ಕಾಪು ಉಡುಪಿ ಜಿಲ್ಲೆಯಲ್ಲಿಯ ಒಂದು ಪುಣ್ಯ ಕ್ಷೇತ್ರ. ಕಾಪುವಿನಲ್ಲಿ ನೆಲೆನಿಂತಿರುವ ಶ್ರೀ ದೇವಿ ಮಾರಿಯಮ್ಮ ಅತ್ಯಂತ ಜಾಗೃತ ಅತಿಪ್ರತಾಪಿತ ಶಕ್ತಿ ದೇವತೆಯೆಂದು ಪ್ರಸಿದ್ಧಳು. ಶಕ್ತಿ ದೇವಿಯ ಪವಿತ್ರ ಪೀಠಗಳಲ್ಲಿ ಕಾಪುವಿನ ಶ್ರೀ ದೇವಿ ಮಾರಿಯಮ್ಮನ ಕ್ಷೇತ್ರವೂ ಒಂದು. ಈ ದೇವಸ್ಥಾನವು 18 ನೇ ಶತಮಾನಕ್ಕೆ ಸೇರಿದ್ದು, ಇಲ್ಲಿಗೆ ಕರ್ನಾಟಕದಿಂದ ಮಾತ್ರವಲ್ಲ, ನೆರೆಯ ಮಹಾರಾಷ್ಟç, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ವಿವಿಧ ಊರುಗಳಿಂದ ಲಕ್ಷಗಟ್ಟಲೆ ಭಕ್ತಾದಿಗಳು ಬಂದು ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇವರೆಲ್ಲರಿಗೂ ಮುಖ್ಯ ಆರಾಧ್ಯ ದೇವತೆ ಮಾರಿಯಮ್ಮಳೇ ಆಗಿದ್ದಾಳೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ, ದೈವಾದಿಗಳ ತವರೂರು. ಕೊಲ್ಲೂರು ಮುಕಾಂಬಿಕ, ಕಟೀಲು...