ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ದಕ್ಷಿಣ ಕನ್ನಡ - 575015, ದಕ್ಷಿಣ ಕನ್ನಡ .
Sri Mahalingeshwara Temple, Kavoor, Dakshina Kannada - 575015, Dakshina Kannada District [TM000049]
×
Temple History
ಇತಿಹಾಸ
ದೇವಾಲಯವು 13 ಮತ್ತು 14 ಶತಮಾನಕ್ಕೆ ಸೇರಿದ್ದು ಸುಮಾರು 700 ವರ್ಷಗಳಾಗಿದೆ. ಮಹರ್ಷಿ ಕವೇರನು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಈ ಊರಿನಲ್ಲಿ ಕೆಲಕಾಲ ನೆಲೆಸಿದ್ದು ಆ ಸಂದರ್ಭದಲ್ಲಿ ಪರಮೇಶ್ವರನನ್ನು ಪೂಜಿಸಿದ್ದನಂತೆ. ಈ ಸಮಯದಲ್ಲಿ ಲಿಂಗ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ದೇವಾಲಯದ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಕವೇರ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಕವೇರ ಋಷಿಯವರು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಕಾವೂರುನಲ್ಲಿ ನೆಲೆಸಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆಂದು ಪ್ರತೀತಿ ಇದೆ.
ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರವರ ಮನಸ್ಸಿನ ಇಷ್ಟಾರ್ಥಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಈಡೇರಿಸಿದ್ದು, ಜಾತಕ ದೋಷ, ವಾಕ್ ದೋಷ, ಮೃತ್ಯು ಕಂಟಕ ಹಾಗೂ ಗ್ರಹಚಾರ/ಬಾಧೆ ದೋಷ ನಿವಾರಣೆಯಾಗುತ್ತದೆ.
ಈ ದೇವಾಲಯವು ಅಭಿಷೇಕ ಪ್ರಿಯವಾದ ಶಿವನ ದೇವಸ್ಥಾನವಾಗಿದ್ದು,...ದೇವಾಲಯವು 13 ಮತ್ತು 14 ಶತಮಾನಕ್ಕೆ ಸೇರಿದ್ದು ಸುಮಾರು 700 ವರ್ಷಗಳಾಗಿದೆ. ಮಹರ್ಷಿ ಕವೇರನು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಈ ಊರಿನಲ್ಲಿ ಕೆಲಕಾಲ ನೆಲೆಸಿದ್ದು ಆ ಸಂದರ್ಭದಲ್ಲಿ ಪರಮೇಶ್ವರನನ್ನು ಪೂಜಿಸಿದ್ದನಂತೆ. ಈ ಸಮಯದಲ್ಲಿ ಲಿಂಗ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ದೇವಾಲಯದ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಕವೇರ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಕವೇರ ಋಷಿಯವರು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಕಾವೂರುನಲ್ಲಿ ನೆಲೆಸಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆಂದು ಪ್ರತೀತಿ ಇದೆ.
ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರವರ ಮನಸ್ಸಿನ ಇಷ್ಟಾರ್ಥಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಈಡೇರಿಸಿದ್ದು, ಜಾತಕ ದೋಷ, ವಾಕ್ ದೋಷ, ಮೃತ್ಯು ಕಂಟಕ ಹಾಗೂ ಗ್ರಹಚಾರ/ಬಾಧೆ ದೋಷ ನಿವಾರಣೆಯಾಗುತ್ತದೆ.
ಈ ದೇವಾಲಯವು ಅಭಿಷೇಕ ಪ್ರಿಯವಾದ ಶಿವನ ದೇವಸ್ಥಾನವಾಗಿದ್ದು, ಇಲ್ಲಿ ರುದ್ರಾಭಿಷೇಕ ಪೂಜೆಯಿಂದ ಪ್ರಸಿದ್ಧಿಯಾಗಿದೆ. ಈ ದೇವಾಲಯದಲ್ಲಿ ರುದ್ರಾಭಿಷೇಕ, ಪಂಚಾಮೃತ ರುದ್ರಾಭಿಷೇಕ, ಏಕಾದಶವಾರ ರುದ್ರಾಭಿಷೇಕ, ಶತರುದ್ರಾಭಿಷೇಕ ಹಾಗೂ ರಂಗಪೂಜೆಗಳು ವಿಶೇಷ ಪೂಜೆಗಳಾಗಿವೆ.
ಈ ದೇವಾಲಯವು ಗ್ರಾಮದ ಮಧ್ಯೆ ಇರುತ್ತದೆ. ದೇವಾಲಯದ ಸಮೀಪ ವಿಶಾಲವಾದ ಕಾವೂರು ಕೆರೆ ಇದ್ದು, ಈ ದೇವಾಲಯವನ್ನು ಕ್ರಿ.ಶ 1982ರಲ್ಲಿ ಕಾವೂರು ಹಾಗೂ ಪರವೂರಿನ ಭಕ್ತಾದಿಗಳು ಸೇರಿ ಜೀರ್ಣೋದ್ಧಾರ ಕಾರ್ಯ ಮಾಡಿದ್ದು, ದೇವಾಲಯವು ಅತ್ಯಂತ ಜೀರ್ಣಾವಸ್ಥೆಯಲ್ಲಿದ್ದು ಭಕ್ತಾಧಿಗಳ ಅನುಕೂಲಕ್ಕಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಶ್ರೀ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ರುದ್ರಾಭಿಷೇಕ ದೀಪಾರಾಧನೆ ಹಾಗೂ ರಂಗಪೂಜೆಗಳು ನಡೆಯುತ್ತದೆ. ಶಿವರಾತ್ರಿಯ ಸಮಯದಲ್ಲಿ ಶಿವಪೂಜೆ ಹಾಗೂ ಧರ್ನುಮಾಸದಲ್ಲಿ ಧನುಪೂಜೆ ನಡೆಯುತ್ತದೆ. ಈ ಎಲ್ಲಾ ಸೇವೆಗಳನ್ನು ಮಾಡಿಸಿದಲ್ಲಿ ಭಕ್ತಾಧಿಗಳ ಇಷ್ಟಾರ್ಥ ಫಲಗಳು ಲಭಿಸುತ್ತದೆ ಹಾಗೂ ಗೃಹಚಾರ ದೋಷ, ವಾಕ್ ದೋಷ ಹಾಗೂ ಮೃತ್ಯು ಕಂಟಕ ಭಾದೆಗಳು ನಿವಾರಣೆಯಾಗುತ್ತದೆ. ಈ ದೇವಸ್ಥಾನದಲ್ಲಿ ಮಹಾಪೂಜೆಯ ಸಂದರ್ಭದಲ್ಲಿ ಗರ್ಭಗುಡಿಯ ಮೆಟ್ಟಿಲುಗಳಿಗೆ ನೀರು ಹಾಕುವ ಸಾಂಪ್ರದಾಯಿಕ ಪದ್ಧತಿ ಇರುತ್ತದೆ.