ಶ್ರೀ ಕಬ್ಬಾಳಮ್ಮ ದೇವಸ್ಥಾನ, ಕಬ್ಬಾಳು, ಕನಕಪುರ - 562126, ರಾಮನಗರ .
Sri Kabbalamma temple, Kabbalu, Kanakapura - 562126, Ramanagara District [TM000006]
×
Temple History
ಇತಿಹಾಸ
ಶ್ರೀ ಕಬ್ಬಾಳಮ್ಮ ದೇವಸ್ಥಾನದ ಇತಿಹಾಸ
ದೇವಾಲಯವು ಇತ್ತೀಚೆಗೆ ಅದರ ಸುತ್ತಮುತ್ತಲಿನ ಸುತ್ತಮುತ್ತಲಿನ ಹೊರಗೆ ಪ್ರಮುಖವಾಗಿದೆ. ಗ್ರಾಮ ಮತ್ತು ಕೋಟೆಯು ತಮ್ಮ ಹೆಸರನ್ನು ಸೈಟ್‌ನ ಪ್ರಧಾನ ದೇವತೆಯಿಂದ ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು 28 ಹಳ್ಳಿಗಳಿಗೆ ಇದು ಏಕೈಕ ಪ್ರಮುಖ ಹಿಂದೂ ದೇವಾಲಯ ಎಂದು ಕರೆಯಲ್ಪಡುತ್ತದೆ, ಆದ್ದರಿಂದ ಇದು ಸ್ಥಳೀಯವಾಗಿ ಯಾವಾಗಲೂ ಬಹಳ ಮುಖ್ಯವಾದ ಆಧ್ಯಾತ್ಮಿಕ ತಾಣವಾಗಿದೆ.ಶ್ರೀ ಕಬ್ಬಾಳಮ್ಮ ದೇವಸ್ಥಾನದ ಇತಿಹಾಸ
ದೇವಾಲಯವು ಇತ್ತೀಚೆಗೆ ಅದರ ಸುತ್ತಮುತ್ತಲಿನ ಸುತ್ತಮುತ್ತಲಿನ ಹೊರಗೆ ಪ್ರಮುಖವಾಗಿದೆ. ಗ್ರಾಮ ಮತ್ತು ಕೋಟೆಯು ತಮ್ಮ ಹೆಸರನ್ನು ಸೈಟ್‌ನ ಪ್ರಧಾನ ದೇವತೆಯಿಂದ ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು 28 ಹಳ್ಳಿಗಳಿಗೆ ಇದು ಏಕೈಕ ಪ್ರಮುಖ ಹಿಂದೂ ದೇವಾಲಯ ಎಂದು ಕರೆಯಲ್ಪಡುತ್ತದೆ, ಆದ್ದರಿಂದ ಇದು ಸ್ಥಳೀಯವಾಗಿ ಯಾವಾಗಲೂ ಬಹಳ ಮುಖ್ಯವಾದ ಆಧ್ಯಾತ್ಮಿಕ ತಾಣವಾಗಿದೆ.
ಸ್ಥಳ ಪುರಾಣ
ಶ್ರೀ ಕಬ್ಬಾಳಮ್ಮ ದೇವಾಲಯವು ಕಬ್ಬಾಳು ಗ್ರಾಮದಲ್ಲಿ ಇರುತ್ತದೆ. ಈ ದೇವತೆಯು ಶಕ್ತಿ ದೇವತೆಯಾಗಿದ್ದು, ಕಬ್ಬಾಳಮ್ಮ ದೇವಿ ಎಂದು ಕರೆಯಲ್ಪಡಲಾಗುತ್ತದೆ. ಈ ದೇವಾಲಯವು ಹಿಂದೆ ಪುರಾತನ ದೇವಾಲಯವಾಗಿದ್ದು ಶಿಥಿಲವಾಗಿದ್ದ ಕಾರಣ ಈ ದೇವಾಲಯವನ್ನು 2015ರಲ್ಲಿ ಪುನರ್ ನಿರ್ಮಾಣ ಮಾಡಲಾಗಿರುತ್ತದೆ. ಈ ದೇವಾಲಯವು ಯಾವ ಶತಮಾನಕ್ಕೆ ಸೇರಿರುತ್ತದೆ ಎಂಬ ಬಗ್ಗೆ ಯಾವುದೇ ಶಾಸನಗಳು ಕಂಡು ಬರುವುದಿಲ್ಲ.
ಈ ದೇವಾಲಯದಲ್ಲಿ ಹಿಂದೆ ಮರದ ಮೂರ್ತಿಯು ಇದ್ದು. ಇದನ್ನು ಈಗ ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಪುನರ್ ನಿರ್ಮಾಣ ಮಾಡಿದಾಗ ಮರದ ಮೂರ್ತಿಯನ್ನು ತೆಗೆದು ಶಿಲೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರತಿ ಅಮವಾಸ್ಯೆಯ ದಿನದಂದು ಹೆಚ್ಚು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನವನ್ನು ಪಡೆದು...ಶ್ರೀ ಕಬ್ಬಾಳಮ್ಮ ದೇವಾಲಯವು ಕಬ್ಬಾಳು ಗ್ರಾಮದಲ್ಲಿ ಇರುತ್ತದೆ. ಈ ದೇವತೆಯು ಶಕ್ತಿ ದೇವತೆಯಾಗಿದ್ದು, ಕಬ್ಬಾಳಮ್ಮ ದೇವಿ ಎಂದು ಕರೆಯಲ್ಪಡಲಾಗುತ್ತದೆ. ಈ ದೇವಾಲಯವು ಹಿಂದೆ ಪುರಾತನ ದೇವಾಲಯವಾಗಿದ್ದು ಶಿಥಿಲವಾಗಿದ್ದ ಕಾರಣ ಈ ದೇವಾಲಯವನ್ನು 2015ರಲ್ಲಿ ಪುನರ್ ನಿರ್ಮಾಣ ಮಾಡಲಾಗಿರುತ್ತದೆ. ಈ ದೇವಾಲಯವು ಯಾವ ಶತಮಾನಕ್ಕೆ ಸೇರಿರುತ್ತದೆ ಎಂಬ ಬಗ್ಗೆ ಯಾವುದೇ ಶಾಸನಗಳು ಕಂಡು ಬರುವುದಿಲ್ಲ.
ಈ ದೇವಾಲಯದಲ್ಲಿ ಹಿಂದೆ ಮರದ ಮೂರ್ತಿಯು ಇದ್ದು. ಇದನ್ನು ಈಗ ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಪುನರ್ ನಿರ್ಮಾಣ ಮಾಡಿದಾಗ ಮರದ ಮೂರ್ತಿಯನ್ನು ತೆಗೆದು ಶಿಲೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರತಿ ಅಮವಾಸ್ಯೆಯ ದಿನದಂದು ಹೆಚ್ಚು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನವನ್ನು ಪಡೆದು ದೃಷ್ಠಿ ಪರಿಹಾರವಾದ (ತಡೆಹೊಡೆಸುವುದು), ಯಂತ್ರ ,ತಾಯತ ಕಟ್ಟಿಸಿಕೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿಗೆ ಬರುವ ಭಕ್ತರು ಇದರ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಇಟ್ಟಿರುವುದು ವಾಡಿಕೆಯಾಗಿರುತ್ತದೆ.
ಈ ದೇವಾಲಯವಿರುವ ಸ್ಥಳವು ಬೆಟ್ಟ ಗುಡ್ಡಗಳ ನಡುವೆ ಕುಳಿಯಂತೆ ಕಾಣುವ ಸಮತಟ್ಟಿನ ಪ್ರದೇಶವಾಗಿದ್ದು ಗ್ರಾಮದ ಹೊರಗೆ ಕಬ್ಬಾಳು ಕುಳಿ ಸ್ಥಳವೆಂಬುದಾಗಿ ಕರೆಯಲ್ಪಡುತ್ತದೆ. ಕಬ್ಬಾಳು, ಕಂಸಾಗರ, ಅತ್ತಿಹಳ್ಳಿ, ಹೊಸಳ್ಳಿ, ವಡೇರಹಳ್ಳಿ, ಗೇರಳ್ಳಿ,ಅರೆಕಟ್ಟೆದೊಡ್ಡಿ, ದಾಳಿಂಬ ಇನ್ನು ಕೆಲವು ಹಳ್ಳಿಗಳು ಈ ಕುಳಿಯಲ್ಲಿವೆ. ಈ ಕುಳಿಗೆ ಮೆರುಗು ನೀಡುವಂತಹ ಕಬ್ಬಾಳು ಬೆಟ್ಟ, ಗೇರಳ್ಳಿ ಬೆಟ್ಟ, ತೈಲೂರು ಕಲ್ಲು ಮತ್ತು ಕುರುಚಿ ಅಚ್ಚಲು ಬೆಟ್ಟಗಳಿವೆ. ಕಬ್ಬಾಳು ಗ್ರಾಮದ ಪಶ್ಚಿಮದಲ್ಲಿರುವ ಕಬ್ಬಾಳು ದುರ್ಗ ಸಾಕಷ್ಟು ಎತ್ತರವಿರುವುದರಿಂದ ಈ ಬೆಟ್ಟದ ಮೇಲಿಂದ ಕಾಣುವ ದೃಶ್ಯಗಳು ನಯನ ಮನೋಹರವಾಗಿವೆ. ಈಶಾನ್ಯ ಭಾಗದಲ್ಲಿ ಕಬ್ಬಾಳು ಗ್ರಾಮವಿದೆ. ಹಳೇ ಕಬ್ಬಾಳು ಮತ್ತು ಹೊಸಕಬ್ಬಾಳು ಗ್ರಾಮಗಳು ಅಕ್ಕಪಕ್ಕದಲ್ಲಿದ್ದರೂ ದೇವಾಲಯವಿರುವುದು ಹಳೇ ಕಬ್ಬಾಳು ಗ್ರಾಮದಲ್ಲಿ ಪೂರ್ವಾಭಿಮುಖವಾಗಿರುತ್ತದೆ ಈ ದೇವಾಲಯದ ಹಿಂಬದಿ ಇರುವ ಬೆಟ್ಟವು ಶಂಕಾಕಾರದ ಬೆಟ್ಟದಂತೆ ಬಸವಾಗುತ್ತದೆ.
ದೇವಾಲಯದ ಈಶಾನ್ಯದ ದಿಕ್ಕಿನಲ್ಲಿ ಹೊಸದಾಗಿ ಕಲ್ಯಾಣಿಯನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಶಿಲೆಯಿಂದ ಹೊಸದಾಗಿ ಪುನರ್ ನಿರ್ಮಿಸಿರುವುದರಿಂದ ನೋಡಲು ಮನೋಹರವಾಗಿರುತ್ತದೆ.