆ, ಅರಿಶಿಣ ಪ್ರಸಾದವನ್ನು ಕ್ಷೇತ್ರದಲ್ಲಿ ಪ್ರಾರ್ಥಿಸಿಕೊಂಡು ಹೋಗಿ, ರೋಗವಿರುವ ದೇಹಕ್ಕೆ ಹಚ್ಚಿದರೆ ರೋಗವು ತಡೆಯಾಗಿ ಉಪಶಮನವಾಗುತ್ತದೆ. ತದನಂತರದ 14 ದಿನಗಳಲ್ಲಿ ಆ ವ್ಯಕ್ತಿಯನ್ನು ತೀರ್ಥ ಮಂಟಪದಲ್ಲಿ ಕುಳ್ಳಿರಿಸಿ ತೀರ್ಥ ಪ್ರೋಕ್ಷಣೆಯನ್ನು ಮಾಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಇದು ಮಾರಿಯಮ್ಮನ ಮಹಿಮೆ. ಮಹಿಷಮರ್ದಿನಿ ದ್ವಿಗುಣ ಶಕ್ತಿವುಳ್ಳವರು ಅದರಲ್ಲಿ ಅವಳ ಗುಣಗಳು ವಿದ್ಯಾಯಿಣಿ ಸ್ವಯಂ ಸ್ವರೂಪಿನಿ ವಿದ್ಯೆ ಇಲ್ಲದವರು ಇಲ್ಲಿ ಪ್ರಾರ್ಥಿಸಿದರೆ ವಿದ್ಯಾ ಪ್ರಾಪ್ತಿಯಾಗುತ್ತದೆ. ಹಾಗೆಯೇ ವಿವಾಹ ಆಗದವರು ಇಲ್ಲಿ ಪ್ರಾರ್ಥಿಸಿದರೆ ಬಹುಬೇಗ ವಿವಾಹವಾಗುತ್ತದೆ ಎಂಬ ಪ್ರತೀತಿ ಇದೆ. ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿ ಮೈಯಲ್ಲಿ ಬೀಳುವ ‘ಬೊಬ್ಬೆ ಯಂತಹ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಅರಿಶಿನ ಪ್ರಸಾದದಿಂದ ರೋಗಗಳು ವಾಸಿಯಾಗುತ್ತದೆ ಎಂಬ ಪ್ರತೀತಿ ಇದೆ.
ಶ್ರೀ ದೇವಾಲಯದಲ್ಲಿ ವಿಶೇಷವಾಗಿ ದುರ್ಗಾನಮಸ್ಕಾರ ಪೂಜೆಯು ನಡೆಯುತ್ತದೆ. ವಿವಾಹವಾಗದ ಸ್ತ್ರೀ ಮತ್ತು ಪುರುಷರು ಶ್ರೀ ದೇವಾಲಯದಲ್ಲಿ ದುರ್ಗಾನಮಸ್ಕಾರ ಪೂಜೆ ಯನ್ನು ಮಾಡಿದರೆ ಶೀಘ್ರವಾಗಿ ವಿವಾಹವಾಗುತ್ತದೆ ಎಂಬ ಪ್ರತೀತಿ ಇದೆ. ಹಾಗೂ ಸಂತಾನ, ಆಯುಷ್ಯ ವೃದ್ದಿ, ಐಶ್ವರ್ಯ ವೃದ್ದಿ, ಸಕಲ ಇಷ್ಟಾರ್ಥ ಪ್ರಾಪ್ತಿಗಾಗಿ ದುರ್ಗಾನಮಸ್ಕಾರ ಪೂಜೆಯನ್ನು ನಡೆಸಲಾಗುತ್ತದೆ.
ಶ್ರೀ ದೇವಾಲಯದಲ್ಲಿ ವಿಶೇಷವಾಗಿ ಸರ್ವಾಲಂಕಾರ ಪೂಜೆಯು ನಡೆಯುತ್ತದೆ. ವಿವಾಹ, ಸಂತಾನ, ಆಯುಷ್ಯ ವೃದ್ದಿ, ಐಶ್ವರ್ಯ ವೃದ್ದಿ, ಸಕಲ ಇಷ್ಟಾರ್ಥ ಪ್ರಾಪ್ತಿಗಾಗಿ ಸರ್ವಾಲಂಕಾರ ಪೂಜೆಯನ್ನು ನಡೆಸಲಾಗುತ್ತದೆ.