ಶ್ರೀ ಹೊಸಮಾರಿಗುಡಿ ದೇವಾಲಯ, ಕಾಪು, ಉಡುಪಿ - 574106, ಉಡುಪಿ .
Sri Hosamarigudi Temple, Kapu, Udupi - 574106, Udupi District [TM000053]
×
Temple History
ಇತಿಹಾಸ
ಶ್ರೀ ದೇವಳದ ಸ್ಥಳ ಪುರಾಣಗಳ ವಿವರ:
ಪುರಾಣ ಕಾಲದಿಂದಲೂ “ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ ಕಾಪು ಸಾವಿರ ಸೀಮೆಯ ಒಡತಿ ಗದ್ದುಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ ಶ್ರೀ ಮಾರಿಯಮ್ಮ ದೇವಿ.
ಸೈಂದವ – ವೈದಿಕ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು ಜಾನಪದ ಮನೋಧರ್ಮ ಸಾನಿಧ್ಯವಿದೆ ಎಂದು ಪೂಜೆ ನಡೆಯುವುದಲ್ಲ, ಪೂಜೆ ನಡೆದಾಗ ಸಾನಿಧ್ಯವೊದಗುವುದೆಂಬುದು ಜಾನಪದ ನಂಬಿಕೆ. ಈ ಶ್ರದ್ಧೆಯ ಆಧಾರದಲ್ಲಿ ನಮ್ಮ ದಾರ್ಮಿಕ ಆಚರಣೆ, ವಿಧಿ, ಕಟ್ಟಳೆಗಳು ಶತಮಾನಗಳಿಂದ...ಶ್ರೀ ದೇವಳದ ಸ್ಥಳ ಪುರಾಣಗಳ ವಿವರ:
ಪುರಾಣ ಕಾಲದಿಂದಲೂ “ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ ಕಾಪು ಸಾವಿರ ಸೀಮೆಯ ಒಡತಿ ಗದ್ದುಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ ಶ್ರೀ ಮಾರಿಯಮ್ಮ ದೇವಿ.
ಸೈಂದವ – ವೈದಿಕ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು ಜಾನಪದ ಮನೋಧರ್ಮ ಸಾನಿಧ್ಯವಿದೆ ಎಂದು ಪೂಜೆ ನಡೆಯುವುದಲ್ಲ, ಪೂಜೆ ನಡೆದಾಗ ಸಾನಿಧ್ಯವೊದಗುವುದೆಂಬುದು ಜಾನಪದ ನಂಬಿಕೆ. ಈ ಶ್ರದ್ಧೆಯ ಆಧಾರದಲ್ಲಿ ನಮ್ಮ ದಾರ್ಮಿಕ ಆಚರಣೆ, ವಿಧಿ, ಕಟ್ಟಳೆಗಳು ಶತಮಾನಗಳಿಂದ ಸಾಗಿ ಬಂದು ಇಂದು ನಾವು ಕಾಣುವ ಸ್ವರೂಪದಲ್ಲಿದೆ. ಹಲವು ರೂಪಾಂತರಗಳನ್ನು ಹೊಂದಿದ್ದರೂ ಮೂಲವನ್ನು ಸುಪ್ತವಾಗಿ ತನ್ನಲ್ಲಿ ಬಚ್ಚಿಟ್ಟುಕೊಂಡಿವೆ.
ವಿವಿಧ ಹಂತಗಳನ್ನು ದಾಟಿ ವಿಕಾಸ ಹೊಂದಿದ ಸ್ಥಿತಿಯಲ್ಲಿರುವ ಬಹುತೇಕ ಎಲ್ಲಾ ನಮ್ಮ ಆರಾಧನಾ ಪ್ರಕಾರಗಳು ಜಾನಪದ ಮೂಲಗಳಿಂದ ಪಡಿಮೂಡಿರುವವುಗಳೆಂಬುದು ಸಂಶೋಧಕರ, ಚಿಂತಕರ ಅಭಿಪ್ರಾಯ. ಈ ನಿಲುವಿನೊಂದಿಗೆ ಕರಾವಳಿ ಕರ್ನಾಟಕದ, ಉಡುಪಿ ಜಿಲ್ಲೆಯ, ಕಾಪುವಿನ ಮಾರಿಯಮ್ಮ, ಮಾರಿ – ಮಾರಿಯಮ್ಮ – ಮಾರಿಯಮ್ಮ ದೇವರು ಎಂದು ನಿಷ್ಠಾಂತರಗೊಂಡು ಗದ್ದುಗೆ – ಗುಡಿ – ದೇವಸ್ಥಾನ ಸಂಕಲ್ಪಗಳಲ್ಲಿ ಕಾಣಿಸಿಕೊಂಡ ವಿವರವನ್ನು ವಸ್ತುನಿಷ್ಠವಾಗಿ ನಿರೂಪಿಸುವುದು ಈ ಲೇಖನದ ಉದ್ದೇಶ.
ಸ್ಥಳ ಪುರಾಣ
ಕಾಪು ಉಡುಪಿ ಜಿಲ್ಲೆಯಲ್ಲಿಯ ಒಂದು ಪುಣ್ಯ ಕ್ಷೇತ್ರ. ಕಾಪುವಿನಲ್ಲಿ ನೆಲೆನಿಂತಿರುವ ಶ್ರೀ ದೇವಿ ಮಾರಿಯಮ್ಮ ಅತ್ಯಂತ ಜಾಗೃತ ಅತಿಪ್ರತಾಪಿತ ಶಕ್ತಿ ದೇವತೆಯೆಂದು ಪ್ರಸಿದ್ಧಳು. ಶಕ್ತಿ ದೇವಿಯ ಪವಿತ್ರ ಪೀಠಗಳಲ್ಲಿ ಕಾಪುವಿನ ಶ್ರೀ ದೇವಿ ಮಾರಿಯಮ್ಮನ ಕ್ಷೇತ್ರವೂ ಒಂದು. ಈ ದೇವಸ್ಥಾನವು 18 ನೇ ಶತಮಾನಕ್ಕೆ ಸೇರಿದ್ದು, ಇಲ್ಲಿಗೆ ಕರ್ನಾಟಕದಿಂದ ಮಾತ್ರವಲ್ಲ, ನೆರೆಯ ಮಹಾರಾಷ್ಟç, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ವಿವಿಧ ಊರುಗಳಿಂದ ಲಕ್ಷಗಟ್ಟಲೆ ಭಕ್ತಾದಿಗಳು ಬಂದು ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇವರೆಲ್ಲರಿಗೂ ಮುಖ್ಯ ಆರಾಧ್ಯ ದೇವತೆ ಮಾರಿಯಮ್ಮಳೇ ಆಗಿದ್ದಾಳೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ, ದೈವಾದಿಗಳ ತವರೂರು. ಕೊಲ್ಲೂರು ಮುಕಾಂಬಿಕ, ಕಟೀಲು...ಕಾಪು ಉಡುಪಿ ಜಿಲ್ಲೆಯಲ್ಲಿಯ ಒಂದು ಪುಣ್ಯ ಕ್ಷೇತ್ರ. ಕಾಪುವಿನಲ್ಲಿ ನೆಲೆನಿಂತಿರುವ ಶ್ರೀ ದೇವಿ ಮಾರಿಯಮ್ಮ ಅತ್ಯಂತ ಜಾಗೃತ ಅತಿಪ್ರತಾಪಿತ ಶಕ್ತಿ ದೇವತೆಯೆಂದು ಪ್ರಸಿದ್ಧಳು. ಶಕ್ತಿ ದೇವಿಯ ಪವಿತ್ರ ಪೀಠಗಳಲ್ಲಿ ಕಾಪುವಿನ ಶ್ರೀ ದೇವಿ ಮಾರಿಯಮ್ಮನ ಕ್ಷೇತ್ರವೂ ಒಂದು. ಈ ದೇವಸ್ಥಾನವು 18 ನೇ ಶತಮಾನಕ್ಕೆ ಸೇರಿದ್ದು, ಇಲ್ಲಿಗೆ ಕರ್ನಾಟಕದಿಂದ ಮಾತ್ರವಲ್ಲ, ನೆರೆಯ ಮಹಾರಾಷ್ಟç, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ವಿವಿಧ ಊರುಗಳಿಂದ ಲಕ್ಷಗಟ್ಟಲೆ ಭಕ್ತಾದಿಗಳು ಬಂದು ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇವರೆಲ್ಲರಿಗೂ ಮುಖ್ಯ ಆರಾಧ್ಯ ದೇವತೆ ಮಾರಿಯಮ್ಮಳೇ ಆಗಿದ್ದಾಳೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ, ದೈವಾದಿಗಳ ತವರೂರು. ಕೊಲ್ಲೂರು ಮುಕಾಂಬಿಕ, ಕಟೀಲು ದುರ್ಗಾಪರಮೇಶ್ವರೀ, ಶೃಂಗೇರಿ ಶಾರದಾಂಬೆಯರನ್ನೊಳಗೊಂಡತೆ ಕಾಪು ಮಾರಿಯಮ್ಮನ ಕ್ಷೇತ್ರವು ಅತ್ಯಂತ ಪ್ರಸಿದ್ಧವಾಗಿದೆ. ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಾದ ಕಾಪು ಮಾರಿಪೂಜೆ, ಉಡುಪಿಯ ಪರ್ಯಾಯ, ಬಪ್ಪನಾಡು ಡೋಲು, ಅರಸರ ಕಂಬಳ, ಕವತ್ತಾರಿನ ಆಯನ, ಧರ್ಮಸ್ಥಳದ ದೀಪೋತ್ಸವ, ಪಡುಬಿದ್ರಿಯ ಢಕ್ಕೆ ಬಲಿ ಎನ್ನಲಾಗಿದೆ. ಕಾಪುವಿನ ಶ್ರೀ ಮಾರಿಯಮ್ಮ ಮಾರಿಯಾಗಿ, ಮಾರಿಯಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಷ್ಮೀಯಾಗಿ, ಮಹಾಸರಸ್ವತಿಯಾಗಿ ಸಕಲರನ್ನೂ ಕಾಯುವ ಮಹಾಶಕ್ತಿಯಾಗಿ ನೆಲೆಸಿರುವಳು. ವೇದದಲ್ಲಿ ವರ್ಣಿತವಾದ ಅಮ್ಮನೇ ಮಾರಿಯಮ್ಮ. ತನ್ನ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಂಡು, ರೋಗ ರುಜಿನೆಗಳಿಂದ ಮುಕ್ತಗೊಳಿಸಿ, ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ, ಸಕಲರಿಗೂ ಬಾಳುವೆಯ ಬೆಳಕು ನೀಡಿ, ಆಯುರಾರೋಗ್ಯ ಭಾಗ್ಯ ಕರುಣಿಸಿ, ಕಾಪಾಡುವ ಮಾರಿಯಮ್ಮ ನಂಬಿದವರ ತಾಯಿಯೇ ಸರಿ. ಸುಮಾರು ಮುನ್ನೂರು ವರ್ಷಗಳಿಂದಲೂ ಕಾಪುವಿನಂತಹ ಪವಿತ್ರ ಕ್ಷೇತ್ರದಲ್ಲಿ ದಂಡಿನ ಮಾರಿಯಾಗಿ ಬಂದು ನೆಲೆಸಿ ನಂಬಿ ಬಂದ ಭಕ್ತರ ಕೈ ಬಿಡದೆ ಸಲಹುವ ಅಮ್ಮ. ನೋವಿನ ಕಣ್ಣೀರ ಒರೆಸಿ, ಕಷ್ಟವನ್ನು ಪರಿಹರಿಸಿ, ಸುಖದ ಸ್ಪರ್ಶ ನೀಡುತ್ತ ಬರುತ್ತಿರುವ ಪುಣ್ಯ ಕ್ಷೇತ್ರ ಕಾಪುವಿನ ಮಹಾತಾಯಿ ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿಯ ನಗೆ, ಬಾಳಿನಲ್ಲಿ ಸೌಭಾಗ್ಯದ ಸಂತೃಪ್ತಿ, ನೊಂದ ಜೀವಕ್ಕೆ ಭರವಸೆ ಮೂಡಿಸಿ ಹೊಸಬಾಳು ಕರುಣಿಸಿದ ಮಹಾತಾಯಿ ಮಾರಿಯಮ್ಮ. ಹಾಗಾಗಿಯೇ ಇಲ್ಲಿಗೆ ಭಕ್ತರ ಸಮೂಹವೇ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ.
ಮಾರಿಯಮ್ಮ ಗದ್ದಿಗೆಯಲ್ಲಿ ನೆಲೆಯಾಗಿ ಭಕ್ತಜನರಿಂದ ತನ್ನ ಸೇವೆಗೊಳ್ಳುವ ಮಾರಿಯಮ್ಮ ಪ್ರತಿ ಮಂಗಳವಾರದಂದು ತನ್ನ ಗದ್ದುಗೆಯಲ್ಲಿ ಹೂವಿನ ಪೂಜೆ, ಗದ್ದಿಗೆ ಪೂಜೆ, ಕುಂಕುಮಾರ್ಚನೆ ಪೂಜೆಯನ್ನು ಸ್ವೀಕರಿಸಿ, ದರ್ಶನದಲ್ಲಿ ಅಭಯ ವಾಕ್ಯವನ್ನು ನೀಡುತ್ತಾಳೆ. ವರ್ಷದಲ್ಲಿ ಮೂರು ಬಾರಿ ಮೀನ(ಸುಗ್ಗಿ), ಕರ್ಕಾಟಕ(ಆಟಿ) ಹಾಗೂ ವೃಶ್ಚಿಕ(ಜಾರ್ದೆ) ತಿಂಗಳುಗಳಲ್ಲಿ ಕಾಲಾವಧಿ ಮಾರಿಪೂಜೆ ನಡೆಯುತ್ತದೆ. ಮಿಕ್ಕುಳಿದಂತೆ ಪ್ರತಿ ತಿಂಗಳಿಗೆ ಎರಡರಂತೆ ಹರಕೆ ಮಾರಿಪೂಜೆಗಳು ನೆರವೇರುತ್ತವೆ. ಈಗಾಗಲೆ ಹತ್ತು ವರ್ಷಗಳಿಗೂ ಮೇಲ್ಪಟ್ಟಷ್ಟು ಹರಕೆ ಮಾರಿಪೂಜಾ ಸೇವೆಗಳು ಮುಂಗಡವಾಗಿ ನಿಗದಿಯಾಗಿದೆ.
ಕಣ್ಣನ್ನೂರಿನಿಂದ ಕೊಲ್ಲೂರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಕುರುಡನೊರ್ವ ನಡೆದು, ನಡೆದು ಸುಸ್ತಾಗಿ ವಿಶ್ರಾಂತಿಗಾಗಿ ಒಂದು ಮರದ ಕಟ್ಟೆಯಲ್ಲಿ ಆಯಾಸವನ್ನು ನಿವಾರಿಸಿಕೊಳ್ಳಲು ಕುಳಿತುಕೊಂಡನು. ಅವನ ಆಯಾಸ ಪರಿಹಾರಗೊಳ್ಳುತ್ತಿದ್ದಂತೆ ಯಾರೋ ದಾರಿ ಹೋಕನನ್ನು ಕೇಳಿದ, “ಅಣ್ಣಾ, ಇದು ಯಾವ ಊರು?” ‘ಕಾಪು’ ಎಂಬ ಉತ್ತರ ಬಂತು. ಕುರುಡ ತುಂಬ ಸಂಭ್ರಮಗೊAಡು ಉದ್ಘಾರವೆತ್ತಿದ. “ಕಾಪು ! ಓ ! ಎಂಥ ಸತ್ಯದ ನಾಡು !”ಎಂದು ಕಣ್ಣಿನ ರೆಪ್ಪೆ ಬಡಿದರಂತೆ. ಆ ಕೂಡಲೇ ಅವನಿಗೆ ಕಣ್ಣು ಕಾಣತೊಡಗಿತು ಅವನಿಗೆ ದೃಷ್ಟಿ ಬಂತು ಎಂದು ಕಾಪುವಿನ ಬಗ್ಗೆ ದಂತ ಕತೆಯಿದೆ. ಕಾಪು ಎಂದರೆ ರಕ್ಷಿಸು, ಕಾಪು ಎಂದರೆ ಕಾಪಾಡು (ರಕ್ಷಣಾಪುರ).
ಕಾಪುವಿನಂತಹ ಪುಣ್ಯದ ಊರು ಬೇರೊಂದಿಲ್ಲ. ಕಾಪು ಹೊಸಮಾರಿಗುಡಿ ದೇವಸ್ಥಾನದ ಸುತ್ತಮುತ್ತಲೂ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಕಾಳಿಕಾಂಬ ದೇವಸ್ಥಾನ, ಶ್ರೀ ಮೂರನೇ ಮಾರಿಗುಡಿ ದೇವಸ್ಥಾನ, ಶ್ರೀ ವೀರಭದ್ರ ದೇವಸ್ಥಾನ, ಮಸೀದಿ, ಕಲ್ಯ ಬೀಡು ಅಣ್ಣಪ್ಪ ಪಂಜುರ್ಲಿ, ಕಲ್ಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಶ್ರೀ ದಂಡತೀರ್ಥ ಕ್ಷೇತ್ರ, ಕೋತಲಕಟ್ಟೆ ಬಬ್ಬುಸ್ವಾಮಿ, ಕೈಪುಂಜಾಲು ಬಬ್ಬರ್ಯ ದೈವಸ್ಥಾನ, ಪೊಯ್ಯ ಪೊಡಿಕಲ್ಲ ಬ್ರಹ್ಮ ಬೈದರ್ಕಳ ಗರಡಿ, ಪಡು ಧೂಮಾವತಿ ದೈವಸ್ಥಾನ, ಪಡು ಬಬ್ಬರ್ಯ ದೈವಸ್ಥಾನ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು ಪಿಲಿಚಂಡಿ ದೈವಸ್ಥಾನ, ಧರ್ಮದೈವ ಕಲ್ಕುಡ ದೈವಸ್ಥಾನ, ಶ್ರೀ ವಾಸುದೇವ ದೇವಸ್ಥಾನ, ಬಸದಿ, ಶ್ರೀ ಗುರುನಾರಾಯಣ ಕ್ಷೇತ್ರ, ಕಾಪು ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಹಲವಾರು ಭಜನಾ ಮಂದಿರಗಳು, ದೈವಸ್ಥಾನಗಳು ಕಾಪುವನ್ನು ಸಂರಕ್ಷಿಸುತ್ತಿವೆ. ಕಾಪುವಿಗೆ ಒಡೆಯನಾದ ಶ್ರೀ ಲಕ್ಷ್ಮೀ ಜನಾರ್ದನ ದೇವರ ಅಪ್ಪಣೆಯಂತೆ ಮಾರಿ ಈ ಕ್ಷೇತ್ರದಲ್ಲಿ ನೆಲೆಯಾದಳು. ದುಷ್ಟ ಶಕ್ತಿಯನ್ನು ಶಿಕ್ಷಿಸಲು, ಒಡೆಯನ ಇಚ್ಛೆಯಂತೆ ಸೀಮೆಯನ್ನು ರಕ್ಷಿಸುವಳೆಂಬ ಅಂಶ ಮಾರಿಗುಡಿಯಲ್ಲಿ ದರ್ಶನದ ವೇಳೆ ಆಡುವ ನುಡಿಗಳಿಂದ, ರೂಢಿಯಲ್ಲಿರುವ ಕೆಲವು ಸಂಪ್ರದಾಯ ಮತ್ತು ಕಟ್ಟು ಕಟ್ಟಳೆಗಳಿಂದ ಗೊತ್ತಾಗುತ್ತದೆ. ಜನಾರ್ದನ ದೇವರೊಂದಿಗೆ ಸೇವ್ಯ-ಸೇವಕ ಸಂಬಂಧವನ್ನು ಮಾರಿಯಮ್ಮ ಹೊಂದಿದ್ದಾಳೆ. ಎಲ್ಲ ದೈವಗಳು ಸಮುದ್ರ ಸ್ನಾನಕ್ಕೆಂದು ಬಂದಾಗ ಬಬ್ಬರ್ಯನಿಂದ ತಡೆಯಲ್ಪಟ್ಟು ಮುಂದೆ ಬಬ್ಬುವಿನಿಂದ ಸಮುದ್ರಸ್ನಾನದ ಅವಕಾಶ ಪಡೆದು ಶ್ರೀ ಜನಾರ್ದನ ದೇವರ ಭೇಟಿಯಾಗಿ ಸಾವಿರ ಸೀಮೆಯೆಂದೆ ಖ್ಯಾತಿಗೊಂಡ ಕಾಪುವಿನಲ್ಲಿ ನೆಲೆಸಿದಳು ಎಂಬ ಪ್ರತೀತಿ ಇದೆ.