ಶ್ರೀ ವಿಶ್ವೇಶ್ವರ ದೇವಸ್ಥಾನ ಎಲ್ಲೂರು, ಎಲ್ಲೂರು, ಉಡುಪಿ - 574113, ಉಡುಪಿ .
Sri Vishweshwara Temple, Yellur, Udupi - 574113, Udupi District [TM000055]
×
Temple History
ಇತಿಹಾಸ
ಒಂದು ಕ್ಷೇತ್ರದ ಮಹಿಮೆಯನ್ನು ತಿಳಿಯದೆ ಇದ್ದರೆ, ಆ ಕ್ಷೇತ್ರದಲ್ಲಿ ಭಕ್ತಿಯು ಉದಯಿಸಲಾರದು ಅದುದರಿಂದ ಉಡುಪಿ ಗೆ ಸುಮಾರು 15 ಮೈಲು ದೂರ ಆಗ್ನೇಯದಲ್ಲಿ ಶಿವ ಕ್ಷೇತ್ರಗಳಲ್ಲಿ ಪ್ರಸಿದ್ಧವಾದ ಕಾಶೀ ಕ್ಷೇತ್ರ ಪ್ರತಿನಿಧಿಯಾದ ಎಲ್ಲೂರು ಕ್ಷೇತ್ರದ ಕಥಾ ಜ್ಞಾನವು ಅವಶ್ಯವೆಂದು ಮನಗೊಂಡು ಭಕ್ತ ಜನರ ಪ್ರಯೋಜನಾರ್ಥವಾಗಿ ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ ದಿಂದ ಇದನ್ನು ಸಂಗ್ರಹಿಸಿ ಕನ್ನಡ ತಾತ್ಪರ್ಯ ಸಹಿತವಾಗಿ ಈ ಗ್ರಂಥವು ಪ್ರಕಟಿಸಲ್ಪಟ್ಟಿದೆ.
ಈ ಕ್ಷೇತ್ರದ ಶ್ರೀ ವಿಶ್ವನಾಥನನ್ನು ಶ್ರೀ ಮಧ್ವಾಧಿರಾಜ ತೀರ್ಥ ಪೂಜ್ಯ ಚರಣರು ತಮ್ಮ ತೀರ್ಥ ಪ್ರಬಂದದಲ್ಲಿ “ಕುಂದಪ್ರಸೂನಕೃತ ಸೇವನತೃಪ್ತ ಚಿತ್ತ” ಎಂಬುದಾಗಿ ಸಂಕ್ಷೇಪದಿಂದ ಕಥೆಯನ್ನು ಸೂಚಿಸಿ ವರ್ಣಿಸಿದ್ದಾರೆ. ಈ ಕ್ಷೇತ್ರವು ಸ್ವಯಂ ವ್ಯಕ್ತವಾಗಿದೆ.
ಈ ಪುರಾಣ ಕಥಾಸಾರವೇನೆಂದರೆ:- ಕುಂದ ಕುಲೋತ್ಪನ್ನನಾದ ಭೂರಿಕೀರ್ತಿ ಎಂಬ ಶೂದ್ರ ರಾಜನು ತನ್ನ ಗ್ರಾಮ ಸಮೀಪಕ್ಕೆ ಬಂದ...ಒಂದು ಕ್ಷೇತ್ರದ ಮಹಿಮೆಯನ್ನು ತಿಳಿಯದೆ ಇದ್ದರೆ, ಆ ಕ್ಷೇತ್ರದಲ್ಲಿ ಭಕ್ತಿಯು ಉದಯಿಸಲಾರದು ಅದುದರಿಂದ ಉಡುಪಿ ಗೆ ಸುಮಾರು 15 ಮೈಲು ದೂರ ಆಗ್ನೇಯದಲ್ಲಿ ಶಿವ ಕ್ಷೇತ್ರಗಳಲ್ಲಿ ಪ್ರಸಿದ್ಧವಾದ ಕಾಶೀ ಕ್ಷೇತ್ರ ಪ್ರತಿನಿಧಿಯಾದ ಎಲ್ಲೂರು ಕ್ಷೇತ್ರದ ಕಥಾ ಜ್ಞಾನವು ಅವಶ್ಯವೆಂದು ಮನಗೊಂಡು ಭಕ್ತ ಜನರ ಪ್ರಯೋಜನಾರ್ಥವಾಗಿ ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ ದಿಂದ ಇದನ್ನು ಸಂಗ್ರಹಿಸಿ ಕನ್ನಡ ತಾತ್ಪರ್ಯ ಸಹಿತವಾಗಿ ಈ ಗ್ರಂಥವು ಪ್ರಕಟಿಸಲ್ಪಟ್ಟಿದೆ.
ಈ ಕ್ಷೇತ್ರದ ಶ್ರೀ ವಿಶ್ವನಾಥನನ್ನು ಶ್ರೀ ಮಧ್ವಾಧಿರಾಜ ತೀರ್ಥ ಪೂಜ್ಯ ಚರಣರು ತಮ್ಮ ತೀರ್ಥ ಪ್ರಬಂದದಲ್ಲಿ “ಕುಂದಪ್ರಸೂನಕೃತ ಸೇವನತೃಪ್ತ ಚಿತ್ತ” ಎಂಬುದಾಗಿ ಸಂಕ್ಷೇಪದಿಂದ ಕಥೆಯನ್ನು ಸೂಚಿಸಿ ವರ್ಣಿಸಿದ್ದಾರೆ. ಈ ಕ್ಷೇತ್ರವು ಸ್ವಯಂ ವ್ಯಕ್ತವಾಗಿದೆ.
ಈ ಪುರಾಣ ಕಥಾಸಾರವೇನೆಂದರೆ:- ಕುಂದ ಕುಲೋತ್ಪನ್ನನಾದ ಭೂರಿಕೀರ್ತಿ ಎಂಬ ಶೂದ್ರ ರಾಜನು ತನ್ನ ಗ್ರಾಮ ಸಮೀಪಕ್ಕೆ ಬಂದ ಭಾರ್ಗವ ಮುನಿಯನ್ನು ತನ್ನ ಗ್ರಾಮಕ್ಕೆ ಬರಬೇಕೆಂದು ಬೇಡಿದನು, ಆ ಮುನಿಯು ದೇವಾಲಯ ಶೂನ್ಯವಾದ ನಿನ್ನ ದೇಶಕ್ಕೆ ಬರಲಾರೆನೆಂದು ಹೇಳಿ ಹೊದನು, ರಾಜನು ದುಖಃ ದಿಂದ ಕಡಂಬಳಿತ್ತಾಯ ಕುಲಜನಾದ ಬ್ರಾಹ್ಮಣನೊಡನೆ ಕಾಶೀಗೆ ಹೋಗಿ ಶ್ರೀ ವಿಶ್ವನಾಥನ್ನು ಸೇವಿಸಿ, ಪ್ರಸನ್ನನಾದ ಆ ಮಹಾದೇವನಿಂದ “ಹುಲಿ ದನ ಕೂಡಿ ವೈರವಿಲ್ಲದೆ ವಾಸಿಸುವ ಮೈಲಾರನೆಂಬ ಶಿವಾರ್ಚಕ ಬ್ರಾಹ್ಮಣನ ಶುದ್ಧ ಸ್ಥಳದಲ್ಲಿ ಉದ್ಬವಿಸುವೆ” ಎಂದು ವರವನ್ನು ಪಡೆದು ತನ್ನ ದೇಶಕ್ಕೆ ಹಿಂದಿರುಗಿ ಬಂದನು. ಹಾಗೆಯೇ ಅಲ್ಲಿ ಮಹಾದೇವನು ಉದ್ಬವಿಸುತ್ತಿರುವಾಗ ಚಂಡಾಲ ಸ್ತ್ರೀ ಒಬ್ಬಳು ಗಡ್ಡೆಯನ್ನು ಕೀಳುವುದಕ್ಕೆ ಕತ್ತಿಯನ್ನು ಭೂಮಿಗೆ ಹೊಡೆಯಲು ಅಲ್ಲಿ ರಕ್ತವು ತೊರಿತು, ಆಗ ಅವಳು ಹೆದರಿ ತನ್ನ ಮೃತ ಪುತ್ರನ ರಕ್ತವೆಂದು ಭಾವಿಸಿ “ಯೆಲ್ಲೋ” ಎಂದು ಕೂಗುತ್ತಾ ಓಡಿದಳು. ಆ ದೇವನು ತೆಲೆಯಲ್ಲಿ ಆ ಗಾಯವನ್ನು ಧರಿಸಿ ಮೇಲಕ್ಕೆ ಬಂದವನಾದುದರಿಮದ ಆ ಸ್ಥಳಕ್ಕೆ “ಯೆಲ್ಲೂರು” ಎಂಬ ಹೆಸರಾಯಿರು. ಈ ರೀತಿ ಅರಸನಿಗೆ ಪ್ರಸನ್ನನಾದ ಮಹಾದೇವನು ಆ ಸ್ಥಳದಲ್ಲಿ ಭಕ್ತ ಜನರಿಗೆ ಸರ್ವಾಭೀಷ್ಟವನ್ನು ಕೊಡುತ್ತಿರುವನು.
ಗಾಯಗೊಂಡ ಮಹಾದೇವನ ತೆಲೆಗೆ ಎಳನೀರಿನ ಎರೆಯುವಿಕೆಯಿಂದ ರಕ್ತ ಹರಿಯುವಿಕೆಯು ನಿಂತಿತು ಎಂಬ ಕಥಯನ್ನು ಹೇಳುವ ಈ ಪ್ರದೇಶದ ಹಿರಿಯರು ಈ ಕಾರಣದಿಂದ ಉಲ್ಲಾಯನಿಗೆ ಎಳನೀರು ಅಪೂರ್ವವಾದ ಸೇವಾ ವಸ್ತುವಾಯಿತು ಎನ್ನುತ್ತಾರೆ.