ಶ್ರೀ ಮಹಾಗಣಪತಿ ದೇವಸ್ಥಾನ, ಕಾಟಿಪಳ್ಳ, ದಕ್ಷಿಣ ಕನ್ನಡ - 575030, ದಕ್ಷಿಣ ಕನ್ನಡ .
Sri Mahagapathi Temple, Katipalla, Dakshina Kannada - 575030, Dakshina Kannada District [TM000050]
×
Temple History
ಸ್ಥಳ ಪುರಾಣ
1963-64ರಲ್ಲಿ ಪಣಬೂರು ಪರಿಸರದ ಗ್ರಾಮಸ್ಥರು ನವಮಂಗಳೂರು ಸರ್ವಋತು ಬಂದರು ನಿರ್ಮಾಣಕ್ಕಾಗಿ ತಲತಲಾಂತರಗಳಿಂದ ವಾಸ್ತವ್ಯ ಮಾಡುತ್ತಿದ್ದ ತಮ್ಮ ಮನೆ, ಮಠ, ಮಂದಿರಗಳನ್ನು, ಕೃಷಿ ಭೂಮಿಗಳನ್ನು ತ್ಯಾಗ ಮಾಡಿ ವ್ಯಾಪಾರ ವ್ಯವಹಾರಗಳನ್ನು ತೊರೆದು ಕಾಟಿಪಳ್ಳ– ಕೃಷ್ಣಾಪುರದ ಪುನರ್ ನಿವೇಶನ ಕಾಲೋನಿಯಲ್ಲಿ ಬಂದು ನೆಲೆಸಿದರು.
ಕಾಟಿಪಳ್ಳ ಪರಿಸರದಲ್ಲಿ ಹಿಂದೂ ಬಾಂಧವರಿಗೆ ಧಾರ್ಮಿಕ ಆಚರಣೆಗಳಿಗೆ ಸೂಕ್ತ ವ್ಯವಸ್ಥೆಗಳಿರಲಿಲ್ಲ. ಇದನ್ನು ಮನಗಂಡು ಭಕ್ತ ವರ್ಗದವರು ದೇವಾಲಯ ನಿರ್ಮಾಣದ ಸಂಕಲ್ಪವನ್ನು ಮಾಡಿ ಸುಮಾರು 1986-87ರಲ್ಲಿ ಭಗವತ್ ಪ್ರೇರಣೆಯಂತೆ ದೇವಾಲಯವನ್ನು ನಿರ್ಮಿಸಿದ್ದರು.
ಕಾಟಿಪಳ್ಳ – ಕೃಷ್ಣಾಪುರ, ಕಾನ, ಕಟ್ಲ, ಬೊಳ್ಳಾಜೆ, ಕುತ್ತೆತ್ತೂರು, ಬಾಳ, ಕಳುವಾರು, ಚೇಳ್ಯಾರು, ಮಧ್ಯ ಗ್ರಾಮಗಳ ಭಕ್ತಾಧಿಗಳ ಒಗ್ಗೂಡುವಿಕೆಯಲ್ಲಿ ಶ್ರೀ ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ತಿವರೇಣ್ಯರ ನೇತೃತ್ವದಲ್ಲಿ ಆಗಮಶಾಸ್ತ್ರ ರೀತಿ ಶ್ರೀ ಮಹಾಗಣಪತಿ ದೇವರ ದಿವ್ಯ ಭವ್ಯ ದೇವಾಲಯ ನಿರ್ಮಾಣಗೊಡಿತು. 1988 ನೇ...1963-64ರಲ್ಲಿ ಪಣಬೂರು ಪರಿಸರದ ಗ್ರಾಮಸ್ಥರು ನವಮಂಗಳೂರು ಸರ್ವಋತು ಬಂದರು ನಿರ್ಮಾಣಕ್ಕಾಗಿ ತಲತಲಾಂತರಗಳಿಂದ ವಾಸ್ತವ್ಯ ಮಾಡುತ್ತಿದ್ದ ತಮ್ಮ ಮನೆ, ಮಠ, ಮಂದಿರಗಳನ್ನು, ಕೃಷಿ ಭೂಮಿಗಳನ್ನು ತ್ಯಾಗ ಮಾಡಿ ವ್ಯಾಪಾರ ವ್ಯವಹಾರಗಳನ್ನು ತೊರೆದು ಕಾಟಿಪಳ್ಳ– ಕೃಷ್ಣಾಪುರದ ಪುನರ್ ನಿವೇಶನ ಕಾಲೋನಿಯಲ್ಲಿ ಬಂದು ನೆಲೆಸಿದರು.
ಕಾಟಿಪಳ್ಳ ಪರಿಸರದಲ್ಲಿ ಹಿಂದೂ ಬಾಂಧವರಿಗೆ ಧಾರ್ಮಿಕ ಆಚರಣೆಗಳಿಗೆ ಸೂಕ್ತ ವ್ಯವಸ್ಥೆಗಳಿರಲಿಲ್ಲ. ಇದನ್ನು ಮನಗಂಡು ಭಕ್ತ ವರ್ಗದವರು ದೇವಾಲಯ ನಿರ್ಮಾಣದ ಸಂಕಲ್ಪವನ್ನು ಮಾಡಿ ಸುಮಾರು 1986-87ರಲ್ಲಿ ಭಗವತ್ ಪ್ರೇರಣೆಯಂತೆ ದೇವಾಲಯವನ್ನು ನಿರ್ಮಿಸಿದ್ದರು.
ಕಾಟಿಪಳ್ಳ – ಕೃಷ್ಣಾಪುರ, ಕಾನ, ಕಟ್ಲ, ಬೊಳ್ಳಾಜೆ, ಕುತ್ತೆತ್ತೂರು, ಬಾಳ, ಕಳುವಾರು, ಚೇಳ್ಯಾರು, ಮಧ್ಯ ಗ್ರಾಮಗಳ ಭಕ್ತಾಧಿಗಳ ಒಗ್ಗೂಡುವಿಕೆಯಲ್ಲಿ ಶ್ರೀ ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ತಿವರೇಣ್ಯರ ನೇತೃತ್ವದಲ್ಲಿ ಆಗಮಶಾಸ್ತ್ರ ರೀತಿ ಶ್ರೀ ಮಹಾಗಣಪತಿ ದೇವರ ದಿವ್ಯ ಭವ್ಯ ದೇವಾಲಯ ನಿರ್ಮಾಣಗೊಡಿತು. 1988 ನೇ ಮಾರ್ಚ್ 27ರಂದು ಶ್ರೀ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ಈ ಪ್ರತಿಷ್ಠಾಪನಾ ಸಂದರ್ಭದಲ್ಲಿ ಮಾರ್ಚ್ ತಿಂಗಳ ಕಡು ಬಿಸಿಲಿನ ನಡುವೆಯೂ ಹನಿ ಹನಿ ಮಳೆಯ ಪುಷ್ಪವೃಷ್ಠಿಯೊಂದಿಗೆ ಶ್ರೀ ಮಹಾಗಣಪತಿ ದೇವರು ಭಕ್ತರ ಅಭೀಷ್ಟೆಗಳನ್ನು ಅನುಗ್ರಹಿಸಿದರು.
ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾ(ಪಾರ್ವತಿ)ಪರಮೇಶ್ವರಿ, ಶ್ರೀ ಆದಿತ್ಯಾದಿ ನವಗ್ರಹರು, ಶ್ರೀ ಸರ್ಪಾಧ್ಯಷ್ಟಕುಲ ಯಕ್ಷನಾಗಬ್ರಹ್ಮ, ಶ್ರೀ ಚಾಮುಂಡೇಶ್ವರಿ ಮುಂತಾದ ಪರಿವಾರ ದೇವರುಗಳು ನೆಲೆಯೂರಿ ಸನ್ನಿಧಿಯಲ್ಲಿ ತ್ರಿಕಾಲ ಪೂಜೆಗೊಳ್ಳುತ್ತಾ ಪೂರ್ಣ ಪ್ರಸನ್ನರಾಗಿದ್ದಾರೆ.
ಶ್ರೀ ಮಹಾಗಣಪತಿ ದೇವರು ಭಕ್ತರಿಂದ ಕಾಲ ಕಾಲಕ್ಕೆ ಪೂಜೆ ಪಡೆಯುತ್ತಾ ವಿಶೇಷವಾಗಿ ಬಲಮುರಿ ಗಣಪತಿ ಕ್ಷಿಪ್ರಪ್ರಸಾದ ಎಂಬ ಕೀರ್ತಿಯಿಂದ ಸರ್ವ ಭಕ್ತರ ಮನಸಿನ ಇಷ್ಟಾರ್ಥಗಳನ್ನು ಪೂರ್ಣ ಕೃಪೆಯಿಂದ ಅನುಗ್ರಹಿಸುತ್ತಿದ್ದಾರೆ. ಈ ದೇವಸ್ಥಾನವು ದಾನಿಗಳ ಸೇವಾರ್ಪಣೆಯೊಂದಿಗೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಪುಣ್ಯಕ್ಷೇತ್ರವಾಗಿ ಬೆಳಗುತ್ತಿದೆ. ಸುತ್ತು ಪೌಳಿಗಳು , ಧ್ವಜಸ್ತಂಭ, ಮಹಾಗೋಪುರ, ಮೇಲಂತಸ್ತಿನ ರಚನೆ, ರಾಜಗೋಪುರ, ವಸಂತ ಮಂಟಪ, ಯಜ್ಞ/ಯಾಗ ಮಂಟಪ, ಸಭಾಭವನ ಮುಂತಾದ ಕ್ಷೇತ್ರ ಬೆಳವಣಿಗೆಯ ಕಾರ್ಯಗಳು ನಡೆದಿರುವುದು ಸರ್ವವಿಧಿತವಾಗಿದೆ.
ದೇವರ ದರ್ಶನಕ್ಕೆ ಬರುವ ಭಕ್ತರು ಅವರವರ ಕಷ್ಟ ಹಾಗೂ ಇಷ್ಟಾರ್ಥಗಳನ್ನು ದೇವರಲ್ಲಿ ನಿವೇದಿಸಿ ಪ್ರಾರ್ಥಿಸಿಕೊಂಡು ಪರಿಹಾರವನ್ನು ಅವರವರು ಕಂಡುಕೊಂಡಿರುತ್ತಾರೆ. ಇದು ಅವರ ವಿವೇಚನೆ ಮತ್ತು ದೇವರ ಮೇಲಿನ ನಂಬಿಕೆಗೆ ಒಳಪಟ್ಟಿರುತ್ತದೆ.
ದೇವಾಲಯದಲ್ಲಿರುವ ಸೇವೆಗಳು ಭಕ್ತರ ನಂಬಿಕೆ ಮತ್ತು ವಿಶ್ವಾಸಕ್ಕೆ ಮೀಸಲಾಗಿದ್ದು. ಅನೇಕ ಭಕ್ತರು ಅವರವರ ಮನೋಇಚ್ಚೆಯಂತೆ ಹಾಗೂ ಅವರಿಗೆ ಅನುಕೂಲವಾಗುವಂತೆ ಇರುವ ಸೇವೆಗಳನ್ನು ದೇವರಲ್ಲಿ ನಿವೇದನೆ ಮಾಡಿಕೊಂಡು ಅವರ ಕಷ್ಟಗಳ ಪರಿಹಾರಕ್ಕೋಸ್ಕರ ದೇವರಲ್ಲಿ ಪ್ರಾರ್ಥಿಸಿ, ಪರಿಹಾರವನ್ನು ಕಂಡುಕೊಂಡ ನಂತರ ನಿವೇದನೆ ಮಾಡಿಕೊಂಡ ಸೇವೆಗಳನ್ನು ಬಂದು ನೆರೆವೇರಿಸಿರುತ್ತಾರೆ. ಈ ಬಗ್ಗೆ ಉತ್ತಮ ಫಲ ಪಡೆದುಕೊಂಡಿರುವ ಕೆಲವೊಂದು ಘಟನೆಗಳು ಆಡುಭಾಷೆಯಲ್ಲಿ ಪ್ರಚಲಿತದಲ್ಲಿರುತ್ತದೆ.
ದೇವಾಲಯದಲ್ಲಿ ಪ್ರತಿನಿತ್ಯ ದೇವರ ಅಭಿಷೇಕದ ತೀರ್ಥವನ್ನು ಭಕ್ತಾಧಿಗಳಿಗೆ ಪ್ರೋಕ್ಷಣೆ ಮಾಡಿದರೆ ಪುನೀತರಾಗಿ ಒಳ್ಳೆಯ ಫಲಗಳನ್ನು ಹೊಂದುತ್ತಾರೆ ಎಂಬ ನಂಬಿಕೆ ಇರುವುದರಿಂದ ಇದನ್ನು ಸೇವಾರೂಪದಲ್ಲಿ ಕಲಶಸ್ನಾನವೆಂದು ಮಾಡಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಗಂಧಪ್ರಸಾದವೇ ಪರಮ ಪವಿತ್ರವಾಗಿರುತ್ತದೆ.