Screen Reader Access                 A-  A  A+ 
ಶ್ರೀ ಉತ್ಸವಾಂಬ ದೇವಸ್ಥಾನ, ಉಚ್ಚಂಗಿದುರ್ಗ, ವಿಜಯನಗರ - 583125, ಬಳ್ಳಾರಿ .
Sri Utsvambha Temple, Uchangidurga, Vijayanagar - 583125, Ballari District [TM000059]
×
Temple History

ಸ್ಥಳ ಪುರಾಣ

ಭೂ ಕೈಲಾಸಲ್ಲಿರುವ .ಶಿವನ ಪತ್ನಿಯಾದ ಪಾರ್ವತಿ ದೇವಿಯು ದೇವಿಯ ಅವತಾರ ಎತ್ತಿ ತನ್ನ ವರಪುತ್ರ ಪರಶುರಾಮನೊಂದಿಗೆ ಹೀರೇಮೇವೂರು(ಹಿರೇಮೇಗಳಗೆರೆ) ಎಂಬ ಊರಿಗೆ ಬರುತ್ತಾಳೆ. ನಂತರ ಮಗ ಪರುಶುರಾಮನ ತೊಟ್ಟಿಲು ಕಟ್ಟಿ ಅಲ್ಲಿಯೇ ತೂಗಿದ್ದು ಈಗಲೂ ತೊಟ್ಟಿಲನ್ನು ನೋಡಬಹುದಾಗಿದ್ದು ಹಿರೇಮೇಗಳಗೆರೆಯನ್ನು ದೇವಿಯ ತವರುಮನೆ ಎಂದು ಕರೆಯಲಾಗುತ್ತಿದೆ. ನಂತರ ದೇವಿಯು ತನ್ನ ಮಗ ಪರಶುರಾಮನೊಂದಿಗೆ ಪೂರ್ವಭಿಮುಖವಾಗಿ ಬರುತ್ತಾ ದಟ್ಟ ಕಾಡ ಅರಣ್ಯಕ್ಕೆ ಬರುತ್ತಾಳೆ. ಮಗ ಪರಶುರಾಮನ ಹಸಿವು ಇಂಗಿಸಲು ಅಲ್ಲಿಯೇ ಕುರಿಗಾಹಿಗೆ ಹಾಲನ್ನು ಕೇಳಲಾಗಿ ಕುರಿಗಾಹಿಯು ಮಣ್ಣಿನ ಮಡಿಕೆಯಲ್ಲಿ ಹಾಲನ್ನು ಕೊಟ್ಟು ಶ್ರೀ ದೇವಿಯು ಹಾಲನ್ನು ಮಗ ಪರಶುರಾಮನಗೆ ಕೊಟ್ಟು ಹಸಿವನ್ನು ಹಿಂಗಿಸಿದಳು. ನಂತರ ದೇವಿಯು ಹಾಲು ಕೊಟ್ಟು ಕುರಿಗಾಹಿಗೆ ಬಂಗಾರದ ಮಡಿಕೆ ಕೊಡಲು ಹೋದಾಗ ಕುರಿಗಾಹಿಯು ನಾನು ಕೊಟ್ಟಿರುವುದು ಮಣ್ಣು ಮಡಿಕೆ ಬಂಗಾರದ ಮಡಿಕೆಯಲ್ಲ...