ದೇವಾಲಯವು 13 ಮತ್ತು 14 ಶತಮಾನಕ್ಕೆ ಸೇರಿದ್ದು ಸುಮಾರು 700 ವರ್ಷಗಳಾಗಿದೆ. ಮಹರ್ಷಿ ಕವೇರನು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಈ ಊರಿನಲ್ಲಿ ಕೆಲಕಾಲ ನೆಲೆಸಿದ್ದು ಆ ಸಂದರ್ಭದಲ್ಲಿ ಪರಮೇಶ್ವರನನ್ನು ಪೂಜಿಸಿದ್ದನಂತೆ. ಈ ಸಮಯದಲ್ಲಿ ಲಿಂಗ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ದೇವಾಲಯದ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಕವೇರ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಕವೇರ ಋಷಿಯವರು ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ಕಾವೂರುನಲ್ಲಿ ನೆಲೆಸಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆಂದು ಪ್ರತೀತಿ ಇದೆ. ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರವರ ಮನಸ್ಸಿನ ಇಷ್ಟಾರ್ಥಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಈಡೇರಿಸಿದ್ದು, ಜಾತಕ ದೋಷ, ವಾಕ್ ದೋಷ, ಮೃತ್ಯು ಕಂಟಕ ಹಾಗೂ ಗ್ರಹಚಾರ/ಬಾಧೆ ದೋಷ ನಿವಾರಣೆಯಾಗುತ್ತದೆ. ಈ ದೇವಾಲಯವು ಅಭಿಷೇಕ ಪ್ರಿಯವಾದ ಶಿವನ ದೇವಸ್ಥಾನವಾಗಿದ್ದು, ಇಲ್ಲಿ ರುದ್ರಾಭಿಷೇಕ...