ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನವು ಒಂದು ಪವಾಡ ಸ್ವಾಮಿಯ ಸ್ವಯಂಭು ಸನ್ನಿಧಾನವಾಗಿದ್ದು. ಶ್ರೀ ಉಲ್ಲಾಯನು ಕಾಶಿಯಿಂದ ಎಲ್ಲೂರುಗೆ ಬಂದಿರುವನು ಎಂಬ ನಂಬಿಕೆ ಎಲ್ಲೂರು ಗ್ರಾಮದ ಜನರದ್ದು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನವು 11 ನೇ ಶತಮಾನಕ್ಕೆ ಸೇರಿದಾಗಿದ್ದು. ಈ ಉದ್ಬವಲಿಂಗವು ಪಾಣಿಪೀಠದಿಂದ ಆವೃತ್ತವಾಗಿ ಶೈವಾಗನ ಪ್ರಮಾಣದಂತೆ ಅಧಿಷ್ಠಾನ ರಚಿಸಲ್ಪಟ್ಟಿವೆ. ಗಾಯಗೊಂಡ ಮಹಾದೇವನ ತೆಲೆಗೆ ಎಳನೀರಿನ ಎರೆಯುವಿಕೆಯಿಂದ ರಕ್ತ ಹರಿಯುವಿಕೆಯು ನಿಂತಿತು ಎಂಬ ಕಥಯನ್ನು ಹೇಳುವ ಈ ಪ್ರದೇಶದ ಹಿರಿಯರು ಈ ಕಾರಣದಿಂದ ಉಲ್ಲಾಯನಿಗೆ ಎಳನೀರು ಅಪೂರ್ವವಾದ ಸೇವಾ ವಸ್ತುವಾಯಿತು ಎನ್ನುತ್ತಾರೆ.