1963-64ರಲ್ಲಿ ಪಣಬೂರು ಪರಿಸರದ ಗ್ರಾಮಸ್ಥರು ನವಮಂಗಳೂರು ಸರ್ವಋತು ಬಂದರು ನಿರ್ಮಾಣಕ್ಕಾಗಿ ತಲತಲಾಂತರಗಳಿಂದ ವಾಸ್ತವ್ಯ ಮಾಡುತ್ತಿದ್ದ ತಮ್ಮ ಮನೆ, ಮಠ, ಮಂದಿರಗಳನ್ನು, ಕೃಷಿ ಭೂಮಿಗಳನ್ನು ತ್ಯಾಗ ಮಾಡಿ ವ್ಯಾಪಾರ ವ್ಯವಹಾರಗಳನ್ನು ತೊರೆದು ಕಾಟಿಪಳ್ಳ– ಕೃಷ್ಣಾಪುರದ ಪುನರ್ ನಿವೇಶನ ಕಾಲೋನಿಯಲ್ಲಿ ಬಂದು ನೆಲೆಸಿದರು. ಕಾಟಿಪಳ್ಳ ಪರಿಸರದಲ್ಲಿ ಹಿಂದೂ ಬಾಂಧವರಿಗೆ ಧಾರ್ಮಿಕ ಆಚರಣೆಗಳಿಗೆ ಸೂಕ್ತ ವ್ಯವಸ್ಥೆಗಳಿರಲಿಲ್ಲ. ಇದನ್ನು ಮನಗಂಡು ಭಕ್ತ ವರ್ಗದವರು ದೇವಾಲಯ ನಿರ್ಮಾಣದ ಸಂಕಲ್ಪವನ್ನು ಮಾಡಿ ಸುಮಾರು 1986-87ರಲ್ಲಿ ಭಗವತ್ ಪ್ರೇರಣೆಯಂತೆ ದೇವಾಲಯವನ್ನು ನಿರ್ಮಿಸಿದ್ದರು. ಕಾಟಿಪಳ್ಳ – ಕೃಷ್ಣಾಪುರ, ಕಾನ, ಕಟ್ಲ, ಬೊಳ್ಳಾಜೆ, ಕುತ್ತೆತ್ತೂರು, ಬಾಳ, ಕಳುವಾರು, ಚೇಳ್ಯಾರು, ಮಧ್ಯ ಗ್ರಾಮಗಳ ಭಕ್ತಾಧಿಗಳ ಒಗ್ಗೂಡುವಿಕೆಯಲ್ಲಿ ಶ್ರೀ ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ತಿವರೇಣ್ಯರ ನೇತೃತ್ವದಲ್ಲಿ ಆಗಮಶಾಸ್ತ್ರ ರೀತಿ ಶ್ರೀ ಮಹಾಗಣಪತಿ ದೇವರ ದಿವ್ಯ ಭವ್ಯ ದೇವಾಲಯ ನಿರ್ಮಾಣಗೊಡಿತು. 1988 ನೇ...